2013-14 ನೇ ಸಾಲಿನಲ್ಲಿ ಕ.ರಾ. ಖಾ. ಮತ್ತು ಗ್ರಾ. ಮಂ. 3 ಯೋಜನೆ- ಕಾರ್ಯಕರ್ತರಿಗೆ ಪ್ರೊತ್ಸಾಹ ಮಜೂರಿ ಸಂಸ್ಥೆಗಳ ಪುನಸ್ಛೇತನ ದುಡಿಯುವ ಬಂಡವಾಳ

  • GOK
    • vanijyasachivalaya
      • 2013-14 ನೇ ಸಾಲಿನಲ್ಲಿ ಕ.ರಾ. ಖಾ. ಮತ್ತು ಗ್ರಾ. ಮಂ. 3 ಯೋಜನೆ- ಕಾರ್ಯಕರ್ತರಿಗೆ ಪ್ರೊತ್ಸಾಹ ಮಜೂರಿ ಸಂಸ್ಥೆಗಳ ಪುನಸ್ಛೇತನ ದುಡಿಯುವ ಬಂಡವಾಳ
Last modified at 25/04/2016 06:55 by Vanijyasachivalaya

​​​​​

​ಕರ್ನಾಟಕ ಸರ್ಕಾರದ ನಡವಳಿಗಳು


ವಿಷಯ: 2013-14ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮೂರು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ.

ಓದಲಾಗಿದೆ:

[1] ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ ಕೈವಾಇ/ವಿಶ್ವ/ಎ-2/ಕೆವಿಐಬಿ ಬಜೆಟ್/31/2013-14 ದಿನಾಂಕ 01.08.2013
[2] ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇವರ ಪತ್ರ ಸಂಖ್ಯೆ ಖಾಮಂ/ಆಆಖಾದಿ/ಯೋಜನೆ/2013-14 ದಿನಾಂಕ 26.07.2013

ಪ್ರಸ್ತಾವನೆ:

2013-14ನೇ ಸಾಲಿನ ಆಯವ್ಯಯ ಭಾಷಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವ್ಯಾಪ್ತಿಗೊಳಪಡುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಸಂಬಂಧಿಸಿದಂತೆ ಮೂರು ಹೊಸ ಯೋಜನೆಗಳನ್ನು ಘೋಷಿಸಲಾಗಿರುತ್ತದೆ.
ಓದಲಾದ (1) ರ ಪತ್ರದಲ್ಲಿ 2013-14ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಲೆಕ್ಕ ಶೀರ್ಷಿಕೆ 2851-00-102-0-74 (ಯೋಜನೆ) ರಡಿಯಲ್ಲಿ ಒಟ್ಟು ರೂ. 3,876.27 ಲಕ್ಷಗಳ ಅನುದಾನವನ್ನು ಒದಗಿಸಲಾಗಿರುತ್ತದೆ.  ಸದರಿ ಅನುದಾನದಲ್ಲಿ 2013-14ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ ಈ ಕೆಳಕಂಡ ಹೊಸ ಯೋಜನೆಗಳನ್ನು ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಅನುಷ್ಠಾನಗೊಳಿಸಬೇಕಾಗಿರುವುದರಿಂದ, ಹೊಸ ಯೋಜನೆಗಳಿಗೆ ಸರ್ಕಾರದ ಅನುಮೋದನೆ ನೀಡುವ ಬಗ್ಗೆ ಆಯುಕ್ತರು, ಕೈಗಾರಿಕಾ ಅಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.​
ಕ್ರ.ಸ.ಯೋಜನೆ ವಿವರ

ಮೊತ್ತ

(ಲಕ್ಷ ರೂಗಳಲ್ಲಿ)

1ನೂಲುಗಾರರು, ನೇಕಾರರು ಹಾಗೂ ಖಾದಿ ಕಾರ್ಯಕರ್ತರಿಗೆ ಹೆಚ್ಚುವರಿ ಪ್ರೋತ್ಸಾಹ ಮಜೂರಿ1,593.89
22013-14ನೇ ಸಾಲಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಂಘ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲು ಹಮ್ಮಿಕೊಂಡಿರುವ ಹೊಸ ಯೋಜನೆಗಳು540.00
3114 ಗ್ರಾಮ ಕೈಗಾರಿಕಾ ಘಟಕಗಳಿಗೆ ಪ್ರತಿ ಘಟಕಕ್ಕೆ ರೂ. 3.00 ಲಕ್ಷಗಳಂತೆ ಬ್ಯಾಂಕುಗಳಿಂದ ದುಡಿಯುವ ಬಂಡವಾಳ ಸಾಲ ಪಡೆಯಲು ಶೇ. 9 ರಂತೆ ಬಡ್ಡಿ ಸಹಾಯಧನ ಯೋಜನೆ31.00
ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

​​ಸರ್ಕಾರಿ ಆದೇಶ ಸಂಖ್ಯೆ : ಸಿಐ 41 ಎಸ್.ಎಲ್.ವಿ. 2013, ಬೆಂಗಳೂರು, ದಿನಾಂಕ 30.09.2013


2013-14ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ ಈ ಕೆಳಗೆ ತಿಳಿಸಿರುವ ಮೂರು ಹೊಸ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ನೀಡಲಾಗಿದೆ.

ಕ್ರ.ಸ. ಯೋಜನೆ ವಿವರ
ಮೊತ್ತ
(ಲಕ್ಷ ರೂಗಳಲ್ಲಿ)
1ನೂಲುಗಾರರು, ನೇಕಾರರು ಹಾಗೂ ಖಾದಿ ಕಾರ್ಯಕರ್ತರಿಗೆ ಹೆಚ್ಚುವರಿ ಪ್ರೋತ್ಸಾಹ ಮಜೂರಿ1,593.89
22013-14ನೇ ಸಾಲಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಂಘ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲು ಹಮ್ಮಿಕೊಂಡಿರುವ ಹೊಸ ಯೋಜನೆಗಳು540.00
3114 ಗ್ರಾಮ ಕೈಗಾರಿಕಾ ಘಟಕಗಳಿಗೆ ಪ್ರತಿ ಘಟಕಕ್ಕೆ ರೂ. 3.00 ಲಕ್ಷಗಳಂತೆ ಬ್ಯಾಂಕುಗಳಿಂದ ದುಡಿಯುವ ಬಂಡವಾಳ ಸಾಲ ಪಡೆಯಲು ಶೇ. 9 ರಂತೆ ಬಡ್ಡಿ ಸಹಾಯಧನ ಯೋಜನೆ31.00
ಕ್ರಮವಾಗಿ ಈ 3 ಯೋಜನೆಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ಈ ಆದೇಶದ ಅನುಬಂಧ-1, 2 ಮತ್ತು 3ರಲ್ಲಿ ವಿವರಿಸಲಾಗಿದೆ.  ಪ್ರತಿ ಯೋಜನೆ/ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೈಗಾರಿಕಾಭಿವೃದ್ಧಿ ಆಯುಕ್ತರು ಅಂತಹ ಪ್ರಸ್ತಾವನೆಗಳನ್ನು ಪ್ರತ್ಯೇಕವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವ ಪೂರ್ವದಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ ರೂಪಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : FD 902 Exp-I/15 ದಿನಾಂಕ 27.08.2015 ಹಾಗೂ ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ ಪಿಡಿ 26 ಎಫ್.ಆರ್.ಓ. 2013 ದಿನಾಂಕ 19.08.2013ರಲ್ಲಿ ನೀಡಲಾದ ಸಹಮತಿಯ ಮೇರಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಎಲ್.ಎಸ್. ಶ್ರೀಕಂಠಬಾಬು)
ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
--------------------------------------------------------------------------------------------------------------------------------------------------------------------

​ಸರ್ಕಾರದ ಆದೇಶ ಸಂಖ್ಯೆ ಸಿಐ 41 ಎಸ್.ಎಲ್.ವಿ. 2013 ದಿ: 30.09.2013 (ಅನುಬಂಧ-1)

ಖಾದಿ ನೂಲುಗರು, ನೇಕಾರರು, ಖಾದಿ ಕ್ಷೇತ್ರದ ಸಹಾಯಕರು ಹಾಗೂ ಕಾರ್ಯಕರ್ತರುಗಳಿಗೆ ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಖಾದಿ ಮತ್ತು ಪಾಲಿವಸ್ತ್ರ ಉತ್ಪಾದನೆಯಲ್ಲಿ ತೊಡಗಿರುವವರಿಗೆ ಪ್ರೋತ್ಸಾಹ ಮಜೂರಿಯನ್ನು ನೀಡುವ ಯೋಜನೆಯ ಮಾರ್ಗಸೂಚಿಗಳು.

1.       ರಾಜ್ಯದಲ್ಲಿ 160 ಖಾದಿ ಸಂಘ/ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿದ್ದು, ಖಾದಿ ಮಂಡಳಿಯಿಂದ ಧನಸಹಾಯ ಪಡೆದ 107 ಸಂಸ್ಥೆಗಳು ಮತ್ತು ಖಾದಿ ಆಯೋಗದ ಧನಸಹಾಯ 
          ಪಡೆದ 53 ಸಂಸ್ಥೆಗಳು ರೂ. 45.00 ಕೋಟಿಯಷ್ಟು ಖಾದಿ ಬಟ್ಟೆಯನ್ನು ಉತ್ಪಾದಿಸುತ್ತಿದ್ದು ರೂ. 49.00 ಕೋಟಿಯಷ್ಟು ಚಿಲ್ಲರೆ ಮಾರಾಟವನ್ನು ಮಾಡುತ್ತಿವೆ.  ಈ 160 ಖಾದಿ 
           ಸಂಸ್ಥೆಗಳು ಒಟ್ಟು 31,402 ಜನರಿಗೆ ಉದ್ಯೋಗವನ್ನು ನೀಡಿರುತ್ತವೆ.  ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಿರುತ್ತಾರೆ.

2.       ನೂಲುವವರು ಮತ್ತು ನೇಕಾರರಿಗೆ ಕರ್ನಾಟಕ ಸರ್ಕಾರವು 1992ರಲ್ಲಿ ಪ್ರೋತ್ಸಾಹ ಮಜೂರಿಯನ್ನು ನೀಡಲು ಪ್ರಸ್ತಾವನೆಗೆ ಮಂಜೂರಾತಿಯನ್ನು ನೀಡಿ, ನೂಲುವವರು 
          ಮತ್ತು ನೇಕಾರರಿಗೆ ನೀಡಬಹುದಾದ ಪ್ರೋತ್ಸಾಹ ಮಜೂರಿಯನ್ನು ನಿಗಧಿ ಮಾಡಿತ್ತು.  ನಂತರ ಇದವರೆಗೂ ಪ್ರೋತ್ಸಾಹ ಮಜೂರಿಯ ದರಗಳನ್ನು ಪರಿಷ್ಕರಿಸಿರುವುದಿಲ್ಲ.

3.       ಸದರಿ ದರಗಳನ್ನು ಪರಿಷ್ಕರಿಸಿ ಖಾದಿ ಉದ್ಯೋಗವನ್ನು ಕೈಗೊಳ್ಳಲು ಕಸಬುದಾರರನ್ನು ಪ್ರೋತ್ಸಾಹಿಸಿ ಅವರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ 
          ಖಾದಿ ಕ್ಷೇತ್ರದ ಉತ್ಪಾದನೆಯನ್ನು ಹೆಚ್ಚಿಸಲು ಯೋಜಿಸಿದೆ.

4.       ಮೇಲ್ಕಂಡ ಹಿನ್ನೆಲೆಯಲ್ಲಿ ಕೆಳಕಂಡ ಪ್ರೋತ್ಸಾಹ ಮಜೂರಿಯನ್ನು ಕಸಬುದಾರರಿಗೆ ಪ್ರತಿ ವರ್ಷದಲ್ಲಿ 150 (ಒಂದುನೂರ ಐವತ್ತು) ದಿನಗಳಿಗೆ ಸೀಮಿತಗೊಳಿಸಿ 
          ನೀಡಲು ಅನುಮೋದನೆ ನೀಡಲಾಗಿದೆ.  2013-14ನೇ ಸಾಲಿನಲ್ಲಿ ಈ ಯೋಜನೆಗಾಗಿ ರೂ. 1593.89 ಲಕ್ಷಗಳನ್ನು ನಿಗಧಿಪಡಿಸಲಾಗಿದೆ.
ಕ್ರ ಸಂವಿವರರಾಜ್ಯ ಸರ್ಕಾರ ನೀಡುವ ಪರಿಷ್ಕೃತ ಪ್ರೋತ್ಸಾಹ ಧನ (ರೂ. ಪೈ)
1ನೂಲುಗರುಪ್ರತಿ ಹ್ಯಾಂಕ್ ಗೆ ರೂ. 2.00
2
ನೇಕಾರರು

ಅ) ಖಾದಿ ಹತ್ತಿ ಮತ್ತು ಪಾಲಿ ವಸ್ತ್ರ ನೇಕಾರರು
ಆ) ಖಾದಿ ರೇಷ್ಮೆ ನೇಕಾರರು
ಇ) ಖಾದಿ ಉಣ್ಣೆ ನೇಕಾರರು


(ಪ್ರತಿ ಮೀಟರ್ ಗೆ)

ರೂ. 0.45
ರೂ. 1.00
ರೂ. 2.00
3ಉತ್ಪಾದನೆಯಲ್ಲಿ ತೊಡಗುವ ಇತರೆ ಕೆಲಸಗಾರರು – ಅಂದರೆ ವಾರ್ಪರ್ಸ್, ಕುಕ್ಕರ್ ಗಳು, ರೀವೈಂಡರ್ಸ್, ವೈಂಡರ್ಸ್, ರೀಲರ್ಸ್, ಸ್ಟಾರ್ಚರ್ಸ್, ಕಂಡಿಕೆ ಸುತ್ತುವವರು, ಕಾರ್ಡಿಂಗ್ ಸಹಾಯಕರು ಇತ್ಯಾದಿಕೆಲಸ ನಿರ್ವಹಿಸಿದ ಪ್ರತಿ ದಿನಕ್ಕೆ ರೂ. 5.00
4ಸಂಘ ಸಂಸ್ಥೆಗಳಲ್ಲಿ ಹಾಲಿ ದುಡಿಯುತ್ತಿರುವ ಖಾದಿ ಕಾರ್ಯಕರ್ತರುಸಂಘ ಸಂಸ್ಥೆಗಳ ವಾರ್ಷಿಕ ಉತ್ಪಾದನೆಯ ಮೇಲೆ ಶೇ. 5 ರಷ್ಟು

 

5.       ಪ್ರೋತ್ಸಾಹ ಮಂಜೂರಿಯನ್ನು ಬಿಡುಗಡೆ ಮಾಡುವ ವಿಧಾನ

1.1   ಕರ್ನಾಟಕ ರಾಜ್ಯದಲ್ಲಿರುವ ಖಾದಿ ಸಂಘ/ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಖಾದಿ ಸಂಘ/ಸಂಸ್ಥೆಗಳು ಪ್ರತಿ ತ್ರೈಮಾಸಿಕ ಅಂತ್ಯಕ್ಕೆ ಉತ್ಪಾದನೆ, ಮಾರಾಟ, ಉದ್ಯೋಗ ಹಾಗೂ ಮಜೂರಿ ಪಾವತಿ ಹಾಗೂ ಸಂಸ್ಥೆಯ ಪ್ರಗತಿಯ ವರದಿಯನ್ನು ಮಂಡಳಿಯ ಆಯಾ ಜಿಲ್ಲಾ ಕಛೇರಿಗೆ ಸಲ್ಲಿಸುವುದು.

1.2   ಖಾದಿ ಸಂಘ/ಸಂಸ್ಥೆಗಳು ಅವರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಸಬುದಾರರ ಪಟ್ಟಿಯನ್ನು ಸಿದ್ದಪಡಿಸಿ ಸದರಿಯವರ ಹೆಸರು, ಪ್ರಸ್ತುತ ಪಾವತಿಸುತ್ತಿರುವ ಮಜೂರಿ, ಸಂಬಂಧಿಸಿದವರ ಪ್ರೋತ್ಸಾಹ ಮಜೂರಿ, ಪಾವತಿ ಮಾಡಬೇಕಾಗಿರುವ ವಿವರಗಳನ್ನು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಿಗೆ ನಿಗಧಿಪಡಿಸಿರುವ ನಮೂನೆಯಲ್ಲಿ ನೀಡುವುದು.

1.3   ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು/ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಮೇಲ್ಕಂಡ ಮಾಹಿತಿಗಳನ್ನು ಸಂಘ/ಸಂಸ್ಥೆಗಳಿಂದ ಪಡೆದು ಕ್ರೋಢೀಕರಿಸಿ ಪ್ರೋತ್ಸಾಹ ಮಜೂರಿಯ ಪ್ರಸ್ತಾವನೆಯನ್ನು ಖಾದಿ ಮಂಡಳಿ, ಬೆಂಗಳೂರು ಇವರಿಗೆ ಸಲ್ಲಿಸುವುದು.

1.4   ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳ ವರದಿಯ ಆಧಾರದ ಮೇಲೆ ಸಂಘ/ಸಂಸ್ಥೆವಾರು ಪ್ರೋತ್ಸಾಹ ಮಜೂರಿಯನ್ನು ಲೆಕ್ಕಾಚಾರ ಮಾಡಿ ಒಟ್ಟಾರೆ ರಾಜ್ಯದ ಬೇಡಿಕೆಯನ್ನು ಖಾದಿ ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರೋಢೀಕರಿಸಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗೆ ಸಲ್ಲಿಸುವುದು.

1.5   ಸರ್ಕಾರದಿಂದ ಸಹಾಯಧನ ಬಿಡುಗಡೆ ಆದ ನಂತರ ಖಾದಿ ಮಂಡಳಿಯ ಕೇಂದ್ರ ಕಛೇರಿಯಲ್ಲಿ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು/ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಿಂದ ಬಂದ ಪ್ರಸ್ತಾವನೆಯನ್ನು ಪರಿಶೀಲಿಸಿ, ಪ್ರೋತ್ಸಾಹ ಮಜೂರಿ ಚೆಕ್ಕನ್ನು ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು/ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳಿಗೆ ಕಳುಹಿಸುವುದು.

1.6   ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು/ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಸಂಬಂಧಪಟ್ಟ ಸಂಘ/ಸಂಸ್ಥೆಗಳನ್ನೊಳಗೊಂಡ ಜಂಟಿ ಖಾತೆಯನ್ನು ತೆರೆದು/ಮಂಡಳಿಯ ಕೇಂದ್ರ ಕಛೇರಿಯಿಂದ ನೀಡಲಾದ ಚೆಕ್ಕನ್ನು ಸದರಿ ಖಾತೆಗೆ ಜಮಾ ಮಾಡುವುದು, ನಂತರ ಖಾದಿ ಕಸುಬುದಾರರ ವೈಯಕ್ತಿಕ ಹೆಸರಿಗೆ ಚೆಕ್ ಮೂಲಕ ಹಣ ಪಾವತಿಸುವುದು.  ಕಸಬುದಾರರು/ಕಾರ್ಯಕರ್ತರು ಬ್ಯಾಂಕ್/ಪೋಸ್ಟ್ ಆಫೀಸ್ ಗಳಲ್ಲಿ ಖಾತೆ ಹೊಂದಿಲ್ಲದಿದ್ದಲ್ಲಿ ಖಾತೆ ತೆರೆದು ಚೆಕ್ ಜಮಾ ಮಾಡುವುದು.

2.       ನಮೂನೆಗಳ ಮಾದರಿ

 

​​​​1.    ​    ಸರ್ಕಾರದಿಂದ ನೂಲುಗಾರಿಗೆ ಪ್ರೋತ್ಸಾಹ ಮಜೂರಿ ಪಾವತಿಸಲು ಸಂಸ್ಥೆಯವರು ನೀಡಬೇಕಾದ ಮಾಹಿತಿ ತ:ಖ್ತೆ ​ ​ ​ ​ ​
ಕ್ರ ಸಂಕಸಬುದಾರರ ಹೆಸರುಸಂಸ್ಥೆಯಲ್ಲಿ ನೊಂದಾಯಿಸಿದ ರಿಜಿಸ್ಟರ್ ನಂ.ಉತ್ಪಾದಿಸಿದ ಲಡಿಗಳ ಸಂಖ್ಯೆಪಾವತಿಸುವ ಮಜೂರಿರಾಜ್ಯ ಸರ್ಕಾರದಿಂದ ಪಾವತಿಸಬೇಕಾದ ಪ್ರೋತ್ಸಾಹ ಮಜೂರಿ ಮೊತ್ತ: ಒಂದು ಲಡಿಗೆ ರೂ. 2.00 ರಂತೆ

 

​​​​2.        ಸರ್ಕಾರದಿಂದ ನೇಕಾರರಿಗೆ ಪ್ರೋತ್ಸಾ​ಹ ಮಜೂರಿ ಪಾವತಿಸಲು ಸಂಸ್ಥೆಯವರು ನೀಡಬೇಕಾದ ಮಾಹಿತಿ ತ:ಖ್ತೆ
ಸಂಸ್ಥೆಯ ಹೆಸರು:
ಕ್ರ ಸಂ
ಕಸಬುದಾರರ ಹೆಸರು
ಸಂಸ್ಥೆಯಲ್ಲಿ ನೊಂದಾಯಿಸಿದ ರಿಜಿಸ್ಟರ್ ನಂ.
ಮಾಹೆಯಲ್ಲಿ ತಯಾರಿಸಿದ ಬಟ್ಟೆಯ ಮೀಟರ್ ಸಂಖ್ಯೆ
ರಾಜ್ಯ ಸರ್ಕಾರದಿಂದ ಪಾವತಿಸುವ ಪ್ರೋತ್ಸಾಹ ಮಜೂರಿ:

ಅರಳೆ ಖಾದಿ : 1 ಮೀಟರ್ 45 ಪೈ.
ರೇಷ್ಮೆ : 1 ಮೀಟರ್ ರೂ. 1.00
ಉಣ್ಣೆ : 1 ಮೀಟರ್ ಗೆ  ರೂ. 2.00 ರಂತೆ

 

​​​3.        ಸರ್ಕಾರದಿಂದ ವಾರ್ಫರ್ಸ್, ಸಹಾಯಕರು/ಇತರೆ ಕಸಬುದಾರರಿಗೆ ಪ್ರೋತ್ಸಾಹ ಮಜೂರಿ ಪಾವತಿಸಲು ಸಂಸ್ಥೆಯವರು ನೀಡಬೇಕಾದ ಮಾಹಿತಿಯ ತ:ಖ್ತೆ ​ ​ ​ ​
ಸಂಘ/ಸಂಸ್ಥೆಯ ಹೆಸರು
ಕ್ರಮ ಸಂಖ್ಯೆಕಸಬುದಾರರ ಹೆಸರುಸಂಸ್ಥೆಯಲ್ಲಿ ನೊಂದಾಯಿಸಿದ ರಿಜಿಸ್ಟರ್ ನಂಮಾಹೆಯಲ್ಲಿ ಕೆಲಸ ನಿರ್ವಹಿಸಿದ ದಿನಗಳುರಾಜ್ಯ ಸರ್ಕಾರದಿಂದ ಪ್ರತಿ ದಿನಕ್ಕೆ ರೂ. 5.00 ರಂತೆ ಪಾವತಿಸಬೇಕಾದ ಪ್ರೋತ್ಸಾಹ ಮಜೂರಿ

 

​​​4.        ಸರ್ಕಾರದಿಂದ ಖಾದಿ ಕಾರ್ಯಕರ್ತರಿಗೆ ಪಾವತಿಸಬೇಕಾದ ಪ್ರೋತ್ಸಾಹ ಮಜೂರಿ ಪಾವತಿಸಲು ಸಂಸ್ಥೆಯವರು ನೀಡಬೇಕಾದ ಮಾಹಿತಿ ತ:ಖ್ತೆ ​ ​ ​ ​
ಸಂಘ/ಸಂಸ್ಥೆಯ ಹೆಸರು
ಕ್ರ ಸಂಖಾದಿ ಕಾರ್ಯಕರ್ತರ ಹೆಸರುಸಂಸ್ಥೆಯಲ್ಲಿ ನೊಂದಾಯಿಸಿದ ರಿಜಿಸ್ಟರ್ ಸಂಖ್ಯಮಾಹೆ ಅಂತ್ಯಕ್ಕೆ ಸಂಘದ ಉತ್ಪಾದನೆಪಾವತಿಸಬೇಕಾದ ಪ್ರೋತ್ಸಾಹ ಮಜೂರಿ : ಉತ್ಪಾದನೆ ಮೇಲೆ ಶೇ. 5 ರಷ್ಟು

 

​ಅನುಬಂಧ-2


ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆಯ ಖಾದಿ ಸಂಘ/ಸಂಸ್ಥೆಗಳಿಗೆ ಮತ್ತು ಮಾರಾಟ ಮಳಿಗೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಹಾಯಧನ ಯೋಜನೆಯ ಮಾರ್ಗಸೂಚಿಗಳು.

1.    ಹಾಲಿ ಕಾರ್ಯನಿರತ ಹಳೆಯದಾದ ಸಂಘ/ಸಂಸ್ಥೆಗಳು ಮೂಲಭೂತ ಸೌಕರ್ಯ ಹಳೆ ಮಾದರಿಯ ಯಂತ್ರೋಪಕರಣ/ಸಲಕರಣೆ ಹಾಗೂ ಧನಸಹಾಯ ಕೊರತೆಯಿಂದಾಗಿ ಸಂಘದ ಕಾರ್ಯಕ್ಷಮತೆ ಕ್ಷೀನಗೊಳ್ಳುತ್ತಾ ಇದ್ದು ಇದರಿಂದ ಉತ್ಪಾದನೆ ಮತ್ತು ಮಾರಾಟದಲ್ಲಿ ಇಳಿಮುಖವಾಗುತ್ತಾ ಇದ್ದು ಸಮಯಕ್ಕೆ ಸರಿಯಾಗಿ ಮಾರಾಟ ರಿಯಾಯ್ತಿ ಸಿಗದೆ, ದಾಸ್ತಾನು ಖರ್ಚಾಗದೆ, ಸಂಘ/ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಲುಕಿವೆ.  ಈ ಕಾರಣದಿಂದಾಗಿ ಸಂಘಗಳು ಕಸಬುದಾರರಿಗೆ ಸಮರ್ಪಕವಾಗಿ ಮಜೂರಿ ಪಾವತಿಸುವಲ್ಲಿ, ಮತ್ತು ಖಾದಿ ಮಂಡಳಿಯಿಂದ ಪಡೆದ ಸಾಲ ಮರುಪಾವತಿಸುವಲ್ಲಿ ವಿಫಲವಾಗಿವೆ.

2.    ಗುರುತಿಸಿದ ಅರ್ಹ ಹಳೆ ಖಾದಿ ಸಂಘ/ಸಂಸ್ಥೆಗಳಿಗೆ ನೆರವು ಒದಗಿಸಿ ಅವುಗಳನ್ನು ಪುನಶ್ಚೇತನಗೊಳಿಸಿ ಈ ಹಿಂದೆ ಅವುಗಳು ಸಾಧಿಸಿದ ಉತ್ಪಾದನೆ/ಮಾರಾಟ ಮಟ್ಟಕ್ಕಿಂತ ಹೆಚ್ಚಿನ ಉತ್ಪಾದನೆ/ಮಾರಾಟ ಚಟುವಟಿಕೆಗಳನ್ನು ಹಮ್ಮಿಕೊಂಡು ತನ್ಮೂಲಕ ಹೆಚ್ಚುವರಿ ಉದ್ಯೋಗಾವಕಾಶ ಕಲ್ಪಿಸಲು ಯೋಜಿಸಲಾಗಿದೆ.

3.    ಖಾದಿ ಉತ್ಪನ್ನಗಳ ಮಾರಾಟಕ್ಕಾಗಿ ಮೂಲ ಸೌಕರ್ಯ ಒದಗಿಸಿ ಅದನ್ನು ಸಂಘ/ಸಂಸ್ಥೆಗಳ ಮಾರಾಟ ಮಳಿಗೆಯ ನವೀಕರಣ ಹಾಗೂ ಹೊಸ ಮಾರಾಟ ಮಳಿಗೆಗಳನ್ನು ಸ್ಥಾಪಿಸುವುದರ ಮೂಲಕ ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಮಾರಾಟ ಮಾಡಲು ಉತ್ತೇಜಿಸುವುದು.

4.    ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಘ/ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಾಭಿವೃದ್ಧಿಗೆ ನೀಡುವ ಸಹಾಯಧನದ ವಿವರ

(ಲಕ್ಷ ರೂಗಳಲ್ಲಿ)
ಕ್ರ.ಸಂ.ವಿವರಗಳುರಾಜ್ಯ ಸರ್ಕಾರದ ಸಹಾಯಧನ ಶೇ. 75% (ಗರಿಷ್ಠ ಮಿತಿ)ಸಂಸ್ಥೆಯ ವಂತಿಕೆ ಶೇ. 25%ಒಟ್ಟು ಯೋಜನಾ ವೆಚ್ಚ
1ಉಪಕರಣಗಳ ದುರಸ್ತಿ-ಅವಶ್ಯ ಬಿಡಿಭಾಗಗಳ ಖರೀದಿ0.750.251.00
2ಹೊಸ ಉಪಕರಣಗಳ ಖರೀದಿ (ಚರಖಾ, ಮಗ್ಗಗಳು ಮತ್ತು ವಾರ್ಪಿಂಗ್ ಘಟಕ ಹಾಗೂ ಇತರೆ ಸಲಕರಣೆಗಳು4.131.373.50
3ಕಾರ್ಯಗಾರ/ಕಛೇರಿ/ದಾಸ್ತಾನು ಮಳಿಗೆಗಳ ದುರಸ್ತಿಗಾಗಿ2.250.753.00
4ಇತರೆ ವೆಚ್ಚಗಳು (ಸಾಧ್ಯಾಸಾಧ್ಯತೆ ಪರಿಶೀಲನೆ, ಪ್ರಾರಂಭಿಕ ವೆಚ್ಚ7.132.8710.00

 

2013-14ನೇ ಸಾಲಿನಲ್ಲಿ 34 ಮಂದಿ ಸಂಘ/ಸಂಸ್ಥೆಗಳಿಗೆ ಸಹಾಯ ಒದಗಿಸಲು ತಲಾ ರೂ. 255.00 ಲಕ್ಷಗಳನ್ನು ಮೀಸಲಿಡಲಾಗಿದೆ.

5.    ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆಯ ಖಾದಿ ಭಂಡಾರಗಳನ್ನು ನವೀಕರಣಕ್ಕಾಗಿ ಸಹಾಯಧನ ನೀಡುವ ಯೋಜನೆಯ ಮಾರ್ಗಸೂಚಿಗಳು

5.1   ಹಾಲಿ ಕಾರ್ಯನಿರತ ಹಳೆಯದಾದ ಸಂಘ/ಸಂಸ್ಥೆಗಳನ್ನು, ಆಧುನೀಕತೆಗೆ ತಕ್ಕಂತೆ ನವೀನ ರೀತಿಯ ಖಾದಿ ಭಂಡಾರಗಳನ್ನು ಹೊಂದಿಲ್ಲದೆ ಹಳೇ ಮಾದರಿಯ ಖಾದಿ ಭಂಡಾರಗಳನ್ನು ಹೊಂದಿರುವುದರಿಂದ ಮಾರಾಟ ಇಳಿಮುಖವಾಗುತ್ತಾ ಇದ್ದು, ಸಮಯಕ್ಕೆ ಸರಿಯಾಗಿ ಮಾರಾಟ ರಿಯಾಯ್ತಿ ಸಿಗದೆ, ದಾಸ್ತಾನು ಖರ್ಚಾಗದೆ, ಸಂಘ/ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಲುಕಿವೆ.

5.2   ಗುರುತಿಸಿದ ಅರ್ಹ ಹಳೇ ಖಾದಿ ಸಂಘ/ಸಂಸ್ಥೆಗಳಿಗೆ ಖಾದಿ ಭಂಡಾರಗಳನ್ನು ನವೀಕರಣಗೊಳಿಸಲು ನೆರವು ಒದಗಿಸಿ ಅವುಗಳನ್ನು ನವೀಕರಣಗೊಳಿಸಿ ಈ ಹಿಂದೆ ಅವುಗಳು ಸಾಧಿಸಿದ ಉತ್ಪಾದನೆ/ಮಾರಾಟಕ್ಕಿಂತ ಹೆಚ್ಚಿನ ಉತ್ಪಾದನೆ/ಮಾರಾಟ ಚಟುವಟಿಕೆಗಳನ್ನು ಹಮ್ಮಿಕೊಂಡು ಹೆಚ್ಚುವರಿ ಉದ್ಯೋಗಾವಕಾಶ ಕಲ್ಪಿಸಲು ಯೋಜಿಸಲಾಗಿದೆ.

5.3   ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಘ/ಸಂಸ್ಥೆಗಳಿಗೆ ಹಳೆ ಖಾದಿ ಭಂಡಾರಗಳ ನವೀಕರಣಕ್ಕೆ ನೀಡುವ ಸಹಾಯಧನ ವಿವರ.

(ಲಕ್ಷ ರೂಗಳಲ್ಲಿ)​


ಕ್ರಮ ಸಂ.​​ವಿವರಗಳುರಾಜ್ಯ ಸರ್ಕಾರದ ಸಹಾಯಧನ ಶೇ. 75% (ಗರಿಷ್ಠ ಮಿತಿ)
ಸಂಸ್ಥೆಯ ವಂತಿಕೆ
ಶೇ. 25%


ಒಟ್ಟು ಯೋಜನಾ ವೆಚ್ಚ
1Cost of Renovation of Showroom including Electrification3.751.255.00
2Interior decoration, furniture & fixtures3.001.004.00
3Common logo signage, computerisation, including billing and barcoding0.750.251.00
 Total7.502.5010.00
2013-14ಸಾಲಿನಲ್ಲಿ 23 ಘಟಕಗಳಿಗೆ ಸಹಾಯಧನ ಒದಗಿಸಲು ರೂ. 172.50 ಲಕ್ಷಗಳು ಮೀಸಲಿಡಲಾಗಿದೆ.

6.       ಅರ್ಹ ಸಂಘ/ ಸಂಸ್ಥೆಗಳನ್ನು ಆಯ್ಕೆ ಮಾಡುವ ಸಮಿತಿಗಳು

 (ಅ) ಜಿಲ್ಲಾ ಮಟ್ಟದ ಸಮಿತಿ

(1)    ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ                                         ಅಧ್ಯಕ್ಷರು
(2)    ಉಪ ನಿರ್ದೇಶಕರು (ಖಾ.ಗ್ರಾ), ಜಿಲ್ಲಾ ಪಂಚಾಯ್ತಿ                                       ಸದಸ್ಯರು
(3)    ಖಾದಿ ಆಯೋಗದ ಜಿಲ್ಲಾ ನೋಡಲ್ ಅಧಿಕಾರಿ                                           ಸದಸ್ಯರು
(4)    ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ                                                  ಸದಸ್ಯ ಕಾರ್ಯದರ್ಶಿ


(ಆ) ರಾಜ್ಯ ಮಟ್ಟದ ಸಮಿತಿ

(1)    ಖಾದಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು                              ಅಧ್ಯಕ್ಷರು
(2)    ಮಂಡಳಿಯ ಆರ್ಥಿಕ ಸಲಹೆಗಾರರು ಹಾಗೂ ಮುಖ್ಯ ಲೆಕ್ಕ ಪತ್ರಾಧಿಕಾರಿಗಳು           ಸದಸ್ಯರು
(3)    ಖಾದಿ ಆಯೋಗದ ಕೇಂದ್ರ ಕಛೇರಿಯ (ಬೆಂಗಳೂರು) ನೋಡಲ್ ಅಧಿಕಾರಿ              ಸದಸ್ಯರು
(4)    ಖಾದಿ ಮಂಡಳಿಯ ಅಭಿವೃದ್ಧಿ ಅಧಿಕಾರಿ (ಖಾದಿ)                                              ಸದಸ್ಯರು


(ಇ) ಮೇಲ್ಕಂಡ ಯೋಜನೆಗಳ  ಅನುಷ್ಠಾನ ಹಾಗೂ ಪ್ರಗತಿಯ ವರದಿಯನ್ನು ಸಂಬಂಧಪಟ್ಟ ಆಯಾ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಖಾದಿ ಮಂಡಳಿ ಇವರಿಂದ ಕೇಂದ್ರ ಕಛೇರಿಗೆ ನಿಗಧಿತ ಸಮಯದಲ್ಲಿ ಸಲ್ಲಿಸುವುದು.  ಕೇಂದ್ರ ಕಛೇರಿಯಲ್ಲಿ ಅನುಷ್ಠಾನ ಪ್ರಗತಿಯನ್ನು ಪ್ರತಿ ಮೂರು ತಿಂಗಳುಗಳಿಗೊಮ್ಮೆ ಸುಧೀರ್ಘವಾಗಿ ಪ್ರಗತಿ ಪರಿಶೀಲನೆ ಮಾಡಲಾಗುವುದು.

6.1   ಸಂಘ/ಸಂಸ್ಥೆಗಳನ್ನು ಆಯ್ಕೆ ಮಾಡಲು ನಿಗದಿ ಪಡಿಸಿರುವ ಮಾನದಂಡ


1.       ಖಾದಿ ವಲಯದ ಸಂಘ/ಸಂಸ್ಥೆಗಳು (ಖಾದಿ, ರೇಷ್ಮೆ, ಉಣ್ಣೆ ಹಾಗೂ ಪಾಲಿ ವಸ್ತ್ರ) ಮಾನ್ಯತೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
2.       ಅನುಷ್ಠಾನ ಸಂಘ/ಸಂಸ್ಥೆಗಳು ಯೋಜನಾ ವೆಚ್ಚದ ಪ್ರತಿಶತ 25% ರಷ್ಟು ಸ್ವಂತ ಬಂಡವಾಳ ಹೂಡಲು ಬದ್ದವಿರಬೇಕು.
3.       ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಖಾದಿ ಆಯೋಗದಿಂದ ಧನಸಹಾಯ ಪಡೆದ ಸಂಸ್ಥೆಗಳಾಗಿರಬೇಕು.
4.       ಆಯ್ಕೆಗೊಂಡ ಸಂಘ/ಸಂಸ್ಥೆಗಳು ಯೋಜನೆಯನ್ನು ಅನುಷ್ಠಾನಗೊಳಿಸಿದ ನಂತರ, ಬ್ಯಾಂಕ್ ನಿಂದ ದುಡಿಯುವ ಬಂಡವಾಳ ಸಾಲವನ್ನು ಪಡೆಯಲು ಸಿದ್ದರಿರಬೇಕು.
5.       ಸಂಘ/ಸಂಸ್ಥೆಯು ಖಾದಿ ಆಯೋಗದ ಯೋಜನೆಗಳಾದ PRODIP (Product Development Design Intervention and Packaging) RISC (Rural Industries Service Centre), S & T (Science and Technology) ಮುಂತಾದ ಯೋಜನೆಯನ್ನು ಅನುಷ್ಠಾನಗೊಳಿಸಿ, ನಿರೀಕ್ಷಿತ ಪ್ರಗತಿ ಸಾಧಿಸಲು ಬದ್ದತೆ ಹೊಂದಿರಬೇಕು.
6.       ಸಂಘ/ಸಂಸ್ಥೆಗಳು ಖಾದಿ ಆಯೋಗದ ನಿಯಮಾವಳಿಯಂತೆ ಉತ್ಪಾದನಾ ಮತ್ತು ಮಾರಾಟದ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರಬೇಕು.
7.       ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾದಿ ಸಂಘ/ಸಂಸ್ಥೆಗಳಿಂದ ಬೆಂಗಳೂರು (ಮೆಟ್ರೋ ಸಿಟಿ) ನಗರದಲ್ಲಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಸಹಾಯಧನ ಯೋಜನೆಯ ಮಾರ್ಗಸೂಚಿಗಳು

7.1   ಹಾಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 160 ಖಾದಿ ಸಂಘ/ಸಂಸ್ಥೆಗಳು ಖಾದಿ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿವೆ.  ಆಧುನಿಕತೆಗೆ ತಕ್ಕಂತೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೆಚ್ಚಿನ ಮಾರಾಟ ಮಾಡಲು ಹಾಗೂ ಕಸಬುದಾರರಿಗೆ ನಿರಂತರ ಉದ್ಯೋಗ ದೊರಕುವಂತಾಗಲು ಮತ್ತು ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಂಗಳೂರು (ಮೆಟ್ರೋ ಸಿಟಿ) ನಗರದಲ್ಲಿ ಆಧುನಿಕ ರೀತಿಯಲ್ಲಿ ಸುಸಜ್ಜಿತ ಖಾದಿ ಭಂಡಾರಗಳ ಅವಶ್ಯಕತೆ ಇದೆ.

7.2   ಹಾಲಿ ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾದಿ ಭಂಡಾರಗಳು ಸುಮಾರು 30-40 ವರ್ಷಗಳಷ್ಟು ಹಳೆಯದಾಗಿದ್ದು, ಆಕರ್ಷಕವಾಗಿರುವುದಿಲ್ಲ.

7.3   ಖಾದಿ ಉತ್ಪನ್ನಗಳ ಮಾರಾಟಕ್ಕಾಗಿ ಮೂಲ ಸೌಕರ್ಯ ಒದಗಿಸಿ ಹಾಗೂ ಹೊಸ ಮಾರಾಟ ಮಳಿಗೆಗಳನ್ನು ಸ್ಥಾಪಿಸುವುದರ ಮೂಲಕ ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಮಾರಾಟ ಮಾಡಲು ಮತ್ತು ಯುವ ಜನತೆಯನ್ನು ಆಕರ್ಷಿಸಲು ಪ್ರೋತ್ಸಾಹ ನೀಡುವುದು.

7.4   ಸ್ವಂತ ನಿವೇಶನ ಹೊಂದಿದ್ದರೆ, ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಘ/ಸಂಸ್ಥೆಗಳಿಗೂ ಮೆಟ್ರೋ ಸಿಟಿಯಲ್ಲಿ ಹೊಸ ಖಾದಿ ಭಂಡಾರ ಸ್ಥಾಪಿಸಲು ನೀಡುವ ಸಹಾಯಧನ ವಿವರ.

 

ಕ್ರಮ ಸಂಖ್ಯೆವಿವರಗಳುರಾಜ್ಯ ಸರ್ಕಾರದ ಸಹಾಯಧನ ಶೇ 75% (ಗರಿಷ್ಟ ಮಿತಿ)ಸಂಸ್ಥೆಯ ವಂತಿಕೆ ಶೇ 25%ಒಟ್ಟು ಯೋಜನಾ ವೆಚ್ಚ
1Cost of construction of showroom building including electrification and office room cum stock room7.932.6410.57
2Interior decoration, furnitures & fixtures7.882.6210.50
3Common logo signage, computerisation including billing and barcoding2.940.993.93
Total18.756.2525.00

 

7.5   ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಘ/ಸಂಸ್ಥೆಗಳು ಖಾಸಗಿ ಕಟ್ಟಡಗಳನ್ನು ಲೀಸ್ ಮೇಲೆ ಪಡೆದರೆ (ಕನಿಷ್ಠ 10 ವರ್ಷಗಳ ಲೀಸ್) ನೀಡುವ ಸಹಾಯಧನದ ವಿವರ

 

ಕ್ರಮ ಸಂಖ್ಯವಿವರಗಳುರಾಜ್ಯ ಸರ್ಕಾರದ ಸಹಾಯಧನ ಶೇ. 75% (ಗರಿಷ್ಟ ಮಿತಿ)ಸಂಸ್ಥೆಯ ವಂತಿಕೆ ಶೇ 25%ಒಟ್ಟು ಯೋಜನಾ ವೆಚ್ಚ
1Interior decoration furniture and fixtures 13.504.5018.00
2Common logo, signage, computerising including billing and barcoding3.751.255.00
3Electrification1.500.502.00
 Total18.756.2525.00

 

2013-14ನೇ ಸಾಲಿನಲ್ಲಿ ನಿವೇಶನ ಹೊಂದಿರುವ ಅಥವಾ ಖಾಸಗಿ ಕಟ್ಟಡಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಖಾದಿ ಬಂಡಾರ ಸ್ಥಾಪಿಸುವ 3 ಘಟಕಗಳಿಗೆ ಸಹಾಯಧನ ಒದಗಿಸಲು ರೂ. 56.25 ಲಕ್ಷಗಳನ್ನು ಮೀಸಲಿಡಲಾಗಿದೆ.

7.6   ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳು ಸ್ವಂತ ನಿವೇಶನ ಹೊಂದಿದ್ದರೆ ನಾನ್ ಮೆಟ್ರೋ ಸಿಟಿಗಳಲ್ಲಿ ಖಾದಿ ಭಂಡಾರ ಸ್ಥಾಪಿಸಲು ನೀಡುವ ಸಹಾಯಧನ ವಿವರ
ಕ್ರಮ ಸಂಖ್ಯೆವಿವರಗಳುರಾಜ್ಯ ಸರ್ಕಾರದ ಸಹಾಯಧನ ಶೇ 75%ಸಂಸ್ಥೆಯ ವಂತಿಕೆ ಶೇ 25%ಒಟ್ಟು ಯೋಜನಾ ವೆಚ್ಚ
1Cost of construction of showroom building including electrification and office room cum stocking room5.512.788.29
2Interior decoration, furniture & fixtures6.452.168.61
3Common logo signage,computerisation including billing and barcoding2.101.003.10
Total14.065.2420.00

​7.7   ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಘ/ಸಂಸ್ಥೆಗಳು ಖಾಸಗಿ ಕಟ್ಟಡಗಳನ್ನು ಖಾದಿ ಭಂಡಾರವನ್ನು ಪ್ರಾರಂಭಿಸಲು ಲೀಸ್ ಮೇಲೆ ಪಡೆದರೆ (ಕನಿಷ್ಠ 10 ವರ್ಷಗಳ ಲೀಸ್) ನೀಡುವ ಸಹಾಯಧನ.

                                                                                                                                                                                           (ಲಕ್ಷ ರೂಗಳಲ್ಲಿ)​


ಕ್ರ.ಸಂ.ವಿವರಗಳುರಾಜ್ಯ ಸರ್ಕಾರದ ಸಹಾಯಧನ ಶೇ. 75% (ಗರಿಷ್ಠ ಮಿತಿ)ಸಂಸ್ಥೆಯ ವಂತಿಕೆ ಶೇ. 25%ಒಟ್ಟು ಯೋಜನಾ ವೆಚ್ಚ
1Interior decoration furniture and fixtures5.512.788.29
2Common logo, signage, computerising, including billing and barcoding6.452.168.61
3Electrification2.101.003.10
 Total14.065.9420.00

 

2013-14ನೇ ಸಾಲಿನಲ್ಲಿ ಸ್ವಂತ ನಿವೇಶನ ಹೊಂದಿರುವ ಅಥವಾ ಖಾಸಗಿ ಕಟ್ಟಡಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಖಾದಿ ಬಂಡಾರ ಸ್ಥಾಪಿಸುವ 4 ಘಟಕಗಳಿಗೆ ಸಹಾಯಧನ ಒದಗಿಸಲು ರೂ. 56.25 ಲಕ್ಷಗಳನ್ನು ಮಿಸಲಿಡಲಾಗಿದೆ.

7.8   ಅರ್ಹ ಸಂಘ/ಸಂಸ್ಥೆಗಳನ್ನು ಆಯ್ಕೆ ಮಾಡಿ ಶಿಫಾರಸ್ಸು ಮಾಡುವ ಸಮಿತಿ:-

(ಅ) ಜಿಲ್ಲಾ ಮಟ್ಟದ ಆಯ್ಕೆ ಮಾಡುವ ಸಮಿತಿ

(1) ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ                                                                   ಅಧ್ಯಕ್ಷರು
(2) ಉಪ ನಿರ್ದೇಶಕರು (ಖಾ.ಗ್ರಾ), ಜಿಲ್ಲಾ ಪಂಚಾಯ್ತಿ                                                                 ಸದಸ್ಯರು
(3) ಖಾದಿ ಆಯೋಗದ ಜಿಲ್ಲಾ ನೋಡಲ್ ಅಧಿಕಾರಿ                                                                     ಸದಸ್ಯರು
(4) ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ                                                                            ಸದಸ್ಯ ಕಾರ್ಯದರ್ಶಿ

 

(ಆ) ರಾಜ್ಯ ಮಟ್ಟದ ಅಂತಿಮವಾಗಿ ಸಂಸ್ಥೆಗಳನ್ನು ಆಯ್ಕೆ ಮಾಡುವ ಸಮಿತಿ

(1) ಖಾದಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು                                                 ಅಧ್ಯಕ್ಷರು
(2) ಮಂಡಳಿಯ ಆರ್ಥಿಕ ಸಲಹೆಗಾರರು ಮತ್ತು ಮುಖ್ಯ ಲೆಕ್ಕ ಪತ್ರಾಧಿಕಾರಿಗಳು                             ಸದಸ್ಯರು
(3) ಖಾದಿ ಆಯೋಗದ ಕೇಂದ್ರ ಕಛೇರಿಯ (ಬೆಂಗಳೂರು) ನೋಡಲ್ ಅಧಿಕಾರಿ                              ಸದಸ್ಯರು
(4) ಖಾದಿ ಮಂಡಳಿಯ ಅಭಿವೃದ್ಧಿ ಅಧಿಕಾರಿ (ಖಾದಿ)                                                              ಸದಸ್ಯರು

 

7.9   ಆಯ್ಕೆ ಮಾನದಂಡಗಳು

1.       ಖಾದಿ ಭಂಡಾರಗಳನ್ನು ಸ್ಥಾಪಿಸುವ ಖಾದಿ ಸಂಘ-ಸಂಸ್ಥೆಗಳು ಮೆಟ್ರೋ/ನಾನ್ ಮೆಟ್ರೋ ನಗರಗಳಲ್ಲಿ ಸಂಘವು ಸ್ವಂತ ನಿವೇಶನವನ್ನು ಹೊಂದಿರಬೇಕು.  ಅಥವಾ ಹತ್ತು ವರ್ಷಗಳಷ್ಟು ಲೀಸ್ ಮೇಲೆ ಮಳಿಗೆಯನ್ನು ಪಡೆದಿರಬೇಕು.  ಮಳಿಗೆಗೆ ಮಂಜೂರಾತಿ ಮಾಡುವ ಸಂದರ್ಭದಲ್ಲಿ ನಿವೇಶನದ ದಾಖಲಾತಿಗಳನ್ನು (ಕ್ರಯ ಪತ್ರ, ಎನ್ ಕಂಬ್ರೆನ್ಸ್ ಪ್ರಮಾಣ ಪತ್ರ, ಲೈಸೆನ್ಸ್ ಇತ್ಯಾದಿಗಳನ್ನು) ಸಲ್ಲಿಸಬೇಕು.
2.       ಮೇಲ್ಕಂಡ ಯೋಜನೆಯಡಿ ಘಟಕ ಸ್ಥಾಪಿಸುವ ಸಂಘ-ಸಂಸ್ಥೆಗಳು ಎ+/ಎ/ಬಿ/ಸಿ ದರ್ಜೆಯಾಗಿ ವರ್ಗೀಕರಣಗೊಂಡಂತಹವುಗಳಾಗಿರಬೇಕು.
3.       ಸದರಿ ಸಂಸ್ಥೆಯು ಒಟ್ಟಾರೆ ಯೋಜನೆಯಲ್ಲಿ ಶೇಕಡಾ 25% ರಷ್ಟು ವಂತಿಕೆ ಹಣವನ್ನು ಭರಿಸಲು ಅರ್ಹತೆ ಹೊಂದಿರಬೇಕು.
4.       ಸದರಿ ಯೋಜನೆಯಡಿ ಅನುದಾನವನ್ನು ಬೇಸ್ ಮೆಂಟ್/ಲಿಂಟಲ್/ಕಟ್ಟಡವು ಪೂರ್ಣಗೊಂಡ ನಂತರ ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು.
5.       ಲೀಸ್ ಮೇಲೆ ಪಡೆದ ಖಾದಿ ಭಂಡಾರಗಳಿಗೆ ಸಂಸ್ಥೆಗಳು ನೀಡುವ ಯೋಜನಾ ವೆಚ್ಚ ಹಾಗೂ ಸಿದ್ಧತೆಯನ್ನು ಅವಲೋಕಿಸಿ ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು.
6.       ಮೇಲ್ಕಂಡ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯ ವರದಿಯನ್ನು ಸಂಬಂಧಪಟ್ಟ ಆಯಾ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಖಾದಿ ಮಂಡಳಿ, ಇವರು ಆಯಾ ಹಂತದ ಕಾಮಗಾರಿಗಳು/ಕೆಲಸಗಳು ಮುಗಿದ ತಕ್ಷಣ ಛಾಯಾ ಚಿತ್ರದೊಂದಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು.
7.       ಮಾರಾಟ ಮಳಿಗೆಯನ್ನು ಮೆಟ್ರೋ ನಗರದಲ್ಲಿ ಪ್ರಾರಂಭಿಸುವುದಕ್ಕೆ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಲೈಸೆನ್ಸ್ ಪಡೆಯಬೇಕು.
8.       ಖಾದಿ ಮಳಿಗೆಯನ್ನು ಪ್ರಾರಂಭಿಸುವ ಸಂಸ್ಥೆಗಳು ಮಳಿಗೆಯ ಪ್ಲಾನ್ ಮತ್ತು ಅಂದಾಜು ವೆಚ್ಚವನ್ನು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆದಿರಬೇಕು.
9.       ನಿರ್ಮಾಣದ ಉಸ್ತುವಾರಿಯನ್ನು ಜಿಲ್ಲೆಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಮಾಡತಕ್ಕದ್ದು.  ಇದರಲ್ಲಿ ಬೇಜವಾಬ್ದಾರಿ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು.

​ಅನುಬಂಧ-3

​​ಸಿಐ 41 ಎಸ್.ಎಲ್.ವಿ. 2013 ದಿನಾಂಕ 30.09.2013ಹಾಲಿ ಕೆಲಸ ಮಾಡುತ್ತಿರುವ ಗ್ರಾಮೋದ್ಯೋಗ ಘಟಕಗಳಿಗೆ ಹೆಚ್ಚುವರಿ ದುಡಿಯುವ ಬಂಡವಾಳ ಸಾಲವನ್ನು ಬ್ಯಾಂಕುಗಳ ಮೂಲಕ ಪಡೆದಲ್ಲಿ ನೀಡುವ ಬಡ್ಡಿ ಸಹಾಯಧನ ಯೋಜನೆಯ ಮಾರ್ಗಸೂಚಿಗಳು

​1.       ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ ಆರ್ಥಿಕ ನೆರವು ಪಡೆದ ಸಂಘ/ಸಂಸ್ಥೆ /ಸಹಕಾರ ಸಂಘ/ವೈಯಕ್ತಿಕ ಉದ್ದಿಮೆದಾರರು ಕಿರಿ ಕೈಗಾರಿಕೆ/ಅತಿ ಸಣ್ಣ ಕೈಗಾರಿಕೆ ಗ್ರಾಮೋದ್ಯೋಗಗಳನ್ನು ಸ್ಥಾಪಿಸಿರುವ ಘಟಕಗಳಿಗೆ ಮಾತ್ರ ಅನ್ವಯವಾಗುತ್ತದೆ.

2.       2013-14ನೇ ಸಾಲಿನಲ್ಲಿ ಡಾ. ನಂಜುಂಡಪ್ಪನವರ ನೇತೃತ್ವ ಸಮಿತಿಯು ರಾಜ್ಯದಲ್ಲಿ ಗುರುತಿಸಿರುವ 114 ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಹಾಗೂ ಹಿಂದುಳಿದ ತಾಲ್ಲೂಕುಗಳಲ್ಲಿ ಬ್ಯಾಂಕುಗಳಿಂದ ಹೆಚ್ಚುವರಿ ಮೂರು ಲಕ್ಷ ರೂಪಾಯಿಗಳ ಮಿತಿಯಲ್ಲಿ ದುಡಿಯುವ ಬಂಡವಾಳ ಸಾಲ ಮಂಜೂರಾದ ಪ್ರತಿ ತಾಲ್ಲೂಕಿನ ಒಂದು ಘಟಕಕ್ಕೆ ಸೀಮಿತಗೊಳಿಸಿದೆ.

3.       ಷೆಡ್ಯೂಲ್ (Scheduled) ಹಾಗೂ ನಾನ್ ಷೆಡ್ಯೂಲ್ಡ್ (Non scheduled) ಬ್ಯಾಂಕುಗಳು, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಅಂಗ (Subsidiary) ಬ್ಯಾಂಕುಗಳು ಒಳಗೊಂಡಂತೆ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು, ರಾಜ್ಯ ಹಣಕಾಸು ಸಂಸ್ಥೆ, ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್  ಮತ್ತು ಇತರೆ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯುವುದು.

4.       ಬಡ್ಡಿ ಸಹಾಯಧನ ಯೋಜನೆಯಡಿ ನೀಡುವ ಬಡ್ಡಿ ಮೊತ್ತವು ಆರ್ಥಿಕ ನೆರವು ನೀಡುವ ಸಂಸ್ಥೆಗಳು ವಿಧಿಸುವ ನೈಜ ಬಡ್ಡಿ ಮೊತ್ತ ಹಾಗೂ ಸಾಲ ಪಡೆಯುವ ಸಂಸ್ಥೆ/ಸಹಕಾರ ಸಂಘ/ವೈಯಕ್ತಿಕ ಉದ್ದಿಮೆದಾರರು ಪಾವತಿ ಮಾಡಬೇಕಾದ ಬಡ್ಡಿ ಮೊತ್ತದ ವ್ಯತ್ಯಾಸದ ಮೊತ್ತಕ್ಕೆ ಗರಿಷ್ಟ ಶೇ 9% ರಷ್ಟಕ್ಕೆ ಮೂರು ವರ್ಷಗಳವರೆಗೆ ಮಾತ್ರ ಸೀಮಿತವಾಗುತ್ತದೆ.

5.       ಬಡ್ಡಿ ಸಹಾಯಧನ ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಪಡೆದ ನೊಂದಾಯಿತ ಸಂಘ, ಸಹಕಾರ ಸಂಘಗಳು ಅಥವಾ ವೈಯಕ್ತಿಕ ಉದ್ದಿಮೆ ದಾರರು ಆರ್ಥಿಕ ಸಂಸ್ಥೆಗಳಿಂದ ಸಾಲ ಮಂಜೂರಾತಿ ಪಡೆದಿರುವ ಘಟಕಗಳು ಪ್ರಸ್ತಾವನೆಯನ್ನು ಆಯಾ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯವರಿಗೆ ಸಲ್ಲಿಸುವುದು.

6.       ಸಂಬಂಧಪಟ್ಟ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಘಟಕದ ಕಾರ್ಯಸ್ಥಳಕ್ಕೆ ಭೇಟಿ ನೀಡಿ ಘಟಕದ ಕಾರ್ಯನಿರ್ವಹಣೆ ತೃಪ್ತಿಕರವಾಗಿದೆಯೆಂದು ಮನಗಂಡ ನಂತರ ಬಡ್ಡಿ ಸಹಾಯಧನ ಯೋಜನೆ ಪ್ರಸ್ತಾವನೆಗಳನ್ನು ಶಿಫಾರಸ್ಸು ಮಾಡಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕೇಂದ್ರ ಕಛೇರಿಗೆ ಕಳುಹಿಸುವುದು.

7.       ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕೇಂದ್ರ ಕಛೇರಿಯಲ್ಲಿನ ಅಭಿವೃದ್ಧಿ ಅಧಿಕಾರಿ (ಗ್ರಾಮ ಕೈಗಾರಿಕೆ) ವಿಭಾಗದಲ್ಲಿ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಬಡ್ಡಿ ಸಹಾಯಧನ ಯೋಜನೆಯ ಮಂಜೂರಾತಿಗಾಗಿ ರಚಿಸಿರುವ ಸಮಿತಿಯಲ್ಲಿ ಪರಿಗಣಿಸಲು ಪ್ರಸ್ತಾವನೆಯನ್ನು ಮಂಡಿಸುವುದು.​

​​​


Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.