ಯಾದಗಿರಿಯಲ್ಲಿ ಹೈಟೆಕ್ ಟೆಕ್ಸ್ ಟೈಲ್ ಟ್ರೈನಿಂಗ್ ಸೆಂಟರ್ ಸ್ಥಾಪಿಸುವ ಹೊಸ ಯೋಜನೆಗೆ ಅನುಮೋದನೆಯ ಬಗ್ಗೆ

  • GOK
    • vanijyasachivalaya
      • ಯಾದಗಿರಿಯಲ್ಲಿ ಹೈಟೆಕ್ ಟೆಕ್ಸ್ ಟೈಲ್ ಟ್ರೈನಿಂಗ್ ಸೆಂಟರ್ ಸ್ಥಾಪಿಸುವ ಹೊಸ ಯೋಜನೆಗೆ ಅನುಮೋದನೆಯ ಬಗ್ಗೆ
Last modified at 21/04/2016 20:28 by Vanijyasachivalaya

​​​​

​​ಕರ್ನಾಟಕ ಸರ್ಕಾರದ ನಡವಳಿಗಳು


ವಿಷಯ: 2015-16 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಯಾದಗಿರಿಯಲ್ಲಿ ಹೈಟೆಕ್ ಟೆಕ್ಸ್ ಟೈಲ್ಸ್ ಟ್ರೈನಿಂಗ್ ಸೆಂಟರ್ ಸ್ಥಾಪನೆ ಮಾಡುವ ಹೊಸ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ: 

1. 2015-16ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಆಯವ್ಯಯ ಭಾಷಣ (ಕಂಡಿಕೆ-422)
2. ಜವಳಿ ಅಭಿವ್ರದ್ಧಿ ಆಯುಕ್ತರ ಪತ್ರ ಸಂಖ್ಯೆ: ಕೈಜಇ/ನೂಜನೀ/ಟಿಐ/ಹೈ.ತ.ಕೇ/2015-16, ದಿನಾಂಕ: 14.05.2015 ಮತ್ತು 03.09.2015.

ಪ್ರಸ್ತಾವನೆ:

            2015-16 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-422 ರಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಘೋಷಿಸಲಾಗಿದೆ.

​​“ರೂ.10.00 ಕೋಟಿ ವೆಚ್ಚದಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಯಾದಗಿರಿಯಲ್ಲಿ ಹೈಟೆಕ್ ಟೆಕ್ಸ್ ಟೈಲ್ಸ್ ಟ್ರೈನಿಂಗ್ ಸೆಂಟರ್ ಸ್ಥಾಪನೆ ಮಾಡಲಾಗುವುದು.”
               ಓದಲಾದ (2) ರ ಜವಳಿ ಅಭಿವ್ರದ್ಧಿ ಆಯುಕ್ತರ ಪತ್ರದಲ್ಲಿ ಉದ್ದೇಶಿತ ತರಬೇತಿ ಕೇಂದ್ರವು ಉತ್ತರ ಕರ್ನಾಟಕ ಪ್ರದೇಶದ ನೇಕಾರ ಜನರಿಗೆ ತರಬೇತಿಯನ್ನು ನೀಡಿ ಜವಳಿ ಘಟಕಗಳಿಗೆ ಬೇಡಿಕೆ ಇರುವ ಕೌಶಲ್ಯಭರಿತ ಮಾನವ ಸಂಪನ್ಮೂಲವನ್ನು ಹೆಚ್ಚಿಸುತ್ತದೆ.  ಹಾಗೂ ಯಾದಗಿರಿ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಅಭಿವ್ರದ್ಧಿ ಪಡಿಸುವ ಜವಳಿ ಪಾರ್ಕ್ ಗಳಲ್ಲಿನ ಜವಳಿ ಘಟಕಗಳಿಗೆ ಮಾನವ ಸಂಪನ್ಮೂಲವನ್ನು ಒದಗಿಸಬಹುದಾಗಿರುತ್ತದೆ ಎಂದು ತಿಳಿಸಿರುತ್ತಾರೆ.  ಈ ಉದ್ದೇಶಿತ ತರಬೇತಿ ಕೇಂದ್ರವು ವಾರ್ಶಿಕ ಸುಮಾರು 1,400 ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.  ಇದರಿಂದ ಹೈದ್ರಾಬಾದ್-ಕರ್ನಾಟಕ ಪ್ರದೇಶದ ನಿರುದ್ಯೋಗ ಯುವಕ-ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಅವರ ಸಾಮಾಜಿಕ ಮತ್ತು ಆರ್ಥಿಕ ಸಮಗ್ರ ಅಭಿವ್ರದ್ಧಿಗೆ ಸಹಾಯಕವಾಗುತ್ತದೆ.  ಆದ್ದರಿಂದ ಸದರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಹಾಗೂ ರೂ.10.00 ಕೋಟಿ ಅನುದಾನವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಬಿಡುಗಡೆ ಮಾಡಲು ಹೈದ್ರಾಬಾದ್ – ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಶಿಫಾರಸ್ಸು ಮಾಡುವಂತೆ ಕೋರಿರುತ್ತಾರೆ.

         ಜವಳಿ ಅಭಿವ್ರದ್ಧಿ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

​ಸರ್ಕಾರಿ ಆದೇಶ ಸಂಖ್ಯೆ: ವಾಕೈ 37 ಜಕೈಯೋ 2015, ಬೆಂಗಳೂರು, ದಿನಾಂಕ: 09.11.2015


            ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ 2015-16 ನೇ ಸಾಲಿನಲ್ಲಿ ರೂ.10.00 ಕೋಟಿ ವೆಚ್ಚದಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವ್ರದ್ಧಿ ಮಂಡಳಿಯ ಅನುದಾನದಿಂದ ಯಾದಗಿರಿಯಲ್ಲಿ ಹೈಟೆಕ್ ಟೆಕ್ಸ್ ಟೈಲ್ಸ್ ಟ್ರೈನಿಂಗ್ ಸೆಂಟರ್ ಸ್ಥಾಪನೆ ಮಾಡುವ ಹೊಸ ಯೋಜನೆಗೆ ಈ ಕೆಳಕಂಡ ಷರತ್ತುಗಳಪಡಿಸಿ ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1. Earnings in terms of fees etc., shall be credited to the contingency fund under departmental receipt head.
2. Expenditure shall be dovetailed with existing GOI/GOK schemes under “Skill Development” component.

          ಯೋಜನೆಗೆ ತಗಲುವ ರೂ.10.00 ಕೋಟಿ ವೆಚ್ಚವನ್ನು ಹೈದ್ರಾಬಾದ್-ಕರ್ನಾಟಕ ಪ್ರದೇಶಭಿವ್ರದ್ಧಿ ಮಂಡಳಿಯ ಲೆಕ್ಕಶೀರ್ಶಿಕೆ 2575-60-265-0-03(ಯೋಜನೆ) ಹಾಗೂ 4575-60-800-0-02(ಯೋಜನೆ) ರಡಿ ಲಭ್ಯವಿರುವ ಅನುದಾನದಿಂದ ಭರಿಸತಕ್ಕದ್ದು.

            ಈ ತರಬೇತಿ ಕೇಂದ್ರದ ಸ್ಥಾಪನೆಗೆ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವ್ರದ್ಧಿ ನಿಗಮ ನಿ, ಸಂಸ್ಥೆಯನ್ನು ನೋಡ್ ಏಜನ್ಸಿಯಾಗಿ ನೇಮಕ ಮಾಡಲಾಬಿದೆ.

            ಈ ಆದೇಶವನ್ನು ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ:584/2015, ದಿನಾಂಕ: 20.05.2015 ರಲ್ಲಿ ಅನುಮೋದಿಸಿರುವಂತೆ ಹಾಗೂ ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿ 61 ಎಫ್ಆರ್ಒ 2015, ದಿನಾಂಕ: 04.09.2015 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 1197 ವೆಚ್ಚ-1/2015, ದಿನಾಂಕ: 29.09.2015 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಸಹಿ/-
(ಬಿ.ಬಿ.ವಿಜಾಪುರ)
ಪೀಠಾಧಿಕಾರಿ(ಜವಳಿ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
ಕರ್ನಾಟಕ ಸರ್ಕಾರದ ನಡವಳಿಗಳು
-----------------------------------------------------------------------------------------------------------------------------------------------------------
ವಿಷಯ:  2015-16 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಯಾದಗಿರಿಯಲ್ಲಿ ಹೈಟೆಕ್ ಟೆಕ್ಸ್ ಟೈಲ್ಸ್ ಟ್ರೈನಿಂಗ್ ಸೆಂಟರ್ ಸ್ಥಾಪನೆ ಮಾಡುವ ಹೊಸ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

​​​ತಿದ್ದುಪಡಿ ಆದೇಶ


ಸರ್ಕಾರಿ ಆದೇಶ ಸಂಖ್ಯೆ: ವಾಕೈ 37 ಜಕೈಯೋ 2015, ಬೆಂಗಳೂರು, ದಿನಾಂಕ: 29.12.2015.

ಸರ್ಕಾರಿ ಆದೇಶ ಸಂಖ್ಯೆ: ವಾಕೈ 37 ಜಕೈಯೋ 2015, ಬೆಂಗಳೂರು, ದಿನಾಂಕ: 09.11.2015 ರ ಆದೇಶ ಭಾಗದಲ್ಲಿ ವಿಧಿಸಿರುವ ಷರತ್ತಾದ “Earnings in terms of fees etc., shall be credited to the Contingency Fund under departmental receipt head” ರಲ್ಲಿ ‘Contingency Fund’ ಎಂಬುದರ ಬದಲಾಗಿ ‘Consolidated Fund’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

       ಈ ಯೋಜನೆಯಿಂದ ಸ್ವೀಕ್ರುತವಾಗುವ ಹಣವನ್ನು ಹೊಸ ಲೆಕ್ಕ ಶೀರ್ಶಿಕೆ : ‘852-08-202-5-04 – Receipts from Hitech Textile Training Centre” ಅಡಿ ಜಮಾ ಮಾಡುವಂತೆ ತಿಳಿಸಿದೆ.

            ಈ ತಿದ್ದುಪಡಿ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 1377 ವೆಚ್ಚ-1/2015, ದಿನಾಂಕ: 05.12.2015 ರಂತೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಸಹಿ/-
(ಬಿ.ಬಿ.ವಿಜಾಪುರ)
ಪೀಠಾಧಿಕಾರಿ(ಜವಳಿ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

​​​
Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.