Budget Paragraph_Kan

Last modified at 02/04/2016 23:40 by Vanijyasachivalaya

​​​​

 ​​ವಾಣಿಜ್ಯ ಮತ್ತು ಕೈಗಾರಿಕೆ 


368. ಸಾಧನೆಗಳು 

  • ​ನಮ್ಮ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಮೊದಲ ಎರಡು ವರ್ಷಗಳಲ್ಲಿ 96,435 ಕೋಟಿ ರೂ.ಗಳ ಬಂಡವಾಳದ ಹೂಡಿಕೆಯೊಂದಿಗೆ 2.27 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ 363 ಯೋಜನೆಗಳನ್ನು ಅನುಮೋದಿಸಿದೆ.
  • “ಇನ್‍ವೆಸ್ಟ್ ಕರ್ನಾಟಕ” 2016 ರ ಘೋಷಣೆಯ ನಂತರ ಏಪ್ರಿಲ್ 2015ರ ತರುವಾಯ 1.77 ಲಕ್ಷ ಕೋಟಿ ರೂ.ಗಳ ಬಂಡವಾಳ ಮತ್ತು 4.82 ಲಕ್ಷ ಉದ್ಯೋಗ ಸೃಷ್ಟಿಯ ಸಾಮಥ್ರ್ಯವುಳ್ಳ 1,080 ಯೋಜನೆಗಳನ್ನು ಅನುಮೋದಿಸಲಾಗಿದೆ. ಇನ್‍ವೆಸ್ಟ್ ಕರ್ನಾಟಕ 2016 ರ ಸಂದರ್ಭದಲ್ಲಿ 1.27 ಲಕ್ಷ ಕೋಟಿ ರೂ.ಗಳ ಪ್ರಸ್ತಾಪಿತ ಬಂಡವಾಳ ಹೂಡಿಕೆ ಹಾಗೂ 1.69 ಲಕ್ಷ ಉದ್ಯೋಗ ಸೃಷ್ಟಿಯ ಸಾಮಥ್ರ್ಯದ 122 ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ.
  • ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿರಾಳವಾಗಿ ವ್ಯವಹಾರ ನಡೆಸುವಂತಹ ವಾತಾವರಣ ಮೂಡಿಸಲು ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ವಾಣಿಜ್ಯ ತೆರಿಗೆ ಸಂಬಂಧಿತ ಬಹುತೇಕ ಸೇವೆಗಳು, ಬಂಡವಾಳ ಹೂಡಿಕೆಗೆ ಏಕಗವಾಕ್ಷಿ ವಿಧಾನದಲ್ಲಿ ಅನುಮೋದನೆ ಪಡೆಯಲು ಅರ್ಜಿ ಸಲ್ಲಿಕೆ, ಪರಿಸರ ಸಂಬಂಧಿತ ಅನುಮೋದನೆ ಪಡೆಯುವುದನ್ನು ಆನ್‍ಲೈನ್ ಮಾಡಲಾಗಿದೆ. 10 ಪ್ರಮುಖ ಇಲಾಖೆಗಳ ಅನುಮೋದನೆಯ ಪ್ರಕ್ರಿಯೆಯನ್ನು ಏಕ ಗವಾಕ್ಷಿ ಪೋರ್ಟಲ್‍ಗೆ ಹೊಂದಿಕೆ ಮಾಡಲಾಗಿದೆ. ಏಕಗವಾಕ್ಷಿ ಏಜೆನ್ಸಿಯಿಂದ ಅನುಮೋದನೆಗೊಂಡ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮದ ಸೆಕ್ಷನ್ 109ರಡಿ ಭೂ ಖರೀದಿ ಮಾಡುವ ಹಾಗೂ ಭೂ ಪರಿವರ್ತನೆ ಮಾಡುವ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಲಭ್ಯವಿರುವ ಭೂಮಿಯ ಬಗ್ಗೆ ವಿವರಗಳು ವೆಬ್‍ಸೈಟ್‍ನಲ್ಲಿ ಲಭ್ಯವಿದೆ.
  • 11,994 ಎಕರೆ ಸರ್ಕಾರಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗಿದೆ.
  • Trade Licence ಪದ್ದತಿಯನ್ನು ಕೈಗಾರಿಕೆಗಳಿಗೆ ಅನ್ವಯಿಸುವಂತೆ ರದ್ದುಪಡಿಸಿದೆ. 

​2016-17 ನೇ ಸಾಲಿನ ಉದ್ದೇಶಿತ ಹೊಸ ಯೋಜನೆಗಳು 


369. ಕರ್ನಾಟಕದಲ್ಲಿ ಕೈಗಾರಿಕೆಯನ್ನು ಉತ್ತೇಜಿಸಲು, ಯೋಜನಾ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಮಾರುಕಟ್ಟೆ ಇಂಟಲಿಜೆನ್ಸ್ ಅಭಿವೃದ್ಧಿಪಡಿಸಲು “ಇನ್‍ವೆಸ್ಟ್ ಕರ್ನಾಟಕ” ಎಂಬ ಲಾಭ ನಿರೀಕ್ಷೆಯಿಲ್ಲದ (Not for profit) ಕಂಪನಿಯನ್ನು ರಚಿಸಲಾಗುವುದು. ಈ ಕಂಪನಿಯ ಬೋರ್ಡಿನಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಸರ್ಕಾರದ ಅಧಿಕಾರಿಗಳ ಜೊತೆಗೆ ವೃತ್ತಿಪರ ಸಿಬ್ಬಂದಿಗಳು ಇರುತ್ತಾರೆ. 

370. ಬೆಂಗಳೂರಿನ ಪೀಣ್ಯ ಮತ್ತು ಬೊಮ್ಮಸಂದ್ರ, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿಗಳಲ್ಲಿನ ಭಾರೀ ಕೈಗಾರಿಕಾ ಪ್ರದೇಶಗಳನ್ನು ಮತ್ತು ಎಸ್ಟೇಟ್‍ಗಳನ್ನು ಕೈಗಾರಿಕಾ ಪಟ್ಟಣ ಪ್ರದೇಶಗಳೆಂದು ಘೋಷಿಸಲು ಪ್ರಸ್ತಾಪಿಸಲಾಗಿದೆ. 

371. ಪ್ರಸ್ತುತ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು 175 ಕೋಟಿ ರೂ.ಗಳನ್ನು ಒದಗಿಸಲಾಗುವುದು. 

372. ಗೋಡಂಬಿ ತಂತ್ರಜ್ಞಾನ ತರಬೇತಿ ಕೇಂದ್ರವನ್ನು ಕುಮಟಾ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. 

373. ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡವರಿಗೆ ಮತ್ತು ಸ್ಥಳೀಯ ಗ್ರಾಮೀಣ ಯುವ ಜನತೆಗೆ, ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸಿ, ಸ್ಥಳೀಯ ಕೈಗಾರಿಕೆಗಳಲ್ಲಿ ಕಾರ್ಯಸ್ಥಳಗಳಲ್ಲಿಯೇ ಉದ್ಯೋಗ ತರಬೇತಿ (On the job) ನೀಡಿ ಉದ್ಯೋಗ ಒದಗಿಸಲಾಗುವುದು. 

374. ರಾಜ್ಯದಲ್ಲಿರುವ ಮಹಿಳೆಯರ ಕೌಶಲ್ಯ ಅಭಿವೃದ್ಧಿಗಾಗಿ AWAKE ಸಂಸ್ಥೆಯ ಮುಖಾಂತರ, ವಸತಿ ಸಹಿತ ಸೌಲಭ್ಯಗಳನ್ನು ನೀಡಲಾಗುವುದು. 

375. ತಂತ್ರಜ್ಞಾನ ನವೋದ್ಯಮಗಳನ್ನು ಉತ್ತೇಜಿಸುವ ಸಲುವಾಗಿ ದೊಡ್ಡಬಳ್ಳಾಪುರದಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಟೆಕ್ನಾಲಜಿ ಇನ್ಕ್ಯೂಬೇಷನ್ ಸೆಂಟರ್ ಸ್ಥಾಪಿಸಲಾಗುವುದು. 

376. ಮಹಿಳಾ ಉದ್ಯಮ ಶೀಲತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಂಗಳೂರು, ಬಳ್ಳಾರಿ, ಧಾರವಾಡ ಹಾಗೂ ಮೈಸೂರಿನಲ್ಲಿ ಮಹಿಳಾ ಪಾರ್ಕ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. 

377. ಈ ಕೆಳಕಂಡವುಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.

  • ​ಕಲ್ಬುರ್ಗಿ ಜಿಲ್ಲೆ, ಚಿತ್ತಾಪುರ ತಾಲ್ಲೂಕಿನಲ್ಲಿ ರಾಷ್ಟ್ರೀಯ ಬಂಡವಾಳ ಹೂಡಿಕೆ ಮತ್ತು ಉತ್ಪಾದನಾ ವಲಯ.
  • ಜಪಾನ್ ದೇಶದ ಆರ್ಥಿಕ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಹಯೋಗದೊಂದಿಗೆ ತುಮಕೂರು ಜಿಲ್ಲೆ ವಸಂತ ನರಸಾಪುರದಲ್ಲಿ Japanese Industrial Township ನ ಅಭಿವೃದ್ಧಿ.
  • ಭಾರತ ಸರ್ಕಾರದೊಡನೆ ಶೇ.50 ರಷ್ಟು ವೆಚ್ಚವನ್ನು ಹಂಚಿಕೊಳ್ಳುವುದರೊಡನೆ ಬೆಂಗಳೂರಿನ ಸಮೀಪದಲ್ಲಿ 87 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ “Advanced Polymer Design and Development Research Laboratory (APDDRL)” ​ರ ಸ್ಥಾಪನೆ.
ಭಾರತ ಸರ್ಕಾರದ MSME-CDP​ ಯೋಜನೆಯಡಿಯಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಹೊಸದಾಗಿ 30 ಕೈಗಾರಿಕಾ ಪ್ರದೇಶಗಳನ್ನು ಕ್ಲಸ್ಟರ್ ವಿಧಾನದ ಮೂಲಕ ಉನ್ನತೀಕರಿಸಲಾಗುವುದು. 


378. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಉದ್ಯಮಿಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಕೈಗಾರಿಕಾ ಸಾಮಥ್ರ್ಯವನ್ನು ತುಂಬಲು ಈ ಕೆಳಕಂಡ ಕ್ರಮಗಳನ್ನು ಪ್ರಸ್ತಾಪಿಸಿದೆ:

  • ಶೇ.50 ದರದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಕೆ.ಐ.ಎ.ಡಿ.ಬಿ / ಕೆ.ಎಸ್.ಎಸ್.ಐ.ಡಿ.ಸಿ ಯಿಂದ ಶೆಡ್ ಮತ್ತು ಭೂಮಿಯನ್ನು ಹಂಚಿಕೆ ಮಾಡಲಾಗುವುದು. ಭೂಮಿ ಮತ್ತು ಶೆಡ್‍ಗಳ ಮೌಲ್ಯದ ಪಾವತಿಯನ್ನು ಕಂತುಗಳಲ್ಲಿ ಪರಿಗಣಿಸಲಾಗುವುದು. ಇದರಲ್ಲಿ ಶೇ.50ರಷ್ಟನ್ನು ಮೊದಲಿಗೆ ಪಾವತಿಸಬೇಕಾಗಿದ್ದು, ಬಾಕಿ ಶೇ.50ರಷ್ಟನ್ನು 8 ಸಮ ತ್ರೈಮಾಸಿಕ ಕಂತುಗಳಲ್ಲಿ ಪಾವತಿಸಬೇಕಾಗಿರುತ್ತದೆ.
  • ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 3 ಕೋಟಿ ರೂ. ಸರ್ಕಾರಿ ಅನುದಾನದೊಡನೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಉದ್ಯಮಿಗಳ ಸಂಘದ ಮೂಲಕ ಕೌಶಲ್ಯ / ಇ.ಡಿ.ಪಿ. ತರಬೇತಿ ಕೇಂದ್ರದ ಅಭಿವೃದ್ಧಿ. 379. 2014ರಲ್ಲಿ ತರಲಾದ ಕೈಗಾರಿಕಾ ನೀತಿಯಲ್ಲಿ ಕೆಐಎಡಿಬಿ ಸಂಸ್ಥೆಯು ಅಭಿವೃದ್ಧಿಪಡಿಸುವ ಕೈಗಾರಿಕಾ ಶೆಡ್ / ನಿವೇಶನಗಳಲ್ಲಿ ಶೇ.5ರಷ್ಟನ್ನು ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು 2ಎ, ಅಲ್ಪ ಸಂಖ್ಯಾತರಿಗೆ, ಅಂಗವಿಕಲರಿಗೆ ಮತ್ತು ಮಾಜಿ ಸೈನಿಕರಿಗೆ ಮೀಸಲಿರಿಸಲಾಗಿದ್ದು, ಇದನ್ನು ಶೇ.5ರಿಂದ 10ಕ್ಕೆ ಹೆಚ್ಚಿಸಲಾಗುವುದು. ಈ ಮೀಸಲಾತಿಯನ್ನು ಕೆಐಎಡಿಬಿ ಮತ್ತು ಕೆಎಸ್‍ಎಸ್‍ಐಡಿಸಿ ಸಂಸ್ಥೆಗಳು ಅಭಿವೃದ್ದಿಪಡಿಸಿ ಹಂಚಿಕೆ ಮಾಡುವ ಕೈಗಾರಿಕಾ ಶೆಡ್ / ನಿವೇಶನಗಳಿಗೆ ಅನ್ವಯಿಸಲಾಗುವುದು. ಈ ಮೊತ್ತವನ್ನು 6 ಸಮ ತ್ರೈಮಾಸಿಕ ಕಂತುಗಳಲ್ಲಿ ಪಾವತಿಸಬಹುದಾಗಿರುತ್ತದೆ.

380. ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ಹೊರಬರುತ್ತಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ನೆಲೆಗೊಳಿಸಲು, ರಾಜ್ಯದಾದ್ಯಂತ ಜಿ.ಟಿ.ಟಿ.ಸಿ ಉಪ ಕೇಂದ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು (ಸಿ.ಒ.ಇ) ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದರ ಮೂಲಕ ಉತ್ಪನ್ನ ವಿನ್ಯಾಸ ಮತ್ತು ಅಭಿವೃದ್ಧಿ, ಉತ್ಪಾದನಾ ಉಪಕರಣ ವಿನ್ಯಾಸ, ರೊಬೊಟಿಕ್ಸ್, ರಿವರ್ಸ್ ಇಂಜಿನಿಯರಿಂಗ್, ರ್ಯಾಪಿಡ್ ಪ್ರೊಟೋ ಟೈಪಿಂಗ್ ಪ್ರಯೋಗ ಶಾಲೆಗಳು ಇತ್ಯಾದಿ ವಲಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. 2016-17ನೇ ಸಾಲಿನಲ್ಲಿ ಬೆಂಗಳೂರು, ಕಲ್ಬುರ್ಗಿ, ದಾಂಡೇಲಿ ಹಾಗು ಮೈಸೂರುಗಳಲ್ಲಿ ಅಂತಹಾ ನಾಲ್ಕು ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. 

381. ನೇಕಾರರ ಅಭಿವೃದ್ಧಿಗಾಗಿ ಈ ಕೆಳಕಂಡ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ:

  • ​ವಾಸದ ಮತ್ತು ಕೆಲಸದ ಶೆಡ್‍ಗಳನ್ನು ನಿರ್ಮಿಸಲು ನೇಕಾರರಿಗೆ ಹಲವಾರು ಯೋಜನೆಗಳ ಅಡಿಯಲ್ಲಿ ನೀಡಲಾದ 17 ಕೋಟಿ ರೂ.ಗಳ ಸಾಲ ಮತ್ತು ಬಡ್ಡಿಯ ಮನ್ನಾ.
  • ಕೈಮಗ್ಗ ಮತ್ತು ವಿದ್ಯುತ್ ವiಗ್ಗಗಳ ನೇಕಾರರಿಗೆ ಸಹಕಾರ ಬ್ಯಾಂಕ್‍ಗಳು ಮತ್ತು ಸಂಘಗಳ ಮೂಲಕ ಶೇ.1ರ ಬಡ್ಡಿ ದರದಲ್ಲಿ 2 ಲಕ್ಷ ರೂ.ಗಳವರೆಗೆ ಸಾಲ ಮತ್ತು ಶೇ.3 ರ ಬಡ್ಡಿ ದರದಲ್ಲಿ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ.
  • ಗ್ರಾಮೀಣ ಪ್ರದೇಶಗಳಲ್ಲಿರುವ ಸಣ್ಣ ಪ್ರಮಾಣದ ವಿದ್ಯುತ್ ಮಗ್ಗಗಳ ಘಟಕಗಳಿಗೆ 50% ಸಹಾಯಧನದೊಡನೆ ಸೌರಶಕ್ತಿ ಉಪಕರಣಗಳ ನೀಡಿಕೆ.
  • ​​ಭಾರತ ಸರ್ಕಾರದ ವಿದ್ಯುತ್ ಮಗ್ಗಗಳ ಆಧುನೀಕರಣ ಯೋಜನೆಯಡಿಯಲ್ಲಿ ವಿದ್ಯುತ್ ಮಗ್ಗಗಳನ್ನು ಉನ್ನತೀಕರಿಸಲು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮಗ್ಗಕ್ಕೆ 10,000 ರೂ.ಗಳ ಕೊಡುಗೆ.

382. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಕಾವೇರಿ ಹ್ಯಾಂಡ್‍ಲೂಮ್ಸ್‍ಗಳ ವಿಸ್ತøತ ಪುನರ್ ರಚನೆ ಹಾಗೂ ಅವುಗಳನ್ನು ಸಂಯೋಜಿಸಲು ಕ್ರಮ ಕೈಗೊಳ್ಳಲಾಗುವುದು. 

383. ಸಾಗರೋತ್ಪನ್ನಗಳ ರಫ್ತಿಗಾಗಿ ಕುಮಟ ತಾಲ್ಲೂಕಿನ ತದಡಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. 

384. ಬೆಂಗಳೂರಿನಲ್ಲಿ ಜನವರಿ 2017ರಲ್ಲಿ ಭಾರತ ಸರ್ಕಾರದ ಸಮನ್ವಯದೊಂದಿಗೆ ಪ್ರತಿಷ್ಠಿತ ಪ್ರವಾಸಿ ಭಾರತೀಯ ದಿವಸವನ್ನು ಆಯೋಜಿಸಲು ಉದ್ದೇಶಿಸಿದೆ. 

385. ಕೆಲವು ಉಪ ಖನಿಜಗಳಿಗೆ ಸಂಬಂಧಿಸಿದಂತೆ Ad velorem ರಾಜಧನ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಪ್ರಾರಂಭಿಕವಾಗಿ ನಾವು Ad Veloram ರಾಜಧನವನ್ನು ಗ್ರಾನೈಟ್‍ಗೆ ಅನ್ವಯಿಸಲು ಉದ್ದೇಶಿಸಿದ್ದು ಸೂಕ್ತವಾದ ಅಧಿಸೂಚನೆ ಹೊರಡಿಸಲಾಗುವುದು. 

386. 2016-17ನೇ ಸಾಲಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಒಟ್ಟಾರೆಯಾಗಿ 1814 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.