ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ 1000 ವಸತಿ ಕಾರ್ಯಾಗಾರ ನಿರ್ಮಾಣ ಸಿಐ 72 ಸಿಎಸ್.ಸಿ 2014

  • GOK
    • vanijyasachivalaya
      • ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ 1000 ವಸತಿ ಕಾರ್ಯಾಗಾರ ನಿರ್ಮಾಣ ಸಿಐ 72 ಸಿಎಸ್.ಸಿ 2014
Last modified at 26/04/2016 22:15 by Vanijyasachivalaya

​​​​​

​​​​

​​ಕರ್ನಾಟಕ ಸರ್ಕಾರದ ನಡವಳಿಗಳು


​ವಿಷಯ: ರಾಜ್ಯದ ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ 1,000 ವಸತಿ ಕಾರ್ಯಾಗಾರ ನಿರ್ಮಾಣ ಮಾಡುವ ಬಗ್ಗೆ.

​ಓದಲಾಗಿದೆ:

1)  ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಕೈವಾಇ/ವಿಶ್ವ/ಎ4/ಕುಗವಾಕಾಯೋ/2013-14 ದಿನಾಂಕ: 23.04.2014 ಮತ್ತು ದಿನಾಂಕ: 23.06.2014.

2) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಸತಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ದಿನಾಂಕ: 30.05.2014 ರ ಸಭೆಯ ನಡವಳಿ.

ಪ್ರಸ್ತಾವನೆ:

2014-15ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-36 ರಲ್ಲಿ "ರಾಜ್ಯದ ಕುಶಲಕರ್ಮಿಗಳಿಗೆ ಹೊಸದಾದ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ 1,000 ವಸತಿ ಕಾರ್ಯಾಗಾರವನ್ನು ರೂ.10.00 ಕೋಟಿಗಳ ಅನುದಾನದಲ್ಲಿ ಕೈಗೊಳ್ಳಲಾಗುವುದು" ಎಂದು ಘೋಷಿಸಲಾಗಿದೆ.

ಅದರಂತೆ, ಓದಲಾದ ಕ್ರಮಾಂಕ (1) ರ ಪತ್ರಗಳಲ್ಲಿ ಆಯುಕ್ತರು, ಕೈಗಾರಿಕಾಭಿವೃದ್ಧಿ ಮತ್ತು ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರು ಈ ಯೋಜನೆಯ ಅನುಷ್ಟಾನಕ್ಕಾಗಿ ರಾಜ್ಯದಲ್ಲಿರುವ ಕುಶಲಕರ್ಮಿಗಳಿಗೆ ಹೊಸದಾದ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ 1,000 ವಸತಿ ಕಾರ್ಯಾಗಾರಗಳನ್ನು ನಿರ್ಮಿಸುವ ಈ ಯೋಜನೆಯನ್ನು ಜಂಟಿಯಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯೊಂದಿಗೆ ಅನುಷ್ಟಾನಗೊಳಿಸಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.  ಮೇಲೆ ಕ್ರಮಾಂಕ (2) ರಲ್ಲಿ ಓದಲಾದ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಿ ಪ್ರತೀ ಕಾರ್ಯಾಗಾರದ ನಿರ್ಮಾಣ ವೆಚ್ಚ ರೂ.2.50 ಲಕ್ಷಗಳನ್ನು ನಿಗದಿಪಡಿಸಲಾಗಿದ್ದು, ಇದರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಾಯಧನ ರೂ.1.00 ಲಕ್ಷ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ರೂ.1.20 ಲಕ್ಷಗಳ ವಂತಿಗೆ ಹಾಗೂ ಫಲಾನುಭವಿ ಕುಶಲಕರ್ಮಿಯು ಬಾಕಿ ಉಳಿಯುವ ರೂ.30,000/- ಗಳನ್ನು ಭರಿಸಲು ನಿರ್ಣಯಿಸಲಾಗಿರುತ್ತದೆ

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಮುಂದಿನಂತೆ ಆದೇಶ ಹೊರಡಿಸಿದೆ.

​​ಸರ್ಕಾರಿ ಆದೇಶ ಸಂಖ್ಯೆ: ಸಿಐ 72 ಸಿಎಸ್ ಸಿ 2014, ಬೆಂಗಳೂರು, ದಿನಾಂಕ: 14.08.2014


ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ, ರಾಜ್ಯದ ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ 1,000 ವಸತಿ ಕಾರ್ಯಾಗಾರಗಳನ್ನು (ಗುಂಪು ವಸತಿ ಕಾರ್ಯಾಗಾರ ಮತ್ತು ವೈಯಕ್ತಿಕ ವಸತಿ ಕಾರ್ಯಾಗಾರಗಳು ಸೇರಿದಂತೆ) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದೊಂದಿಗೆ ಜಂಟಿಯಾಗಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರೂ.10.00 ಕೋಟಿಗಳ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಯೋಜನೆಯ ಅನುಷ್ಟಾನಕ್ಕಾಗಿ ರೂಪಿಸಿರುವ ವಿವರವಾದ ಮಾರ್ಗಸೂಚಿಗಳನ್ನು ಈ ಆದೇಶ ಅನುಬಂಧದಲ್ಲಿ ನೀಡಲಾಗಿದೆ.  ಸದರಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಯೋಜನೆಯನ್ನು ಅನುಷ್ಟಾನಗೊಳಿಸತಕ್ಕದ್ದು ಹಾಗೂ ಈ ಯೋಜನೆಯಡಿ ವಸತಿ ಕಾರ್ಯಾಗಾರಗಳನ್ನು ನಿರ್ಮಿಸುವ ಕಾಮಗಾರಿಯನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ನಿರ್ವಹಿಸತಕ್ಕದ್ದು.

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿ 28 ಎಫ್ಆರ್ ಓ 2014, ದಿನಾಂಕ: 26.06.2014 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 669 ವೆಚ್ಚ-1 2014, ದಿನಾಂಕ: 11.07.2014 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

​ಕರ್ನಾಟಕ ರಾಜ್ಯಪಾಲರ ಆದೇಶಾನುಸಾರಮತ್ತು ಅವರ ಹೆಸರಿನಲ್ಲಿ.
 (ಎಲ್.ಎಸ್.ಶ್ರೀ.ಕಂಠಬಾಬು) ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.


​​​ಸರ್ಕಾರದ ಆದೇಶ ಸಂಖ್ಯೆ: ಸಿಐ 72 ಸಿಎಸ್ ಸಿ 2014, ದಿನಾಂ: 14.08.2014ಕ್ಕೆ ಅನುಬಂಧ


​ವೃತ್ತಿ ನಿರತ ಕುಶಲಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ ಮತ್ತು ವೈಯಕ್ತಿಕ ವಸತಿ ಕಾರ್ಯಾಗಾರ ಯೋಜನೆಯ ಮಾರ್ಗಸೂಚಿಗಳು


1.  ಉದ್ದೇಶಗಳು:

  • ನಿವೇಶನ ರಹಿತ ಮತ್ತು ವಸತಿ ರಹಿತ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರಗಳನ್ನು ನಿರ್ಮಾಣ ಮಾಡಿ, ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
  • ನಿವೇಶನ ಹೊಂದಿರುವ ಮತ್ತು ಗುಡಿಸಲು/ಶಿಥಿಲಗೊಂಡ ಮನೆಯನ್ನು ಹೊಂದಿರುವ ವೃತ್ತಿ ನಿರತ ಕುಶಲಕರ್ಮಿಗಳಿಗೆ ವೈಯಕ್ತಿಕ ವಸತಿ ಮತ್ತು ಕಾರ್ಯಾಗಾರ ಒದಗಿಸುವುದು.
2.  ಗುರಿ: 2014-15 ರಲ್ಲಿ 1000 ಗುಂಪು ವಸತಿ ಕಾರ್ಯಾಗಾರಗಳನ್ನು ನಿರ್ಮಾಣ ಮಾಡುವುದು.

3.   ಕುಶಲಕರ್ಮಿ ವೃತ್ತಿಗಳು:​

ಸಂ.ಕ್ರ.ಸಂ.ವೃತ್ತಿಯ ಹೆಸರು
.ಬಿದಿರು ಕೆಲಸ12.ನೂಲುಗಾರರು
2.13.ಕೌದಿ ಹೊಲಿಯುವುದು
.ಬಡಗಿ ಕೆಲಸ14.ಜನರಲ್ ಇಂಜಿನಿಯರಿಂಗ್
4.ಕಮ್ಮಾರಿಕೆ 15.ಚಾಪೆ ಹೆಣೆಯುವುದು
5.16.ಬುಟ್ಟಿ ಹೆಣೆಯುವುದು
6.ಕರಕುಶಲ ವಸ್ತು ತಯಾರಿಕೆ17.ತೆಂಗಿನ ನಾರಿನ ಹಗ್ಗ ಮಾಡುವುದು (ಪ್ಲಾಸ್ಟಿಕ್ ಹೊರತುಪಡಿಸಿ)
7.18.ಅಗರಬತ್ತಿ
8.ಕುಂಬಾರಿಕೆ19.ಕಸೂತಿ, ಎಂಬ್ರಾಯಡರಿ
9.20.ಎತ್ತಿನ ಗಾಡಿ ತಯಾರಿಕೆ
.21.ಕಲ್ಲಿನ ಕೆತ್ತನೆ
11.ಖಾದಿ ಕೈಮಗ್ಗ ನೇಯ್ಗೆಗಾರರು (ಹತ್ತಿ, ರೇಷ್ಮೆ, ಪಾಲಿಸ್ಟರ್)22.ಇತರೆ ಕುಶಲ ಕರ್ಮಿಗಳು


ಸುವುದು.

್ರಾ) 
     ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಾಹಣಾಧಿಕಾರಿಗಳು/ಆಯುಕ್ತರು/ ಮುಖ್ಯಾಧಿಕಾರ
ಿಗಳು.

ಪಕ
    ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ಬೆಂಗಳೂರು.

7.  ಸರ್ಕಾರದ ಮಟ್ಟದ ಪರಿಶೀಲನಾ ಇಲಾಖೆ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಸತಿ ಇಲಾಖೆ ಹಾಗೂ ಸರ್ಕಾರದ ಕಾರ್ಯದರ್ಶಿಗಳು, 
     ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಬೆಂಗಳೂರು.

8.  ಪ್ರತಿ ವಸತಿ ಕಾರ್ಯಾಗಾರಗಳ ನಿರ್ಮಾಣ ವೆಚ್ಚ ರೂ.2,50,000/-:

                                                  ಅನುದಾನ ರೂ.ಗಳಲ್ಲಿ
ಅ.ಪ್ರತಿ ವಸತಿ ಕಾರ್ಯಾಗಾರಗಳಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನೀಡುವ ಸಹಾಯಧನ ಮೊತ್ತ1,00,000-00
ಆ.ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವತಿಯಿಂದ ನೀಡುವ ಸಹಾಯಧನ ಮೊತ್ತ.1,20,000-00
ಇ.ಕುಶಲಕರ್ಮಿಗಳ ವಂತಿಕೆ ಮೊತ್ತ30,000-00
 ಒಟ್ಟು ಮೊತ್ತ2,50,000-00

9.    ಗುಂಪು ವಸತಿ ಕಾರ್ಯಾಗಾರಗಳನ್ನು ಪಡೆಯಲು ಕುಶಲಕರ್ಮಿಗಳ ಅರ್ಹತೆ:

ಯಾವುದೇ ಯೋಜನೆಗಳಡಿಯಲ್ಲಿ ವಸತಿ ಸೌಕರ್ಯವನ್ನು ಪಡೆದಿಲ್ಲದಿರುವ ಸ್ವಂತ ಮನೆ ಹೊಂದಿಲ್ಲದಿರುವ ಬಡತನ ರೇಖೆಗಿಂತ ಕೆಳಗಿರುವ ಕುಶಲಕರ್ಮಿಗಳು ಅರ್ಹರಾಗಿರುತ್ತಾರೆ.  ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ಆದಾಯ ರೂ.32,000/- ಗಿಂತ ಕಡಿಮೆ ಇರಬೇಕು ಹಾಗೂ ನಗರ ಪ್ರದೇಶದಲ್ಲಿ ಅರ್ಜಿದಾರರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು ಮಾಸಿಕ ಆದಾಯ ಗರಿಷ್ಟ ರೂ.7,300/- ವರೆಗೆ ಹೊಂದಿರುವ ಕುಟುಂಬಗಳನ್ನು ಪರಿಗಣಿಸುವುದು (ವಾರ್ಷಿಕ ರೂ.87,600/-ಗಳು).

ಫಲಾನುಭವಿಯು ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಅಥವಾ ನಗರ ಪ್ರದೇಶದಲ್ಲಿ ವಾಸವಾಗಿರಬೇಕು ಮತ್ತು ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ನಗರ ಸಂಸ್ಥೆಗಳ ವಸತಿ ರಹಿತರ ಪಟ್ಟಿಯಲ್ಲಿ ಸೇರಿರಬೇಕು. 

ಆಯ್ಕೆಯಾದ ಫಲಾನುಭವಿಗಳು ತಮ್ಮ ವಂತಿಕೆ ಹಣ ರೂ.30,000/- ಗಳನ್ನು ಆಯಾ ಜಿಲ್ಲೆಗಳ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರಗಳಿಗೆ ಆಯ್ಕೆಯಾದ ನಂತರ ಒಂದು ತಿಂಗಳೊಳಗಾಗಿ ಠೇವಣಿ ಮಾಡಬೇಕು.

10.  ವೈಯಕ್ತಿಕ ವಸತಿ ಕಾರ್ಯಾಗಾರಗಳನ್ನು ಪಡೆದಯಲು ಕುಶಲಕರ್ಮಿಗಳ ಅರ್ಹತೆ:

ಸ್ವಂತ ನಿವೇಶನ ಅಥವಾ ಸರ್ಕಾರದ ನಿವೇಶನ ಹೊಂದಿರುವ, ಗುಡಿಸಲು/ಶಿಥಿಲಗೊಂಡ ಮನೆಯಲ್ಲಿ ವಾಸವಾಗಿರುವ ಕುಶಲಕರ್ಮಿಗಳು ಬಡತನ ರೇಖೆಗಿಂತ ಕೆಳಗಿರುವ ಕುಶಲಕರ್ಮಿಗಳು ಅರ್ಹರಾಗಿರುತ್ತಾರೆ. 

ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ಆದಾಯ ರೂ.32,000/- ಗಿಂತ ಕಡಿಮೆ ಇರಬೇಕು ಹಾಗೂ ನಗರ ಪ್ರದೇಶದಲ್ಲಿ ಅರ್ಜಿದಾರರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು ಮಾಸಿಕ ಆದಾಯ ಗರಿಷ್ಠ ರೂ.7,300/- ವರೆಗೆ ಹೊಂದಿರುವ ಕುಟುಂಬಗಳನ್ನು ಪರಿಗಣಿಸುವುದು ( ವಾರ್ಷಿಕ ರೂ.87,600/- ಗಳು). 

ಫಲಾನುಭವಿಯು ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಅಥವಾ ನಗರ ಪ್ರಧೇಶದಲ್ಲಿ ವಾಸವಾಗಿರಬೇಕು.  ಅಯ್ಕೆಯಾದ ಫಲಾನುಭವಿಗಳು ತಮ್ಮ ವಂತಿಕೆ ಹಣ ರೂ.30,000/- ಗಳನ್ನು ನಿರ್ಮಾಣ ಹಂತದಲ್ಲಿಯೇ ಹೂಡುವುದು.

11.   ವಸತಿ ಕಾರ್ಯಾಗಾರಗಳ ವಿಸ್ತೀರ್ಣ ಮತ್ತು ವಿನ್ಯಾಸ:

ಟೈಪ್ ಡಿಸೈನ್ ಪ್ರಕಾರ ಆರ್.ಸಿ.ಸಿ. ಮೇಲ್ಚಾವಣಿಯಿರುವ ವಸತಿ ಮತ್ತು ಕಾರ್ಯಾಗಾರ ವಿಸ್ತೀರ್ಣ 300 ಚದರ ಅಡಿ ಮತ್ತು ಎ.ಸಿ.ಸಿ. ಮೇಲ್ಚಾಣಿಯಿರುವ ವಸತಿ ಮತ್ತು ಕಾರ್ಯಾಗಾರ ವಿಸ್ತೀರ್ಣ 400 ಚದರ ಅಡಿಗಳವರೆಗೆ ವಸತಿ ಕಾರ್ಯಾಗಾರ ನಿರ್ಮಿಸಲಾಗುವುದು.  ಆರ್.ಸಿ.ಸಿ. ಮೇಲ್ಚಾವಣಿ ಹೊಂದಿರುವ ವಸತಿ ಕಾರ್ಯಾಗಾರದ ಮಾದರಿ "ಟೈಪ್ ಡಿಸೈನ್ – ಎ" ಮತ್ತು  ಎ.ಸಿ.ಸಿ ಮೇಲ್ಚಾವಣಿ ಹೊಂದಿರುವ ಮಾದರಿ ವಸತಿ ಕಾರ್ಯಾಗಾರ ಮಾದರಿ "ಟೈಪ್ ಡಿಸೈನ್ – ಬಿ" ಲಗತ್ತಿಸಿದೆ.  ವೈಯಕ್ತಿಕ ವಸತಿ  ಕಾರ್ಯಾಗಾರದ ಫಲಾನುಭವಿಗಳು ಹೆಚ್ಚುವರಿಯಾಗಿ ವಸತಿ ಕಾರ್ಯಾಗಾರವನ್ನು ನಿರ್ಮಾಣ ಮಾಡಲು ಬಯಸಿದ್ದಲ್ಲಿ, ಹೆಚ್ಚುವರಿ ನಿರ್ಮಾಣದ ವೆಚ್ಚವನ್ನು ಫಲಾನುಭವಿಗಳೇ ಭರಿಸತಕ್ಕದ್ದು ಹಾಗೂ ವಸತಿ ಕಾರ್ಯಾಗಾರದ ವಿಸ್ತೀರ್ಣವನ್ನು ಗರಿಷ್ಠ 700 ಚದರ ಅಡಿಗೆ ಸೀಮಿತಗೊಳಿಸುವುದು.  ನಿರ್ಮಾಣಗೊಂಡ ಮನೆಯ ವೆಚ್ಚವು ಸರ್ಕಾರ ನೀಡುವ ಸಹಾಯಧನದ ಜೊತೆಗೆ ಫಲಾನುಭವಿ ವಂತಿಕೆ / ಸಾಲವನ್ನು ಒಳಗೊಂಡಂತೆ ಸಹಾಯಧನದ ನಾಲ್ಕು ಪಟ್ಟು ಮೀರಿರಬಾರದು.

ನಿರ್ಮಿಸುವ ವಸತಿ ಕಾರ್ಯಾಗಾರ ಕಟ್ಟಡದಲ್ಲಿ ವಾಸಿಸಲು ಕೊಠಡಿ, ಕೆಲಸ ನಿರ್ವಹಿಸಲು ಕಾರ್ಯಾಗಾರ, ಅಡಿಗೆ ಕೋಣೆ, ಸ್ನಾನದ ಕೊಠಡಿ, ಶೌಚಾಲಯ ಹೊಂದಿಕೊಂಡಂತೆ ನಿರ್ಮಿಸುವುದು.

12. ಗುಂಪು ವಸತಿ ಕಾರ್ಯಾಗಾರಗಳನ್ನು ಪಡೆಯಲು ಫಲಾನುಭವಿಯು ಸಲ್ಲಿಸಬೇಕಾಗಿರುವ ದಾಖಲಾತಿಗಳು:

್ಜ
ಿ
II.  ಆದಾಯ ಪ್ರಮಾಣ ಪತ್ರ
III. ಜಾತಿ ಪ್ರಮಾಣ ಪತ್ರ
​IV. ವೃತ್ತಿ ನಿರತ ಕುಶಲಕರ್ಮಿ ಪರಿಪತ್ರ

ಿಗ
ಳು:

                I.   ವಸತಿ ಕಾರ್ಯಾಗಾರಕ್ಕೆ ನಿಗದಿಪಡಿಸಿದ ಅರ್ಜಿ
               II.   ಆದಾಯ ಪ್ರಮಾಣ ಪತ್ರ
              III.   ಜಾತಿ ಪ್ರಮಾಣ ಪತ್ರ
             IV.   ವೃತ್ತಿ ನಿರತ ಕುಶಲಕರ್ಮಿ ಪರಿಪತ್ರ
              V.   ಸ್ವಂತ ನಿವೇಶನದ ದಾಖಲೆಗಳು
             VI.   ಈಗಿರುವ ಗುಡಿಸಲು/ಶಿಥಿಲಗೊಂಡ ಮನೆಯ ಫೋಟೋಗಳು

14.  ಫಲಾನುಭವಿಗಳ ಆಯ್ಕೆ ಸಮಿತಿ:

1.ಜಿಲ್ಲಾಧಿಕಾರಿಗಳುಅಧ್ಯಕ್ಷರು
2ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ಉಪಾಧ್ಯಕ್ಷರು
3ಯೋಜನಾ ನಿರ್ದೇಶಕರು, ಡಿಯುಡಿಸಿ ಕೋಶ (District Urban Development Cell)ಸದಸ್ಯರು
4ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳುಸದಸ್ಯರು
5ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಸದಸ್ಯರು
6ಎಲ್ಲಾ ನಿರ್ದೇಶಕರು (ಖಾಗ್ರ), ಜಿಲ್ಲಾ ಪಂಚಾಯತ್ ವಿಭಾಗಸದಸ್ಯರು
7ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರಸದಸ್ಯ ಕಾರ್ಯದರ್ಶಿಗಳು

15. ವ್ಯಾಪಕ ಪ್ರಚಾರ/ಸಮೀಕ್ಷೆ ಮೂಲಕ ಫಲಾನುಭವಿಗಳನ್ನು ಗುರುತಿಸುವಿಕೆ:

ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಇವರು ಗುಂಪು ವಸತಿ ಕಾರ್ಯಾಗಾರಗಳಿಗೆ ಮತ್ತು ವೈಯಕ್ತಿಕ ವಸತಿ ಕಾರ್ಯಾಗಾರಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಅರ್ಜಿಗಳನ್ನು ಆಹ್ವಾನಿಸುವುದು ಅಥವಾ ಸಮೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಗುರುತಿಸುವುದು.  ಗ್ರಾಮ ಪಂಚಾಯಿತಿವಾರು / ನಗರ ಸ್ಥಳೀಯ ಸಂಸ್ಥೆವಾರು ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ಜಿಲ್ಲಾ ಸಮಿತಿಗೆ ಸಲ್ಲಿಸಿ ಜಿಲ್ಲಾ ಸಮಿತಿಯಿಂದ ಅನುಮೋದನೆ ಪಡೆಯುವುದು.

16. ನಗರ ಸ್ಥಳೀಯ ಸಂಸ್ಥೆವಾರು / ಗ್ರಾಮ ಪಂಚಾಯತ್ ವಾರು ವಿವರಗಳನ್ನು ನಿಗಮಕ್ಕೆ ಸಲ್ಲಿಸುವುದು:

 ಅಂತಿಮವಾಗಿ ಜಿಲ್ಲಾ ಸಮಿತಿಯಿಂದ ಻ನುಮೋದಿಸಿದ ಗ್ರಾಮ ಪಂಚಾಯತ್ ವಾರು / ನಗರ ಸ್ಥಳೀಯ ಸಂಸ್ಥೆವಾರು ಅಂಕಿ ಅಂಶಗಳನ್ನು (ಸಂಖ್ಯಾವಾರು / ವರ್ಗವಾರು ಮಾಹಿತಿ) ನಿಗಮಕ್ಕೆ ಸಲ್ಲಿಸುವುದು.  ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಬಾರದು.

17. ನಿಗಮದಿಂದ ಗುರಿಯ ಮಾಹಿತಿಯನ್ನು ಜಿಲ್ಲಾ ಸಮಿತಿಯ ಮೂಲಕ ೆಲ್ಲಾ ಸ್ಥಳೀಯ ಸಂಸ್ಥೆಗಳಿಗೆ ರವಾನಿಸುವುದು.

ಸದರಿ ವರ್ಷದಲ್ಲಿ ಕುಶಲಕರ್ಮಿಗಳ ಗುಂಪು ವಸತಿ ಮತ್ತು ಕಾರ್ಯಾಗಾರ ಮತ್ತು ವೈಯಕ್ತಿಕ ವಸತಿ ಕಾರ್ಯಾಗಾರ ಯೋಜನೆಯಡಿಯಲ್ಲಿ ಸರ್ಕಾರವು ನಿಗದಿಪಡಿಸಿರುವ ಗುರಿಯ ಮಿತಿಯೊಳಗೆ ರಾಜ್ಯದ ಜಿಲ್ಲಾ ಜಿಲ್ಲೆಗಳಿಂದ ಸ್ವೀಕೃತವಾದ ಅರ್ಹ ಅರ್ಜಿದಾರರ ಪಟ್ಟಿಗೆ ಅನುಗುಣವಾಗಿ ಜಿಲ್ಲಾವಾರು / ಸ್ಥಳೀಯ ಸಂಸ್ಥೆವಾರು ಪ್ರಸ್ತುತ ಸಾಲಿಗೆ ಗುರಿಯನ್ನು ನಿಗದಿಪಡಿಸಿ ಜಿಲ್ಲಾ ಸಮಿತಿಯ ಮೂಲಕ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಿಗಮದಿಂದ ಗುರಿಯನ್ನು ರವಾನಿಸಲಾಗುವುದು.  ಅರ್ಹ ಫಲಾನುಭವಿಗಳು ನಿಗಮದಿಂದ ನಿಗದಿಪಡಿಸಿದ ಗುರಿಗಿಂತ ಅಧಿಕವಾಗಿದ್ದಲ್ಲಿ ಜಿಲ್ಲಾ ಸಮಿತಿಯು ಗುರಿಗೆ ಅನುಗುಣವಾಗಿ ಅರ್ಹ ಫಲಾನುಭವಿಗಳ ಪಟ್ಟಿಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿ ಸ್ಥಳೀಯ ಸಂಸ್ಥೆಗಳಿಗೆ ಯೋಜನೆಯ ಅನುಷ್ಟಾನಕ್ಕಾಗಿ ಪಟ್ಟಿಯನ್ನು ರವಾನಿಸುವುದು.  ಬಾಕಿ ಉಳಿದ ಅರ್ಹ ಫಲಾನುಭವಿಗಳನ್ನು ಮುಂದಿನ ವರ್ಷದಲ್ಲಿ ಪರಿಗಣಿಸಬಹುದಾಗಿದೆ.

18. ಫಲಾನುಭವಿಗಳ ವಿವರಗಳನ್ನು ಆನ್ ಲೈನ್ ನಲ್ಲಿ ಅಳವಡಿಸಿ ಡಿ ಎಸ್ ಓ (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್) ಮೂಲಕ ಅನುಮೋದಿಸುವುದು:

ಜಿಲ್ಲಾ ಸಮಿತಿಯಿಂದ ಅಂತಿಮಗೊಳಿಸಿ ಅನುಮೋದಿಸಲ್ಪಟ್ಟ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳು / ಗ್ರಾಮ ಪಂಚಾಯತ್ ಗಳು ಫಲಾನುಭವಿಗಳ ವಿವರಗಳನ್ನು ನಮೂದಿಸುವ ಮೂಲಕ ಆನ್ ಲೈನ್ ನಲ್ಲಿ ಅಳವಡಿಸಿ ಖಾಲಿ ನಿವೇಶನ ಜಿಪಿಎಸ್ ಮಾಡಿ ಆನ್-ಲೈನ್ ಗೆ ಅಪ್ ಲೋಡ್ ಮಾಡುವುದು.  ನಂತರ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಣಾಧಿಕಾರಿಗಳು ಫಲಾನುಭವಿಗಳ ಪಟ್ಟಿಯನ್ನು ಖುದ್ದಾಗಿ ಪರಿಶೀಲಿಸಿ ಆನ್-ಲೈನ್ ಮೂಲಕ ಜಿಲ್ಲಾ ಪಂಚಾಯತ್ ಗೆ ರವಾನಿಸುವುದು.  ನಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಹಂತದಲ್ಲಿ ಜಿಲ್ಲಾ ಸಮಿತಿಯಲ್ಲಿ ಅಂತಿಮಗೊಳಿಸಿದ ಫಲಾನುಭವಿಗಳ ಪಟ್ಟಿಯೆಂದು ದೃಢಪಟ್ಟ ಬಳಿಕ ಆನ್-ಲೈನ್ ನಲ್ಲಿ ಡಿ.ಎಸ್.ಸಿ ಮೂಲಕ ಅನುಮೋದಿಸಿ, ನಿಗಮಕ್ಕೆ ಸಲ್ಲಿಸುವುದು.

ಅದರಂತೆಯೇ ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯುಕ್ತರು, ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ತಮ್ಮ ಮಟ್ಟದಲ್ಲಿ ನಮೂದಿಸಿರುವ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ ಆನ್-ಲೈನ್ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ರವಾನಿಸುವುದು.  ಜಿಲ್ಲಾಧಿಕಾರಿಗಳು ಡಿ.ಎಸ್.ಸಿ  (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್) ಮೂಲಕ ಅನುಮೋದಿಸಿ ಅನುಮೋದನೆಗಾಗಿ ಆನ್ ಲೈನ್ ಮೂಲಕ ನಿಗಮಕ್ಕೆ ಸಲ್ಲಿಸುವುದು.

ಈ ರೀತಿಯಾಗಿ ಆನ್-ಲೈನ್ ನಲ್ಲಿ ಅನುಮೋದಿಸಿದ ಫಲಾನುಭವಿಗಳ ಪಟ್ಟಿಗೆ ನಿಗಮವು ಡಿ.ಎಸ್.ಸಿ ಮೂಲಕ ಅನುಮೋದನೆ ನೀಡಿ, ಫಲಾನುಭವಿಗಳಿಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಎಸ್.ಎಂ.ಎಸ್ ಮೂಲಕ ಸಂದೇಶವನ್ನು ರವಾನಿಸಲಾಗುವುದು.

19. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಪಾತ್ರ ಮತ್ತು ಜವಾಬ್ದಾರಿಗಳು:

I.    ಗುಂಪು ವಸತಿ ಕಾರ್ಯಾಗಾರಗಳ ಅಗತ್ಯವಿರುವ ಜಮೀನು ಖರೀದಿಗೆ ಅವಶ್ಯಕತೆಯಿರುವ ಅನುದಾನ ಒದಗಿಸುವುದ
ು.
ು.
III.  ವಸತಿ ಕಾರ್ಯಾಗಾರ ನಿರ್ಮಾಣಕ್ಕೆ ಪ್ರತಿ ಮನೆಗೆ ರೂ.1,20,000-00 ಒದಗಿಸುವುದು.
IV.  ಜಿಲ್ಲಾಧಿಕಾರಿಗಳ ಮೂಲಕ ಸೂಕ್ತ ನಿರ್ಮಾಣ ಸಂಸ್ಥೆಯನ್ನು ಗುರುತಿಸಿ, ಮನೆಗಳ ನಿರ್ಮಾಣ ಮತ್ತು ಮೂಲಭೂತ ಸೌಲಭ್ಯಗಳ ಕಾಮಗಾರಿಗಳನ್ನು ಕೈಗೊಳ್ಳುವುದು.
​V.  ವೈಯಕ್ತಿಕ ವಸತಿಕಾರ್ಯಾಗಾರಗಳಿಗೆ ಜಿ.ಪಿ.ಎಸ್. ಪ್ರಗತಿಗೆ ಅನುಸಾರವಾಗಿ ನಾಲ್ಕು ಹಂತಗಳಲ್ಲಿ ಅಂದರೆ ತಳಪಾಯ, ಗೋಡೆ/ಲಿಂಟಲ್, ಛಾವಣೆ, ಹಾಗೂ ಪೂರ್ಣಗೊಂಡ ಹಂತಗಳಲ್ಲಿ ಸಹಾಯಧನ ರೂ.2.20 ಲಕ್ಷಗಳನ್ನು ಕುಶಲಕರ್ಮಿಗಳ ಖಾತೆಗೆ ಬಿಡುಗಡೆ ಮಾಡುವುದು.

ಾಂತರ:

I.  ಗುಂಪು ವಸತಿ ಕಾರ್ಯಾಗಾರಗಳ ನಿರ್ಮಾಣಕ್ಕೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರದವರು ಯೋಗ್ಯವಾದ ಜಮೀನು ಗುರುತಿಸುವುದು.  ಸರ್ಕಾರದ ಜಮೀನಾದರೆ ಜಿಲ್ಲಾಧಿಕಾರಿಗಳ ಮುಖಾಂತರ ಮಂಜೂರು ಪಡೆಯುವುದು.  ಖಾಸಗಿ ಜಮೀನು ಲಭ್ಯವಾದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಜಮೀನು ಖರೀದಿಗೆ ಪ್ರಸ್ತಾವನೆಯನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಬೆಂಗಳೂರು ರವರಿಗೆ ಸಲ್ಲಿಸುವುದು.

ವುದ
ು.

ದು.

IV. ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರದವರು ಗುಂಪು ವಸತಿ ಕಾರ್ಯಾಗಾರಗಳಿಗೆ ಕುಶಲಕರ್ಮಿಗಳ ವಂತಿಕೆಯನ್ನು ಪಡೆದು ಆಯ್ಕೆಯಾದ ನಿರ್ಮಾಣದ ಸಂಸ್ಥೆಗೆ ಪಾವತಿಸುವುದು.  ಗುಂಪು/ವೈಯಕ್ತಿಕ ವಸತಿ ಕಾರ್ಯಾಗಾರ ಹಂಚಿಕೆಯ ಪತ್ರ ವಿತರಣೆಯನ್ನು ಕುಶಲಕರ್ಮಿಗಳು ಗಂಡಸಾಗಿದ್ದರೆ ಮಂಜೂರು/ಹಂಚಿಕೆಯ ಪತ್ರವನ್ನು ಕುಶಲಕರ್ಮಿಗಳ ಪತ್ನಿಯ ಹೆಸರಿನಲ್ಲಿ ನೀಡಲಾಗುವುದು.  ಕುಶಲಕರ್ಮಿಯು ವಿದುರನಾದ ಪಕ್ಷದಲ್ಲಿ ಮಾತ್ರ ಮಂಜೂರು / ಹಂಚಿಕೆಯ ಪತ್ರವನ್ನು ಕುಶಲಕರ್ಮಿಗಳ ಹೆಸರಿನಲ್ಲಿ ನೀಡಲಾಗುವುದು.

21. ಮನೆಗಳ ಹಸ್ತಾಂತರ ಮತ್ತು ಯೋಜನೆಯ ಮುಕ್ತಾಯ:

 I.  ಗುಂಪು ವಸತಿ ಕಾರ್ಯಾಗಾರ ಯೋಜನೆಯಡಿಯಲ್ಲಿ ಮನೆಗಳ ಹಾಗೂ ಬಡಾವಣೆಗೆ ಮೂಲಭೂತ ಸೌಕರ್ಯ ಕಾಮಗಾರಿಯನ್ನು ಮುಕ್ತಾಯಗೊಳಿಸಿದ ನಂತರ ನಿರ್ಮಾಣ ಸಂಸ್ಥೆಯು "Third party"  ಯವರಿಂದ "ಯೋಜನೆ ಮುಕ್ತಗಾಯ ಪ್ರಮಾಣ ಪತ್ರ" ಹಾಗೂ " ಯೋಜನಾ ದೃಡತೆ ಪ್ರಮಾಣ ಪತ್ರ" ಪಡೆದ ನಂತರ ಗ್ರಾಮ ಪಂಚಾಯಿತಿ/ ನಗರ ಸ್ಥಳೀಯ ಸಂಸ್ಥೆಯ ಮೂಲಕ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸುವುದು.  ಇದೇ ಸಂದರ್ಭದಲ್ಲಿ ಬಡಾವಣೆಯ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ / ನಗರ ಸ್ಥಳೀಯ ಸಂಸ್ಥೆಯು ನಿರ್ವಹಿಸುವುದು.

II. ಕಾಮಗಾರಿ ಆದೇಶ ನೀಡಿದ ಆರು ತಿಂಗಳೊಳಗೆ ಗುಂಪು/ವೈಯಕ್ತಿಕ ವಸತಿ ಕಾರ್ಯಾಗಾರವನ್ನು ಮುಕ್ತಾಯಗೊಳಿಸುವುದು ನಿರ್ಮಾಣ ಸಂಸ್ಥೆಯ / ಫಲಾನುಭವಿಗಳ ಜವಾಬ್ದಾರಿ ಆಗಿರುತ್ತದೆ.

III. ನಿರ್ಮಾಣ ಸಂಸ್ಥೆಯು ಯೋಜನಾ ದೃಢತೆ ಪ್ರಮಾಣ ಪತ್ರ, ಮುಕ್ತಾಯ ಪ್ರಮಾಣ ಪತ್ರ ಮತ್ತು ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗೆ ಬಡಾವಣೆ ಹಸ್ತಾಂತರ ಪ್ರಮಾಣ ಪತ್ರವನ್ನು ನಿಗಮಕ್ಕೆ ಸಲ್ಲಿಸಿದ ನಂತರ ಯೋಜನೆಯನ್ನು ಮುಕ್ತಾಯಗೊಳಿಸಲಾಗುವುದು.

ಸಹಿ
/-
(ಎಲ್.ಎಸ್.ಶ್ರೀ.ಕಂಠಬಾಬು)
ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ)
​ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

 

 

 

 


Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.