​​​

​                                                                                                                                                     

 


         

ಡಾ।। ಎಂ ಆರ್ ಏಕಾಂತಪ್ಪ 
ವ್ಯವಸ್ಥಾಪಕ ನಿರ್ದೇಶಕರು ಡಿಬಿಸಿಡಿಸಿ  

ಹಲವಾರು ಸಹಾಯಧನ ನೀಡುವ ಕಾರ್ಯಕ್ರಮಗಳ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ    ನಿಗಮವು ​ಸಕಲ ರೀತಿಯ ಪ್ರಯತ್ನ ಮಾಡಿ ಶ್ರಮಿಸುತ್ತಿದೆ.

ಹಿಂದುಳಿದ ವರ್ಗಗಳ ಜೀವನ ವಿಧಾನಗಳನ್ನು ಉತ್ತಮ ಪಡಿಸುವ ವಚನಬದ್ಧತೆ ಹೊಂದಿರುವ ನಿಗಮವು ಹಲವಾರು ವಿನೂತನ ಕಾರ್ಯಕ್ರಮಗಳು ಮತ್ತು ವ್ಯಾಪಕ  ಚಟುವಟಿಕೆಗಳನ್ನು ರೂಪಿಸುತ್ತಿದೆ.

ವಿನೂತನ ಕಲ್ಪನೆಗಳನ್ನು ಸಾಕಾರಗೋಳಿಸುವುದು, ಹಿಂದುಳಿದ ವರ್ಗದ ಎಲ್ಲರನ್ನೂ ತಲುಪಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು, ಇದೇ ರೀತಿಯ ಸಾಮಾಜಿಕ ಬದ್ಧತೆಗಾಗಿ ಕಾರ್ಯಪ್ರವೃತ್ತರಾದ ಸಂಘ-ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸುವುದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹಿನ್ನೆಲೆಯಾಗಿದೆ ಹಿಂದುಳಿದ ವರ್ಗದವರು ಇಲಾಖೆಯ ಕಾರ್ಯಕ್ರಮಗಳ ಹೆಚ್ಚೆಚ್ಚು ಪ್ರಯೋಜನ ಪಡೆಯುವಂತೆ ಮಾಡಲು ಮತ್ತು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಚಟುವಟಿಕೆಗಳನ್ನು ಜನಸಾಮಾನ್ಯರಲ್ಲಿ ಪ್ರಜ್ವಲಪಡಿಸಲು ಈ ಅಂತರ್ಜಾಲ ತಾಣವನ್ನು ರೂಪಿಸಲಾಗಿದೆ.

ಜನಸಾಮಾನ್ಯರು ಈ ಮಾಹಿತಿಯನ್ನು ಓದಿ ನಮಗೆ ಸೃಜನಾತ್ಮಕ ಸಲಹೆ​, ಸೂಚನೆಗಳನ್ನು ನೀಡುತ್ತಾರೆಂದು ಭಾವಿಸಲಾಗಿದೆ​. ಇದರಿಂದ ನಿಗಮದವರು ಕ್ರಿಯಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡು ಹಿಂದುಳಿದ ವರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮನ್ನು ಬಲಪಡಿಸುವರೆಂದು ಆಶಿಸಲಾಗಿದೆ.​