ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆ ಮಾರ್ಗಸೂಚಿ ಮಾರ್ಪಾಡು ಸಿಐ 45 ಸಪ್ರಕೈ 2014 ದಿ 05.12.2014

  • GOK
    • vanijyasachivalaya
      • ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆ ಮಾರ್ಗಸೂಚಿ ಮಾರ್ಪಾಡು ಸಿಐ 45 ಸಪ್ರಕೈ 2014 ದಿ 05.12.2014
Last modified at 26/04/2016 21:25 by Vanijyasachivalaya

​​​​​​


​​

​ಕರ್ನಾಟಕ ಸರ್ಕಾರದ ನಡವಳಿಗಳು


​ವಿಷಯ: ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯ ಮಾರ್ಗಸೂಚಿಗೆ ಮಾರ್ಪಾಡು ಮಾಡುವ ಬಗ್ಗೆ.

ಉಲ್ಲೇಖ:

1.     ಅಧಿಕ ನಿರ್ದೇಶಕರು (ಜಿಕೈಕೇ) ಇವರ ಪತ್ರ ಸಂಖ್ಯೆ : ಕೈವಾಇ/ಜಿಕೈಕೇ/ಕೈವಿಆ/2013-14 ದಿನಾಂಕ 28.04.2014 ಮತ್ತು 25.08.2014
2.     ಸರ್ಕಾರದ ಪತ್ರ ಸಂಖ್ಯೆ ಸಿಐ 45 ಸಪ್ರಕೈ 2014 ದಿನಾಂಕ 24.05.2014, 25.09.2014
3.     ಅಧಿಕ ನಿರ್ದೇಶಕರು (ಜಿಕೈಕೇ) ಇವರ ಪತ್ರ ಸಂಖ್ಯೆ ಕೈವಾಇ/ಜಿಕೈಕೇ/ಸುಕಾಕೌಯೋ.ಪಮಾ/2014-15 ದಿನಾಂಕ 07.11.2014

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮಾಂಕ (3) ರ ಪತ್ರದಲ್ಲಿ ಅಧಿಕ ನಿರ್ದೇಶಕರು, ಜಿ.ಕೈ.ಕೇ. ಇವರು 2006-11ರ ಕೈಗಾರಿಕಾ ನೀತಿಯಲ್ಲಿ ವಿಶೇಷ ನೈಪುಣ್ಯತೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿ, ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆ ಇರುವ ಮಾನ್ವ ಸಂಪನ್ಮೂಲವನ್ನು ಒದಗಿಸುವುದು ಒಂದು ಉದ್ದೇಶವಾಗಿತ್ತು.  ಅದರಂತೆ, ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ರೂಪಿಸಿ, ಕೌಶಲ್ಯಾಭಿವೃದ್ಧಿ ಯೋಜನೆಯನ್ನು ರೂಪಿಸಿ, ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಕಟ್ಟಡ ನಿರ್ಮಾಣಕ್ಕಾಗಿ ಮತ್ತು ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರದಿಂದ ಅನುದಾನ ನೀಡಲಾಗಿತ್ತು.  ಈ ಯೋಜನೆಯಡಿ 13 ಸಂಸ್ಥೆಗಳು ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಲ್ಲಿ ಈಗಾಗಲೇ 4 ಸಂಸ್ಥೆಗಳು ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.  ಉಳಿದ 9 ಸಂಸ್ಥೆಗಳ ಪೈಕಿ 5 ಸಂಸ್ಥೆಗಳು ಕಟ್ಟಡ ಕಾಮಗಾರಿ ಕೆಲಸಗಳನ್ನು ಪೂರ್ಣಗೊಳಿಸಿ, ಯಂತ್ರೋಪಕರಣಗಳನ್ನು ಅಳವಡಿಸಲು ಕ್ರಮ ವಹಿಸಿರುತ್ತಾರೆ.  ಬಾಕಿ 4 ತರಬೇತಿ ಸಂಸ್ಥೆಗಳ ಕಟ್ಟಡ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ.

ಉತ್ಪಾದನಾ ಕ್ಷೇತ್ರದಲ್ಲಿ ಕೌಶಲ್ಯತೆ ಹೊಂದಿರುವ ಮಾನವ ಸಂಪನ್ಮೂಲ ಕೊರತೆಯನ್ನು ಕೈಗಾರಿಕೆಗಳು ಎದುರಿಸುತ್ತಿರುವುದರಿಂದ, ಇತ್ತೀಚಿನ ಕೈಗಾರಿಕಾ ಕ್ಷೇತ್ರಕ್ಕೆ ಸಾಕಷ್ಟು ಹೊತ್ತು ನೀಡಿರುವುದರಿಂದ ಆದುನಿಕ ವೃತ್ತಿಗಳಲ್ಲಿ ಕೈಶಲ್ಯತೆ ಹೊಂದಿರುವ ಮಾನವ ಸಂಪನ್ಮೂಲವನ್ನು ಕೈಗಾರಿಕೆಗಳಿಗೆ ಒದಗಿಸಬೇಕಾಗಿರುತ್ತದೆ.  ಆದ್ದರಿಂದ 2014-19ನೇ ಸಾಲಿನ ಹೊಸ ಕೈಗಾರಿಕಾ ನೀತಿಯ ಕಂಡಿಕೆ 5.2.4ರಲ್ಲಿ ತಿಳಿಸಿರುವಂತೆ ಈಗಾಗಲೇ ಅಸ್ತಿತ್ವದಲ್ಲಿರುವ ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಪರಿಷ್ಕರಿಸಿ ಉತ್ಪಾದನಾ ಕ್ಷೇತ್ರ ಮತ್ತು ಸ್ವಯಂ ಉದ್ಯೋಗ ಸ್ಥಾಪಿಸಲು ಅನುಕೂಲವಾಗುವಂತೆ ಅವಶ್ಯಕತೆ ಇರುವ ಆಧುನಿಕ ವೃತ್ತಿಗಳಲ್ಲಿ ಕೌಶಲ್ಯ ತರಬೇತಿ ನೀಡಲು ಸದರಿ ಯೋಜನೆಯನ್ನು ಪರಿಷ್ಕರಿಸಲು ಅವಶ್ಯವಿರುತ್ತದೆಯೆಂದು ತಿಳಿಸುತ್ತಾ, ಪರಿಷ್ಕೃತ ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯ ಕರಡು ಮಾರ್ಗಸೂಚಿಗಳನ್ನು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಈ ಮುಂದಿನಂತೆ ಆದೇಶಿಸಿದೆ.

​​ಸರ್ಕಾರಿ ಆದೇಶ ಸಂಖ್ಯೆ : ಸಿಐ 45 ಸಪ್ರಕೈ 2014, ಬೆಂಗಳೂರು ದಿನಾಂಕ 05.12.2014


2014-19ನೇ ಹೊಸ ಕೈಗಾರಿಕಾ ನೀತಿಯ ಕಂಡಿಕೆ 5.2.4ರಲ್ಲಿ ತಿಳಿಸಿರುವಂತೆ ಪ್ರಸ್ತುತ ಜಾರಿಯಲ್ಲಿರುವ ಸುವರ್ಣಕಾಯಕ ಕೌಶಲ್ಯಾಭಿವೃದ್ಧಿ ಯೋಜೆಯ (SKKY) ಪರಿಷ್ಕೃತ ಮಾರ್ಗಸೂಚಿಗಳನ್ನು ಈ ಆದೇಶದ ಅನುಬಂಧದಲ್ಲಿರುವಂತೆ ಅನುಮೋದಿಸಿ ಜಾರಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಕೆ.ಆರ್. ಚಂದ್ರಮ್ಮ)
ಫೀಠಾಧಿಕಾರಿ (ಸಪ್ರಕೈ
​ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

 

​​​ಸರ್ಕಾರಿ ಆದೇಶ ಸಂಖ್ಯೆ : ಸಿಐ 45 ಸಪ್ರಕೈ 2014, ಬೆಂಗಳೂರು, ದಿನಾಂಕ 05-12-2014ರ ಅನುಬಂಧ

​ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯ ಪರಿಷ್ಕೃತ ಮಾರ್ಗಸೂಚಿ

ಕೈಗಾರಿಕಾ ನೀತಿ 2006-11ರಲ್ಲಿ ವಿಶೇಷ ನೈಪುಣ್ಯತೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿ, ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆ ಇರುವ ಮಾನ್ವ ಸಂಪನ್ಮೂಲವನ್ನು ಒದಗಿಸುವುದು ಒಂದು ಉದ್ದೇಶವಾಗಿತ್ತು.  ಅದರಂತೆ, ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ರೂಪಿಸಿ, ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಕಟ್ಟಡ ನಿರ್ಮಾಣಕ್ಕಾಗಿ ಮತ್ತು ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರದಿಂದ ಅನುದಾನ ನೀಡಲಾಗಿತ್ತು.  ಈ ಯೋಜನೆಯಡಿ 13 ಸಂಸ್ಥೆಗಳು ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಲ್ಲಿ ಈಗಾಗಲೇ 4 ಸಂಸ್ಥೆಗಳು ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.  ಉಳಿದ 09 ಸಂಸ್ಥೆಗಳ ಪೈಕಿ 05 ಸಂಸ್ಥೆಗಳು ಕಟ್ಟಡ ಕಾಮಗಾರಿ ಕೆಲಸಗಳನ್ನು ಪೂರ್ಣಗೊಳಿಸಿ, ಯಂತ್ರೋಪಕರಣಗಳನ್ನು ಅಳವಡಿಸಲು ಕ್ರಮ ವಹಿಸಿರುತ್ತಾರೆ.  ಬಾಕಿ 4 ತರಬೇತಿ ಸಂಸ್ಥೆಗಳ ಕಟ್ಟಡ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ.

ಹಾಲಿ ಉತ್ಪಾದನಾ ಕ್ಷೇತ್ರದಲ್ಲಿ ಕೌಶಲ್ಯತೆ ಹೊಂದಿರುವ ಮಾನವ ಸಂಪನ್ಮೂಲ ಕೊರತೆಯನ್ನು ಕೈಗಾರಿಕೆಗಳು ಎದುರಿಸುತ್ತಿವೆ.  ಇತ್ತೀಚಿನ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಿಂದಾಗಿ ಹಾಗೂ ಕೇಂದ್ರ ಸರ್ಕಾರವು ಸಹ ಉತ್ಪಾದನಾ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡುತ್ತಿರುವುದರಿಂದ, ಆಧುನಿಕ ವೃತ್ತಿಗಳಲ್ಲಿ ಕೌಶಲ್ಯತೆ ಹೊಂದಿರುವ ಮಾನವ ಸಂಪನ್ಮೂಲವನ್ನು ಕೈಗಾರಿಕೆಗಳಿಗೆ ಒದಗಿಸುವುದು ಸರ್ಕಾರಕ್ಕೆ ಒಂದು ಸವಾಲಾಗಿದೆ.

2014-19ನೇ ಸಾಲಿನ ಹೊಸ ಕೈಗಾರಿಕಾ ನೀತಿಯ ಕಂಡಿಕೆ 5.2.4ರಲ್ಲಿ ತಿಳಿಸಿರುವಂತೆ ಈಗಾಗಲೇ ಅಸ್ತಿತ್ವದಲ್ಲಿರುವ ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಪರಿಷ್ಕರಿಸಿ, ಉತ್ಪಾದನಾ ಕ್ಷೇತ್ರ ಮತ್ತು ಸ್ವಯಂ ಉದ್ಯೋಗ ಸ್ಥಾಪಿಸಲು ಅನುಕೂಲವಂತೆ ಅವಶ್ಯಕತೆ ಇರುವ ಆಧುನಿಕ ವೃತ್ತಿಗಳಲ್ಲಿ ಕೌಶಲ್ಯ ತರಬೇತಿ ನೀಡಲು ಸದರಿ ಯೋಜನೆಯನ್ನು ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದ್ದು, ಪರಿಷ್ಕೃತ ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯ ಉದ್ದೇಶ ಹಾಗೂ ಮಾರ್ಗಸೂಚಿ ಕೆಳಕಂಡಂತಿದೆ.

I.  ಉದ್ದೇಶ

1)      ನಗರ ಮತ್ತು ಗ್ರಾಮೀಣ ಪ್ರದೇಶಗಳ್ಲಲಿರುವ ನಿರುದ್ಯೋಗಿ ಯುವಶಕ್ತಿಯನ್ನು ಸ್ವಾವಲಂಭಿಗಳನ್ನಾಗಿ ಮಾಡುವುದು.
2)     ಕೌಶಲ್ಯತೆಯನ್ನು ಹೆಚ್ಚಿಸಿ ಉದ್ಯೋಗಾವಕಾಶ ದೊರಕಿಸಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದು.
3)     ಕೈಗಾರಿಕೆಗಳಿಗೆ ಅವಶ್ಯವಿರುವ ಮಾನವ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ನಿರುದ್ಯೋಗಿ ಯುವಜನರಿಗೆ ಆಧುನಿಕ ತರಬೇತಿ ನೀಡಲಾಗುವುದು.

II.  ಯೋಜನೆಯ ವಿವರ

ಈಗಾಗಲೇ ಅಸ್ತಿತ್ವದಲ್ಲಿರುವ ಸರ್ಕಾರೇತರ ತರಬೇತಿ ಸಂಸ್ಥೆಗಳು/ಕೈಗಾರಿಕಾ ಸಂಘ- ಸಂಸ್ಥೆಗಳು/ಖಾಸಗಿ ಕ್ಷೇತ್ರದ ದೊಡ್ಡ ಪ್ರಮಾಣದ ಕೈಗಾರಿಕೆಗಳು ತರಬೇತಿಗೆ ಸೂಕ್ತವಾದ ಕಟ್ಟಡ ಹೊಂದಿದ್ದಲ್ಲಿ, ಯಂತ್ರೋಪಕರಣ ಖಾರೀದಿ ಗಾಗಿ ಹಾಗೂ ತರಬೇತಿ ವೆಚ್ಚಕ್ಕಾಗಿ ಈ ಯೋಜನೆಯಡಿ ಅನುದಾನ ನೀಡಲಾಗುವುದು.  ಯೋಜನಾ ವೆಚ್ಚವು (ಯಂತ್ರೋಪಕರಣಗಳು ಹಾಗೂ ಉಪಕರಣಗಳ ಮೇಲೆ ಬಂಡವಾಳ ಹೂಡಿಕೆ) ಕನಿಷ್ಠ ರೂ. 100.00 ಲಕ್ಷ ಇರತಕ್ಕದ್ದು.  ಸದರಿ ಯಂತ್ರೋಪಕರಣಗಳು ಮತ್ತು ಉಪಕರಣಗಳು MES/NSDC (Modular Employable Scheme/National Skill Development Corporation) ಯೋಜನೆಗಳಲ್ಲಿ ಗುರುತಿಸಿ, ಸೂಚಿಸಲಾದ ಉಪಕರಣಗಳನ್ನು ಖರೀದಿಸತಕ್ಕದ್ದು.

III.  ಅರ್ಹತೆ

  1. ತರಬೇತಿ ಸಂಸ್ಥೆಯು ಕರ್ನಾಟಕ ಸಂಘಗಳ ನೊಂದಣಿ ಅಧಿನಿಯಮ ಅಥವಾ ರಾಜ್ಯ/ಕೇಂದ್ರ ಸರ್ಕಾರದ ಯಾವುದೇ ಸಂಬಂಧಪಟ್ಟ ಅಧಿನಿಯಮದ ಅಡಿಯಲ್ಲಿ ನೊಂದಾಯಿಸಲ್ಪಟ್ಟ ಒಂದು ಫರ್ಮ್, ಸಂಘ, ಟ್ರಸ್ಟ್ ಅಥವಾ ಆರ್.ಓ.ಸಿ. ಯಲ್ಲಿ ನೊಂದಾಯಿಸಲ್ಪಟ್ಟ ಒಂದು ಕಂಪೆನಿಯಾಗಿರತಕ್ಕದ್ದು.
  2. ಸಂಸ್ಥೆಯು ಸ್ವಂತವಾಗಿ ಕನಿಷ್ಠ 5000 ಚ.ಅ. ತರಬೇತಿ ಸೂಕ್ತವಾದ ಕಟ್ಟಡವನ್ನು ಹೊಂದಿರತಕ್ಕದ್ದು ಅಥವಾ ದೀರ್ಘಾವಧಿ ಅಂದರೆ ಕನಿಷ್ಠ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕನಿಷ್ಠ 5000 ಚ.ಅ. ಕಟ್ಟಡವನ್ನು ಪಡೆದಿರತಕ್ಕದ್ದು.  ಸದರಿ ಗುತ್ತಿಗೆಯು ಕಡ್ಡಾಯವಾಗಿ ನೊಂದಣಿಯಾಗಿರತಕ್ಕದ್ದು.
  3. ಸಂಘ/ಸಂಸ್ಥೆ/ಟ್ರಸ್ಟ್/ಅತಿ ದೊಡ್ಡ ಪ್ರಮಾಣದ ಕೈಗಾರಿಕೆಗಳು ಕನಿಷ್ಠ 3 ವರ್ಷದ ಹಿಂದೆ ಅಸ್ತಿತ್ವದಲ್ಲಿರತಕ್ಕದ್ದು.

IV.   ಸಂಸ್ಥೆಯು ನೀಡಬೇಕಾಗಿರುವ ದಾಖಲಾತಿಗಳು:

1)      ಸಂಘ/ಸಂಸ್ಥೆ/ಟ್ರಸ್ಟ್ ನೊಂದಣಿ ಪ್ರತಿ ಹಾಗೂ ಇತ್ತೀಚಿನ ಸಾಲಿಗೆ ನವೀಕರಿಸಿದ ನೊಂದಣಿ ಪ್ರತಿ, ಅತಿ ದೊಡ್ಡ ಪ್ರಮಾಣದ ಕೈಗಾರಿಕೆಗಳು ತಮ್ಮ ಘಟಕದ ನೊಂದಣಿ ಪ್ರಮಾಣ ಪತ್ರದ ಪ್ರತಿ, ಆರ್.ಓ.ಸಿ. ಯಿಂದ ಪಡೆದ ಪ್ರಮಾಣಪತ್ರದ ಪ್ರತಿ ಹಾಗೂ Articles of Association & Memorandum of Association ಪ್ರತಿ ಸಲ್ಲಿಸತಕ್ಕದ್ದು.

2)     ಸಂಸ್ಥೆಯು ಸ್ವಂತ ಕಟ್ಟಡ ಹೊಂದಿರುವ ಬಗ್ಗೆ ಕ್ರಯಪತ್ರ, ಖಾತೆ ಎಕ್ಸ್ ಟ್ರಾಕ್ಟ್, ಇತ್ತೀಚಿನ EC ಇತ್ಯಾದಿ ಪ್ರತಿಗಳನ್ನು ಸಂಬಂಧಪಟ್ಟ ಜಂಟಿ ನಿರ್ದೇಶಕರಿಂದ ದೃಢೀಕರಿಸಿ ಸಲ್ಲಿಸುವುದು.  ಗುತ್ತಿಗೆ ಆಧಾರದ ಮೇಲೆ ಕಟ್ಟಡ ಪಡೆದಿದ್ದರೆ ನೊಂದಣಿಯಾಗಿರುವ ದಾಖಲಾತಿ ಪ್ರತಿ ಸಲ್ಲಿಸುವುದು.

3)     ಸಂಘ/ಸಂಸ್ಥೆ/ಟ್ರಸ್ಟ್/ಅತಿ ದೊಡ್ಡ ಪ್ರಮಾಣದ ಕೈಗಾರಿಕೆಗಳು ಯಂತ್ರೋಪಕರಣಗಳಿಗೆ ಹೂಡಿಕೆ ಮಾಡುವ ಬಂಡವಾಳ ಮೂಲದ ಮಾಹಿತಿ.

4)    ತರಬೇತಿ ಸಂಸ್ಥೆಯು ಈಗಾಗಲೇ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೆ ಅದರ ಮಾಹಿತಿ ನೀಡುವುದು.

5)     ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯಚ್ಛಕ್ತಿ ಸರಬರಾಜು ಮಂಜೂರಾತಿ ಪತ್ರದ ಪ್ರತಿ.

6)     Feasibility Report ಹಾಗೂ ಯೋಜನೆಯ ಬಗ್ಗೆ ವಿವರವಾದ ಯೋಜನಾ ವರದಿ (DPR) ಸಲ್ಲಿಸುವುದು.

7)     ಸಂಬಂಧಪಟ್ಟ ಜಂಟಿ ನಿರ್ದೇಶಕರಿಂದ ಸದರಿ ಪ್ರದೇಶದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆಗೆ ಅವಶ್ಯಕತೆ ಇರುವ ಬಗ್ಗೆ Feasibility Report ಸಲ್ಲಿಸುವುದು.

    V.                ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಗುರುತಿಸಿರುವ ವೃತ್ತಿಗಳು

 

ಅ) ಉತ್ಪಾದನಾ ಕ್ಷೇತ್ರದ ಮಧ್ಯಮ, ಬೃಹತ್ ಮತ್ತು ಅತಿ ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಅವಶ್ಯಕತೆ ಇರುವ ಮಾನವ ಸಂಪನ್ಮೂಲವನ್ನು ಆಧರಿಸಿ, ಈ ಯೋಜನೆಯಡಿ ತರಬೇತಿ ನೀಡಲು ಕೆಳಕಂಡ ವೃತ್ತಿ ಪಠ್ಯಕ್ರಮಗಳನ್ನು ಗುರುತಿಸಿದೆ.

 

"I.T. Essentials, Advanced Welding (MIG), Advanced Welding (TIG), Besic Metrology, Motor & Pump Maintenance, Industrial Electrification, CNC Programming and Operation, CNC Late Operator, CAD/CAM, Advanced Metrology, Precision Tools & Die making, General Engineering – Turner, Fitter, Miller, Grinder, Cisco Certified Network Associate (CCNA), Advanced Machinist (CNC & EDM), Masters in CAD/CAM/CNC, Transformer repair and reconditioning, Sewing Machine Operators, Advanced Skilled Fashion Designing and Ready Mad Garments, Plastic Mouldings, Acquiring Skill in the field of Agro Food Processing, Chemical based Industrial Activities, Other Engineering based activities apart from above, Automobile based activities, Aero-space activities, Mineral based activities and other activities suitable to the requirements of all kinds of Industries."

 

ಪಠ್ಯಕ್ರಮಗಳಲ್ಲಿ (syllabus)  MES/NSDC (Modulr Employable Scheme/National Skill Development Corporation) ಯೋಜನೆಗಳಲ್ಲಿ ನಿಗಧಿಪಡಿಸಿದಂತೆ ಅಳವಡಿಸಬೇಕು.

 

ಆ) ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲವನ್ನು ಒದಗಿಸುವುದರ ಜೊತೆಗೆ ನಿರುದ್ಯೋಗಿ ಯುವಕ/ಯುವತಿಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸುವುದು ಕೂಡ ಇಲಾಖೆಯ ಜವಾಬ್ದಾರಿಯಾಗಿರುತ್ತದೆ.  ಈ ನಿಟ್ಟಿನಲ್ಲಿ ಕೆಳಕಂಡ ಸ್ವಯಂ ಉದ್ಯೋಗ ಕಲ್ಪಿಸುವ ವೃತ್ತಿಗಳನ್ನು ಸಹ ಗುರುತಿಸಿವೆ.

 

"Wood carving, carpentry, automobile repairs and servicing, wheel alignment and balancing, Auto Electrician, Basic Electrical Training, Repair and servicing such as : Agriculture Machinery & equipments, Generator sets, Domestic Electrical appliances, Air Conditioners and Refrigerators, Motor Rewinding Pumpset, Borewell, Basic Electronics (repair & maintenance of power supply, invertors and UPS) TV Computer & Laptop hardware repair and services etc.  Information Technology & Electronic Systems maintenance, Computer Operations (DTP, Tally etc) Lab Technician, Wiremen, Welding (Gas & Electrical), Pluming & Sanitation, Mesonary, Fashion Designing/Readymade Garments, Machine embroidary, Darning, Any other industry & service related activities suitable for Self Employment.

 

ಆಯ್ಕೆಯಾದ ತರಬೇತಿ ಸಂಸ್ಥೆಯು ಉತ್ಪಾದನಾ ಕ್ಷೇತ್ರದ ಕೌಶಲ್ಯಾಭಿವೃದ್ಧಿಗಾಗಿ ಗುರುತಿಸಿರುವ ವೃತ್ತಿಗಳಲ್ಲಿ, ಕನಿಷ್ಠ ಒಂದು ವೃತ್ತಿಯನ್ನು ಕಡ್ಡಾಯವಾಗಿ ತರಬೇತಿ ನೀಡಲು ಆಯ್ಕೆ ಮಾಡತಕ್ಕದ್ದು.

 

   VI.                ಸಂಸ್ಥೆಗಳನ್ನು ಆಯ್ಕೆ ಮಾಡುವ ಸಮಿತಿ

 


1)
ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರುಅಧ್ಯಕ್ಷರು
2)ಅಧಿಕ ನಿರ್ದೇಶಕರು (ಎಂ.ಎಸ್.ಎಂ.ಇ.), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರುಸದಸ್ಯರು
3) ಅಧಿಕ ನಿರ್ದೇಶಕರು (ವಿಶ್ವ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು.ಸದಸ್ಯರು
4) ಮುಖ್ಯ ಸಲಹೆಗಾರರು, ಟೆಕ್ಸಾಕ್, ಬೆಂಗಳೂರುಸದಸ್ಯರು
5)ಜಂಟಿ ನಿರ್ದೇಶಕರು, ತಾಂತ್ರಿಕ ಕೋಶ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಬೆಂಗಳೂರುಸದಸ್ಯರು
6)ವ್ಯವಸ್ಥಾಪಕ ನಿರ್ದೇಶಕರು, ಜಿಟಿಟಿಸಿ, ಬೆಂಗಳೂರುಸದಸ್ಯರು
7)ನಿರ್ದೇಶಕರು, ಎಂಎಸ್.ಎಂ.ಇ. ಡಿಐ, ರಾಜಾಜಿನಗರಸದಸ್ಯರು
8)ಕಾಸಿಯಾ ಪ್ರತಿನಿಧಿ, ಬೆಂಗಳೂರುಸದಸ್ಯರು
9)ಕಾರ್ಯನಿರ್ವಾಹಕ ನಿರ್ದೇಶಕರು (ಕೆ.ಎಸ್.ವಿ.ಟಿ.ಡಿ.ಸಿ.) (Karnataka State Vocational Training & Development Corporation)ಸದಸ್ಯರು
10)ಅಧಿಕ ನಿರ್ದೇಶಕರು (ಜಿ.ಕೈ.ಕೇ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಸದಸ್ಯ ಕಾರ್ಯದರ್ಶಿ

 

 

  VII.                ಯಂತ್ರೋಪಕರಣ ಖರೀದಿಗಾಗಿ ನೀಡುವ ನೆರವು

 

ತರಬೇತಿಗೆ ಅವಶ್ಯಕವಿರುವ ಯಂತ್ರೋಪಕರಣಗಳು/ಉಪಕರಣಗಳು/ಸಲಕರಣೆಗಳ ವೆಚ್ಚದ ಮೇಲೆ ಸರ್ಕಾರವು ಶೇಕಡ 75 ರಷ್ಟು ಗರಿಷ್ಟ ರೂ. 200.00 ಲಕ್ಷಗಳವರೆಗೂ ಅನುದಾನ ನೀಡಬಹುದಾಗಿದೆ.

 

ಎ) ಸ್ವಂತ ಕಟ್ಟಡ ಹೊಂದಿರುವ ಸಂಘ/ಸಂಸ್ಥೆ/ಟ್ರಸ್ಟ್

 

ಸಂಘ/ಸಂಸ್ಥೆ/ಟ್ರಸ್ಟ್ ರವರು ತಾವು ಸ್ವಂತ ಹೊಂದಿರುವ ಕಟ್ಟಡವನ್ನು ಇಲಾಖೆಗೆ 10 ವರ್ಷಗಳ ಅವಧಿಗೆ Registered Mortgage Deed ಮಾಡಿಕೊಟ್ಟ ನಂತರ ಯಂತ್ರೋಪಕರಣಗಳು/ಸಲಕರಣೆಗಳ ಮೌಲ್ಯದ ಮೇಲೆ ಅರ್ಹ ಅನುದಾನದ ಶೇ. 75 ರಷ್ಟು ಮುಂಗಡವಾಗಿ ನೀಡಲಾಗುವುದು.  ಉಳಿದ ಶೇ. 25ರಷ್ಟು ಅನುದಾನವನ್ನು ಯಂತ್ರೋಪಕರಣಗಳು / ಸಲಕರಣೆಗಳನ್ನು ಸಂಸ್ಥೆಯವರು ಕರ್ನಾಟಕ ಪಾರದರ್ಶಕತೆ ನಿಯಮ, ಅಧಿನಿಯಮಗಗಳನ್ನು ಅನುಸರಿಸಿ, ಖರೀದಿಸಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಿದ ನಂತರ ಬಿಡುಗಡೆ ಮಾಡಲಾಗುವುದು.

 

ಬಿ) ಗುತ್ತಿಗೆ ಆಧಾರದ ಮೇಲೆ ಕಟ್ಟಡ ಹೊಂದಿರುವ ಸಂಘ/ಸಂಸ್ಥೆ/ಟ್ರಸ್ಟ್

 

                             (i)        ಸಂಘ/ಸಂಸ್ಥೆ/ಟ್ರಸ್ಟ್ ರವರು ತರಬೇತಿ ಕೇಂದ್ರ ಸ್ಥಾಪನೆಗಾಗಿ ಅವಶ್ಯಕತೆ ಇರುವ ಸೂಕ್ತವಾದ ಕಟ್ಟಡವನ್ನು ಕನಿಷ್ಠ 15 ವರ್ಷಗಳ ಅವಧಿಗೆ Registered Lease Deed ಮೂಲಕ ಪಡೆದಿದ್ದಲ್ಲಿ, ಸದರಿ ತರಬೇತಿ ಸಂಸ್ಥೆಗೆ ಅವಶ್ಯಕತೆ ಇರುವ ಯಂತ್ರೋಪಕರಣಗಳು/ಉಪಕರಣಗಳು/ಸಲಕರಣೆಗಳ ಮೌಲ್ಯದ ಮೇಲೆ ಅರ್ಹ ಅನುದಾನದ ಶೇ. 75ರಷ್ಟು ಮೊಬಲಗನ್ನು ಸರಿಸಮ ಮೊತ್ತ ಬ್ಯಾಂಕಿನ ಖಾತ್ರಿ ಪಡೆದು ಮುಂಗಡವಾಗಿ ನೀಡಲಾಗುವುದು.  ಉಳಿದ ಶೇ. 25% ರಷ್ಟು ಅನುದಾನವನ್ನು ಯಂತ್ರೋಪಕರಣಗಳು/ಉಪಕರಣಗಳನ್ನು ಸಂಸ್ಥೆಯವರು ಕರ್ನಾಟಕ ಪಾರದರ್ಶಕತೆ ನಿಯಮ, ಅಧಿನಿಯಮಗಳನ್ನು ಅನುಸರಿಸಿ ಖರೀದಿಸಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಿದ ನಂತರ ಸದರಿ ಯಂತ್ರೋಪಕರಣಗಳು/ಉಪಕರಣಗಳನ್ನು ಇಲಾಖೆಗೆ 10 ವರ್ಷಗಳ ಅವಧಿಗೆ Hypothicate Deed ನೊಂದಾಯಿಸಿ ಸಲ್ಲಿಸಿದ ನಂತರ ಬಿಡುಗಡೆ ಮಾಡಲಾಗುವುದು.

                            (ii)        ತರಬೇತಿ ಕೇಂದ್ರ ಅನುಮೋದನೆ ನಡೆದ ನಂತರ ಸಂಘ/ಸಂಸ್ಥೆ/ಟ್ರಸ್ಟ್ ರವರು ತಮ್ಮ ಸ್ವಂತ ಮೂಲಗಳಿಂದ ಯಂತ್ರೋಪಕರಣಗಳು/ಉಪಕರಣಗಳು/ಸಲಕರಣೆಗಳ ಮೌಲ್ಯದ ಶೇ. 50ರಷ್ಟು ಬಂಡವಾಳ ಹೂಡಿ ಖರೀದಿಸಿದಲ್ಲಿ ಇಲಾಖೆವತಿಯಿಂದ ಅರ್ಹ ಅನುದಾನದ ಶೇ. 50ರಷ್ಟು ಮೊತ್ತವನ್ನು ಮೊದಲನೇ ಕಂತಾಗಿ ಬಿಡುಗಡೆ ಮಾಡಲಾಗುವುದು.  ನಂತರ ಉಳಿಕೆ ಯಂತ್ರೋಪಕರಣಗಳು/ಉಪಕರಣಗಳು/ಸಲಕರಣೆಗಳನ್ನು ಸಂಸ್ಥೆಯವರು ಕರ್ನಾಟಕ ಪಾರದರ್ಶಕತೆ ನಿಯಮ, ಅಧಿನಿಯಮಗಳನ್ನು ಅನುಸರಿಸಿ ಖರೀದಿಸಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಿದ ಸದರಿ ಯಂತ್ರೋಪಕರಣಗಳು/ಉಪ ಕರಣಗಳನ್ನು ಇಲಾಖೆಗೆ 10 ವರ್ಷಗಳ ಅವಧಿಗೆ Hypothicate Deed ನೊಂದಾಯಿಸಿ ಸಲ್ಲಿಸಿದ ನಂತರ ಅರ್ಹ ಅನುದಾನದ ಬಾಕಿ ಮೊತ್ತವನ್ನು ಸಹ ಬಿಡುಗಡೆ ಮಾಡಲಾಗುವುದು.

ಸಿ) ಭಾರಿ ಮತ್ತು ಮಧ್ಯಮ ಪ್ರಮಾಣದ ಹಾಗೂ ಇತರೆ ದೊಡ್ಡ ಪ್ರಮಾಣದ ಕೈಗಾರಿಕೆಗಳು:

 

                                     (i)        ಭಾರಿ ಮತ್ತು ಮಧ್ಯಮ ಪ್ರಮಾಣದ ಹಾಗೂ ಇತರೆ ದೊಡ್ಡ ಪ್ರಮಾಣದ ಕೈಗಾರಿಕೆಗಳು ತಮ್ಮ ಸ್ವಂತ ಕಟ್ಟಡಗಳಲ್ಲೇ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದಲ್ಲಿ, ಈ ಯೋಜನೆಯಡಿ ಅವಶ್ಯಕ ಯಂತ್ರೋಪಕರಣಗಳು/ಸಲಕರಣೆಗಳನ್ನು ಖರೀದಿಸಲು ಅರ್ಹ ಅನುದಾನದ ಶೇ. 50ರಷ್ಟು ಮೊಬಲಗನ್ನು ಬ್ಯಾಂಕ್ ಖಾತ್ರಿ ಪಡೆದು ಮುಂಗಡವಾಗಿ ನೀಡಲಾಗುವುದು.  ಉಳಿದ ಶೇ. 50 ರಷ್ಟು ಅನುದಾನವನ್ನು ಕರ್ನಾಟಕ ಪಾರದರ್ಶಕತೆ ನಿಯಮ, ಅಧಿನಿಯಮಗಳನ್ನು ಅನುಸರಿಸಿ ಖರೀದಿಸಿ ಪೂರ್ಣ ಪ್ರಮಾಣದಲ್ಲಿ ಸದರಿ ಯಂತ್ರೋಪಕರಣಗಳು/ಸಲಕರಣೆಗಳನ್ನು ಅಳವಡಿಸಿ, ಇಲಾಖೆಗೆ 10 ವರ್ಷಗಳ ಅವಧಿಗೆ Hypothicate Deed ನೊಂದಾಯಿಸಿ ಸಲ್ಲಿಸಿದ ನಂತರ ಬಿಡುಗಡೆ ಮಾಡಲಾಗುವುದು.

                                    (ii)        ತರಬೇತಿ ಕೇಂದ್ರ ಅನುಮೋದನೆ ನೀಡಿದ ನಂತರ ಭಾರಿ ಮತ್ತು ಮಧ್ಯಮ ಪ್ರಮಾಣದ ಹಾಗೂ ಇತರೆ ದೊಡ್ಡ ಪ್ರಮಾಣದ ಕೈಗಾರಿಕೆಗಳು ತಮ್ಮ ಸ್ವಂತ ಮೂಲಗಳಿಂದ ಯಂತ್ರೋಪಕರಣಗಳು/ಉಪಕರಣಗಳು/ಸಲಕರಣೆಗಳ ಮೌಲ್ಯದ ಶೇ. 50ರಷ್ಟು ಬಂಡವಾಳ ಹೂಡಿ ಖರೀದಿಸಿದಲ್ಲಿ ಇಲಾಖೆವತಿಯಿಂದ ಅರ್ಹ ಅನುದಾನದ ಶೇ. 50ರಷ್ಟು ಮೊತ್ತವನ್ನು ಮೊದಲನೇ ಕಂತಾಗಿ ಬಿಡುಗಡೆ ಮಾಡಲಾಗುವುದು.  ನಂತರ ಉಳಿಕೆ ಯಂತ್ರೋಪಕರಣಗಳು/ಉಪಕರಣಗಳು/ಸಲಕರಣೆ ಸಂಸ್ಥೆಯವರು ಕರ್ನಾಟಕ ಪಾರದರ್ಶಕತೆ ನಿಯಮ, ಅಧಿನಿಯಮಗಳನ್ನು ಅನುಸರಿಸಿ ಖರೀದಿಸಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಿದ ಸದರಿ ಯಂತ್ರೋಪಕರಣಗಳು/ಉಪಕರಣಗಳನ್ನು ಇಲಾಖೆಗೆ 10 ವರ್ಷಗಳ ಅವಧಿಗೆ Hypothicate Deed ನೊಂದಾಯಿಸಿ ಸಲ್ಲಿಸಿದ ನಂತರ ಅರ್ಹ ಅನುದಾನದ ಬಾಕಿ ಮೊತ್ತವನ್ನು ಸಹ ಬಿಡುಗಡೆ ಮಾಡಲಾಗುವುದು.  ತರಬೇತಿ ವೆಚ್ಚವನ್ನು ಹೊಸ ಕೈಗಾರಿಕಾ ನೀತಿ 2014-19ರ ಕಂಡಿಕೆ 5.12.13ರ ಪ್ರಕಾರ ತರಬೇತಿ ನೀಡುವ ಕೈಗಾರಿಕಾ ಘಟಕಗಳಿಗೆ ಬಿಡುಗಡೆ ಮಾಡಲಾಗುವುದು.  ತರಬೇತಿ ಸಂಸ್ಥೆ/ಕೈಗಾರಿಕಾ ಘಟಕವು ಅಭ್ಯರ್ಥಿಗಳಿಗೆ ಶಿಷ್ಯ ವೇತನವನ್ನು ಅವರವರ ಬ್ಯಾಂಕ್ ಖಾತೆ ಮೂಲಕ ಪಾವತಿಸತಕ್ಕದ್ದು.

 

ಅ) ಶಿಷ್ಯ ವೇತನ, ವಸತಿ, ಊಟ ಮತ್ತು ಸಾರಿಗೆ ವೆಚ್ಚಕ್ಕಾಗಿ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಈ ಕೆಳಕಂಡಂತೆ ನೀಡಲಾಗುವುದು:

1) SSLC fail ಮತ್ತು ಕಡಿಮೆ ವಿದ್ಯಾರ್ಹತೆ ಹೊಂದಿರುವವರಿಗೆ       ರೂ. 1,500.00

2) SSLC pass ಮತ್ತು ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಿಗೆ       ರೂ. 2,000.00

3) ITI/Diploma ವಿದ್ಯಾರ್ಹತೆ ಹೊಂದಿದವರಿಗೆ                      ರೂ. 2,000.00

 {ತರಬೇತಿ ಅವಧಿಯ ಮೊದಲನೇ 3 ತಿಂಗಳ ಅವಧಿಗೆ ಅನ್ವಯಿಸುವುದು}

ಮೇಲ್ಕಂಡ ಕ್ರ.ಸಂ. 1 ಮತ್ತು 2 ಅಭರ್ಥಿಗಳುಗೆ 3 ತಿಂಗಳಿಗಿಂದ ಹೆಚ್ಚಿನ ಅವಧಿಗೆ ತರಬೇತಿಯನ್ನು ಕೈಗಾರಿಕಾ ಘಟಕದಲ್ಲಿ On the job training ಆಗಿ ಮುಂದುವರೆಸಿದಲ್ಲಿ ರೂ. 2,500.00 ಗರಿಷ್ಠ ಇಲಾಖೆಯಿಂದ ನೀಡಲಾಗುವುದು.

 

ಕೈಗಾರಿಕಾ ನೀತಿ 2014-19ರ ಕಂಡಿಕೆ 5.2.13ರ ಪ್ರಕಾರ

 

1)      ITI ವಿದ್ಯಾರ್ಹತೆ ಹೊಂದಿದವರಿಗೆ              ರೂ. 3,000.00 ಗರಿಷ್ಟ

2)     Diploma ವಿದ್ಯಾರ್ಹತೆ ಹೊಂದಿದವರಿಗೆ        ರೂ. 5,000.00 ಗರಿಷ್ಟ

{3 ತಿಂಗಳಿಗಿಂತ ಮೆಲ್ಪಟ್ಟ ಅವಧಿ ತರಬೇತಿಯನ್ನು ಘಟಕದಲ್ಲಿ on the job training ಆಗಿ ಏರ್ಪಡಿಸಿದಲ್ಲಿ ಅನ್ವಯಿಸುವುದು.

 

 

ಅ) ತರಬೇತಿ ಸಂಸ್ಥೆಗೆ ತರಬೇತಿಗೆ ಅವಶ್ಯವಿರುವ ಕಚ್ಚಾವಸ್ತು, ಭೋಧಕರ ಗೌರವಧನ ಹಾಗೂ ಇತರೆ ಸಾದಿಲ್ವಾರು ವೆಚ್ಚಗಳುMES ತರಬೇತಿಯಲ್ಲಿ 2014-15ನೇ ಸಾಲಿಗೆ ನಿಗಧಿಪಡಿಸಿರುವಂತೆ ವೃತ್ತಿವಾರು ತರಬೇತಿ ಅವಧಿಗೆ ಪ್ರತಿ ಗಂಟೆಗೆ ಪ್ರತಿ ಅಭ್ಯರ್ಥಿಗೆ ರೂ. 30/- ರಂತೆ ತರಬೇತಿ ನೀಡುವ ಸಂಸ್ಥೆಗೆ ನೀಡಲಾಗುವುದು.  (ಮೊದಲ 03 ತಿಂಗಳ ತರಬೇತಿ ಅವಧಿಗೆ ಮಾತ್ರ)

 

ಮುಂದುವರೆದಂತೆ, ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಇನ್ನೂ ಹೆಚ್ಚಿನ ಕೌಶಲ್ಯತೆ ಹೆಚ್ಚಿಸಿಕೊಳ್ಳಲು ಮತ್ತು 3 ತಿಂಗಳ ಅವಧಿಯವರೆಗೂ ತರಬೇತಿ ಅವಶ್ಯಕತೆಯಿದ್ದಲ್ಲಿ ಈ ಮುಂದುವರೆದ ತರಬೇತಿಯನ್ನು ಕೈಗಾರಿಕಾ ಘಟಕದವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಸದರಿ ಅಭ್ಯರ್ಥಿಗೆ ಉದ್ಯೋಗಾವಕಾಶ ಕಲ್ಪಿಸಲು On the job training ಆಗಿ ಮುಂದುವರೆಸಲಾಗುವುದು.  ಸದರಿ 3 ತಿಂಗಳ ಅವಧಿಯಲ್ಲಿ ಕೈಗಾರಿಕಾ ಘಟಕದವರು ಅಭ್ಯರ್ಥಿಗೆ ನಿಗಧಿಪಡಿಸಿರುವ ಸಂಬಳದ ಶೇ. 50ರಷ್ಟು ಪಾವತಿಸುವುದು.  ಉಳಿದ ಶೇ. 50ರಷ್ಟು ಸಂಬಳ (ಶಿಷ್ಯ ವೇತನ) ವನ್ನು ಮೇಲೆ ನಿಗಧಿಪಡಿಸಿರುವ ಮಾಸಿಕ ಶಿಷ್ಯ ವೇತನದ ಮಿತಿ ಮೀರದಂತೆ ಇಲಾಖಾವತಿಯಿಂದ ನೀಡಲಾಗುವುದು.  ಹೀಗೆ ಅಭ್ಯರ್ಥಿಯು ಒಟ್ಟು 6 ತಿಂಗಳ ತರಬೇತಿ ಅವಧಿಯನ್ನು ಪೂರ್ಣಗೊಳಿಸಿದ ನಂತರ ಕೈಗಾರಿಕಾ ಘಟಕದವರು ತಮ್ಮ ಘಟಕದಲ್ಲಿಯೇ ಉದ್ಯೋಗ ನೀಡಿ ಮುಂದುವರೆಸುವುದು.

 

ಬಿ) ತರಬೇತಿ ವೆಚ್ಚ ಬಿಡುಗಡೆ ಮಾಡುವ ವಿಧಾನ

 

ಸಂಸ್ಥೆಯು ತಮ್ಮ ಸ್ವಂತ ಮೂಲಗಳಿಂದ ಮಾಹೆಯ ತರಬೇತಿ ವೆಚ್ಚ ಭರಿಸಿದಲ್ಲಿ ಸದರಿ ತರಬೇತಿ ವೆಚ್ಚದ ವಿವರಗಳನ್ನು ಸಂಬಂಧಪಟ್ಟ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ರವರಿಂದ ದೃಢೀಕರಿಸಿ ಸಲ್ಲಿಸಿದಲ್ಲಿ ತರಬೇತಿ ವೆಚ್ಚವನ್ನು ಮರುಪಾವತಿ ಮಾಡಲಾಗುವುದು.  ಈ ರೀತಿ ಶೇ. 80ರಷ್ಟು ತರಬೇತಿ ವೆಚ್ಚ ಬಿಡುಗಡೆ ಮಾಡಲಾಗುವುದು.  (ಬ್ಯಾಂಕ್ ಗ್ಯಾರಂಟಿ ಅವಶ್ಯಕತೆ ಇರುವುದಿಲ್ಲ) ಉಳಿದ ಶೇ. 20ರಷ್ಟು ತರಬೇತಿ ವೆಚ್ಚದಲ್ಲಿ ಶೇ. 50ರಷ್ಟು ತರಬೇತಿ ವೆಚ್ಚವನ್ನು ತರಬೇತಿ ಪಡೆದ ನಂತರ ಬಿಡುಗಡೆ ಮಾಡಲಾಗುವುದು.  ಬಾಕಿ ಶೇ. 10 ರಷ್ಟು ತರಬೇತಿ ವೆಚ್ಚವನ್ನು ತರಬೇತಿ ಪಡೆದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ ನಂತರ ಬಿಡುಗಡೆ ಮಾಡಲಾಗುವುದು.

 

(ಆ) ಸಂಸ್ಥೆಯು ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮದ ವೆಚ್ಚದಲ್ಲಿ ಶೇ. 40ರಷ್ಟು ಅನುದಾನವನ್ನು ಸಂಬಂಧಪಟ್ಟ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರರವರಿಂದ ದೃಢೀಕರಿಸಿ ಸಲ್ಲಿಸಿದಲ್ಲಿ ಮುಂಗಡವಾಗಿ ಬ್ಯಾಂಕ್ ಖಾತ್ರಿ ಪಡೆದು ಬಿಡುಗಡೆ ಮಾಡಬಹುದಾಗಿದೆ.  ತರಬೇತಿ ಕಾರ್ಯಕ್ರಮ ಪ್ರಾರಂಭಿಸಿದ ಒಂದು ತಿಂಗಳ ನಂತರ ತರಬೇತಿ ವೆಚ್ಚದ 2ನೇ ಕಂತಾಗಿ ಶೇ. 40 ರಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗುವುದು.  ತರಬೇತಿ ಕಾರ್ಯಕ್ರಮ ಮುಗಿದ ನಂತರ, ಸಂಸ್ಥೆಯು ಕೈಗಾರಿಕೆಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಶೇ. 60ರಷ್ಟು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ ನಂತರ ಉಳಿದ ಶೇ. 20ರಷ್ಟು ತರಬೇತಿ ವೆಚ್ಚವನ್ನು ಸಂಸ್ಥೆಗೆ ಮರು ಪಾವತಿಸಲಾಗುವುದು.

 

ಸಿ) ಸ್ವಯಂ ಉದ್ಯೋಗ ಕಲ್ಪಿಸುವ ವ್ಯಕ್ತಿಗಳ ತರಬೇತಿ ವೆಚ್ಚ:

 

ಸಂಬಂಧಪಟ್ಟ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರರವರ ಅಧ್ಯಕ್ಷತೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತರಬೇತಿ ಸಂಸ್ಥೆ, ಆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಅಧಿಕಾರಿಗಳನ್ನು ಅಭ್ಯರ್ಥಿಗಳ ಆಯ್ಕೆ ಸಮಿತಿಗೆ ಆಹ್ವಾನಿಸಿ, ಆಯ್ಕೆ ಮಾಡಲಾಗುವ ಅಭ್ಯರ್ಥಿಗಳಿಗೆ ತರಬೇತಿ ನಂತರ ಸ್ವಯಂ ಉದ್ಯೋಗ ಸ್ಥಾಪಿಸಲು ಅಗತ್ಯವಿರುವ ಸಾಲ ಸೌಲಭ್ಯವನ್ನು ನೀಡುವ ಬಗ್ಗೆ ಖಾತರಿಸಿಕೊಂಡು ಅರ್ಹ ಅಭರ್ಥಿಗಳನ್ನು ಆಯ್ಕೆ ಮಾಡತಕ್ಕದ್ದು.  ಸಂಬಂಧಪಟ್ಟ ಜಂಟಿ ನಿರ್ದೇಶಕರು ಮತ್ತು ತರಬೇತಿ ಸಂಸ್ಥೆಯವರು ತರಬೇತಿ ಅವಧಿಯಲ್ಲೇ ಅಭ್ಯರ್ಥಿಗಳ ಸಾಲಕ್ಕಾಗಿ ಅರ್ಜಿಯನ್ನು ಬ್ಯಾಂಕಿಗೆ ಶಿಫಾರಸ್ಸು ಮಾಡಿ ತರಬೇತಿ ಮುಗಿಯುವ ಹಂತಕ್ಕೆ ಸಾಲ ಮಂಜೂರಾತಿ ಪಡೆಯಲು ಸಹಾಯ ಒದಗಿಸುವುದು.

 

ತರಬೇತಿ ಸಂಸ್ಥೆಗೆ ಸ್ವಯಂ ಉದ್ಯೋಗ ಕಲ್ಪಿಸುವ ವೃತ್ತಿಗಳಲ್ಲಿ 3 ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ತರಬೇತಿ ವೆಚ್ಚವನ್ನು ಈ ಕೆಳಕಂಡಂತೆ ನೀಡಲಾಗುವುದು.  ತರಬೇತಿ ಸಂಸ್ಥೆಯವರು ಅಭ್ಯರ್ಥಿಗಳಿಗೆ ಶಿಷ್ಯ ವೇತನವನ್ನು ಅವರವರ ಬ್ಯಾಂಕ್ ಖಾತೆ ಮೂಲಕ ಪಾವತಿಸತಕ್ಕದ್ದು.

[1] ಶಿಷ್ಯ ವೇತನ – ವಸತಿ, ಊಟ ಮತ್ತು ಸಾರಿಕೆ ವೆಚ್ಚಕ್ಕಾಗಿ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಈ ಕೆಳಕಂಡಂತೆ ನೀಡಲಾಗುವುದು.

[ಅ] SSLC fail ಮತ್ತು ಕಡಿಮೆ ವಿದ್ಯಾರ್ಹತೆ ಹೊಂದಿದವರಿಗೆ  ರೂ.1,500-00

[ಆ] SSLC Pass ಮತ್ತು ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಿಗೆ ರೂ. 2,000-00

 

[2] ತರಬೇತಿ ಸಂಸ್ಥೆಗೆ ತರಬೇತಿ ವೆಚ್ಚಗಳು – ತರಬೇತಿ ಸಂಸ್ಥೆಗೆ ತರಬೇತಿ ಅವಶ್ಯವಿರುವ ಕಚ್ಚಾವಸ್ತು, ಭೋಧಕರ ಗೌರವಧನ ಹಾಗೂ ಇತರೆ ಸಾದಿಲ್ವಾರು ವೆಚ್ಚಗಳು – MES ತರಬೇತಿಯಲ್ಲಿ 2014-15ನೇ ಸಾಲಿಗೆ ನಿಗಧಿಪಡಿಸಿರುವಂತೆ ವೃತ್ತಿವಾರು ತರಬೇತಿ ಅವಧಿಗೆ ಪ್ರತಿ ಗಂಟೆಗೆ ಪ್ರತಿ ಅಭ್ಯರ್ಥಿಗೆ ರೂ. 30/- ರಂತೆ ತರಬೇತಿ ನೀಡುವ ಸಂಸ್ಥೆಗೆ ನೀಡಲಾಗುವುದು.

 

ಈ ಯೋಜನೆಯ ಸಂಘ/ಸಂಸ್ಥೆಗಳು ಸ್ಥಾಪಿಸುವ ತರಬೇತಿ ಕೇಂದ್ರಗಳಿಗೆ ಮಾತ್ರ ಅನ್ವಯಿಸುವುದು.

 

 

 

ಡಿ) ತರಬೇತಿ ವೆಚ್ಚ ಬಿಡುಗಡೆ ಮಾಡುವ ವಿಧಾನ

 

(ಅ) ತರಬೇತಿ ಸಂಸ್ಥೆಯು ತಮ್ಮ ಸ್ವಂತ ಮೂಲಗಳಿಂದ ಮಾಹೆಯ ತರಬೇತಿ ವೆಚ್ಚ ಭರಿಸಿದಲ್ಲಿ ಸದರಿ ತರಬೇತಿ ವೆಚ್ಚದ ವಿವರಗಳನ್ನು ಸಂಬಂಧಪಟ್ಟ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರರವರಿಂದ ದೃಢೀಕರಿಸಿ ಸಲ್ಲಿಸಿದಲ್ಲಿ ತರಬೇತಿ ವೆಚ್ಚವನ್ನು ಮರುಪಾವತಿ ಮಾಡಲಾಗುವುದು.  ಈ ರೀತಿ ಶೇ. 80ರಷ್ಟು ತರಬೇತಿ ವೆಚ್ಚ ಬಿಡುಗಡೆ ಮಾಡಲಾಗುವುದು.  (ಬ್ಯಾಂಕ್ ಗ್ಯಾರಂಟಿ ಅವಶ್ಯಕತೆ ಇರುವುದಿಲ್ಲ) ಉಳಿದ ಶೇ. 20 ರಷ್ಟು ತರಬೇತಿ ವೆಚ್ಚದಲ್ಲಿ ಶೇ. 50ರಷ್ಟು ತರಬೇತಿ ವೆಚ್ಚವನ್ನು ತರಬೇತಿ ಪಡೆದ ಅಭ್ಯರ್ಥಿಗಳ ಪೈಕಿ ಅರ್ಧದಷ್ಟು ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿದ ನಂತರ ಬಿಡುಗಡೆ ಮಾಡಲಾಗುವುದು.  ಬಾಕಿ ಶೇ 10ರಷ್ಟು ತರಬೇತಿ ವೆಚ್ಚವನ್ನು ತರಬೇತಿ ಪಡೆದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 60ರಷ್ಟು ತರಬೇತಿ ವೆಚ್ಚವನ್ನು ತರಬೇತಿ ಪಡೆದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿದ ನಂತರ ಬಿಡುಗಡೆ ಮಾಡಲಾಗುವುದು.

 

(ಆ) ಸಂಸ್ಥೆಯು ಹಮ್ಮಿಕೊಳ್ಳುವ ತರಬೇತಿ ಕಾರ್ಯದ ವೆಚ್ಚದಲ್ಲಿ ಶೇ. 40ರಷ್ಟು ಅನುದಾನವನ್ನು ಮುಂಗಡವಾಗಿ ಬ್ಯಾಂಕ್ ಖಾತ್ರಿ ಪಡೆದು ಸಂಬಂಧಿಸಿದ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರರವರಿಂದ ಪ್ರಸ್ತಾವನೆ ಸಲ್ಲಿಸಿದಲ್ಲಿ ಬಿಡುಗಡೆ ಮಾಡಲಾಗುವುದು.  ತರಬೇತಿ ಕಾರ್ಯಕ್ರಮ ಪ್ರಾರಂಭಿಸಿದ ಒಂದು ತಿಂಗಳ ನಂತರ ತರಬೇತಿ ವೆಚ್ಚದ 2ನೇ ಕಂತಾಗಿ ಶೇ. 40ರಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗುವುದು.  ಉಳಿದ ಶೇ. 20ರಷ್ಟು ತರಬೇತಿ ವೆಚ್ಚದಲ್ಲಿ ಶೇ. 50ರಷ್ಟು ತರಬೇತಿ ವೆಚ್ಚವನ್ನು ತರಬೇತಿ ಪಡೆದ ಅಭ್ಯರ್ಥಿಗಳ ಪೈಕಿ ಅರ್ಧದಷ್ಟು ಅಭ್ಯರ್ಥಿಗಳಿವೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಿದ ನಂತರ ಬಿಡುಗಡೆ ಮಾಡಲಾಗುವುದು.

 

 VIII.                ತರಬೇತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಿತಿ

 

ಎ) ಸಂಬಂಧಪಟ್ಟ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ                              ಅಧ್ಯಕ್ಷರು

ಬಿ) ಅಧ್ಯಕ್ಷರು, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ                                                   ಸದಸ್ಯರು

ಸಿ) ಜಿಲ್ಲಾ ಉದ್ಯೋಗ ಮತ್ತು ತರಬೇತಿ ಕೇಂದ್ರಗಳು                                             ಸದಸ್ಯರು

ಡಿ) ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು                                                         ಸದಸ್ಯರು

ಇ) ವ್ಯವಸ್ಥಾಪಕರು, ಲೀಡ್ ಬ್ಯಾಂಕ್                                                            ಸದಸ್ಯರು

ಎಫ್) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು                             ಸದಸ್ಯರು

ಜೆ) ಸಂಬಂಧಪಟ್ಟ ಎಸ್.ಕೆ.ಕೆ.ವೈ. ತರಬೇತಿ ಸಂಸ್ಥೆಯ ಒಬ್ಬ ಪ್ರತಿನಿಧಿಗಳು                    ಸದಸ್ಯರು

ಹೆಚ್) ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು                                            ಸದಸ್ಯರು

ಐ) ಜಿಲ್ಲಾ ಅಧಿಕಾರಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ                       ಸದಸ್ಯರು

ಜೆ) ನಿರ್ದೇಶಕರು, ರೂಡ್ ಸೆಟಿ                                                                  ಸದಸ್ಯರು

ಕೆ) ಉಪ ನಿರ್ದೇಶಕರು (ಖಾಗ್ರಾ) ಕೈಗಾರಿಕಾ ವಿಭಾಗ, ಜಿ.ಪಂ.                                 ಸದಸ್ಯರು

ಎಲ್) ಉಪ ನಿರ್ದೇಶಕರು/ಸಹಾಯಕ ನಿರ್ದೇಶಕರು, ಜಿ.ಕೈ.ಕೇ.                      ಸದಸ್ಯ ಕಾರ್ಯದರ್ಶಿಗಳು

 

ಆಹ್ವಾನಿತರು: ಎಲ್) ಸ್ವಯಂ ಉದ್ಯೋಗಕ್ಕಾಗಿ ನೀಡುವ ತರಬೇತಿ ಚಟುವಟಿಕೆ ಆಯಾ ತಾಲ್ಲೂಕಿನ BLBC Convener ರವರನ್ನು ಸಮಿತಿಯ ಸಭೆಗೆ ಆಹ್ವಾನಿಸುವುದು.

 

ಸದರಿಯ ಸಮಿತಿಯು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲು ಸೂಚಿಸುವುದು.

 

ಮೂರು ತಿಂಗಳ ತರಬೇತಿ ಮುಗಿದ ಕೂಡಲೇ, ಜಿಲ್ಲೆಯಲ್ಲಿರುವ ಕೈಗಾರಿಕೆಗಳಿಂದ ಉದ್ಯೋಗದ ಮಾಹಿತಿ ಪಡೆದು ಮತ್ತೊಮ್ಮೆ ಸದರಿ ಸಮಿತಿಯು ಸಭೆ ಸೇರಿ, ಸಭೆಯಲ್ಲಿ ಸಂಬಂಧಪಟ್ಟ ಕೈಗಾರಿಕಾ ಘಟಕಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಉದ್ಯೋಗ ಕಲ್ಪಿಸುವುದು.  ಇನ್ನೂ ಹೆಚ್ಚಿನ ತರಬೇತಿ ಅವಶ್ಯಕತೆ ಇದ್ದಲ್ಲಿ ಕೂಡಲೇ ಕೈಗಾರಿಕೆಯಲ್ಲಿ ಉಳಿದ 03 ತಿಂಗಳ ಅವಧಿಗೆ on the job training ನೀಡುವಂತೆ ಸೂಕ್ತ ಕ್ರಮ ವಹಿಸುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಸದರಿ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವುದು.

 

ಷರತ್ತು ಮತ್ತು ನಿಬಂಧನೆಗಳು:

 

1)      ತರಬೇತಿ ಸಂಸ್ಥೆಯು ಕನಿಷ್ಟ 10 ವರ್ಷಗಳವರೆಗೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನಡೆಸತಕ್ಕದ್ದು.  ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮೊದಲನೆ 5 ವರ್ಷ ಅವಧಿಯವರೆಗೂ ತರಬೇತಿ ವೆಚ್ಚವನ್ನು ಇಲಾಖೆವತಿಯಿಂದ ನೀಡಲಾಗುವುದು.  ಇನ್ನುಳಿದ 5 ವರ್ಷ ತರಬೇತಿ ಅವಧಿಗೆ ಸಂಸ್ಥೆಯು ಕೇಂದ್ರ ಸರ್ಕಾರದ/ರಾಜ್ಯ ಸರ್ಕಾರದ ವಿವಿಧ ಇಲಾಖೆ/ಸಂಸ್ಥೆ ವತಿಯಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತಕ್ಕದ್ದು.  ಸಂಸ್ಥೆಯು ತರಬೇತಿ ಕಾರ್ಯಕ್ರಮವನ್ನು 10 ವರ್ಷಗಳ ಅವಧಿಗೆ ಮುನ್ನವೇ ಸ್ಥಗಿತಗೊಳಿಸಿದಲ್ಲಿ ಇಲಾಖೆವತಿಯಿಂದ ನೀಡಲಾದ ಎಲ್ಲಾ ಸವಲತ್ತು ಮತ್ತು ತರಬೇತಿ ವೆಚ್ಚಗಳನ್ನು ಹಿಂಪಡೆಯಲಾಗುವುದು.

2)     ಯಂತ್ರೋಪಕರಣಗಳ/ಉಪಕರಣಗಳನ್ನು ಖರೀದಿಸುವಾಗ ಕಡ್ಡಾಯವಾಗಿ ಕೆ.ಟಿ.ಪಿ.ಪಿ. ಕಾಯ್ದೆಯನ್ನು ಪಾಲಿಸುವುದು.

3)     ಸದರಿ ಯೋಜನೆಯಡಿ ಈಗಾಗಲೇ ಹಿಂದಿನ ಮಾರ್ಗಸೂಚಿಯಂತೆ ಸ್ಥಾಪಿಸಿರುವ ತರಬೇತಿ ಕೇಂದ್ರವು ಇಲಾಖೆಯಿಂದ Revolving Fund ನ ಒಂದು ಅಥವಾ ಹೆಚ್ಚು ಕಂತಿನ ಅನುದಾನ ಪಡೆದಿದ್ದಲ್ಲಿ ಉಳಿದ Revolving Fund ಕಂತಿನ ಅನುದಾನವು ಹಳೆ ಮಾರ್ಗಸೂಚಿಯಂತೆ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ತರಬೇತಿ ಕೇಂದ್ರವು ಹೊಸ ಮಾರ್ಗಸೂಚಿ ಜಾರಿಯಾದ ನಂತರ ಸ್ಥಾಪನೆಯಾಗಿದ್ದಲ್ಲಿ ಹಾಗೂ ಈ ಹಿಂದೆ ಮಂಜೂರಾಗಿರುವ ತರಬೇತಿ ಕೇಂದ್ರಗಳ ಹೊಸ ಮಾರ್ಗಸೂಚಿ ಜಾರಿ ನಂತರ ತರಬೇತಿ ಹಮ್ಮಿಕೊಂಡಿದ್ದಲ್ಲಿ ಪರಿಷ್ಕೃತ ಮಾರ್ಗಸೂಚಿಯಂತೆ ತರಬೇತಿ ವೆಚ್ಚವನ್ನು ನೀಡಲಾಗುವುದು.

4)    ಸದರಿ ಯೋಜನೆಯಡಿ ಹಳೆಯ ಯಂತ್ರೋಪಕರಣಗಳ/ಉಪಕರಣಗಳನ್ನು ಖರೀದಿಸುವಂತಿಲ್ಲ.

5)     ಸಂಸ್ಥೆಯವರು ಯಂತ್ರೋಪಕರಣಗಳ/ಉಪಕರಣಗಳ ಖರೀದಿಗಾಗಿ ಅವರ ಪಾಲಿನ ಬಂಡವಾಳ ವೆಚ್ಚವನ್ನು ಸ್ವಂತವಾಗಿ ಹೂಡಿದ್ದಲ್ಲಿ ಇಲಾಖೆಗೆ 10 ವರ್ಷಗಳವರೆಗೂ ಸದರಿ ಯಂತ್ರೋಪಕರಣಗಳನ್ನು hypothicate ಮಾಡತಕ್ಕದ್ದು ಅಥವಾ ಸಂಸ್ಥೆಯವರ ಪಾಲಿನ ಬಂಡವಾಳ ಹೂಡಿಕೆಗೆ ಬ್ಯಾಂಕಿನಿಂದ / ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದಲ್ಲಿ ಯಂತ್ರೋಪಕರಣಗಳ ಮೇಲೆ ಇಲಾಖೆಗೆ 2ನೇ ಹೊಣೆಗಾರಿಕೆ (ಚಾರ್ಜ್) ನೀಡತಕ್ಕದ್ದು.

6)     ಸಂಘ/ಸಂಸ್ಥೆಯ ತರಬೇತಿ ಕೇಂದ್ರ/ಸಾಮಾನ್ಯ ಸೌಲಭ್ಯ ಕೇಂದ್ರದ ಕಟ್ಟಡದ ಮೇಲೆ ಸಂಘದ ಹೆಸರು ಹಾಗೂ ಯಾವ ಯೋಜನೆಯಡಿ ಸ್ಥಾಪನೆಯಾಗಿದೆಯೆಂದು ನಾಮಪಲಕದಲ್ಲಿ ಸೂಚಿಸತಕ್ಕದ್ದು.

7)     ಯಾವುದೇ ಕಾರಣಕ್ಕೂ ಕಟ್ಟಡ ಮತ್ತು ಯಂತ್ರೋಪಕರಣ/ಉಪಕರಣಗಳನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಹೊರತುಪಡಿಸಿ ಇತರೆಯವರಿಗೆ ಪರಭಾರೆ ಮಾಡಬಾರದು.

8)     ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆಯಾದ ನಂತರ ಕನಿಷ್ಟ 10 ವರ್ಷಗಳು ಸತತವಾಗಿ ಗುಣಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತಕ್ಕದ್ದು ಹಾಗೂ ಈ ಸಂಬಂಧ MOU ಮಾಡತಕ್ಕದ್ದು.

9)     ಸರ್ಕಾರದ ವಿವಿಧ ಯೋಜನೆಗಳನ್ನು ನೀಡಲಾಗುವ ತರಬೇತಿ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳತಕ್ಕದ್ದು.

10)   ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಸಂಬಂಧಪಟ್ಟ ಜಂಟಿ ನಿರ್ದೇಶಕರು ಸರ್ಕಾರೇತರ ತರಬೇತಿ ಸಂಸ್ಥೆಗಳು/ಕೈಗಾರಿಕಾ ಸಂಘ-ಸಂಸ್ಥೆಗಳು/ಖಾಸಗಿ ಕ್ಷೇತ್ರದ ದೊಡ್ಡ ಪ್ರಮಾಣದ ಕೈಗಾರಿಕೆಗಳು ಹಾಗೂ ಕೈಗಾರಿಕೆಗಳ ಜೊತೆ Triparty Agreement ಮಾಡಿಕೊಳ್ಳತಕ್ಕದ್ದು.

11)    ತರಬೇತಿ ಕಾರ್ಯಕ್ರಮಗಳು/ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ ಮಾಹಿತಿಯನ್ನು ತರಬೇತಿ ಕೇಂದ್ರಗಳಲ್ಲಿ ಲಭ್ಯವಿರಬೇಕು ಹಾಗೂ ಇಲಾಖೆಯ ಅಧಿಕಾರಿಗಳಿಗೆ ಪರಿವೀಕ್ಷಣೆ ನಡೆಸಿದ ವೇಳೆಯಲ್ಲಿ ಮಾಹಿತಿ/ವಿವರಗಳನ್ನು ನೀಡುವುದು.

12)   ತರಬೇತಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಜಂಟಿ ನಿರ್ದೇಶಕರು, ಜಿ.ಕೈ.ಕೇ.ರವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಿ ತರಬೇತಿ ಕಾರ್ಯಕ್ರಮವನ್ನು ಪೂರೈಸುವುದು.

13)   ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಬಂಧಪಟ್ಟ ಜಂಟಿ ನಿರ್ದೇಶಕರು, ಜಿ.ಕೈ.ಕೇ. ಇವರ ಮುಖಾಂತರ ತ್ರೈಮಾಸಿಕ ಪ್ರಗತಿ ವರದಿಯನ್ನು ಇಲಾಖೆಗೆ ಸಲ್ಲಿಸತಕ್ಕದ್ದು.

14)   ಕಡ್ಡಾಯವಾಗಿ ಸರಬರಾಜುದಾರರಿಂದ ಸಂಸ್ಥೆರವರು ಸದರಿ ಯಂತ್ರೋಪಕರಣ/ಉಪಕರಣಗಳಿಗೆ ಖರೀದಿ ಸಮಯದಲ್ಲಿ Performance warranty ಪಡೆದಯತಕ್ಕದ್ದು.

15)   ತರಬೇತಿ ಸಂಸ್ಥೆಯು ತರಬೇತಿ ಕೇಂದ್ರದಲ್ಲಿ ಕಡ್ಡಾಯವಾಗಿ Survelence CCTV ವ್ಯವಸ್ಥೆ ಅಳವಡಿಸತಕ್ಕದ್ದು ಮತ್ತು ಅಭ್ಯರ್ಥಿಗಳ ಹಾಜಾರಾತಿಯನ್ನು Bio-metric enabled GPRS ಮೂಲಕ ನಿರ್ವಹಿಸತಕ್ಕದ್ದು.

16)   ಸದರಿ ಯೋಜನೆಯಡಿಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ತರಬೇತಿ ಸಂಸ್ಥೆಗಳು ಹಾಗೂ ಮುಂದೆ ಸ್ಥಾಪಿಸಲಾಗುವ ತರಬೇತಿ ಸಂಸ್ಥೆಗಳು NCVT ವತಿಯಿಂದ VTP ಆಗಿ ಕಡ್ಡಾಯವಾಗಿ ನೊಂದಾಯಿಸುವುದು ಹಾಗೂ NSDC ಸಂಸ್ಥೆಯ ಪಾಲುದಾರರಾಗಿ ನೊಂದಾಯಿಸತಕ್ಕದ್ದು.  ಈ ಸಂಸ್ಥೆಗಳು NSDC/NCVT ಸರ್ಕಾರದಿಂದ ಬದಲಾಗುವು ನೀತಿ ನಿಯಮಗಳನ್ನು ಪಾಲಿಸತಕ್ಕದ್ದು.

17)    ಈಗಾಗಲೇ ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಇಲಾಖೆಯಿಂದ ಅನುದಾನ ಪಡೆದು ಸ್ಥಾಪಿಸಿರುವ ತರಬೇತಿ ಸಂಸ್ಥೆಗಳು ಸಹ ಹಿಂದೆ ವಿಧಿಸಿರುವ ಷರತ್ತುಗಳೊಂದಿಗೆ ಮೇಲೆ ತಿಳಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

18)   ಈ ಮಾರ್ಗಸೂಚಿಯ ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ ಹಾಗೂ ಮುಂದಿನ ಆದೇಶದ ವರೆಗೆ ಜಾರಿಯಲ್ಲಿರುತ್ತದೆ.

 

(ಕೆ.ಆರ್. ಚಂದ್ರಮ್ಮ)

ಪೀಠಾಧಿಕಾರಿ (ಸಪ್ರಕೈ)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.