ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ CMEGP GO No CI 134 CSC 2015 Dt 15.10.2015

 • GOK
  • vanijyasachivalaya
   • ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ CMEGP GO No CI 134 CSC 2015 Dt 15.10.2015
Last modified at 27/04/2016 06:02 by Vanijyasachivalaya

​​​​​​

​​

​​ಕರ್ನಾಟಕ ಸರ್ಕಾರದ ನಡವಳಿಗಳು


​​​ವಿಷಯ: 2015-16ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.

​ಓದಲಾಗಿದೆ:

ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ಪತ್ರ ಸಂಖ್ಯೆ ಕೈವಾಇ/ವಿಶ್ವ/ಕೈವಿಆ/ಸಿಎಂಇಜಿಪಿ/7/2015-16 ದಿನಾಂಕ 28.04.2015

​ಪ್ರಸ್ತಾವನೆ:

2015-16ನೇ ಸಾಲಿನ ಆಯವ್ಯಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುವಂತೆ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದ್ದು, ಅವುಗಳಲ್ಲಿ ಕಂಡಿಕೆ 413 ಈ ಕೆಳಕಂಡಂತಿರುತ್ತದೆ.

          "ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆಯಡಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಎರಡು ಸಾವಿರ ಗ್ರಾಮೀಣ ಯುವಕ/ಯುವತಿಯರಿಗೆ ತರಬೇತಿ ನೀಡಿ, ಬೆಂಬಲ ಸೇವೆ ಒದಗಿಸಿ, 25%ರಿಂದ 35%ರವರೆಗೆ ಅಂಚು ಹಣ ಒದಗಿಸಿ, ತಲಾ ಗರಿಷ್ಠ 10 ಲಕ್ಷ ರೂ. ಬಂಡವಾಳ ಹೂಡಿಕೆಯೊಂದಿಗೆ ಗ್ರಾಮೀಣ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು."

          ಅದರಂತೆ, ಓದಲಾದ ಪತ್ರದಲ್ಲಿ ಆಯುಕ್ತರು, ಕೈಗಾರಿಕಾಭಿವೃದ್ಧಿ ಮತ್ತು ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರು ಸದರಿ ಯೋಜನೆಯ ಪ್ರಸ್ತಾವನೆಯನ್ನು ಹಾಗೂ ಮಾರ್ಗಸೂಚಿಗಳನ್ನು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಿರುತ್ತಾರೆ.  ಪ್ರಸ್ತಾವನೆಯಲ್ಲಿ ತಿಳಿಸಲಾಗಿರುವಂತೆ, ರಾಜ್ಯದ ಗ್ರಾಮೀಣ ಪ್ರದೇಶದವರಿಗೆ ಇನ್ನೂ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸುವ ಹಾಗೂ ಹೆಚ್ಚಿನ ಮಟ್ಟದಲ್ಲಿ ಫಲಾನುಭವಿಗಳಿಗೆ ಯೋಜನೆಯ ಸಫಲತೆಯನ್ನು ಕಲ್ಪಿಸುವ ಈ ಯೋಜನೆಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯಡಿ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ 1250 ಘಟಕಗಳು ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ 750 ಘಟಕಗಳು ಹೀಗೆ ಒಟ್ಟು 2000 ಕಿರು ಉತ್ಪಾದನಾ ಮತ್ತು ಸೇವಾ ಉದ್ದಿಮೆಗಳಿಗೆ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.

          ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಚಾಲ್ತಿಯಲ್ಲಿರುವ ಈ ಕೆಳಕಂಡ ಯೋಜನೆಗಳನ್ನು ಪರಿಗಣಿಸಿ, ರೂ. 3623.75 ಲಕ್ಷಗಳ ಯೋಜನಾ ವೆಚ್ಚದ ಪ್ರಸ್ತಾವನೆಯನ್ನು ಈ ಕೆಳಕಂಡಂತೆ ಸಲ್ಲಿಸಿರುತ್ತಾರೆ.

​​​​​​ ​ ​ ​ ​ ​(ಲಕ್ಷ ರೂಗಳಲ್ಲಿ)​
ಕ್ರಮ ಸಂಖ್ಯೆ
ಯೋಜನೆ ಹಾಗೂ ಲೆಕ್ಕ ಶೀರ್ಷಿಕೆವಾರ್ಷಿಕ ಆಯವ್ಯಯ ಹಂಚಿಕೆಜಿಲ್ಲಾ ಕೈಗಾರಿಕಾ ಕೇಂದ್ರಗಳಿಗೆ ಬೇಕಾಗಿರುವ ಅನುದಾನಕೆ.ವಿ.ಐ.ಬಿ.ಗೆ. ಬೇಕಾಗಿರುವ ಅನುದಾನಉದ್ದೇಶ
​1 ​
2851-00-102-0-69
106 (ಯೋಜನೇತರ)
11000.002000.00
 
ಅಂಚು ಹಣ/ಸಹಾಯಧನ
30.00ಬಡ್ಡಿ ಸಹಾಯಧನ
2
2851-00-102-0-74
106 (ಯೋಜನೆ)
7098.00-1500.00ಅಂಚು ಹಣ/ಸಹಾಯಧನ
3
2851-00-102-0-69
059 (ಯೋಜನೆ)
1784.0021.1012.65ಇ.ಡಿ.ಪಿ. ಕಾರ್ಯಕ್ರಮ
4
2852-80-102-0-02
125 (ಯೋಜನೆ)
1700.0060.00
ಪಬ್ಲಿಸಿಟಿ ಮತ್ತು ಪ್ರಾಪಗಾಂಡಾ
 ​ ಒಟ್ಟು21582.002111.001512.65 
​*ಪ್ರಚಾರ /ಇ.ಎ.ಪಿ. ಕಾರ್ಯಕ್ರಮಗಳನ್ನು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಧಾರವಾಡ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಜಂಟಿ ನಿರ್ದೇಶಕರು/ಜಿಲ್ಲಾ ಅಧಿಕಾರಿಗಳು, ಕೆ.ವಿ.ಐ.ಬಿ. ಇವರುಗಳು ಜಂಟಿಯಾಗಿ ನಡೆಸುವುದು.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಗಿನಂತೆ ಆದೇಶ ಹೊರಡಿಸಿದೆ.

​ಸರ್ಕಾರಿ ಆದೇಶ ಸಂಖ್ಯೆ ಸಿಐ 134 ಸಿಎಸ್.ಸಿ 2015, ಬೆಂಗಳೂರು ದಿನಾಂಕ 15.10.2015

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ, ರಾಜ್ಯ ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕ/ಯುವತಿಯರು ಸೂಕ್ಷ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಿ ಇವರನ್ನು ಮೊದಲನೇ ಪೀಳಿಗೆ ಉದ್ಯಮಿಗಳನ್ನಾಗಿ ಮಾಡಲು "ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆ" (ಸಿಎಂಇಜಿಪಿ) ಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಒಟ್ಟು ರೂ. 3623.75 ಲಕ್ಷಗಳ ಯೋಜನಾ ವೆಚ್ಚದಲ್ಲಿ ಈ ಆದೇಶದ ಅನುಬಂಧ-1ರಲ್ಲಿನ ಯೋಜನಾ ಚೌಕಟ್ಟಿನ ಅಂಶಗಳಿಗೆ ಮತ್ತು ಅನುಬಂಧ-2ರಲ್ಲಿರುವ ಯೋಜನೆಯ ಮಾರ್ಗ ಸೂಚಿಗಳನ್ವಯ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಯೋಜನೆಗೆ ಅವಶ್ಯವಿರುವ ವೆಚ್ಚಗಳನ್ನು ಇಲಾಖೆಯು ಈಗಾಗಲೇ ಅನುಷ್ಠಾನಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳ ಲೆಕ್ಕ ಶೀರ್ಷಿಕೆಗಳಿಂದ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ಭರಿಸಲು ಅನುಮೋದನೆ ನೀಡಲಾಗಿರುತ್ತದೆ.

​​​​​ ​ ​ ​ ​ ​ಲಕ್ಷ ರೂಗಳಲ್ಲಿ
ಕ್ರ ಸಂಯೋಜನೆ ಹಾಗೂ ಲೆಕ್ಕ ಶೀರ್ಷಿಕೆ ವಿವರವಾರ್ಷಿಕ ಆಯವ್ಯಯ ಹಂಚಿಕೆಜಿಲ್ಲಾ ಕೈಗಾರಿಕಾ ಕೇಂದ್ರಗಳಿಗೆ ಅವಶ್ಯವಿರುವ ಅನುದಾನಕೆ.ವಿ.ಐ.ಬಿ.ಗೆ. ಅವಶ್ಯವಿರುವ ಅನುದಾನಉದ್ದೇಶ
1
2851-00-102-0-69
(106) ಯೋಜನೇತರ
11000.002000.001500.00ಅಂಚು ಹಣ/ ಸಹಾಯಧನ
30.00ಬಡ್ಡಿ ಸಹಾಯಧನ
2
2851-00-102-0-69
(059) ಯೋಜನೆ
1784.0021.1012.65ಇ.ಡಿ.ಪಿ. ಕಾರ್ಯಕ್ರಮ
3
2852-80-102-0-02
(125) ಯೋಜನೆ
1700.0060.00* ಪಬ್ಲಿಸಿಟಿ ಮತ್ತು ಪ್ರಾಪಗಾಂಡಾ
ಒಟ್ಟು​ ​21582.002111.101512.65 

 

*ಪ್ರಚಾರ/ಇ.ಎ.ಪಿ. ಕಾರ್ಯಕ್ರಮಗಳನ್ನು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಧಾರವಾಡ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಜಂಟಿ ನಿರ್ದೇಶಕರು/ಜಿಲ್ಲಾ ಅಧಿಕಾರಿಗಳು, ಕೆ.ವಿ.ಐ.ಬಿ. ಇವರುಗಳು ಜಂಟಿಯಾಗಿ ನಡೆಸುವುದು.

** 2851-00-102-0-74 (106) ಯೋಜನೆ ಅಡಿಯಲ್ಲಿ ಈ ಯೋಜನೆಗಾಗಿ ಮರು ಹಂಚಿಕೆ ಮಾಡಿಕೊಳ್ಳಲಾಗಿದ್ದ ರೂ. 15.00 ಕೋಟಿಗಳನ್ನು ವೆಚ್ಚ ಮಾಡದೇ ಸರ್ಕಾರಕ್ಕೆ ಅಧ್ಯರ್ಪಣೆ ಮಾಡತಕ್ಕದ್ದು.

          ಯೋಜನೆಯ ಚೌಕಟ್ಟುಗಳ ಅಂಶಗಳನ್ನು ಹೊರತುಪಡಿಸಿ, ಈ ಯೋಜನೆಯ ಅನುಷ್ಠಾನದ ಅನುಭವದ ಆಧಾರದ ಮೇಲೆ ಮಾರ್ಗಸೂಚಿಗಳಿಗೆ ಮಾರ್ಪಾಡು ಅಗತ್ಯವಿದ್ದಲ್ಲಿ, ಮಾನ್ಯ ಸಣ್ಣ ಕೈಗಾರಿಕೆ ಸಚಿವರ ಅನುಮೋದನೆಯೊಂದಿಗೆ ಮಾರ್ಪಾಡುಗಳನ್ನು ಮಾಡತಕ್ಕದ್ದು.  ಯೋಜನೆಯ ಚೌಕಟ್ಟಿನ ಅಂಶಗಳನ್ನು ಮಾರ್ಪಡಿಸಬೇಕಾದಲ್ಲಿ ಸಚಿವ ಸಂಪುಟದ ಅನುಮೋದನೆಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

          ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಪಿಡಿ 32 ಎಫ್ ಆರ್ ಓ 2015 ದಿನಾಂಕ 25.05.2015 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 575 ವೆಚ್ಚ-1 2015 ದಿನಾಂಕ 13-07-2015ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ
(ಎಲ್.ಎಸ್. ಶ್ರೀಕಂಠಬಾಬು)
ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ)

​​ಸರ್ಕಾರದ ಆದೇಶ ಸಂಖ್ಯೆ ಸಿ ಐ 134 ಸಿ.ಎಸ್.ಸಿ. 2015 ದಿನಾಂಕ 15.10.2015ರ ಅನುಬಂಧ-1

ಯೋಜನಾ ಚೌಕಟ್ಟಿನ ಅಂಶಗಳು (Framework elements of the Scheme)

1. ಈ ಯೋಜನೆಯ ಚೌಕಟ್ಟಿನ ಅಂಶಗಳ ವಿವರಗಳು ಈ ಕೆಳಕಂಡಂತಿವೆ.
(i) ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ, ಈ ಪ್ರದೇಶದ ನಿರುದ್ಯೋಗಿ ಯುವಕ/ಯುವತಿಯರು ಸೂಕ್ಷ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಿ ಇವರನ್ನು ಮೊದಲನೇ ಪೀಳಿಗೆ ಉದ್ಯಮಿಗಳನ್ನಾಗಿ ಮಾಡಲಾಗುವುದು.
(ii) ಇಂತಹ ಯೋಜನೆಗಳಿಗೆ ರೂ. 10.00 ಲಕ್ಷಗಳವರೆಗೆ ಮಾತ್ರ ಯೋಜನಾ ವೆಚ್ಚವನ್ನು ಭರಿಸಲಾಗುವುದು.  ಯೋಜನಾ ವೆಚ್ಚದಲ್ಲಿ ಭೂಮಿ ಹಾಗೂ ಕಟ್ಟಡಗಳು ಇದ್ದಲ್ಲಿ ಸೇರುತ್ತವೆ.
​(iii) ಫಲಾನುಭವಿಗಳ ಆಯ್ಕೆಯ ಮೊದಲು ಉದ್ಯಮಿಗಳ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.
(iv) ಅರ್ಹತೆಗಳು
​​ಅ)    ಯಾವುದೇ ಫಲಾನುಭವಿಗೆ 21 ವರ್ಷ ತುಂಬಿರತಕ್ಕದ್ದು
ಆ)    ಸಾಮಾನ್ಯ ವರ್ಗದವರಿಗೆ ಗರಿಷ್ಟ 35 ವರ್ಷ, ವಿಶೇಷ ವರ್ಗದವರಿಗೆ (ಎಸ್.ಸಿ/ಎಸ್.ಟಿ., ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಸೈನಿಕರು ಮತ್ತು   
        ಮಹಿಳೆಯರು) ಗರಿಷ್ಟ 45 ವರ್ಷ
ಇ)    ಫಲಾನುಭವಿಗಳು ಕನಿಷ್ಟ 8ನೇ ತರಗತಿಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
ಈ)   ಆದಾಯದ ಮಿತಿ ಇರುವುದಿಲ್ಲ.

​​(v) ಸಂಬಂಧಿಸಿದ ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ್ ನ ನೇತೃತ್ವವನ್ನು ವಹಿಸಿ, ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸುವ ಹಾಗೂ ಬ್ಯಾಂಕ್ ಗಳಿಗೆ ಅರ್ಜಿಗಳನ್ನು ಶಿಫಾರಸ್ಸು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.

(vi) ಬ್ಯಾಂಕ್ ಗಳು/ಆರ್ಥಿಕ ಸಂಸ್ಥೆಗಳು ಸಂಯುಕ್ತ ಸಾಲವಾಗಿ ಸಾಮಾನ್ಯ ವರ್ಗದವರಿಗೆ ಯೋಜನಾ ವೆಚ್ಚದ ಮೇಲೆ ಶೇ. 90ರಷ್ಟು ಹಾಗೂ ವಿಶೇಷ ವರ್ಗದವರಿಗೆ ಯೋಜನಾ ವೆಚ್ಚದ ಮೇಲೆ
      ಶೇ. 95ರಷ್ಟನ್ನು ಮಂಜೂರು ಮಾಡಬಹುದು.​

(vii) ಪ್ರವರ್ತಕರ ವಂತಿಕೆಯಾಗಿ ಸಾಮಾನ್ಯ ವರ್ಗದವರು ಯೋಜನಾ ವೆಚ್ಚದ ಮೇಲೆ ಶೇ. 10ರಷ್ಟು ಹಾಗೂ ವಿಶೇಷ ವರ್ಗದವರು ಯೋಜನಾ ವೆಚ್ಚದ ಮೇಲೆ ಶೇ. 5 ರಷ್ಟು ನೀಡತಕ್ಕದ್ದು.

(viii) ಸಾಲವನ್ನು ಮಂಜೂರು ಮಾಡಿದ ನಂತರ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.

(ix) ಸಾಮಾನ್ಯ ವರ್ಗದ ಉದ್ಯಮಶೀಲರ ಘಟಕಗಳಿಗೆ ಯೋಜನಾ ವೆಚ್ಚದ ಶೇ. 25ರಷ್ಟು (ಗರಿಷ್ಟ ರೂ. 2.5 ಲಕ್ಷ) ಹಾಗೂ ವಿಶೇಷ ವರ್ಗದ ಉದ್ಯಮಶೀಲರ ಘಟಕಗಳಿಗೆ ಯೋಜನಾ ವೆಚ್ಚದ ಶೇ. 35ರಷ್ಟು (ಗರಿಷ್ಟ ರೂ. 3.5 ಲಕ್ಷ) Back-end ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು.  ಹಣಕಾಸು ಸೌಲಭ್ಯವನ್ನು ನೀಡಿರುವ ಬ್ಯಾಂಕ್ ಶಾಖೆಗಳು ಸಂಯುಕ್ತ ಸಾಲವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದ ನಂತರ ಮತ್ತು ಘಟಕವು ಕಾರ್ಯಾರಂಭವಾದ ನಂತರ ಹಾಗೂ ಸಂಬಂಧಿಸಿದ ಬ್ಯಾಂಕ್ ಗಳಿಂದ ಕ್ಲೇಮ್ ಗಳನ್ನು ಸ್ವೀಕರಿಸಿದ ನಂತರ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಸಹಾಯಧನವನ್ನು ಮಂಜೂರು ಮಾಡಲಾಗುವುದು.

(x) ಮಂಜೂರಾದ ಸಹಾಯಧನವನ್ನು ಸರ್ಕಾರದಿಂದ ಹಣಕಾಸು ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದು.  ಹಣಕಾಸು ಸಂಸ್ಥೆಗಳು ಈ ಸಹಾಯಧನವನ್ನು ಅವಧಿ ಠೇವಣಿ ರಸೀತಿಯಡಿಯಲ್ಲಿ (Term Deposit Receipt TDR) ಗರಿಷ್ಟ 3 ವರ್ಷಗಳವರೆಗೂ ಫಲಾನುಭವಿಯ ಹೆಸರಿನಲ್ಲಿ ಇಡುತ್ತವೆ.  ಈ ಅವಧಿಯಲ್ಲಿ ಈ ಟಿ.ಡಿ.ಆರ್. ಠೇವಣಿಯ ಮೇಲೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ ಹಾಗೂ ಅಷ್ಟೇ ಮೊತ್ತದ ಸಾಲದ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.  ಈ ಮೂರು ವರ್ಷಗಳ ಅವಧಿ ಮುಗಿದ ನಂತರ ಘಟಕವು ಕಾರ್ಯಾಚರಣೆಯಲ್ಲಿರುವುದನ್ನು ಖಚಿತ ಪಡಿಸಿಕೊಂಡು ಈ ಸಹಾಯಧನದ ಮೊತ್ತವನ್ನು ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುವುದು.

ಸರ್ಕಾರದ ಆದೇಶ ಸಂಖ್ಯೆ : ಸಿಐ 134 ಸಿಎಸ್.ಸಿ 2015 ದಿನಾಂಕ 15.10.2015ರ ಅನುಬಂಧ-II
ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಸೃಜನೆ ಯೋಜನೆಯ ಮಾರ್ಗಸೂಚಿಗಳು

​1. ಪೀಠಿಕೆ
2014-15ನೇ ಸಾಲಿನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರಗಳ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಘಟಕಕ್ಕೆ ಗರಿಷ್ಟ ರೂ. 10.00 ಲಕ್ಷದಂತೆ 1000 ಕಿರು ಕೈಗಾರಿಕೆಗಳನ್ನು ಸ್ಥಾಪಿಸುವ ಗುರಿಯೊಂದಿಗೆ ಕರ್ನಾಟಕ ಸ್ವಯಂ ಉದ್ಯೋಗ ಯೋಜನೆಯನ್ನು ಸರ್ಕಾರದ ಆದೇಶ ಸಂಖ್ಯೆ ಸಿಐ 73 ಸಿಎಸ್.ಸಿ 2014 ದಿನಾಂಕ ಬೆಂಗಳೂರು ದಿನಾಂಕ 20.09.2014ರಂತೆ ಜಾರಿಗೆ ತರಲಾಗಿತ್ತು.

2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಘಟಕಕ್ಕೆ ಗರಿಷ್ಟ ರೂ. 10.00 ಲಕ್ಷದಂತೆ ಕಿರು ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಪ್ರಸ್ತಾಪಿಸಲಾಗಿದ್ದು, ಅದರಂತೆ ನಿರುದ್ಯೋಗಿ ಯುವಕ/ಯುವತಿಯವರಿಗೆ ವಿವಿಧ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮೂಲಕ 1250 ಘಟಕಗಳು ಮತ್ತು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮೂಲಕ 750 ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.

ಕರ್ನಾಟಕ ಸ್ಯಯಂ ಉದ್ಯೋಗ ಯೋಜನೆಯನ್ನು 2015-16ನೇ ಸಾಲಿನಿಂದ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯೆಂದು ಮಾರ್ಪಾಡು ಮಾಡಿ, ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಯನ್ನು ತರಲು ಉದ್ದೇಶಿಸಿದೆ.

​​​2. ಉದ್ದೇಶಗಳು

ನಿರುದ್ಯೋಗಿ ಯುವಕ ಯುವತಿಯರನ್ನು ಪ್ರಥಮ ಪೀಳಿಗೆ ಉದ್ಯಮ ಶೀಲರಾಗಿ ಮಾಡಿ ಯೋಜನೆಗಳನ್ನು ಸ್ಥಾಪಿಸಲು ಅನುಸರಿಸಬೇಕಾದ ನಿಯಮಗಳು, ಯಂತ್ರೋಪಕರಣಗಳು, ಉದ್ಯಮ ಶೀಲತೆ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಾಲ, ಸಹಾಯಧನ ಇತ್ಯಾದಿ ವಿಷಯಗಳ ಬಗ್ಗೆ ಅಗತ್ಯ ಮಾಹಿತಿ ನೀಡಿ ಬೆಂಬಲ ಸೇವೆ ನೀಡುವ ಮೂಲಕ ಅವರು ವಿವಿಧ ಬ್ಯಾಂಕುಗಳ ಮೂಲಕ ಸಾಲ ಪಡೆದು ಕಿರು ಕೈಗಾರಿಕೆಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗಿಗಳಾಗಲು ಅನುವು ಮಾಡಿಕೊಟ್ಟು ಹೆಚ್ಚಿನ ಉದ್ಯೋಗ ಸೃಜನೆಗೆ ಅವಕಾಶ ನೀಡುವುದು.

3. 2015-16ನೇ ಸಾಲಿನ ಗುರಿ

ಜಿಲ್ಲಾ ಕೈಗಾರಿಕಾ ಕೇಂದ್ರ : ಭೌತಿಕ ಗುರಿ 1250 ಕಿರು ಕೈಗಾರಿಕೆಗಳು ; ಆರ್ಥಿಕ ಸಹಾಯಧನ ಗುರಿ : ರೂ. 2000 ಲಕ್ಷಗಳು (ಯಾವುದೇ ಕಾರಣಕ್ಕೂ ಆರ್ಥಿಕ/ಸಹಾಯಧನ ಗುರಿಯನ್ನು ಮೀರಲು ಅವಕಾಶವಿರುವುದಿಲ್ಲ.

4. ಚಟುವಟಿಕೆಗಳು

ಆರ್ಥಿಕವಾಗಿ ಸಧೃಡವಾಗುವ ಎಲ್ಲಾ ತಯಾರಿಕಾ ಮತ್ತು ಸೇವಾ ಚಟುವಟಿಕೆಗಳು ಮಾತ್ರ ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಅರ್ಹವಾಗಿರುತ್ತವೆ.  (ಪಿ.ಎಂ.ಐ.ಜಿ.ಪಿ. ಯೋಜನೆಯ ನಿಷೇಧಿತ ಪಟ್ಟಿಯಲ್ಲಿನ ಚಟುವಟಿಕೆಗಳು ಮತ್ತು ಕೈಗಾರಿಕಾ ನೀತಿ 2014-19 ರಲ್ಲಿನ ನಿಷೇಧಿತ ಪಟ್ಟಿ ಹೊರತುಪಡಿಸಿದೆ.)

5. ಗ್ರಾಮೀಣ ಪ್ರದೇಶ

ರಾಜ್ಯದ ರೆವಿನ್ಯೂ ದಾಖಲಾತಿಗಳ ಪ್ರಕಾರ ವರ್ಗೀಕರಿಸುವ ಯಾವುದೇ ಗ್ರಾಮೀಣ ಪ್ರದೇಶ.

2001ರ ಜನಗಣತಿಯಲ್ಲಿ 20,000 ಜನರಿಗಿಂತ ಕಡಿಮೆ ಇರುವ ಪಟ್ಟಣವೆಂದು ವರ್ಗೀಕರಿಸುವ ಪ್ರದೇಶವು ಒಳಗೊಂಡಿದೆ.

6. ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮತ್ತು ಕೆ.ವಿ.ಐ.ಬಿ. ಪಾತ್ರ

 • ​ಈ ಯೋಜನೆಯ ಕುರಿತು​ ಹೆಚ್ಚಿನ ಪ್ರಚಾರ ನೀಡುವುದು.
 • ತಯಾರಿಕಾ ಮತ್ತು ಸೇವಾ ವಲಯಗಳ ಅಡಿಯಲ್ಲಿ ಅರ್ಹ ಪ್ರಥಮ ಪೀಳಿಗೆ ಉದ್ಯಮಶೀಲರಾದ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿಗಳನ್ನು ಸ್ವೀಕರಿಸಿ, ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅರ್ಜಿಗಳನ್ನು ಮಂಡಿಸುವುದು ಮತ್ತು ಆಯ್ಕೆಯಾದ ಅರ್ಜಿಗಳನ್ನು ಸಾಲ ಮಂಜೂರಾತಿಗಾಗಿ ರಾಷ್ಟ್ರೀಕೃತ / ವಾಣಿಜ್ಯ / ಪ್ರಾಥಮಿಕ ಗ್ರಾಮೀಣ ಬ್ಯಾಂಕ್ ಗಳಿಗೆ ಶಿಫಾರಸ್ಸು ಮಾಡುವುದು.
 • ಉದ್ಯಮ ಶೀಲತಾ ಜಾಗೃತ ಕಾರ್ಯಕ್ರಮಗಳನ್ನು ಮತ್ತು ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 • ನಿಗಧಿತ ಅವಧಿಯೊಳಗೆ ಯೋಜನೆಗಳು ಅನುಷ್ಠಾನಗೊಳಿಸಲು ಮತ್ತು ಅವಶ್ಯವಿದ್ದಡೆ ಘಟಕಗಳಿಗೆ ಸಾಲ ಮಂಜೂರಾತಿ, ವಿದ್ಯುತ್ ಮಂಜೂರಾತಿ, ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ಮಂಜೂರಾತಿಗಳು, ನಿವೇಶನ ಹಂಚಿಕೆ, ಮಳಿಗೆ ಹಂಚಿಕೆ ಮುಂತಾದ ಅಗತ್ಯ ಸೇವೆಗಳನ ್ನು ಪಡೆಯಲು ಬೆಂಬಲ ನೀಡುವುದು.
 • ಪ್ರತಿ ತಿಂಗಳು ಹೊಸ ಯೋಜನೆಯ ಪ್ರಗತಿಯನ್ನು ಪರಿಶೀಲಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
 • 2014-19ರ ಹೊಸ ಕೈಗಾರಿಕಾ ನೀತಿಯನ್ವಯ ಮತ್ತು ಇತರೆ ನೀತಿಗಳನ್ವಯ ಉತ್ತೇಜನಗಳನ್ನು ಮತ್ತು ರಿಯಾಯಿತಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರಗಳು ನೀಡುವುದು. (ಬಂಡವಾಳ ಹೂಡಿಕೆ ಸಹಾಯಧನ ಹೊರತುಪಡಿಸಿ)

7. ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸಿ ಸಮಿತಿ

1.​​ಜಿಲ್ಲಾಧಿಕಾರಿಗಳು​ಅಧ್ಯಕ್ಷರು
​2​ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್​ಸದಸ್ಯರು
​3​ಜಿಲ್ಲಾಧಿಕಾರಿಗಳು, ಕೈ.ವಿ.ಐ.ಬಿ.​ಸದಸ್ಯರು
​4​ಜಿಲ್ಲಾ ಉದ್ಯೋಗಾಧಿಕಾರಿ​ಸದಸ್ಯರು
​5​ಎಂ.ಎಸ್.ಎಂ.ಇ. ಪ್ರತಿನಿಧಿ​ಸದಸ್ಯರು
​6​ಜಿಲ್ಲಾ ಅಧಿಕಾರಿಗಳು, ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮ​ಸದಸ್ಯರು
​7​ಉಪ ನಿರ್ದೇಶಕರು (ಖಾ.ಗ್ರಾ), ಜಿಲ್ಲಾ ಪಂಚಾಯತ್​ಸದಸ್ಯರು
​8​ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ​​ಸದಸ್ಯ ಕಾರ್ಯದರ್ಶಿ

ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯವರು ಪ್ರಥಮ ಪೀಳಿಗೆ ಉದ್ಯಮ ಶೀಲರ ಅರ್ಜಿಗಳ ಪರಿಶೀಲನೆ, ನಿರ್ದಿಷ್ಟ ಸಾಲ ಸೌಲಭ್ಯ ಮಂಜೂರಾತಿ ಮಾಡುವ ಅಧಿಕಾರ ಹೊಂದಿರುತ್ತಾರೆ.

8. ಹಣಕಾಸು ಸಂಸ್ಥೆಗಳ ಪಾತ್ರContent Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.