ಪರಿಚಯ

ಪರಿಸರ ಮಾಹಿತಿ ಕೇಂದ್ರ​

  ಪ್ರಸಕ್ತ ಪರಿಸರೀಯ ಸಮಸ್ಯೆಗಳ ಬಗ್ಗೆ ಶಿಕ್ಷಣ ಮತ್ತು ಪ್ರಸರಣ ಮಾಹಿತಿಯನ್ನು ಒದಗಿಸುವುದು ನಮ್ಮ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಪರಿಸರ ಮಾಹಿತಿ ಕೇಂದ್ರದ ಪ್ರಾಥಮಿಕ ಪ್ರಯತ್ನವಾಗಿದೆ. ಈ ಪ್ರಯತ್ನ ಕಾರ್ಯಗೊಳಿಸಲು ಪ್ರಸ್ತುತ ಭಾರತ ಸರ್ಕಾರವು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC), ಸಹಯೋಗದೊಂದಿಗೆ ಪರಿಸರ ಮಾಹಿತಿ ಕೇಂದ್ರವು ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.

ಪರಿಸರ ಮಾಹಿತಿ ಕೇಂದ್ರ​ ಅಂತರ್ಜಾಲ ತಾಣ

   ಪರಿಸರದ ಕುರಿತಾದ ವಿಶ್ವಾಸಾರ್ಹ ಮತ್ತು ಸಮರ್ಪಕ ಮಾಹಿತಿಯ ಅಗತ್ಯವನ್ನು ಅರಿತುಕೊಳ್ಳುವುದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ಮುಖ್ಯ ಪ್ರಯತ್ನವಾಗಿದೆ.  ಭಾರತ ಸರ್ಕಾರವು 1982 ರಲ್ಲಿ , ಪರಿಸರ ಮಾಹಿತಿ ಕೇಂದ್ರ (ENVIS) ಅನ್ನು ಪರಿಸರದ ಮಾಹಿತಿ ಸಂಗ್ರಹಣೆ, ಜೋಡಣೆ, ಶೇಖರಣೆ, ಮತ್ತು ಮುಂತಾದ ವಿವಿಧ ಬಳಕೆದಾರರಿಗೆ ವಿಸ್ತಾರವಾದ ಜಾಲವಾಗಿ ಸ್ಥಾಪಿಸಲಾಗಿದೆ. ENVIS ಅಂತರ್ಜಾಲ ತಾಣದಲ್ಲಿ ವಿವರಣಾತ್ಮಕ ಮಾಹಿತಿ ಮತ್ತು ಸಂಖ್ಯಾತ್ಮಕ ಮಾಹಿತಿ ಎರಡನ್ನು ಒಳಗೊಂಡಿದೆ. ಅಂತರ್ಜಾಲ ತಾಣದಲ್ಲಿ ಪ್ರಕಟಣೆ, ವರದಿಗಳು, ಮರುಮುದ್ರಣಗಳು ಮತ್ತು ಸಂಬಂಧಿತ ವಿಷಯಗಳ ಮೇಲೆ ವಿವರಣಾತ್ಮಕ ಮಾಹಿತಿಗಳನ್ನು ಪ್ರಸರಣಕ್ಕಾಗಿ ಸಂಗ್ರಹಿಸಲಾಗಿದೆ. ಹಾಗೂ ಪ್ರಸರಣದ ಉದ್ದೇಶಕ್ಕಾಗಿ ವಿಷಯದ ಸಂಖ್ಯಾ ಡೇಟಾವನ್ನು ಸಂಗ್ರಹಿಸಿ, ಸಂಕಲಿಸಿ, ಸಂಸ್ಕರಿಸಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ. ಹೀಗೆ ಸಂಕಲಿಸಿದ ಎಲ್ಲಾ ಮಾಹಿತಿಯು ENVIS ಕೇಂದ್ರದ  ಅಂತರ್ಜಾಲ ತಾಣದಲ್ಲಿಲಭ್ಯವಿರುತ್ತದೆ. EMPRI ಒಂದು http://karenvis.nic.in/​ (ENVIS) ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿ ಹೋಸ್ಟ್ ಮಾಡಿದೆ.​​​