2012-13ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ವಸತಿ ಯೋಜನೆಯಲ್ಲಿ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ಹೆಚ್ಚಿಸಿ ಪರಿಷ್ಕರಿಸುವುದು ವಾಕೈ 40 ಜಕೈಯೋ

  • GOK
    • vanijyasachivalaya
      • 2012-13ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ವಸತಿ ಯೋಜನೆಯಲ್ಲಿ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ಹೆಚ್ಚಿಸಿ ಪರಿಷ್ಕರಿಸುವುದು ವಾಕೈ 40 ಜಕೈಯೋ
Last modified at 23/04/2016 19:13 by Vanijyasachivalaya

​​​​

​​

​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: 2012-13ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ವಸತಿ ಯೋಜನೆಯಲ್ಲಿ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ಹೆಚ್ಚಿಸಿ, ಪರಿಷ್ಕರಿಸುವ ಕುರಿತು.

ಓದಲಾಗಿದೆ: ಜವಳಿ ಅಭಿವೃದ್ಧಿ ಆಯುಕ್ತರ ಪತ್ರ ಸಂಖ್ಯೆ: ಕೈಜಇ/ಜವಳಿ/ಟಿಐ-2/ವಕಾ.2012-13 ದಿನಾಂಕ: 07.05.2012.

ಪ್ರಸ್ತಾವನೆ:

         2012-13ನೇಸ ಸಾಲಿನ ಆಯವ್ಯಯದ ಪುಟ ಸಂಖ್ಯೆ : 37 ರ ಕಂಡಿಕೆ (162) ಮತ್ತು (163) ರಲ್ಲಿ ವಸತಿ ಯೋಜನೆಗೆ ಆಯವ್ಯಯವನ್ನು ಘೋಷಿಸಿದ್ದು ಇದರಲ್ಲಿ ರಾಜ್ಯದಲ್ಲಿ ವಸತಿ ಯೋಜನೆಗಳಡಿಯಲ್ಲಿ ನೀಡುವ ಸಹಾಯಧನವನ್ನು ರೂ.50,000/- ಗಳಿಂದ ರೂ.75,000/- ಗಳಿಗೆ ಹಚ್ಚಿಸಲಾಗುವುದೆಂದು ಮನೆಯ ನಿರ್ಮಾಣ ವೆಚ್ಚದ ದರವನ್ನು ರೂ.10,000/- ಗಳಿಗೆ ಏರಿಸಲಾಗುವುದೆಂದು ಆಯವ್ಯಯದಲ್ಲಿ ಘೋಷಿಸಲಾಗಿರುತ್ತದೆ. 

     ಪ್ರಸ್ತುತದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವು ರೂ.65,000/- ಗಳಿದ್ದು, ಇದರಲ್ಲಿ ರೂ.40,000/- ಸರ್ಕಾರದ ಸಹಾಯಧನ, ರೂ.20,000/- ಸರ್ಕಾರದ ಸಾಲ ಮತ್ತು ರೂ.5,000/- ಫಲಾನುಭವಿಯ ವಂತಿಕೆ ಒಳಗೊಂಡಿರುತ್ತದೆ.

     2011-12ನೇ ಸಾಲಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರೂ.1,00,000/- ದಂತೆ ಘಟಕ ವೆಚ್ಚವನ್ನು ನಿಗದಿಪಡಿಸಿ ರೂ.1,00,000/- ಸಹಾಯಧನವನ್ನು ಪ್ರತಿ ಫಲಾನುಭವಿಗೆ ನೀಡುವುದರ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

      ಆದುದರಿಂದ, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವನ್ನು ರೂ.1,00,000/- ಗಳಿಗೆ ನಿಗದಿಪಡಿಸಿ, ಇದರಲ್ಲಿ ರೂ.75,000/- ಸಹಾಯಧನ ಮತ್ತು ರೂ.25,000/- ಸಾಲವನ್ನು ಪ್ರತಿ ಘಟಕಕ್ಕೆ ನೀಡಲು ಹಾಗೂ ಹೆಚ್ಚುವರಿ ಮೊತ್ತವನ್ನು ಫಲಾನುಭವಿಗಳು ಭರಿಸಲು ಆಯವ್ಯಯದಲ್ಲಿ ಹಂಚಿಕೆಯಾಗಿರುವ ಅನುದಾನವನ್ನು ಈ ಉದ್ದೇಶಕ್ಕಾಗಿ ವಿನಿಯೋಗಿಸಲು ಅನುಮೋದಿಸಿ, ಸರ್ಕಾರ ಆದೇಶ ಹೊರಡಿಸುವಂತೆ ಜವಳಿ ಅಭಿವೃದ್ಧಿ ಆಯುಕ್ತರು ದಿನಾಂಕ: 07.05.2012 ರ ಪತ್ರದಲ್ಲಿ ಕೋರಿರುತ್ತಾರೆ.

         2009-10ನೇ ಸಾಲಿನಲ್ಲಿ ನೇಕಾರರ ವಸತಿ ಕಾರ್ಯಾಗಾರ ಯೋಜನೆಯು ಜಾರಿಗೆ ಬಂದಿರುತ್ತದೆ.  ಸರ್ಕಾರಿ ಆದೇಶ ಸಂಖ್ಯೆ: ವಾಕೈ 56 ಜಕೈಯೋ 2011, ದಿನಾಂಕ: 15.05.2011 ರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ುಉಪಯೋಜನೆಯಡಿ ವಸತಿ ಕಾರ್ಯಾಗಾರ ಘಟಕ ವೆಚ್ಚವನ್ನು ರೂ.60,000/-ಗಳಿಂದ ರೂ.1,00,000/-ಕ್ಕೆ ಹೆಚ್ಚಿಸಿ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದೆ.

      ಜವಳಿ ಅಭಿವೃದ್ಧಿ ಆಯುಕ್ತರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ವಾಕೈ 40 ಜಕೈಯೋ 2012, ಬೆಂಗಳೂರು ದಿನಾಂಕ: 07.11.2012

          ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ವಸತಿ ಕಾರ್ಯಾಗಾರ ಉಪಯೋಜನೆಯಡಿ ಯೋಜನೆಯ ಘಟಕ ವೆಚ್ಚವನ್ನು ರೂ.65,000/- ಗಳಿಂದ ರೂ.1.00 ಲಕ್ಷಕ್ಕೆ ಹೆಚ್ಚಿಸಿ, ಈ ಕೆಳಕಂಡಂತೆ ನಿಗದಿಪಡಿಸಿ, ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.
ಸರ್ಕಾರದ ಸಹಾಯಧನ   -  ರೂ.75,000/-
ಸರ್ಕಾರದ ಸಾಲ           -   ರೂ.20,000/-
ಫಲಾನುಭವಿಗಳ ವಂತಿಕೆ   -   ರೂ. 5,000/-

          ಈ ಯೋಜನೆಯಡಿಯಲ್ಲಿ ಫಲಾನುಭವಿಯ ವಂತಿಕೆ ಕಡ್ಡಾಯವಾಗಿರತಕ್ಕದ್ದು.

           ಈ ಯೋಜನೆಯಡಿಯಲ್ಲಿ ಸಾಲ ಮಂಜೂರಾದ ನಂತರ ಸಹಾಯಧನವನ್ನು ಬಿಡಗುಡೆ ಮಾಡತಕ್ಕದ್ದು.

           ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಈ ಯೋಜನೆಗೆ ಲಭ್ಯವಿರುವ ಹಣಕಾಸಿನ ಅವಕಾಶದಲ್ಲಿ ಖರ್ಚನ್ನು ಭರಿಸಲು ಸಾಧ್ಯವಾಗುವ ಪ್ರಮಾಣದಲ್ಲಿ ಫಲಾನುಭವಿಗಳ ಆಯ್ಕೆ ಪಟ್ಟಿಯು ಇದೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

            ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್ ಡಿ 962 ವೆಚ್ಚ-1/2012 ದಿನಾಂಕ: 16.10.2012 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಸಹಿ/-
(ದೇವೋಜಿ ರಾವ್)
ಪೀಠಾಧಿಕಾರಿ(ಜವಳಿ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ


Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.