ಖಾದಿ ಸಂಸ್ಥೆಗಳಿಗೆ 2014-15ನೇ ಸಾಲಿನ ಎಂಡಿಎ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ

  • GOK
    • vanijyasachivalaya
      • ಖಾದಿ ಸಂಸ್ಥೆಗಳಿಗೆ 2014-15ನೇ ಸಾಲಿನ ಎಂಡಿಎ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ
Last modified at 26/04/2016 21:46 by Vanijyasachivalaya

​​​​​​​​​​​​​

​​

​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾದಿ ಸಂಘ ಸಂಸ್ಥೆಗಳಿಗೆ 2014-15ನೇ ಸಾಲಿನ ಮಾರುಕಟ್ಟೆ ಅಭಿವೃದ್ಧಿ ಸಹಾಯಧನದ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ:

1. ಆಯುಕ್ತರು, ಕೈಗಾರಿಕಾಭಿವೃದ್ಧಿ  ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಕೈವಾಇ /ವಿಶ್ವ/ಎ2/ಎಂ.ಡಿ.ಎ/14/2015-
        ದಿನಾಂಕ: 29.01.2016.
2. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಬೆಂಗಳೂರು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ 
        ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಖಾಮಂ/ಅಅ-ಖಾದಿ/ಯೋ.ಯು.ಸಿ./431/2015-16, ದಿನಾಂಕ: 09.02
.2016.
3. ಸರ್ಕಾರದ ಆದೇಶ ಸಂಖ್ಯೆ: ಸಿಐ 30 ಎಸ್ಎಲ್ ವಿ 2012, ದಿನಾಂಕ: 06.07.2015 ಹಾಗೂ 29.12.2015.
4. ಸರ್ಕಾರದ ಆದೇಶ ಸಂಖ್ಯೆ: ಸಿಐ 36 ಎಸ್.ಎಲ್.ವಿ. 2012, ದಿನಾಂಕ: 25.06.2012.
5. ಭಾರತ ಸರ್ಕಾರದ ಸುತ್ತೋಲೆ ಸಂಖ್ಯೆ: ಡಿಕೆಸಿ/ಎಂಡಿಎ-ಪಾಲಿಸಿ/2010-11, ದಿನಾಂಕ: 16.04.2010.
. ಭಾರತ ಸರ್ಕಾರದ ಸುತ್ತೋಲೆ ಸಂಖ್ಯೆ: ಡಿಕೆಸಿ/ಎಂಡಿಎ-ಪಾಲಿಸಿ/2013-14, ದಿನಾಂಕ: 07.06.2-2013.
7. KVIC Circular No. DKPM/OTI/Pending/2010-11, dated: 31.03.2011.

ಾವನೆ:

ಾರ
ೆ.

           ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಿದೆ..

          ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2015-16 ನೇ ಸಾಲಿನ ಲೆಕ್ಕ ಶೀರ್ಷಿಕೆ 2851-00-102-0-74 (106) ರಡಿ ಪರಿಷ್ಕೃತ ಅಂದಾಜು 2015-16 ರಲ್ಲಿ ನಿಗದಿಪಡಿಸಲಾಗಿರುವ ಒಟ್ಟು ರೂ. 4098.00 ಲಕ್ಷಗಳ ಆಯವ್ಯಯದಿಂದ ರೂ. 445.25 ಲಕ್ಷಗಳನ್ನು ( ನಾಲ್ಕೂ ನೂರ ನಲವತ್ತೈದು ಲಕ್ಷಗಳ ಇಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾದಿ ಸಂಘ-ಸಂಸ್ಥೆಗಳಿಗೆ ಅರ್ಹ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ ಹಂಚಿಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಬೆಂಗಳೂರು ಇವರಿಗೆ ಬಿಡುಗಡೆ ಮಾಡಲು ಈ ಕೆಳಕಮಡ ಷರತ್ತುಗಳಿಗೊಳಪಡಿಸಿ, ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಷರತ್ತುಗಳು

1. ಮಾರುಕಟ್ಟೆ ಅಭಿವೃದ್ಧಿ ಸಹಾಯಧನ ಯೋಜನೆಗಾಗಿ ಭಾರತ ಸರ್ಕಾರವು ಓದಲಾದ ಕ್ರಮಾಂಕ (5) (6) (7) ರ ಸುತ್ತೋಲೆಗಳಲ್ಲಿ ರೂಪಿಸಿರುವ ಮಾರ್ಗಸೂಚಿಸಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಈ ಬಗ್ಗೆ ಆಯುಕ್ತರು, ಕೈಗಾರಿಕಾಭಿವೃದ್ಧಿ ಇವರು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ವರದಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
2. ಓದಲಾದ ಕ್ರಮಾಂಕ (6) ರ ಸುತ್ತೋಲೆಯಲ್ಲಿ ತಿಳಿಸಿರುವಂತೆ ಎಂ.ಡಿ.ಎ. ಮೊತ್ತದ ಶೇ.25 ರಷ್ಟನ್ನು ಖಾದಿ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅವರ ಬ್ಯಾಂಕ್ / ಅಂಚೆ ಖಾತೆಗೆ ಬಿಡುಗಡೆ ಮಾಡತಕ
್ಕದ್ದು.
3. ಮುಂದುವರೆದು ಎಂ.ಡಿ.ಎ. ಅನುದಾನದ ಬಿಡುಗಡೆ ಕುರಿತು ಭಾರತ ಸರ್ಕಾರವು ಹೊರಡಿಸಿರುವ ಸುತ್ತೋಲೆಗಳಲ್ಲಿನ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
4. ಕ್ಲೇಮು ಮಾಡಿರುವ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಸಂಬಂಧಿಸಿದವರಿಂದ TIN ಸಂಖ್ಯೆ  PAN  ಸಂಖ್ಯೆಗಳ (ವರಮಾನ ತೆರಿಗೆ ಇಲಾಖೆಯ ಸಂಖ್ಯೆ) ಮಾಹಿತಿಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
5. ಈ ಅನುದಾನವನ್ನು ಬಳಕೆ ಮಾಡುವಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 (ಕೆ.ಟಿ.ಟಿ.ಪಿ ಆಕ್ಟ್) ಮತ್ತು ಅದರಡಿ ರೂಪಿಸಿರುವ ನಿಯಮಗಳನ್ನು ಪಾಲಿಸತಕ್ಕದ್ದು.


.

 
ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

          ಈ ಆದೇಶವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ: ವಾಕೈ 43 ಆಂಆಸ(1) 2015, ದಿನಾಂಕ: 10.02.2016 ರಲ್ಲಿ ನೀಡಿರುವ ಸಹಮತಿಯನ್ವಯ ಹಾಗೂ ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್.ಡಿ 1 ಟಿಎಫ್.ಪಿ 2016, ದಿನಾಂಕ: 19.01.2016 ರಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಸಹಿ/-
(ಎಲ್.ಎಸ್.ಶ್ರೀಕಂಠಬಾಬು)
ಸರ್ಕಾರದ ಅಧೀನ ಕಾರ್ಯದರ್ಶಿ(ಸಪ್ರಕೈ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.