ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ನಿಯಮಿತ - 2015-16 ಪರಿಷ್ಕೃತ ಕ್ರಿಯಾ ಯೋಜನೆ

  • GOK
    • vanijyasachivalaya
      • ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ನಿಯಮಿತ - 2015-16 ಪರಿಷ್ಕೃತ ಕ್ರಿಯಾ ಯೋಜನೆ
Last modified at 22/04/2016 21:54 by Vanijyasachivalaya

​​​

​​​​​

ಸರ್ಕಾರದ ಆದೇಶ ಸಂಖ್ಯೆ ಸಿಐ 149 ಸಿಎಸ್ ಸಿ 2015 ದಿ: 28.05.2015ರಂತೆ 2015-16ನೇ ಸಾಲಿನ ಪರಿಷ್ಕೃತ ಕ್ರಿಯಾಯೋಜನೆ

​ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ನಿಯಮಿತ

 

ಅಧಿಕ ನಿರ್ದೇಶಕರು (ವಿಶ್ವ)
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ಖನಿಜ ಭವನ
ರೇಸ್ ಕೋರ್ಸ್ ರಸ್ತೆ
 
ಮಾನ್ಯರೆ,
ವಿಷಯ: 2015-16ನೇ ಸಾಲಿನ ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸುವ ಬಗ್ಗೆ.

ಉಲ್ಲೇಖ: ತಮ್ಮ ಪತ್ರ ಸಂಖ್ಯೆ ಕೈವಾಇ/ವಿಶ್ವ/ಕ್ರಿಯಾ/04-15-16 ದಿನಾಂಕ 04.06.2015

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಉಲ್ಲೇಖಿತ ಪತ್ರದಲ್ಲಿ ಕೋರಿರುವಂತೆ 2015-16ನೇ ಸಾಲಿನ ಕ್ರಿಯಾಯೋಜನೆಯನ್ನು ಪರಿಷ್ಕರಿಸಿ ರೂ. 60.00 ಲಕ್ಷಗಳಿಗೆ ಮಂಜೂರಾತಿ ಮತ್ತು ಹಣ ಬಿಡುಗಡೆಗಾಗಿ ಸಲ್ಲಿಸಲಾಗಿದೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,
ವ್ಯವಸ್ಥಾಪಕರು

ಪ್ರತಿ : ಜಂಟಿ ನಿರ್ದೇಶಕರು (ತಾಂತ್ರಿಕ ಕೋಶ)

 
ಲಕ್ಷ ರೂಗಳಲ್ಲಿ

ಕ್ರ.ಸಂ.ವಿವರಲೆಕ್ಕ ಶೀರ್ಷಿಕೆಮೊತ್ತಭೌತಿಕ
01
ದುಡಿಮೆ ಬಂಡವಾಳ ನೆರವು
ಅ) ಘಟಕಗಳಿಗೆ : 7 ಡಿಫೈಬರಿಂಗ್ ಉತ್ಪಾದನಾ ಘಟಕಗಳು
6851-00-106-0-06 (394)10.0001
02
I. ತೆಂಗಿನ ನಾರಿನ ಉತ್ಪಾದನಾ ಬೀಟರ್ ಯಂತ್ರಗಳಿಗೆ ಕನ್ವೆಯರ್
   ಸಿಸ್ಟಮ್ ಅಳವಡಿಸಲು 5 x 3.06=15.30
​​​​​​2851-00-106-0-12 (059)              15.3005
 II. ತೆಂಗಿನ ನಾರಿನ ಕರಕುಶಲ ಕೇಂದ್ರ, ಹೇರೂರು, ಗುಬ್ಬಿ ತಾ. ಇಲ್ಲಿಗೆ ಬ್ರಸ್ಟರ್ ಯಂತ್ರವನ್ನು
    ಖರೀದಿಸಲು 1 x 2.50=2.50
2.5001
 III. ತೆಂಗಿನ ನಾರಿನ ಉತ್ಪಾದನಾ ಘಟಕ, ಕೆ. ಬಿದರೆ ಇಲ್ಲಿ ಬೀಟರ್ ಯಂತ್ರವವನ್ನು ಖರೀದಿಸಿ
     ಅಳವಡಿಸಲು 1 x 3.70 = 3.70
3.7001
 IV. ಕರ್ಲಿಂಗ್ ಯಂತ್ರಗಳಿಗೆ ಆಟೋಮ್ಯಾಟಿಕ್ ಫೀಡಿಂಗ್ ವ್ಯವಸ್ಥೆಯನ್ನು ಅಳವಡಿಸಲು – 08 ಯಂತ್ರಗಳಿಗೆ 8 x 2.00=16.0016.0008
03.
ಮೂಲಭೂತ ಸೌಕರ್ಯ ಅಭಿವೃದ್ಧಿ
ಅ) ದಾಸ್ತಾನು ಸಾಗಾಣಿಕೆಗಾಗಿ ಮಿನಿ ವಾಹನ ಖರೀದಿ
4.0001
04ಮಹಾ ಮಂಡಳಿಯ ಉಪಯೋಗಕ್ಕಾಗಿ ವಾಹನ ಖರೀದಿ4.0001
05ಮಹಾ ಮಂಡಳಿಯ ಉಪಯೋಗಕ್ಕಾಗಿ ವಾಹನ ಖರೀದಿ8.5001
 ಒಟ್ಟು60.00 

 

​ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ನಿಯಮಿತ, ಬೆಂಗಳೂರು
​2015-16ನೇ ಸಾಲಿಗೆ ಕ್ರಿಯಾ ಯೋಜನೆ – ವಿವರಗಳು


ಕ್ರ​ಮ 
ಸಂಖ್ಯೆ
ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಕಾರ್ಯಕ್ರಮಲೆಕ್ಕ ಶೀರ್ಷಿಕೆಪ್ರಸ್ತಾಪಿಸಿರುವ ಮೊತ್ತಭೌತಿಕ ಗುರಿಸಮರ್ಥನೆ
01
ತೆಂಗಿನ ಸಿಪ್ಪ ಖರೀದಿಗಾಗಿ ದುಡಿಮೆ ಬಂಡವಾಳದ ನೆರವು 7 ಘಟಕಗಳಿಗೆ:


ಉತ್ಪಾದನಾ ಘಟಕಗಳಲ್ಲಿ ತೆಂಗಿನ ನಾರಿನ ಉತ್ಪಾದನೆಯನ್ನೆ ಹೆಚ್ಚಿಸಲು ಬೇಕಾದ ತೆಂಗಿನ ಸಿಪ್ಪೆಯನ್ನು ಖರೀದಿಸಲು ದುಡಿಮೆ ಬಂಡವಾಳ ಒಂದು ಘಟಕಕ್ಕೆ 1 ತಿಂಗಳಿಗೆ 85000 ತೆಂಗಿನ ಸಿಪ್ಪೆಯನ್ನು ಖರೀದಿಸಲು 
ರೂ. 47,619/- x 7 ಉತ್ಪಾದನಾ ಘಟಕಗಳಿಗೆ x 3 ತಿಂಗಳಿಗೆ ದುಡಿಮೆ ಬಂಡವಾಳ ಅಗತ್ಯತೆ (ರೂ. 47619 x 7 x 3 = ರೂ. 10.00 ಲಕ್ಷಗಳು​​

6851-00-106-0-06 (394)
ಆಧುನೀಕರಣ ತಂತ್ರ ಜ್ಞಾನ ಮತ್ತು ತರಬೇತಿ


10.0007
ಮಹಾ ಮಂಡಳಿಯ ಕೆಳಕಂಡ 7 ಉತ್ಪಾದನಾ ಘಟಕಗಳು

(1)    ಕಾಯರ್ ಕಾಂಪ್ಲೆಕ್ಸ್ ಅರಸೀಕೆರೆ
(2)   ಯಾದಾಪುರ ರಸ್ತೆ ಅರಸೀಕೆರೆ
(3)   ಹೇರೂರು ಗುಬ್ಬಿ ತಾಲ್ಲೂಕು
(4)   ಕಂದಾವರ ಕುಂದಾಪುರ ತಾ
(5)   ವರಹಾಸಂದ್ರ, ನಾಗಮಂಗಲ ತಾಲ್ಲೂಕು
(6)   ಕೆ. ಬಿದರೆ, ಕಡೂರು ತಾಲ್ಲೂಕು

(7)    ದುದ್ದಾ, ಹಾಸನ ತಾಲ್ಲೂಕು

ಈ ಘಟಕಗಳಲ್ಲಿ, ಡಿಫೈಬರಿಂಗ್ ಯಂತ್ರಗಳನ್ನು ಅಳವಡಿಸಿದ್ದು, ನಾರಿನ ಉತ್ಪಾದನೆಯನ್ನು ಹೆಚ್ಚಿಸಲು ಬೇಕಾದ ತೆಂಗಿನ ಸಿಪ್ಪೆಯನ್ನು ರೈತರಿಂದ ಸಕಾಲದಲ್ಲಿ ಖರೀದಿಸಿ ಶೇಖರಣೆ ಮಾಡಲು ಬಂಡವಾಳದ ಅವಶ್ಯಕತೆ ಇರುತ್ತದೆ.  ತೆಂಗಿನ ಸಿಪ್ಪೆ ಸಂಗ್ರಹಣೆಯಿಂದ ನಾರಿನ ಉತ್ಪಾದನೆ ಹೆಚ್ಚುವುದಲ್ಲದೆ, ಮೌಲ್ಯಾಧಾರಿತ ನಾರಿನ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಿ, ಉದ್ಯೋಗಾವಕಾಶವನ್ನು ಸಹ ಹೆಚ್ಚಿಸಬಹುದಾಗಿರುತ್ತದೆ.
02
ತೆಂಗಿನ ನಾರಿನ ಉತ್ಪಾದನಾ ಘಟಕಗಳ ಆಧುನೀಕರಣ

I. ಉತ್ಪಾದನಾ ಘಟಕಗಳಲ್ಲಿ ಅಳವಡಿಸಿರುವ ನಾರನ್ನು ಉತ್ಪಾದಿಸುವ ಬೀಟರ್ ಯಂತ್ರಗಳಿಗೆ ಕನ್ವೆಯರ್ ಸಿಸ್ಟಮ್ ಅಳವಡಿಸಲು -05 ಘಟಕಗಳಲ್ಲಿ ಒಂದು ಘಟಕಕ್ಕೆ ರೂ. 3.06 ಲಕ್ಷಗಳಂತೆ 5 x 3.06 = 15.30


2851-00-106-0-12 (59)15.3005
​[1] ತೆಂಗಿನ ನಾರಿನ ಉತ್ಪಾದನಾ ಘಟಕ, ಯಾದಾಪುರ ರಸ್ತೆ, ಅರಸೀಕೆರೆ.

​[2] ಕಾಯರ್ ಕ್ರಾಫ್ಟ್ ಕಾಂಪ್ಲೆಕ್ಸ್, ಹೆರೂರು

[3] ತೆಂಗಿನ ನಾರಿನ ನೇಯ್ಗೆ ಮತ್ತು ತರಬೇತಿ ಕೇಂದ್ರ, ದುದ್ದ

[4] ತೆಂಗಿನ ನಾರಿನ ಉತ್ಪಾದನಾ ಘಟಕ, ಕೆ. ಬಿದರೆ
ಮಹಾ ಮಂಡಳಿಯ ಮೇಲ್ಕಂಡ 05 ಘಟಕಗಳಲ್ಲಿ ತೆಂಗಿನ ನಾರನ್ನು ಉತ್ಪಾದಿಸಲು ಬಸ್ಟರ್ ಮತ್ತು ಟೀಟರ್ ಯಂತ್ರಗಳನ್ನು ಅಳವಡಿಸಲಾಗಿದ್ದು, ನಾರನ್ನು ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಪಿತ್ ಯಂತ್ರದ ತಳಭಾಗದಲ್ಲಿ ಶೇಖರಣೆಯಾಗುತ್ತಿದ್ದು, ಯಂತ್ರಗಳು ಚಾಲನೆಯಲ್ಲಿದ್ದಾಗ ಪಿತ್ ನ್ನು ಗುದ್ದುಲಿಯಿಂದ ಹೊರತೆಗೆದು, ಘಟಕದಿಂದ ಹೊರಗೆ ತಲೆಯ ಮೇಲೆ ಒತ್ತು ಸಾಗಿಸಬೇಕಾಗಿರುತ್ತದೆ.  ಇತ್ತೀಚೆಗೆ ಕೆಲಸಗಾರರು ಈ ಕೆಲಸವನ್ನು ನಿರ್ವಹಿಸಲು ನಿರಾಕರಿಸುತ್ತಿದ್ದು, ನಾರು ಉತ್ಪಾದನೆಗೆ ದಕ್ಕೆಯಾಗಿರುತ್ತದೆ.  ಈ ಸಿಸ್ಟಮ್ ನ್ನು ಅಳವಡಿಸಿದಲ್ಲಿ, ನಾರಿನಿಂದ ಬೇರ್ಪಟ್ಟ ಪಿತ್ ಸರಾಗವಾಗಿ ಕನ್ವೆಯರ್ ಬೇಲ್ಟ್ ಮುಖಾಂತರ ಕಟ್ಟಡದ ಹೊರಗೆ ಶೇಖರಣೆಯಾಗುತ್ತದೆ.  ಈ ಯಂತ್ರಗಳಿಗೆ ಕನ್ವೆಯರ್ ಸಿಸ್ಟಮ್ ಅಳವಡಿಸುವುದರಿಂದ ನಾರಿನ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಕೆಲಸಗಾರರು ಯಂತ್ರಗಳಿಂದ ಸಂಭವಿಸಬಹುದಾದ ಅಪಾಯದಿಂದ ದೂರವಿರಲು ಸಹಾಯವಾಗುತ್ತದೆ.
 
II. ತೆಂಗಿನ ನಾರಿನ ಕರಕುಶಲ ಕೇಂದ್ರ ಹೆರೂರು, ಗುಬ್ಬಿ ತಾ. ಇಲ್ಲಿಗೆ ಬ್ಲಸ್ಟರ್ ಯಂತ್ರವನ್ನು ಖರೀದಿಸಿ ಅಳವಡಿಸಲು
   01 ಘಟಕ x ರೂ. 2.50 = 2.50 ಲಕ್ಷಗಳು


2851-00-106-0-12 (059)
ಆಧುನೀಕರಣ ತಂತ್ರಜ್ಞಾನ ಮತ್ತು ತರಬೇತಿ 


2.5001ತೆಂಗಿನ ನಾರಿನ ಕರಕುಶಲ ಕೇಂದ್ರ, ಹೆರೂರು, ಗುಬ್ಬಿ ತಾ. ಈ ಘಟಕಕ್ಕೆ ತೆಂಗಿನ ನಾರನ್ನು ಉತ್ಪಾದಿಸುವ ಮುಂಚೆ ತೆಂಗಿನ ಸಿಪ್ಪೆಯನ್ನು ಬ್ರಸ್ಟ್ ಮಾಡಲು ಸುಮಾರು 5 ವರ್ಷಗಳ ಹಿಂದೆ ಬ್ಲಸ್ಟರ್ ಯಂತ್ರವನ್ನು ಖರೀದಿಸಿ ಅಳವಡಿಸಲಾಗಿತ್ತು.  ಸದರಿ ಯಂತ್ರವನ್ನು ನಿರಂತರವಾಗಿ ಸಿಪ್ಪೆಯನ್ನು ಬ್ರಸ್ಟ್ ಮಾಡಲು ಉಪಯೋಗಿಸಿದ್ದರಿಂದ, ಯಂತ್ರವು ಸವೆದು ಶಿಥಿಲಾವಸ್ಥೆಯಲ್ಲಿದ್ದು, ಸಿಪ್ಪೆಯನ್ನು ಬ್ರಸ್ಟ್ ಮಾಡಲು ಅಸಮರ್ಥವಾಗಿರುವುದರಿಂದ, ಹೊಸ ಬ್ರಸ್ಟರ್ ಯಂತ್ರ ಖರೀದಿ ಅವಶ್ಯವಾಗಿರುತ್ತದೆ.
 
III. ತೆಂಗಿನ ನಾರಿನ ಉತ್ಪಾದನಾ ಘಟಕದ ಕೆ. ಬಿದರೆ ಇಲ್ಲಿಗೆ ಬೀಟರ್ ಯಂತ್ರವನ್ನು ಖರೀದಿಸಿ ಅಳವಡಿಸುವುದು.
  01 ಘಟಕ x ರೂ. 3.70 ಲಕ್ಷಗಳು = ರೂ. 3.70 ಲಕ್ಷಗಳು


2851-00-106-0-12 (059)
ಆಧುನೀಕರಣ ತಂತ್ರಜ್ಞಾನ ಮತ್ತು ತರಬೇತಿ


 

3.7001ತೆಂಗಿನ ನಾರಿನ ಉತ್ಪಾದನಾ ಘಟಕ, ಕೆ. ಬಿದರೆ ಇಲ್ಲಿಗೆ ಸುಮಾರು 4 ವರ್ಷಗಳ ಹಿಂದೆ ನಾರನ್ನು ಉತ್ಪಾದಿಸಲು ಬೀಟರ್ ಯಂತ್ರವನ್ನು ಅಳವಡಿಸಲಾಗಿತ್ತು.  ಈ ಯಂತ್ರವನ್ನು ಸತತವಾಗಿ ಉತ್ಪಾದನೆಗೆ ಉಪಯೋಗಿಸಿಕೊಂಡಿದ್ದು, ಗುಣಮಟ್ಟದ ನಾರನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.  ಆದ್ದರಿಂದ ಹೊಸ ಬೀಟರ್ ಯಂತ್ರವನ್ನು ಖರೀದಿಸಿ ಅಳವಡಿಸುವುದು ಅಗತ್ಯವಾಗಿರುತ್ತದೆ.
 IV. ತೆಂಗಿನ ನಾರಿನ ಉತ್ಪಾದನಾ ಘಟಕಗಳಲ್ಲಿ ಸ್ಥಾಪಿಸಿರುವ 08 ಕರ್ಲಿಂಗ್ ಯಂತ್ರಗಳಿಗೆ ಆಟೋಮ್ಯಾಟಿಕ್ ಪೀಡಿಂಗ್ ವ್ಯವಸ್ಥೆಯನ್ನು ಅಳವಡಿಸಲು ಒಂದು ಯಂತ್ರಕ್ಕೆ ರೂ. 2.00 ಲಕ್ಷಗಳಂತೆ – 08 ಯಂತ್ರಗಳಿಗೆ x 2.00 ಲಕ್ಷಗಳಂತೆ = ರೂ. 16.00 ಲಕ್ಷಗಳು2851-00-106-0-12 (059)16.0008
1] ತೆಂಗಿನ ನಾರಿನ ಉತ್ಪಾದನಾ ಘಟಕ, ಯಾದಾಪುರ (01)
2] ಕಾಯರ್ ಕಾಂಪ್ಲೆಕ್ಸ್, ಮೈಸೂರು ರಸ್ತೆ, ಅರಸೀಕೆರೆ (03)
3] ಕಾಯರ್ ಕ್ರಾಫ್ಟ್ ಕಾಂಪ್ಲೆಕ್ಸ್, ಹೇರೂರು (02)
4] ತೆಂಗಿನ ನಾರಿನ ಸಂಕೀರ್ಣ ಘಟಕ, ವರಾಹಸಂದ್ರ (2)
   ಒಟ್ಟು [08]

ಈ ಮೇಲಿನ 04 ಘಟಕಗಳಲ್ಲಿ ಸ್ಠಾಪಿಸಿರುವ 08 ಕರ್ಲಿಂಗ್ ಯಂತ್ರಗಳ್ಲಲಿ ಕರ್ಲಿಂಗ್ ಹಗ್ಗವನ್ನು ಉತ್ಪಾದಿಸಲು ಕೈಯಿಂದ ನಾರನ್ನು ಸೀಡ್ ಮಾಡುವ ವ್ಯವಸ್ಥೆಯಿದ್ದು, ಇದರಲ್ಲಿ ಒಂದೇ ಸಮತೂಕದ ನಾರನ್ನು ಫೀಡ್ ಮಾಡಲು ಸಾಧ್ಯವಾಗುತ್ತಿಲ್ಲ.  ಇದರಿಂದ ಕರ್ಲಿಂಗ್ ಹಗ್ಗವು ಸಣ್ಣ/ದಪ್ಪದಿಂದ ಕೂಡಿದ್ದು, ಆಗಾಗ್ಗೆ ತುಂಡಾಗುತ್ತಿದ್ದು, ಉತ್ಪಾದನೆ ಕುಂಠಿತವಾಗುವುದಲ್ಲದೆ, ಸಮನಾದ ಗಾತ್ರದ ಹಗ್ಗವನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. (uniform) ಆಟೋಮ್ಯಾಟಿಕ್ ಫೀಡಿಂಗ್ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ಯಂತ್ರವು ಸಮನಾದ ತೂಕದ ನಾರನ್ನು ನಿರಂತರವಾಗಿ ಹರಡುತ್ತದೆ.  ಇದರಿಂದ ಹಗ್ಗ ಆಗಾಗ್ಗೆ ತುಂಡಾಗುವುದಿಲ್ಲ ಮತ್ತು ಹಗ್ಗದ ಉದ್ದಕ್ಕೂ ಸಮಾನಾಂತರ ಕೆಲಸವನ್ನು ಈ ಯಂತ್ರವು ನಿರ್ವಹಿಸುವುದಲ್ಲದೆ, ಉತ್ಪಾದನೆ ಹೆಚ್ಚಾಗುತ್ತದೆ.  ಕೆಲಸಗಾರರ ದಿನದ ಆಧಾಯವು ಸಹ ಹೆಚ್ಚಾಗುತ್ತದೆ.
03
ಮೂಲಭೂತ ಸೌಕರ್ಯ ಅಭಿವೃದ್ಧಿ
​ಅ] ಮಹಾಮಂಡಳಿಯ ಉತ್ಪಾದನಾ ಘಟಕಗಳಿಂದ ದಾಸ್ತಾನನ್ನು ಕೇಂದ್ರ ದಾಸ್ತಾನು ಮಳಿಗೆಗೆ ಸಾಗಾಣಿಕೆ ಮಾಡಲು ಮತ್ತು ಕೇಂದ್ರ ಮಳಿಗೆಗಳಿಂದ ಮಾರಾಟ ಮಳಿಗೆಗಳಿಗೆ ಸಾಗಾಣಿಕೆ ಮಾಡಲು ಮಿನಿ ಸಾಗಾಣಿಕಾ ವಾಹನ TATA SEC ವಾಹನವನ್ನು ಖರೀದಿಸಲು.


2851-00-106-0-12 (059)4.0001ಮಹಾಮಂಡಳಿಯು 17 ಉತ್ಪಾದನಾ ಘಟಕಗಳು ಹಾಗೂ 14 ಮಾರಾಟ ಮಂಡಳಿಗೆಗಳನ್ನು ಹೊಂದಿದ್ದು, ಘಟಕಗಳಲ್ಲಿ ಉತ್ಪಾದಿಸುವ ಸಿದ್ದವಸ್ತುಗಳನ್ನು ಮಾರಾಟ ಮಳಿಗೆಗಳಿಗೆ ಮತ್ತು ಕೇಂದ್ರ ದಾಸ್ತಾನು ಮಳಿಗೆಗಳಿಗೆ, ಕೇಂದ್ರ ದಾಸ್ತಾನು ಮಳಿಗೆಗಳಿಂದ ಮಾರಾಟ ಮಳಿಗೆಗಳು ಮತ್ತು ಇತರೆ ಸಗಟು ಖರೀದಿದಾರರಿಗೆ ದಾಸ್ತಾನನ್ನು ವಿಲೇವಾರಿ ಮಾಡಲು ಬೆಂಗಳೂರು ನಗರದಲ್ಲಿ ಮಿನಿ ಸಾಗಣಿಕಾ ವಾಹನ ಅಗತ್ಯವಾಗಿರುತ್ತದೆ.
04ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧ್ಯಕ್ಷರ ಉಪಯೋಗಕ್ಕಾಗಿ ವಾಹನ ಖರೀದಿಸಲು

2851-00-106-0-12 (059)

8.5001ಮಹಾಮಂಡಳಿಯ ಉತ್ಪಾದನಾ ಘಟಕಗಳು/ಮಾರಾಟ ಮಳಿಗೆಗಳು ರಾಜ್ಯದ ವಿವಿಧ ಭಾಗಗಳಲ್ಲಿದ್ದು, ಆಗಿಂದ್ದಾಗ್ಯೆ ಭೇಟಿ ನೀಡಿ ಪರಿಶೀಲಿಸಲು ಮತ್ತು ಸರ್ಕಾರಿ ಕಛೇರಿಗಳಿಗೆ ಮಹಾಮಂಡಳಿಯ ಕಾರ್ಯದ ನಿಮಿತ್ತ ಭೇಟಿ ನೀಡಲು ವಾಹನದ ಅಗತ್ಯವಿರುತ್ತದೆ.

​ಸಹಿ/ವ್ಯವಸ್ಥಾಪಕ ನಿರ್ದೇಶಕರು

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.