ನಾಗರೀಕರು

ಏನಿದು ಆಧಾರ್

 • ಆಧಾರ್ ಎಂಬುದು ಒಂದು 12 ಡಿಜಿಟ್ ವೈಯಕ್ತಿಕ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ಭಾರತ ಸರ್ಕಾರದ ಪರವಾಗಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದಿಂದ (ಯುಐಡಿಏಐ) ನೀಡಲಾಗುವುದು.
 • ಹೀಗೆ ಪಡೆಯಲಾದ ಸಂಖ್ಯೆಯು ಕೇಂದ್ರೀಕೃತ ಡ್ಯಾಟಾಬೇಸ್ ಒಂದರಲ್ಲಿ ಶೇಖರಿಸಲ್ಪಟ್ಟು ಅದನ್ನು ಪ್ರತಿ ವ್ಯಕ್ತಿಯೊಬ್ಬರ ಮೂಲ ವೈಯಕ್ತಿಕ ಮತ್ತು ಜೈವಿಕ ಮಾಹಿತಿಗಳಾದ ಛಾಯಚಿತ್ರ, ಹತ್ತು ಬೆರಳು ಗುರುತುಗಳು ಹಾಗೂ ಕಣ್ಣುಪಾಪೆ ಮುಂತಾದವುಗಳೊಡನೆ ಜೋಡಿಸಲಾಗುತ್ತದೆ.

ಆಧಾರ್ ವೈಶಿಷ್ಟ್ಯಗಳು

 • ಆನ್ ಲೈನ್ ನಲ್ಲಿ, ಔಚಿತ್ಯಪೂರ್ಣ ವೆಚ್ಚದಲ್ಲಿ ಸುಲಲಿತವಾಗಿ ಪರಿಶೀಲನೆ ಮಾಡಬಹುದಿರುತ್ತದೆ.
 • ಸರ್ಕಾರದಲ್ಲಿ ಹಾಗೂ ಖಾಸಗೀ ಡ್ಯಾಟಾಬೇಸುಗಳಲ್ಲಿರಬಹುದಾದ ನಕಲು ಹಾಗೂ ಖೊಟ್ಟಿ ಗುರುತುಗಳನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 • ಯಾವುದೇ ಜಾತಿ, ಮತ, ಧರ್ಮ ಅಥವಾ ಭೌಗೋಳಿಕ ವರ್ಗಗಳ ಆಧಾರವಾಗಿಲ್ಲದೇ ತಯಾರಾಗುವ ಒಂದು ಆಕಸ್ಮಿಕ ಸಂಖ್ಯೆಯಾಗಿರುತ್ತದೆ.


ಆಧಾರ್ ಏಕೆ?

 • ಆಧಾರ್ ಗುರುತು ಎರಡು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಸಾರ್ವತ್ರಿಕವಾದ್ದು
 • ಮುಂಬರುವ ದಿನಗಳಲ್ಲಿ ದೇಶದಾದ್ಯಂತ ಎಲ್ಲಾ ಸೇವಾದಾರರು ಆಧಾರ್ ನ ಪ್ರಯೋಜನ ಪಡೆಯಲಿದ್ದಾರೆ.
 • ಪ್ರತಿಯೊಬ್ಬ ನಿವಾಸಿಯೂ ಈ ಸಂಖ್ಯೆ ಪಡೆಯಲು ಹಕ್ಕುದಾರನಾಗಿರುತ್ತಾರೆ.
 • ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ಗುರುತಿನ ಮೂಲಸೌಕರ್ಯವಾಗಲಿದ್ದು, ಇದರ ಮೇಲೆ ದೇಶದಾದ್ಯಂತ ರಿಜಿಸ್ಟ್ರಾರುಗಳು ಹಾಗೂ ಸಂಸ್ಥೆಗಳು ಗುರುತಿನಾಧಾರವಾಗಿ ತಮ್ಮ ಅನ್ವಯಿಕೆಗಳನ್ನು ರೂಪಿಸಬಹುದಿರುತ್ತದೆ.
 • ಭಾರತದ ವಿಶಿಷ್ಠ ಗುರುತು ಪ್ರಾಧಿಕಾರವು (ಯುಐಡಿಎಐ) ದೇಶದಾದ್ಯಂತ ವಿವಿಧ ರಿಜಿಸ್ಟ್ರಾರುಗಳೊಡನೆ ಪಾಲುದಾರಿಕೆಯೊಂದಿಗೆ ನಿವಾಸಿಗಳ ನೋಂದಣಿಗೆ  ಅನುವು ಮಾಡುತ್ತದೆ.
 • ಇಂತಹ ರಿಜಿಸ್ಟ್ರಾರುಗಳು ರಾಜ್ಯ ಸರ್ಕಾರ, ರಾಜ್ಯ ಸಾರ್ವಜನಿಕ ಉದ್ಯಮ ಘಟಕ, ಬ್ಯಾಂಕುಗಳು, ಟೆಲಿಕಾಂ ಕಂಪನಿಗಳು, ಇತ್ಯಾದಿಗಳಿರಬಹುದು. ನಿವಾಸಿಗಳಿಗೆ ಆಧಾರ್ ಒದಗಿಸಲು ನೋಂದಣಿ ಸಂಸ್ಥೆಗಳೊಡನೆ ಈ ರಿಜಿಸ್ಟ್ರಾರುಗಳು ಮುಂದುವರೆದು ಪಾಲುದಾರಿಕೆ ಮಾಡಬಹುದು.
 • ಖಾಸಗಿ, ಸಾರ್ವಜನಿಕ ಸಂಸ್ಥೆಗಳು ಮತ್ತು ನಿವಾಸಿಗಳ ನಡುವೆ ವಿಶ್ವಾಸಯುತ ಸಂಬಂಧವನ್ನು ಆಧಾರ್ ಖಚಿತಪಡಿಸಿಕೊಳ್ಳುತ್ತದೆ.
 • ಒಮ್ಮೆ ನಿವಾಸಿಗಳು ಆಧಾರ್ ಗೆ ದಾಖಲಿಸಿಕೊಂಡರೆಂದರೆ, ಸೇವಾದಾರರು ಸೇವೆಗಳನ್ನು ಒದಗಿಸುವ ಮೊದಲು ಆಗಿಂದಾಗ್ಗೆ ನೋ ಯುವರ್ ಕಸ್ಟಮರ್ (ಕೆವೈಸಿ) ತಪಾಸಣೆ ಕೈಗೊಳ್ಳುವ ಅವಶ್ಯಕತೆಯಿಲ್ಲ. ಗುರುತಿನ ದಾಖಲುಗಳಿಲ್ಲದೇ ನಿವಾಸಿಗಳಿಗೆ ಸೇವೆಗಳನ್ನು ಅಲ್ಲಗಳೆಯುವ ಸಂದರ್ಭ ಬಂದೊದಗುವುದಿಲ್ಲ.
 • ನಾಗರೀಕರು ಬ್ಯಾಂಕು ಖಾತೆ, ಪಾಸ್ ಪೋರ್ಟು, ಅಥವಾ ವಾಹನಚಾಲನಾ ಪರವಾನಗಿ, ಇತ್ಯಾದಿ ಸೇವೆಗಳನ್ನು ಪ್ರತೀ ಬಾರಿ ಪಡೆಯಲು ಇಚ್ಛಿಸಿದಾಗಲೂ ಗುರುತಿನ ದಾಖಲೆಗಳ ಪುರಾವೆಗಳನ್ನು ಪುನಃ ಪುನಃ ಒದಗಿಸುವ ಅವಶ್ಯಕತೆಯಿರುವುದಿಲ್ಲ.
 • ನಾಗರೀಕರು ಬ್ಯಾಂಕು ಖಾತೆ, ಪಾಸ್ ಪೋರ್ಟು, ಅಥವಾ ವಾಹನಚಾಲನಾ ಪರವಾನಗಿ, ಇತ್ಯಾದಿ ಸೇವೆಗಳನ್ನು ಪ್ರತೀ ಬಾರಿ ಪಡೆಯಲು ಇಚ್ಛಿಸಿದಾಗಲೂ ಗುರುತಿನ ದಾಖಲೆಗಳ ಪುರಾವೆಗಳನ್ನು ಪುನಃ ಪುನಃ ಒದಗಿಸುವ ಅವಶ್ಯಕತೆಯಿರುವುದಿಲ್ಲ.
 • ಯುಐಡಿಏಐ ನ ಕೇಂದ್ರೀಕೃತ ತಂತ್ರಜ್ಞಾನ ಮೂಲಸೌಕರ್ಯವು ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ, ಹೇಗಾದರೂ ದೃಢೀಕರಣವನ್ನು ಒದಗಿಸುತ್ತದೆ.  ಹೀಗಾಗಿ ವಲಸೆ ಬಂದವರಿಗೂ ನಿಖರ ಗುರುತನ್ನು ಆಧಾರ್ ಒದಗಿಸುತ್ತದೆ.
 • ಆಧಾರ್ ದೃಢೀಕರಣವನ್ನು ಆನ್ ಲೈನ್ ನಲ್ಲಿಯೂ, ಆಫ್ ಲೈನ್ ನಲ್ಲಿಯೂ ಮಾಡಬಹುದಾಗಿದೆ. ಆನ್ ಲೈನಿನಲ್ಲಿ ಮಾಡುವ ದೃಢೀಕರಣವನ್ನು ಮೊಬೈಲ್ ಅಥವಾ ಲ್ಯಾಂಡ್ ಲೈನ್ ಸಂಪರ್ಕದ ಮೂಲಕ ಮಾಡಿದಾಗ ನಿವಾಸಿಗಳು ತಮ್ಮ ಗುರುತನ್ನು ಎಲ್ಲಿಂದಲಾದರೂ ದೃಢೀಕರಿಸಿಕೊಳ್ಳಬಹುದಾಗಿದೆ.
 • ದೂರದಲ್ಲಿರುವಾಗ, ಆನ್ ಲೈನ್ ಆಧಾರ್-ಸಂಪರ್ಕಿತ ಗುರುತು ಪರಿಶೀಲನೆಯಿಂದ ಬಡ ಹಾಗೂ ಗ್ರಾಮೀಣ ನಿವಾಸಿಗಳು ನಗರದ ನಿವಾಸಿಗಳು ಪಡೆಯುವ ಬ್ಯಾಂಕು ಅಥವಾ ಇತರ ವಹಿವಾಟುಗಳ ಸೇವೆಗಳ ಅನುಕೂಲವನ್ನು ಪಡೆಯಬಹುದಿರುತ್ತದೆ.
 • ನೋಂದಣಿಗೂ ಮುನ್ನ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ನಿಖರವಾದ ದೃಢೀಕರಣವನ್ನೂ ಆಧಾರ್ ನಿರೀಕ್ಷಿಸುತ್ತದೆ.   
 • ಭಾರತದಲ್ಲಿನ ಪ್ರಸ್ತುತ ಗುರುತು ಡ್ಯಾಟಾಬೇಸ್ ಗಳು ನಕಲು ಹಾಗೂ ಅಪರಿಚಿತ ಫಲಾನುಭವಿಗಳಿಂದ ಕೂಡಿದ್ದು, ಆಧಾರ್ ಡ್ಯಾಟಾಬೇಸ್ ನಿಂದ ಈ ತೊಂದರೆಗಳನ್ನು ನಿವಾರಿಸಲು ಯುಐಡಿಏಐ ನಿವಾಸಿಗಳ ವೈಯಕ್ತಿಕ ಮತ್ತು ಜೈವಿಕ ಮಾಹಿತಿ ಮತ್ತು ನಿಖರವಾದ ದೃಢೀಕರಣದೊಂದಿಗೆ ತನ್ನ ಡ್ಯಾಟಾಬೇಸ್ ಗೆ ಸೇರಿಸಿಕೊಳ್ಳಲು ಯೋಜಿಸುತ್ತಿದೆ.
 • ಇದರಿಂದಾಗಿ ಸಂಗ್ರಹಿಸುವ ದತ್ತಾಂಶಗಳು ಪ್ರಾರಂಭದಿಂದಲೇ ಶುದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದಿದೆ.
 • ಆದರೆ, ಅನೇಕ ಬಡ ಹಾಗೂ ವಂಚಿತ ಜನಸಂಖ್ಯೆಯು ಗುರುತಿನ ದಾಖಲೆಗಳನ್ನು ಹೊಂದಿಲ್ಲವಾದ್ದರಿಂದ ಆಧಾರ್ ಗುರುತೇ ಅವರಿಗೆ ಮೊದಲ ರೀತಿಯ ಹೆಗ್ಗುರುತಾಗಬಹುದಾಗಿದೆ.
 • ಯುಐಡಿಏಐ ತನ್ನ ನೋ ಯುವರ್ ರೆಸಿಡೆಂಟ್ (ಕೆವೈಆರ್) ಗುಣಮಟ್ಟಗಳಿಂದಾಗಿ ಬಡವರ ನೋಂದಣಿಗೆ ಅಡಚಣೆಯಾಗಿ ಪರಿಣಮಿಸುವುದಿಲ್ಲ ದಾಖಲು-ಪುರಾವೆಗಳಿಲ್ಲದ ನಿವಾಸಿಗಳಿಗೆ "ಪರಿಚಯ ವ್ಯವಸ್ಥೆ"ಯೊಂದನ್ನು ಅಭಿವೃದ್ಧಿ ಪಡಿಸಿದೆ.
 • ಈ ವ್ಯವಸ್ಥೆಯಿಂದ, ಈಗಾಗಲೇ ಆಧಾರ್ ಇರುವ ಅಧಿಕೃತ ವ್ಯಕ್ತಿಗಳು ("ಪರಿಚಯಿಸುವವರು") ಯಾವುದೇ ಗುರುತು ದಾಖಲುಗಳಿಲ್ಲದ ನಾಗರೀಕರನ್ನು ಪರಿಚಯಿಸಿ, ಅವರು ಆಧಾರ್ ಪಡೆದುಕೊಳ್ಳುವಂತೆ ಸಹಾಯ ಮಾಡಬಹುದಿದೆ.

ಆಧಾರ್ ಅನ್ನು ಯಾರು ಪಡೆಯಬಹುದು?

ಭಾರತೀಯ ನಿವಾಸಿಯಾಗಿದ್ದು ಯುಐಡಿಏಐ ನಿಗದಿಪಡಿಸಿರುವ ದೃಢೀಕರಣ ಪ್ರಕ್ರಿಯೆಯನ್ನು ಪೂರೈಸುವವರು ಆಧಾರ್ ಅನ್ನು ಪಡೆಯಬಹುದು.

ಆಧಾರ್ ಪಡೆಯುವುದು ಹೇಗೆ?

 

 • ಆಧಾರ್ ನೋಂದಣಿ ಉಚಿತ
 • ನಿವಾಸಿಗಳು ನೋಂದಣಿ ಸಂಸ್ಥೆಗೆ ತೆರಳಿ ಅರ್ಜಿಯನ್ನು ತುಂಬಿಸಿ ಸಂಬಂಧಪಟ್ಟ ದಾಖಲುಗಳನ್ನು ಒದಗಿಸಿದರೆ (ರಾಷ್ಟ್ರವ್ಯಾಪಿ ಅಧಿಕೃತವಾಗುವ ದಾಖಲುಗಳ ಪಟ್ಟಿಗಾಗಿ ದಯಮಾಡಿ ಇಲ್ಲಿ ಕ್ಲಿಕ್ ಮಾಡಿ) ನೋಂದಣಿ ಸಂಸ್ಥೆಯು ಫೋಟೋ, ಬೆರಳು ಗುರುತು ಹಾಗೂ ಕಣ್ಣುಪಾಫೆಯ ಛಾಯಾಚಿತ್ರಗಳನ್ನು ಪಡೆಯುತ್ತದೆ.
 • ಈ ನೋಂದಣಿ ಸಂಸ್ಥೆಯು ಪಡೆದ ದತ್ತಾಂಶವನ್ನು ಯುಐಡಿಏಐ ಸೂಚಿಸಿರುವ ವಿಧಾನದಂತೆ ಯುಐಡಿಏಐ ಗೆ ಕಳುಹಿಸುತ್ತದೆ.
 • ಯುಐಡಿ ವ್ಯವಸ್ಥೆಯು ನಂತರ ನಕಲು-ರಹಿತ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
 • ವ್ಯಕ್ತಿಯ ಮಾಹಿತಿಯು ಈಗಾಗಲೇ ಡ್ಯಾಟಾಬೇಸಿನಲ್ಲಿ ಇಲ್ಲದಿದ್ದರೆ, ಒಂದು ಯುಐಡಿ ಸಂಖ್ಯೆಯನ್ನು ನೀಡಲಾಗುತ್ತದೆ ಹಾಗೂ ವ್ಯಕ್ತಿಯ ನಿವಾಸಕ್ಕೆ ಪತ್ರವೊಂದನ್ನು ಕಳುಹಿಸಲಾಗುತ್ತದೆ. ಯುಐಡಿ ಸಂಖ್ಯೆಯನ್ನು ರಿಜಿಸ್ಟ್ರಾರರಿಗೂ ಅವರ ಸೇವಾ ಡ್ಯಾಟಾಬೇಸಿನಲ್ಲಿ ಅಳವಡಿಸಲು ರವಾನಿಸಲಾಗುತ್ತದೆ.
 • ವ್ಯಕ್ತಿಯ ಮಾಹಿತಿಯು ಈಗಾಗಲೇ ಡ್ಯಾಟಾಬೇಸಿನಲ್ಲಿ ಇದ್ದಲ್ಲಿ, ನೋಂದಣಿಯು ತಿರಸ್ಕೃತಗೊಳ್ಳುತ್ತದೆ ಹಾಗೂ ವ್ಯಕ್ತಿಗೆ ಈ ಮಾಹಿತಿಯನ್ನು ನೀಡಲಾಗುತ್ತದೆ.