ಸ್ಕೀಮ್ ಸರ್ಕಾರಿ ಆದೇಶ ಸಂಖ್ಯೆ ವಾಕೈ 77 ಜಕೈಯೋ 2015 ದಿನಾಂಕ 02.02.2016

  • GOK
    • vanijyasachivalaya
      • ಸ್ಕೀಮ್ ಸರ್ಕಾರಿ ಆದೇಶ ಸಂಖ್ಯೆ ವಾಕೈ 77 ಜಕೈಯೋ 2015 ದಿನಾಂಕ 02.02.2016
Last modified at 21/04/2016 20:04 by Vanijyasachivalaya

​​​

​​​

ಕರ್ನಾಟಕ ಸರ್ಕಾರದ ನಡವಳಿಗಳು

 

ವಿಷಯ:​ ರಾಜ್ಯದ 9 ಸಹಕಾರಿ ನೂಲಿನ ಗಿರಣಿಗಳಿಗೆ ನೀಡಲಾದ ಸರ್ಕಾರಿ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವ ಹಾಗೂ ಅದರ ಮೇಲಿನ ಬಡ್ಡಿ ಮತ್ತು ಸುಸ್ಥಿಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಆದೇಶ.

ಓದಲಾಗಿದೆ: ರಾಜ್ಯದ 9 ಸಹಕಾರಿ ನೂಲಿನ ಗಿರಣಿಗಳಿಗೆ ನೀಡಲಾದ ಸರ್ಕಾರಿ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವ ಹಾಗೂ ಅದರ ಮೇಲಿನ ಬಡ್ಡಿ ಮತ್ತು ಸುಸ್ಥಿಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಆದೇಶ.​​

ಪ್ರಸ್ತಾವನೆ:

 ಓದಲಾದ (1) ರಲ್ಲಿ 2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಕಂಡಿಕೆ-426 ರಲ್ಲಿ ಈ ಕೆಳಕಂಡಂತೆ ಘೋಷಿಸಿದ್ದಾರೆ.

​"ರಾಜ್ಯದಲ್ಲಿರುವ 9 ಸಹಕಾರಿ ನೂಲಿನ ಗಿರಣಿಗಳ ಸರ್ಕಾರದ ಸಾಲ ರೂ.76.71 ಕೋಟಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸುವುದು ಹಾಗೂ ಈ ಸಾಲದ ಮೇಲಿನ ಬಡ್ಡಿ ರೂ.113.55 ಕೋಟಿಗಳನ್ನು ಮನ್ನಾ ಮಾಡಿ ಸಹಕಾರಿ ನೂಲಿನ ಗಿರಣಿಗಳ ಪುನ:ಶ್ವೇತನ ಮತ್ತು ಬಲವರ್ಧನಗೊಳಿಸಲಾಗುವುದು."

         ಓದಲಾದ (2)ರ ಜವಳಿ ಅಭಿವ್ರದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಇವರು ತಮ್ಮ ಪತ್ರ ದಿನಾಂಕ: 10.08.2015 ರಲ್ಲಿ ರಾಜ್ಯದಲ್ಲಿ 9 ಸಹಕಾರಿ ನೂಲಿನ ಗಿರಣಿಗಳಿದ್ದು, 6 ಸಹಕಾರಿ ನೂಲಿನ ಗಿರಣಿಗಳಿಗೆ ಸರ್ಕಾರವು ನೇರವಾಗಿ ಸಾಲವನ್ನು ನೀಡಿದ್ದು, ಉಳಿದ 3 ಗಿರಣಿಗಳಿಗೆ NCDC ಸಂಸ್ಥೆಯು ನೇರವಾಗಿ ಅಪೆಕ್ಸ್ ಬ್ಯಾಂಕ್ ಮೂಲಕ ಸಾಲ ನೀಡಿರುತ್ತದೆ ಎಂದು ತಿಳಿಸಿದ್ದಾರೆ.  ವಿವರ ಈ ಕೆಳಕಂಡಂತಿರುತ್ತದೆ.

​ಸರ್ಕಾರ ನೇರವಾಗಿ ಸಾಲ ನೀಡಿದ ಗಿರಣಿಗಳ ವಿವರ:

1.    ತುಂಗಭದ್ರಾ ಫಾರ್ಮರ್ಸ್ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ರಾಣಿಬೆನ್ನೂರು, ಹಾವೇರಿ ಜಿಲ್ಲೆ.
2.    ಬೆಳಗಾವಿ ಕೋ-ಆಪರೇಟಿಡವ್ ಸ್ಪಿನ್ನಿಂಗ್ ಮಿಲ್, ಪಂತಬಾಳೆಕುಂದ್ರ, ಬೆಳಗಾವಿ.
3.    ಗದಗ ಕೋ- ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಹುಲಕೋಟಿ, ಗದಗ ಜಿಲ್ಲೆ
4.   ಶ್ರೀ ಸೋಮೇಶ್ವರ ಫಾರ್ಮರ್ಸ್ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಲಕ್ಷ್ಮೇಶ್ವರ ಗದಗ ಜಿಲ್ಲೆ.
5.    ಫಾರ್ಮರ್ಸ್ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಹುಲಕೋಟಿ ತಾಲ್ಲೂಕು, ಗದಗ ಜಿಲ್ಲೆ.
6.    ಬನಹಟ್ಟಿ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಬನಹಟ್ಟಿ, ಬಾಗಲಕೋಟೆ.

​​ಎನ್.ಸಿ.ಡಿ.ಸಿ. ಸಂಸ್ಥೆಯು ಅಪೆಕ್ಸ್ ಬ್ಯಾಂಕ್ ಮೂಲಕ ಸಾಲ ನೀಡಿದ ಗಿರಣಿಗಳ ವಿವರ:

1.    ರೈತರ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಹನುಮನಹಟ್ಟಿ ರಾಣಿಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ.
2.    ಮಲಪ್ರಭ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಸವದತ್ತಿ ತಾಲ್ಲುಕು, ಬೆಳಗಾವಿ ಜಿಲ್ಲೆ.
​3.    ಶ್ರೀವೆಂಕಟೇಶ ಕೋ-ಆಪರೇಟಿವ್ ಸ್ಪಿನ್ನಿಂಗ್ ಮಿಲ್, ಅಣ್ಣಿಗೇರಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ.

           ಸರ್ಕಾರಿ ಆದೇಶ ಸಂಖ್ಯೆ: ಸಿಎಂಡಬ್ಲ್ಯೂ 142 ಪಿಎಂಸಿ. 96, ದಿನಾಂಕ: 05.12.1997 ಮತ್ತು ತಿದ್ದುಪಡಿ ಆದೇಶ ದಿನಾಂಕ: 30.07.1998 ರಂತೆ ಸದರಿ 3 ಗಿರಣಿಗಳು ಎನ್.ಸಿ.ಡಿ.ಸಿ. ಯಿಂದ ಪಡೆದ ರೂ.55.72 ಕೋಟಿ ಸಾಲದಲ್ಲಿ ರಾಜ್ಯ ಸರ್ಕಾರವು ಎನ್.ಸಿ.ಡಿ.ಸಿ.ಗೆ ರೂ.51.07 ಕೋಟಿಗಳನ್ನು ಮಾತ್ರ ಪಾವತಿಸಿರುತ್ತದೆ.  ಈ ಮೊತ್ತವನ್ನು ರಾಜ್ಯ ಸರ್ಕಾರವು ಸದರಿ 3 ಗಿರಣಿಗಳಿಗೆ ಸಾಲದ ರೂಪದಲ್ಲಿ ನೀಡಲಾಗಿರುತ್ತದೆ.

ಮೂಲತ: ಮೇಲೆ ನಮೂದಿಸಿದ 09 ಗಿರಣಿಗಳು ದುಡಿಯು ಬಂಡವಾಳದ ಕೊರತೆ, ವಿದ್ಯುತ್ ಸಮಸ್ಯೆ, ಹಳೆಯದಾದ ಯಂತ್ರೋಪಕರಣಗಳು ಹಾಗೂ ನುರಿತ ಕಾರ್ಮಿಕರ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಅದರಿಂದ 9 ನೂಲಿನ ಗಿರಣಿಗಳು ನಷ್ಟವನ್ನು ಅನುಭವಿಸುತ್ತಿದ್ದು, ಸದರಿ ಗಿರಣಿಗಳಿಗೆ ಸರ್ಕಾರ ನೀಡಿರುವ ಸಾಲದ ರೂ.9609.02 ಲಕ್ಷಗಳ ಅಸಲನ್ನು ಶೇರು ಬಂಡವಾಳವನ್ನಾಗಿ ಪರಿವರ್ತಿಸುವುದರಿಂದ ಹಾಗೂ ಸಾಲದ ಮೇಲಿನ ಬಡ್ಡಿ ಮತ್ತು ದಂಡ ಬಡ್ಡಿ ರೂ.177.33 ಕೋಟಿಗಳನ್ನು ಮನ್ನಾ ಮಾಡುವುದರಿಮದ ನೂಲಿನ ಗಿರಣಿಗಳನ್ನು ಪುನ:ಶ್ಚೇತನಗೊಳಿಸಬಹುದಾಗಿದೆಯೆಂದು ಜವಳಿ ಅಭಿವ್ರದ್ದಿ ಆಯುಕ್ತರು ಓದಲಾದ (2)ರ ಪತ್ರದಲ್ಲಿ ಶಿಫಾರಸ್ಸು ಮಾಡಿರುತ್ತಾರೆ.

       ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಒಪ್ಪಿಗೆಯನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸಿದಾಗ ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿ ಸಂಖ್ಯೆ: ಆಇ ವೆಚ್ಚ-1 2015 ದಿನಾಂಕ: 01.01.2016 ರಲ್ಲಿ ಬನಹಟ್ಟಿ ಸಹಕಾರಿ ನೂಲಿನ ಗಿರಣಿಗೆ ಸಾಲದ ಹಣದ ಪ್ರಸ್ತಾವನೆಯು ಬಿಡುಗಡೆ ಹಂತದಲ್ಲಿರುವುದರಿಂದ ಬನಹಟ್ಟಿ ಸಹಕಾರಿ ನೂಲಿನ ಗಿರಣಿಯನ್ನು ಹೊರತುಪಡಿಸಿ, ಅನುಮೋದನೆಯನ್ನು ನೀಡಲಾಗಿದೆ.

          ಆದರೆ ಬನಹಟ್ಟಿ ಸಹಕಾರಿ ನೂಲಿನ ಗಿರಣಿಯ ಸರ್ಕಾರದ ಸಾಲದ ಹಣವಾದ ರೂ.11.70 ಕೋಟಿ ಅವಧಿ ಸಾಲದ ಪೈಕಿ ಅಂತಿಮ ಕಂತಾದ ರೂ.292.50 ಲಕ್ಷಗಳನ್ನು ಲೆಕ್ಕ ಶೀರ್ಷಿಕೆ 6860-01-101-0-7-394 ( ಯೋಜನೆ) ಅಡಿಯಲ್ಲಿ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 338 ವೆಚ್ಚ-2/2015, ದಿನಾಂಕ: 15.12.2015 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಆದೇಶ ಸಂಖ್ಯೆ: ವಾಕೈ  13 ಸಿಐಎಂ. 2012, ದಿನಾಂಕ: 21.12.2015 ರಂದು ಬಿಡುಗಡೆ ಮಾಡಲಾಗಿದೆ.

        5 ಗಿರಣಿಗಳನ್ನೊಳಗೊಮಡ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗಾಗಿ ಮಂಡಿಸಲಾಗಿದ್ದು, ದಿನಾಂಕ: 25.01.2016 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಬನಹಟ್ಟಿ ಸಹಕಾರಿ ನೂಲಿನ ಗಿರಣಿಯೂ ಸೇರಿದಂತೆ ಒಟ್ಟು 09 ಸಹಕಾರಿ ನೂಲಿನ ಗಿರಣಿಗಳ ಸರ್ಕಾರದ ಸಾಲದ ಹಣ ರೂ.9900.57 ಲಕ್ಷಗಳನ್ನು ಈಕ್ವಿಟಿಯಾಗಿ ಪರಿವರ್ತಿಸಲು ಹಾಗೂ ರೂ.172.92 ಲಕ್ಷಗಳ ಬಡ್ಡಿ ಮತ್ತು ಸುಸ್ಥಿ ಬಡ್ಡಿಯನ್ನು ಮನ್ನಾ ಮಾಡಲು ಒಪ್ಪಿಗೆಯನ್ನು ನೀಡಿರುತ್ತದೆ.

        ಮೇಲಿನ  ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶಿಸಿದೆ.

​ಸರ್ಕಾರಿ ಆದೇಶ ಸಂಖ್ಯೆ: ವಾಕೈ 77 ಜಕೈಯೋ 2015, ಬೆಂಗಳೂರು, ದಿನಾಂಕ: 02.02.2016

      ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, 2015-16ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 426 ರಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಘೋಷಿಸಿದಂತೆ ಕೆಳಗೆ ನಮೂದಿಸಿದ ಮೂರು ಪ್ರಸ್ತಾವನೆಗಳಿಗೆ ಆದೇಶಗಳಲ್ಲಿ ತಿಳಿಸಿರುವ ಷರತ್ತುಗಳಿಗಿ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.

(1)   ಕೆಳಗಿನ 6 ನೂಲಿನ ಗಿರಣಿಗಳ ಸಾಲ ರೂ.43.29 ಕೋಟಿಗಳನ್ನ ಈಕ್ವಿಟಿಯಾಗಿ ಪರವರ್ತಿಸುವುದು ಹಾಗೂ ರೂ.116.20 ಕೋಟಿಗಳ ಬಡ್ಡಿ ಮತ್ತು ಸುಸ್ಥಿ ಬಡ್ಡಿಯನ್ನು ಮನ್ನಾ ಮಾಡಲು

  

Sl. No.


Spinning Mills​
Conversion of Principal into Equity
Waiver Off​
​ ​
InterestPenaltyTotal
1Thungabhadra Farmers Co-operative Spinning Mills, Ranebennur682.001856.02757.802158.82
2Belgaum Co-operative Spinning Mills, Belgaum592.421483.48674.742158.22
3Gadag Co-operative Spinning Mills, Hulikoti363.00816.45238.231054.68
4SriSomeshwara Farmers Cooperative Spinning Mills, Lakshmeshwara654.051769.17830.292599.46
5Farmers Cooperative Spinning Mills, Hulikoti867.711428.331044.142478.47
6Banahatti Cooperative Spinning Mills, Basavanagar, Banahatti 1169.82627.7787.15714.92
 Total.4329.007981.223632.3511619.58

 

(2)  ಕೆಳಗೆ ನಮೂದಿಸಿದ 3 ನೂಲಿನ ಗಿರಣಿಗಳ ರೂ.5106.57 ಲಕ್ಷಗಳ ಸಾಲದ ಹಣವನ್ನು ಈಕ್ವಿಟಿಯಾಗಿ ಪರಿವರ್ತಿಸಲು ಹಾಗೂ ಬಡ್ಡಿ ಮತ್ತು ದಂಡ ಬಡ್ಡಿ ಹಣವಾದ ರೂ.5671.73 ಲಕ್ಷಗಳನ್ನು ಮನ್ನಾ ಮಾಡಲು

Sl. No.


Spinning Mills
Conversion of Principal into Equity
Waive​r Off
Interest
Penalty
T​otal
1Raithara Co-operative Spinning Mills, Hanumanahatti2221.982086.36306.942403.30
2Malaprabha Co-operative Spinning Mills, Savadatti.1163.691102.54161.431263.97
3Sri Venkatesh Co-operative Spinning Mills, Annegeri1720.901748.46256.002004.46
 Total.5106.574947.36724.375671.73


(3)  ಮೇಲಿನ ಕ್ರಮ ಸಂಖ್ಯೆ 02 ರಲ್ಲಿ ನಮೂದಿಸಿರುವ 3 ನೂಲಿನ ಗಿಣಿಗಳಿಂದ ಕರ್ನಾಟಕ ಕೊ-ಆಪರೇಟಿವ್ ಅಪೆಕ್ಸ್ ಬ್ಯಾಂಕ್ಗೆ ನೀಡಬೇಕಾಗಿರುವ ಬಾಕಿ ಸಾಲದ ಮೊತ್ತ ರೂ.4.65 ಕೋಟಿಗಳನ್ನು ಕರ್ನಾಟಕ ಕೋ-ಆಪರೇಟಿವ್ ಅಪೆಕ್ಸ್ ಬ್ಯಾಂಕ್, ಬೆಂಗಳೂರು, ಇವರಿಗೆ ಬಿಡುಗಡೆ ಮಾಡಲು ಹಾಗೂ ಸದರಿ ಮೊತ್ತವನ್ನು ಸರ್ಕಾರಿ ಈಕ್ವಿಟಿಯಾಗಿ ಪರಿಗಣಿಸಲು 

ಷರತ್ತು ಮತ್ತು ನಿಬಂಧನೆಗಳು:-

  1. No further financial assistance of any nature shall be given from Government of Karnataka to these Spinning Mills in future.
  2. The Commissioner for Textile Development shall take up the matter with Accountant General to incorporate it suitably in the accounts based on available records.
  3. The Commissioner for Textile Development shall take up the matter with Accountant General & Assets, Liability and Monitoring Department to reconciliation of figures so that the Government Accounts are up to dated.
  4. The Commissioner for Textile Development shall send necessary proposal to formulate an effective oversight mechanism in these mills including nomination of Government Directors to their Boards.  This is to be formalized in the form of MoU with these mills to ensure  that their operations, Capital investment programming/borrowing (if any) are carried out in a viable and sustainable manner.

​ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿ 65 ಎಫ್ಆರ್ಒ 2015, ದಿನಾಂಕ: 19.12.2015 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 195 ವೆಚ್ಚ-1/2015 ದಿನಾಂಕ: 01.01.2016 ಹಾಗೂ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ:26/2016, ದಿನಾಂಕ: 25.01.2016 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

 

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
ಸಹಿ/-
(ಕೆ.ಬೋರಲಿಂಗಯ್ಯ)
ಸರ್ಕಾರದ ಉಪ ಕಾರ್ಯದರ್ಶಿ(ಜವಳಿ),

​ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ​

 
​​​​​​​​​​​​​​​​​​
Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.