ಕೆ.ವಿ.ಐ.ಬಿ ವತಿಯಿಂದ ಪಿಬಿಎಸ್ ವಿತರಿಸಲಾದ ಸಾಲಕ್ಕೆ ಏಕ ಗಂಟು ತೀರುವಳಿ ಯೋಜನೆ ಸಿಐ 18 ಎಸ್.ಎಲ್.ವಿ. 2014 ಪಿ1 ದಿನಾಂಕ 09.07.2014

  • GOK
    • vanijyasachivalaya
      • ಕೆ.ವಿ.ಐ.ಬಿ ವತಿಯಿಂದ ಪಿಬಿಎಸ್ ವಿತರಿಸಲಾದ ಸಾಲಕ್ಕೆ ಏಕ ಗಂಟು ತೀರುವಳಿ ಯೋಜನೆ ಸಿಐ 18 ಎಸ್.ಎಲ್.ವಿ. 2014 ಪಿ1 ದಿನಾಂಕ 09.07.2014
Last modified at 23/04/2016 23:01 by Vanijyasachivalaya

​​​​

​​

​​ಕರ್ನಾಟಕ ಸರ್ಕಾರದ ನಡೆವಳಿಗಳು

ವಿಷಯ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿವತಿಯಿಂದ ಯೋಜನಾಧಾರಿತ ಧನಸಹಾಯ ಯೋಜನೆಯಡಿ (ಪಿ.ಬಿ.ಎಸ್.) ವಿತರಿಸಲಾದ ಸಾಲಕ್ಕೆ ಏಕ ಗಂಟು ತೀರುವಳಿ ಯೋಜನೆಯನ್ನು ಜಾರಿಗೆ ತರುವ ಬಗ್ಗೆ

ಓದಲಾಗಿದೆ:

ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ ಕೈವಾಇ/ವಿಶ್ವ/ಎ2/2013-14 ದಿನಾಂಕ 08.04.2014

ಪ್ರಸ್ತಾವನೆ:

2014-15ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 380 ರಲ್ಲಿ “ಖಾದಿ ಗ್ರಾಮೋದ್ಯೋಗ ಆಯೋಗದಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮೂಲಕ ಯೋಜನಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ (ಪಿಬಿಎಸ್) ಸಾಲ ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದರೊಂದಿಗೆ ಏಕ ಗಂಟು ತೀರುವಳಿ ಯೋಜನೆಯನ್ನು (ಓಟಿಎಸ್) ಜಾರಿ ಮಾಡಲು ಪ್ರಸ್ತಾಪಿಸಲಾಗಿದೆ.  ಈ ಯೋಜನೆಯಿಂದ 21180 ಫಲಾನುಭವಿಗಳಿಗೆ ಅನುಕೂಲವಾಗುತ್ತದೆ.  ಇದಕ್ಕೆ 2014-15ನೇ ಸಾಲಿನಲ್ಲಿ ರೂ. 26.15 ಕೋಟಿಗಳ ಅನುದಾನವನ್ನು ಮೀಸಲಿಡಲಾಗಿದೆ” ಎಂದು ಘೋಷಿಸಲಾಗಿದೆ.

​ಅದರಂತೆ, ಓದಲಾದ ಪತ್ರದಲ್ಲಿ ಆಯುಕ್ತರು, ಕೈಗಾರಿಕಾಭಿವೃದ್ಧಿ ಮತ್ತು ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರು 2014-15ನೇ ಸಾಲಿನಿಂದ ಜಾರಿಗೆ ಬರುವಂತೆ ಖಾದಿ ಗ್ರಾಮೋದ್ಯೋಗ ಆಯೋಗದಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮೂಲಕ ಯೋಜನಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ (ಪಿಬಿಎಸ್) ಸಾಲ ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದರೊಂದಿಗೆ ಏಕ ಗಂಟು ತೀರುವಳಿ ಯೋಜನೆಯನ್ನು ಜಾರಿಗೊಳಿಸಲು ಪ್ರಸ್ತಾಪಿಸಲಾಗಿದ್ದು, ಇದಕ್ಕಾಗಿ 2014-15ನೇ ಸಾಲಿನ ಆಯವ್ಯಯದಲ್ಲಿ ರೂ. 26.15 ಕೋಟಿ ಅನುದಾನವನ್ನು ಮಿಸಲಿಡಲಾಗಿದೆಯೆಂದು ತಿಳಿಸುತ್ತಾ, ಈ ಯೋಜನೆಯನ್ನು ಜಾರಿಗೊಳಿಸುವ ಕುರಿತು ಸರ್ಕಾರದಿಂದ ಸೂಕ್ತ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಮುಂದಿನಂತೆ ಆದೇಶ ಹೊರಡಿಸಿದೆ.

​​ಸರ್ಕಾರಿ ಆದೇಶ ಸಂಖ್ಯೆ ಸಿಐ 18 ಎಸ್.ಎಲ್.ವಿ. 2014 (ಪಿ1), ಬೆಂಗಳೂರು, ದಿನಾಂಕ 09.07.2014.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2014-15ನೇ ಸಾಲಿನಿಂದ ಜಾರಿಗೆ ಬರುವಂತೆ ಖಾದಿ ಆಯೋಗದಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮೂಲಕ ಯೋಜನಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ (ಪಿಬಿಎಸ್) ಇಲ್ಲಿಯವರೆಗೆ ಸಾಲ ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದರೊಂದಿಗೆ ಏಕ ಗಂಟು ತೀರುವಳಿ ಯೋಜನೆ (ಓ.ಟಿ.ಎಸ್.) ಯನ್ನು ಈ ಕೆಳಕಂಡ ಷರತ್ತುಗೊಳಪಡಿಸಿ, ಜಾರಿಗೆ ತರಲಾಗಿದೆ.

1. ಈ ಯೋಜನೆಯು ದಿನಾಂಕ 01-04-2014ರಿಂದ ಜಾರಿಗೆ ಬರುತ್ತದೆ.
2. ಈ ಯೋಜನೆಯು ಖಾದಿ ಮಂಡಳಿಯಿಂದ ಯೋಜನಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ (ಪಿ.ಬಿ.ಎಸ್.) ಯೋಜನೆಯಡಿ ಪಡೆದಿರುವ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ.
3. ಖಾದಿ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಖಾದಿ ಮಂಡಳಿಯಿಂದ ಪಡೆದಿರುವ ಸಾಲದ ಅಸಲನ್ನು ದಿನಾಂಕ 31-03-2015ರೊಳಗೆ ಒಂದೇ ಬಾರಿ ಅಥವಾ ಕಂತುಗಳಲ್ಲಿ 
        ಪೂರ್ಣವಾಗಿ ಅಸಲನ್ನು ಮರುಪಾವತಿ ಮಾಡಿದರೆ ಮಾತ್ರ ಬಡ್ಡಿಯನ್ನು ಮನ್ನಾ ಮಾಡಲಾಗುವುದು.
4. ಖಾದಿ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಮಂಡಳಿಯಿಂದ ಪಡೆದಿರುವ ಸಾಲದ ಬಾಬ್ತಿನ ಮೇಲೆ ಯಾವುದೇ ವ್ಯಾಜ್ಯ ಪ್ರಕರಣಗಳು ಇಲ್ಲದಿರುವ ಪ್ರಕರಣಗಳಿಗೆ ಮಾತ್ರ 
        ಓಟಿಸ್ ಯೋಜನೆ ಅನ್ವಯಿಸುತ್ತದೆ.
5. ಖಾದಿ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಕಸಬುದಾರರು ಸಾಲವನ್ನು ಕಟ್ಟದೆ ಬಾಕಿ ಉಳಿಸಿಕೊಂಡಲ್ಲೆ ಅಂತಹ ಪ್ರಕರಣಗಳ ಬಗ್ಗೆ ಭೂ ಕಂದಾಯ ಕಾಯಿದೆ ಅನುಸರಿಸಿ ಬಾಕಿ 
        ಇರುವ ಸಾಲವನ್ನು ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಈ ಯೋಜನೆಯ ಕುರಿತು ರಾಜ್ಯದಾದ್ಯಂತ ಇರುವ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯಪಡಿಸಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ, ಕರಪತ್ರಗಳನ್ನು ಹಂಚುವುದರ ಮೂಲಕ ಹಾಗೂ ನೇರವಾಗಿ ಫಲಾನುಭವಿಗಳಿಗೆ ಪತ್ರ ಬರೆಯುವುದರ ಮೂಲಕ ಓ.ಟಿ.ಎಸ್. ಕುರಿತು ತಿಳಿಯಪಡಿಸಬೇಕು.

ಆಯಾ ಜಿಲ್ಲೆಯ ಖಾದಿ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ/ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು ತಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಖಾದಿ ಸಂಘ-ಸಂಸ್ಥೆಗಳಿಗೆ/ವೈಯಕ್ತಿಕ ಫಲಾನುಭವಿಗಳಿಗೆ ಪತ್ರ ಬರೆದು ತಿಳಿಸುವುದು ಹಾಗೂ ಕರಪತ್ರಗಳನ್ನು ಗ್ರಾಮ ಪಂಚಾಯಿತಿ/ಜಿಲ್ಲಾ ಪಂಚಾಯಿತಿ ಕಛೇರಿಗಳಲ್ಲಿಯ ನೋಟೀಸ್ ಬೋರ್ಡ್ ನಲ್ಲಿ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಬೇಕು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕೇಂದ್ರ ಕಛೇರಿಯಲ್ಲಿ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಿಂದ ಬರುವ ಬಡ್ಡಿ ಮನ್ನಾ ಪ್ರಸ್ತಾವನೆಯನ್ನು ಪರಿಶೀಲಿಸಿ ಜಿಲ್ಲಾ ಕಛೇರಿಗಳಿಂದ ಬಂದ ಡಿ.ಡಿ./ಮೊಬಲಗನ್ನು ಫಲಾನುಭವಿಯ ಖಾತೆಗೆ ಪಡೆದು ಅದಕ್ಕೆ ಸಂಬಂಧಪಟ್ಟಂತೆ ಆಕರಣೆಯಾಗಿರುವ ಬಡ್ಡಿಯನ್ನು ಲೆಕ್ಕ ಹಾಕಿ ಅಸಲು ಮತ್ತು ಬಡ್ಡಿಯನ್ನು ಮುಂಬೈ ಖಾದಿ ಆಯೋಗಕ್ಕೆ ಮರುಪಾವತಿ ಮಾಡುವುದು.  ಫಲಾನುಭವಿಗಳಿಗೆ ಬೇಬಾಕಿ ಪ್ರಮಾಣಪತ್ರ (ಎನ್.ಡಿ.ಸಿ.)ವನ್ನು ನೀಡುವುದು.  ಈ ರೀತಿ ಬೇಬಾಕಿ ಪ್ರಮಾಣ ಪತ್ರವನ್ನು (ಎನ್.ಡಿ.ಸಿ.) ಕೇಂದ್ರ ಕಛೇರಿಯಿಂದ ಹೊರಡಿಸಿದ ನಂತರ ಕೇಂದ್ರ ಕಛೇರಿಯ ಅಭಿವೃದ್ಧಿ ವಿಭಾಗವು ಫಲಾನುಭವಿಯು ಸಾಲದ ಭದ್ರತೆಗಾಗಿ ನೀಡಿದ್ದ ಸಂಪೂರ್ಣ ದಾಖಲಾತಿಗಳನ್ನು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಕೇಂದ್ರ ಕಛೇರಿ ಹೊರಡಿಸಿರುವ ಸದರಿ ಬೇಬಾಕಿ ಪ್ರಮಾಣ ಪತ್ರವನ್ನು (ಎನ್.ಡಿ.ಸಿ.) ಹಾಗೂ ಕೇಂದ್ರ ಕಛೇರಿಯಿಂದ ಬಂದಿರುವ ಫಲಾನುಭವಿಯು ಸಲ್ಲಿಸಿದ ಎಲ್ಲಾ ದಾಖಲಾತಿಗಳನ್ನು ಫಲಾನುಭವಿಗೆ ವಾಪಸ್ಸು ನೀಡಿ ಆತನನ್ನು ಋಣ ಮುಕ್ತನನ್ನಾಗಿ ಮಾಡುವುದು.

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಪಿಡಿ 12 ಎಫ್.ಆರ್.ಓ. 2014 ದಿನಾಂಕ 08-05-2014 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 508 ವೆಚ್ಚ-1 2014, 
ದಿನಾಂಕ 08-05-2014 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 508 ವೆಚ್ಚ-1 2014 ದಿನಾಂಕ 30-05-2014ರಲ್ಲಿ ನೀಡಿರುವ ಸಹಮತಿಗಳನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಎಲ್.ಎಸ್. ಶ್ರೀಕಂಠಬಾಬು)
ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.