ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೂಲು ಸಂಗ್ರಹಣ ಘಟಕ ಸ್ಥಾಪನೆ ವಾಕೈ 38 ಜಕೈಯೋ 2015 ದಿ 23.11.2015

  • GOK
    • vanijyasachivalaya
      • ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೂಲು ಸಂಗ್ರಹಣ ಘಟಕ ಸ್ಥಾಪನೆ ವಾಕೈ 38 ಜಕೈಯೋ 2015 ದಿ 23.11.2015
Last modified at 21/04/2016 15:45 by Vanijyasachivalaya

​​​​​

​​​

​ಕರ್ನಾಟಕ ಸರ್ಕಾರದ ನಡವಳಿಗಳು


ವಿಷಯ: 2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಕೈಮಗ್ಗ ನೇಕಾರರಿಗೆ ವರ್ಷ ಪೂರ್ತಿ ಅವಶ್ಯವಿರುವ ಕಚ್ಚಾ ನೂಲು ಸರಬರಾಜು ಮಾಡಲು ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ನೂಲು ಸಂಗ್ರಹಣ ಘಟಕ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ:

1. 2015-16ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಆಯವ್ಯಯ ಭಾಷಣ (ಕಂಡಿಕೆ-423)
2. ಜವಳಿ ಅಭಿವೃದ್ಧಿ ಆಯುಕ್ತರ ಪತ್ರ ಸಂಖ್ಯೆ : ಕೈಜಿ/ಕೈಮಗ್ಗ/ಎ4/ನೇ.ವಿ.ಪ್ಯಾ./ಕೆ.ಹೆಚ್.ಡಿ.ಸಿ. /2015-16 ದಿನಾಂಕ 18.05.2015 ಮತ್ತು 07.08.2015

ಪ್ರಸ್ತಾವನೆ:

2015-16ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-423 ರಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಘೋಷಿಸಲಾಗಿದೆ.
“ಕೈಮಗ್ಗ ನೇಕಾರರಿಗೆ ವರ್ಷ ಪೂರ್ತಿ ಅವಶ್ಯವಿರುವ ಕಚ್ಚಾ ನೂಲು ಸರಬರಾಜು ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಡಿ ‘ನೂಲು ಸಂಗ್ರಹಣ ಘಟಕ’ ಸ್ಥಾಪಿಸಲಾಗುವುದು.”
ಓದಲಾದ (2) ರ ಜವಳಿ ಅಭಿವೃದ್ಧಿ ಆಯುಕ್ತರ ಪತ್ರದಲ್ಲಿ, ರಾಜ್ಯದಲ್ಲಿ ಸುಮಾರು 35,000 ಕೈಮಗ್ಗ  ನೇಕಾರರಿದ್ದಾರೆ.  ಉದ್ಯೋಗ ಸೃಜನೆಯಲ್ಲಿ ರಾಷ್ಟ್ರದಲ್ಲಿ ಕೃಷಿಯ ನಂತರದ ಎರಡನೇ ಸ್ಥಾನದಲ್ಲಿರುವ ಜವಳಿ ವಲಯದಲ್ಲಿ ಗ್ರಾಮೀಣ ಜನರಿಗೆ ನಿರಂತರವಾಗಿ ಉದ್ಯೋಗ ಒದಗಿಸುವ ದೃಷ್ಟಿಯಿಂದ ರಾಜ್ಯದಲ್ಲಿ ನೂಲು ಸಂಗ್ರಹಣ ಘಟಕ ಸ್ಥಾಪಿಸುವ ಅವಶ್ಯಕತೆ ಇರುತ್ತದೆ.  ಈ ಹಿನ್ನೆಲೆಯಲ್ಲಿ 2015-16ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-423ರಲ್ಲಿ ಮಾನ್ಯ ಮುಖ್ಯ ಮಂತ್ರಿಯವರು ಘೋಷಿಸಿರುವಂತೆ ಕೈಮಗ್ಗ ನೇಕಾರರಿಗೆ ವರ್ಷ ಪೂರ್ತಿ ಅವಶ್ಯವಿರುವ ಕಚ್ಚಾ ನೂಲು ಸರಬರಾಜು ಮಾಡಲು ಕೈಮಗ್ಗ ಅಭಿವೃದ್ಧಿ ನಿಗಮದಡಿ ‘ನೂಲು ಸಂಗ್ರಹಣ ಘಟಕ’ ಸ್ಥಾಪಿಸುವ ಹೊಸ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವಂತೆ ಕೋರಿರುತ್ತಾರೆ.
ಜವಳಿ ಅಭಿವೃದ್ಧಿ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

​​​ಸರ್ಕಾರಿ ಆದೇಶ ಸಂಖ್ಯೆ : ವಾಕೈ 38 ಜಕೈಯೋ 2015, ಬೆಂಗಳೂರು, ದಿನಾಂಕ 23-11-2015

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, 2015-16ನೇ ಸಾಲಿನಲ್ಲಿ ಕೈಮಗ್ಗ ನೇಕಾರರಿಗೆ ವರ್ಷ ಪೂರ್ತಿ ಅವಶ್ಯವಿರುವ ಕಚ್ಚ ನೂಲು ಸರಬರಾಜು ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಡಿ ‘ನೂಲು ಸಂಗ್ರಹಣ ಘಟಕ’ ಸ್ಥಾಪಿಸುವ ಹೊಸ ಯೋಜನೆಗೆ ಈ ಕೆಳಕಂಡ ಷರತ್ತುಗಳಿಗೊಳಪಡಿಸಿ ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

Functioning of Yarn Depot
1. To be limited to cotton and silk as KHDC does not deal in woolen textiles.
2. To be limited to weavers registered with KHDC and not to Societies as this may result in situation whereby the weavers’ share of yarn may get        
        diverted to Societies.
3. Funds routed only through Revolving Fund.
4. Since, the issue of irregular yarn supply arises mainly on account of cash flow issues pertaining to implementation of Vidya Vikasa Scheme, KHDC is 
        instructed to plough back optimum receipt from Vidya Vikasa Scheme.
5. ಆಯವ್ಯಯದಲ್ಲಿ ಒದಗಿಸಿರುವ ಅನುದಾನದ ಮಿತಿಯೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸತಕ್ಕದ್ದು.
6. ಈ ಯೋಜನಾ ಅನುಷ್ಠಾನಕ್ಕಾಗಿ ಬೇಕಾಗಿರುವ ಸಿಬ್ಬಂದಿಯನ್ನು ಹಾಲಿ ಇರುವ ಸಿಬ್ಬಂದಿಯಿಂದಲೇ ಮರುನಿಯುಕ್ತಿಗೊಳಿಸತಕ್ಕದ್ದು.
7. ಕೆ.ಹೆಚ್.ಡಿ.ಸಿ. ಸಂಸ್ಥೆಯಿಂದಲೇ ರಾಜ್ಯದ ಎಲ್ಲಾ ಕೈಮಗ್ಗ ನೇಕಾರರಿಗೆ ಅವಶ್ಯವಿರುವ ನೂಲನ್ನು ಸರಬರಾಜು ಮಾಡಲು ಅನುಕೂಲಕರವಾದ ಸ್ಥಳಗಳಲ್ಲಿ ನೂಲು ಸಂಗ್ರಹಣ ಘಟಕವನ್ನು 
        ಸ್ಥಾಪಿಸತಕ್ಕದ್ದು.
8. ರಾಜ್ಯದ ನೇಕಾರರಿಗೆ ಬೇಡಿಕೆ ಇರುವ ಕಚ್ಚಾ ಮಾಲನ್ನು (ವಿವಿಧ ನಮೂನೆಯ ನೂಲನ್ನು) ಮಾತ್ರ ಅವಶ್ಯಕತೆಗೆ ತಕ್ಕಂತೆ ನೂಲು ಸಂಗ್ರಹಣ ಘಟಕಕ್ಕೆ ಖರೀದಿಸಿ ದಾಸ್ತಾನು ಇಡತಕ್ಕದ್ದು ಹಾಗೂ 
        ನೇಕಾರರಿಗೆ ನೂಲಿನ ಕೊರತೆಯಾಗದಂತೆ ಕ್ರಮವಹಿಸತಕ್ಕದ್ದು.
9. ನೂಲು ಸಂಗ್ರಹಣ ಘಟಕಕ್ಕೆ ಬೇಕಾದ ಕಚ್ಚಾ ಮಾಲನ್ನು ಖರೀದಿಸಲು ಕೆ.ಟಿ.ಪಿ.ಪಿ. ಕಾಯ್ದೆಯಂತೆ ಪಾರದರ್ಶಕ ನಿಯಮವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
10. ನೂಲು ಸಂಗ್ರಹಣ ಘಟಕ ಸ್ಥಾಪನೆಗೆ ಅನುದಾನವನ್ನು 2015-16ನೇ ಸಾಲಿನ ನೇಕಾರರ ವಿಶೇಷ ಪ್ಯಾಕೇಜ್ (ಕೆ.ಹೆಚ್.ಡಿ.ಸಿ.) ಲೆಕ್ಕ ಶೀರ್ಷಿಕೆ 2851-00-103-0-69-059 (ಯೋಜನೆ) ಅಡಿಯಲ್ಲಿ 
        ಭರಿಸತಕ್ಕದ್ದು.
11. ಕೆ.ಹೆಚ್.ಡಿ.ಸಿ. ನಿಗಮದ ವ್ಯಾಪ್ತಿಯ ಹೊರಗೆ ಇರುವ ಆಸಕ್ತಿ ಇರುವ ಕೈಮಗ್ಗ ನೇಕಾರರನ್ನು ನಿಗಮದಲ್ಲಿ ನೊಂದಣಿ ಮಾಡಿಸಿಕೊಂಡು, ಸದರಿ ನೇಕಾರರಿಗೂ ಕಚ್ಚಾ ಮಾಲನ್ನು ವಿತರಿಸಲು 
        ಕ್ರಮವಹಿಸತಕ್ಕದ್ದು.
12. ನೂಲು ಸಂಗ್ರಹಣ ಘಟಕದ ಆಡಳಿತ ವೆಚ್ಚವನ್ನು ನೂಲು ಮಾರಾಟದಿಂದ ಸಂಗ್ರಹಿಸುವ ಶೇ 5ರಷ್ಟು ಸೇವಾ ಶುಲ್ಕದಲ್ಲಿಯೇ ಭರಿಸತಕ್ಕದ್ದು.

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಪಿಡಿ 42 ಎಫ್.ಆರ್.ಓ. 2015, ದಿನಾಂಕ 11.06.2015 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 1128 ವೆಚ್ಚ-1/2015, ದಿನಾಂಕ 07.11.2015ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಬಿ.ಬಿ. ವಿಜಾಪುರ), ಪೀಠಾಧಿಕಾರಿ (ಜವಳಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.