ನೇಕಾರರ ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವನ್ನು ಹೆಚ್ಚಿಸುವುದು ಸಿಐ 56 ಜಕೈಯೋ 2011

  • GOK
    • vanijyasachivalaya
      • ನೇಕಾರರ ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವನ್ನು ಹೆಚ್ಚಿಸುವುದು ಸಿಐ 56 ಜಕೈಯೋ 2011
Last modified at 23/04/2016 19:00 by Vanijyasachivalaya

​​​​​

​​ಕರ್ನಾಟಕ ಸರ್ಕಾರದ ನಡವಳಿಗಳು


ವಿಷಯ: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಕಾರ್ಯಾಗಾರ ಉಪಯೋಜನೆಯಡಿ ಯೋಜನೆಯ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ನಿಗದಿಪಡಿಸುವ ಕುರಿತು.

ಓದಲಾಗಿದೆ: ಜವಳಿ ಅಭಿವೃದ್ಧಿ ಆಯುಕ್ತರ ಪತ್ರ ಸಂಖ್ಯೆ: ಕೈಜಇ/ಜವಳಿ/ಟಿಐ-3/ವಕಾ/ಎಸ್ ಸಿಪಿ-ಟಿಎಸ್ ಪಿ/2011-12 ದಿನಾಂಕ: 16.07.2011.

ಪ್ರಸ್ತಾವನೆ:

           ಮೇಲೆ ಓದಲಾದ ಜವಳಿ ಅಭಿವೃದ್ಧಿ ಆಯುಕ್ತರ ಪತ್ರದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ನಿಗದಿಪಡಿಸಿ, ಸರ್ಕಾರದ ಅನುಮೋದನೆ ನೀಡಿ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

             ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ 2009-10 ನೇ ಸಾಲಿನಿಂದ ರಾಜ್ಯ ವಲಯ ಯೋಜನೆಯಡಿ ನೇಕಾರರಿಗೆ ವಸತಿ ಕಾರ್ಯಾಗಾರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.  ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿಯಲ್ಲಿ ಘಟಕ ವೆಚ್ಚವು ರೂ.65,000/-ಗಳಾಗಿರುತ್ತದೆ.  ಇದರಲ್ಲಿ ರೂ.40,000/- ಸಹಾಯಧನ, ರೂ.20,000/- ಸರ್ಕಾರದಿಂದ ಸಾಲ ಮತ್ತು ರೂ.5,000/- ಫಲಾನುಭವಿಗಳ ವಂತಿಕೆ ಸೇರಿರುತ್ತದೆ.  ಈ ಯೋಜನೆಯು ರಾಜ್ಯದ  ಎಲ್ಲಾ ವರ್ಗದ ನೇಕಾರರಿಗೂ ಸಹ ಒಂದೇ ಮಾದರಿಯಲ್ಲಿರುತ್ತದೆ.  ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಯಾವುದೇ ರಿಯಾಯಿತಿ ಅಥವಾ ಹೆಚ್ಚಿನ ಪ್ರೋತ್ಸಾಹ ಇರುವುದಿಲ್ಲ.

          2007-08 ನೇ ಸಾಲಿನಿಂದ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಅನುಷ್ಟಾನಗೊಳಿಸುತ್ತಿರುವ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ವಸತಿ ಕಾರ್ಯಾಗಾರ ಯೋಜನೆಯು ಒಂದು ಉಪಕಾಂಪೊನೆಂಟ್ ಆಗಿರುತ್ತದೆ. ಈ ಮಾರ್ಗಸೂಚಿಯನ್ವಯ ರೂ.54,000/- ಸಹಾಯಧನ ಮತ್ತು ರೂ.6,000/- ಫಲಾನುಭವಿಯ ವಂತಿಕೆ, ಹೀಗೆ ಒಟ್ಟು ರೂ.60,000/- ಗಳ ಘಟಕ ವೆಚ್ಚವನ್ನು ನಿಗದಿಪಡಿಸಿ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಕಾರ್ಯಕ್ರಮವಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

         ಈ ಮೇಲಿನ ಎರಡೂ ಯೋಜನೆಗಳಡಿ ನಿಗದಿಪಡಿಸಿರುವ ವಸತಿ ಕಾರ್ಯಾಗಾರದ ಘಟಕ ವೆಚ್ಚವು ತೀರಾ ಕಡಿಮೆಯಾಗಿದ್ದು, ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಹೊರೆಯನ್ನು ಭರಿಸುವಷ್ಟು ಆರ್ಥಿಕವಾಗಿ ಶಕ್ತರಿರುವುದಿಲ್ಲ.  ಇತ್ತೀಚಿನ ತೆರೆದ ಮಾರುಕಟ್ಟೆಯ ಸಾಮಗ್ರಿಗಳ ಬೆಲೆಯ ಹೆಚ್ಚಳದಿಂದಾಗಿ ರೂ.60,000/- ದಲ್ಲಿ ಕನಿಷ್ಟ 4 ಚದರಡಿ ವಿಸ್ತೀರ್ಣವುಳ್ಳ ವಸತಿ ಕಾರ್ಯಾಗಾರವನ್ನು ನಿರ್ಮಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ.  ಅಲ್ಲದೆ ಈ ವರ್ಗದ ಫಲಾನುಭವಿಗಳಿಗೆ ಹಣಕಾಸು ಸಂಸ್ಥೆಗಳಿಂದ ಸುಲಲಿತವಾಗಿ ಸಾಲ ಸೌಲಭ್ಯಗಳು ದೊರಕುವುದು ಕಷ್ಟಸಾಧ್ಯವೆಂದು ಕ್ಷೇತ್ರ ಮಟ್ಟದ ಅನುಭವದಿಂದ ಸರ್ಕಾರದ ಗಮನಕ್ಕೆ ತಿಳಿದುಬಂದಿರುತ್ತದೆ.  ಆದ್ದರಿಂದ, ಇತ್ತೀಚಿನ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಕಟ್ಟಡ ಸಾಮಗ್ರಿಗಳ ದರವನ್ನು ಗಮನದಲ್ಲಿರಿಸಿ, ಘಟಕ ವೆಚ್ಚದ ಮೊತ್ತವನ್ನು ಫಲಾನುಭವಿಗಳಿಂದ, ಸಂಘ ಸಂಸ್ಥೆಗಳಿಂದ ನೇಕಾರರ ವೇದಿಕೆಗಳಿಂದ ಮತ್ತು ಜನ ಪ್ರತಿನಿಧಿಗಳಿಮದ ಸಾಕ್ಷ್ಟು ಕೋರಿಕೆ ಮತ್ತು ಬೇಡಿಕೆ ಬಂದಿರುತ್ತದೆಂದು ಜವಳಿ ಅಭಿವೃದ್ಧಿ ಆಯುಕ್ತರು ತಿಳಿಸಿರುತ್ತಾರೆ.

       ಜವಳಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ನಿಗದಿಪಡಿಸಿ, ಇದರಲ್ಲಿ ಶೇ.90 ರಷ್ಟು ರೂ.90,000/- ಸಹಾಯಧನ ಮತ್ತು ಶೇ.10 ರಷ್ಟು ರೂ.10,000/- ಫಲಾನುಭವಿಯ ವಂತಿಕೆ ಅಥವಾ ಸಾಲದ ರೂಪದಲ್ಲಿ ಭರಿಸಲು ಈ ಯೋಜನೆಯನ್ನು ಜಾರಿಗೊಳಿಸಬಹುದಾಗಿರುತ್ತದೆ ಎಂದು ಜವಳಿ ಅಭಿವೃದ್ಧಿ ಆಯುಕ್ತರು ಅಭಿಪ್ರಾಯ ಪಟ್ಟಿರುತ್ತಾರೆ.

          ನೇಕಾರರ ಪರವಾಗಿ ಮತ್ತು ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವನ್ನು ಹೆಚ್ಚುವಂತೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಇರುವುದರಿಂದ ಇತ್ತೀಚಿನ ವಸ್ತು ಸ್ಥಿತಿಯನ್ನು ಆಧರಿಸಿ, ಮಾರುಕಟ್ಟೆಯ ಕಟ್ಟಡ ಸಾಮಗ್ರಿಗಳ ಬೆಲೆಗೆ ಕನಿಷ್ಟ ಹೊಂದಾಣಿಕೆಯಾಗುವಂತೆ ನೆರವಾಗಲು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ವಸತಿ ಕಾರ್ಯಾಗಾರ ಘಟಕ ವೆಚ್ಚವನ್ನು ಪ್ರಸಕ್ತ ಸಾಲಿನಿಂದ ಜಾರಿಗೆ ಬರುವಂತೆ ರೂ.1.00 ಲಕ್ಷಗಳಿಗೆ ನಿಗದಿಪಡಿಸಿ, ಸರ್ಕಾರದ ಅನುಮೋನದೆ ನೀಡಿ, ಆದೇಶ ಹೊರಡಿಸುವಂತೆ ಜವಳಿ ಅಭಿವೃದ್ಧಿ ಆಯುಕ್ತರು ಶಿಫಾರಸ್ಸು ಮಾಡಿರುತ್ತಾರೆ.
     ಜವಳಿ ಅಭಿವೃದ್ಧಿ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

​​ಸರ್ಕಾರಿ ಆದೇಶ ಸಂಖ್ಯೆ: ವಾಕೈ 56 ಜಕೈಯೋ 2011, ಬೆಂಗಳೂರು, ದಿನಾಂಕ: 15.05.2012.

        ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಕಾರ್ಯಾಗಾರ ಉಪಯೋಜನೆಯಡಿ ಯೋಜನೆಯ ಘಟಕ ವೆಚ್ಚವನ್ನು ರೂ.60,000/- ಗಳಿಂದ ರೂ.1.00 ಲಕ್ಷಕ್ಕೆ ಹೆಚ್ಚಿಸಿ, ನಿಗದಿಪಡಿಸಲು, ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.  ಇದರಲ್ಲಿ ಶೇ.90ರಷ್ಟು ಸಹಾಯಧನ ಮತ್ತು ಶೇ.10 ರಷ್ಟು ಫಲಾನುಭವಿಯ ವಂತಿಕೆ ಆಥವಾ ಸಾಲದ ರೂಪದಲ್ಲಿ ಭರಿಸಿ ಈ ಯೋಜನೆಯನ್ನು ಜಾರಿಗೊಳಿಸಲು ಅನುಮತಿ ನೀಡಲಾಗಿದೆ.

       ಕೈಮಗ್ಗ ಮತ್ತು ಜವಳಿ ಇಲಾಖೆಯು 2012-13ನೇ ಸಾಲಿನಲ್ಲಿ ಲಭ್ಯವಿರುವ ಹಣಕಾಸಿನ ಅವಕಾಶದಲ್ಲಿ ಖರ್ಚನ್ನು ಭರಿಸಲು ಸಾಧ್ಯವಾಗುವ ಪ್ರಮಾಣದಲ್ಲಿ ಫಲಾನುಭವಿಗಳ ಆಯ್ಕೆ ಪಟ್ಟಿಯು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

          ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್ ಡಿ 236 ವೆಚ್ಚ-1.2012 ದಿನಾಂಕ: 27.04.2012 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಹಿ/-
(ದೇವೋಜಿ ರಾವ್)
ಪೀಠಾಧಿಕಾರಿ(ಜವಳಿ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

​​
Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.