2015-16ನೇ ಸಾಲಿನ ಆ.ಭಾ. ಕಂ.427 - ಆಧುನಿಕ ಯಂತ್ರೋಪಕರಣ ಒಳಗೊಂಡ 5 ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಬಗ್ಗೆ

  • GOK
    • vanijyasachivalaya
      • 2015-16ನೇ ಸಾಲಿನ ಆ.ಭಾ. ಕಂ.427 - ಆಧುನಿಕ ಯಂತ್ರೋಪಕರಣ ಒಳಗೊಂಡ 5 ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಬಗ್ಗೆ
Last modified at 22/04/2016 12:42 by Vanijyasachivalaya

​​​​​

​​

​​​ಕರ್ನಾಟಕ ಸರ್ಕಾರದ ನಡವಳಿಗಳು


ವಿಷಯ: 2015-16 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ 5 ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಹೊ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ:

1. 2015-16 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಆಯವ್ಯಯ ಭಾಷಣ (ಕಂಡಿಕೆ-427).
2. ಜವಳಿ ಅಭಿವ್ರದ್ಧಿ ಆಯುಕ್ತರ ಪತ್ರ ಸಂಖ್ಯೆ: ಕೈಜಿ/ನೂಜನೀ/ಡಿಡಿ(ಐ)/ಬಜೆಟ್/427/2015-16, ದಿನಾಂಕ: 14.05.2015.

ಪ್ರಸ್ತಾವನೆ:

2015-16ನೇ ಸಾಲಿನ ಆಯವ್ಯಯದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ 7 ಹೊಸ ಯೋಜನೆಗಳನ್ನು ಘೋಷಿಸಲಾಗಿರುತ್ತದೆ.  ಓದಲಾದ(2)ರ ಜವಳಿ ಅಭಿವ್ರದ್ಧಿ ಆಯುಕ್ತರ ಪತ್ರದಲ್ಲಿ ಸದರಿ ಆಯವ್ಯಯ ಭಾಷಣದ ಕಂಡಿಕೆ-427 ರಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ 5 ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಶೇ.50 ರಷ್ಟು ಸಹಾಯಧನದೊಂದಿಗೆ ಸ್ಥಾಪಿಸುವ ಹೊಸ ಯೋಜನೆಯನ್ನು ಘೋಷಿಸಲಾಗಿದೆ.  ಈ ಯೋಜನೆಯಡಿ ಸ್ಥಾಪಿಸುವ ಪ್ರತಿ ಘಟಕಕ್ಕೆ ಗರಿಷ್ಠ ರೂ.2.00 ಕೋಟಿಗಳಂತೆ ಮುಂದಿನ ಮೂರು ವರ್ಶಗಳಲ್ಲಿ 15 ಘಟಕಗಳಿಗೆ ನೀಡಲಾಗುವುದು.  ಇದರಿಂದ ಪ್ರತಿ ವರ್ಶ 5000 ಗ್ರಾಮೀಣ ಮಹಿಳೆಯರಿಗೆ ಒಟ್ಟಾರೆ ಮೂರು ವರ್ಶಗಳಲ್ಲಿ 15,000 ಮಹಿಳೆಯರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಆಯವ್ಯಯ ಭಾಷಣದಲ್ಲಿ ಘೋಷಿಸಲಾಗಿದೆ.  ಸದರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಸರ್ಕಾರದ ಾಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

     ಜವಳಿ ಅಭಿವ್ರದ್ಧಿ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ವಾಕೈ 35 ಜಕೈಯೋ 2015, ಬೆಂಗಳೂರು, ದಿನಾಂಕ: 22.07.2015

           ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ 2015-16 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಕಂಡಿಕೆ-427 ರಲ್ಲಿ ಘೋಷಿಸಿರುವ  ಹೊಸ ಯೋಜನೆಯಾದ ಾಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ 5 ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ರಾಜ್ಯದ 4 ಪ್ರಾಂತೀಯ ಮಟ್ಟದಲ್ಲಿ ಶೇ.50 ರಷ್ಟು ಸಹಾಯಧನದೊಂದಿಗೆ ಸ್ಥಾಪಿಸುವ ಯೋಜನೆಗೆ ಈ ಕೆಳಕಂಡ ಷರತ್ತುಗಳಿಗೊಳಪಡಿಸಿ ಸರ್ಕಾರದ ತಾತ್ವಿಕ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

(1) ಈ ಯೋಜನೆಯಡಿ ಫಲಾನುಭವಿ ಸಂಸ್ಥೆಯ ಆಯ್ಕೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಆಯ್ಕೆ ಸಮಿತಿಯನ್ನು ರಚಿಸತಕ್ಕದ್ದು.  ಆಯ್ಕೆ ಸಮಿತಿಯಲ್ಲಿ ಹೊರಗಿನ ತಾಂತ್ರಿಕ 
        ತಜ್ಞರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳತಕ್ಕದ್ದು.
(2) ಯೋಜನೆ ಅನುಷ್ಠಾನಕ್ಕೆ ಪೂರ್ವದಲ್ಲಿ ಸರ್ಕಾರದಿಂದ ಅನುಮೋದನೆ ಪಡೆಯತಕ್ಕದ್ದು.
(3) ಘಟಕಗಳು ಉತ್ಪಾದನೆ ಪ್ರಾರಂಭ ಮಾಡಿದ ವರ್ಶದಿಂದ 3 ಸಮಾನ ಕಂತುಗಳಲ್ಲಿ (i.e.1/3 per year) ಅನುದಾನ (backend subsidy ರೂಪದಲ್ಲಿ) ಬಿಡುಗಡೆ ಮಾಡತಕ್ಕದ್ದು.
(4) ಪ್ರತಿ ಘಟಕಕ್ಕೆ ಗರಿಷ್ಠ ರೂ.2.00 ಕೋಟಿಗಳಂತೆ ಮುಂದಿನ 3 ವರ್ಶಗಳಲ್ಲಿ 15 ಘಟಕಗಳಿಗೆ ನೀಡತಕ್ಕದ್ದು.
(5) ಪ್ರತಿ ವರ್ಶ 5000 ಗ್ರಾಮೀಣ ಮಹಿಳೆಯರಿಗೆ ಒಟ್ಟಾರೆ 3 ವರ್ಶಗಳಲ್ಲಿ 15,000 ಮಹಿಳೆಯರಿಗೆ ಉದ್ಯೋಗ ಒದಗಿಸತಕ್ಕದ್ದು.

           ಯೋಜನೆಗೆ ತಗಲುವ ವೆಚ್ಚವನ್ನು ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ಲೆಕ್ಕ ಶೀರ್ಶಿಕೆ 2851-00-103-0-62 (ಯೋಜನೆ) ರಡಿ ಭರಿಸತಕ್ಕದ್ದು.   ಯೋಜನೆಯ ಮಾರ್ಗಸೂಚಿಯನುಸಾರ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸತಕ್ಕದ್ದು.

           ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿ 45 ಎಫ್ಆರ್ಓ 2015, ದಿನಾಂಕ: 09.06.2015 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 675 ವೆಚ್ಚ-1/2015 ದಿನಾಂಕ: 27.06.2015 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.


ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಸಹಿ/-
(ಕೆ.ಬೋರಲಿಂಗಯ್ಯ)
ಸರ್ಕಾರದ ಉಪ ಕಾರ್ಯದರ್ಶಿ(ಜವಳಿ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.