​​​

ಮೂಲ ಉದ್ದೇಶ : 

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿ  ಉದ್ಯಮವಾಗಿರುತ್ತದೆ. 


 

 ರಚನೆಯ ಉದ್ದೇಶ: 

ಹಿಂದುಳಿದ ​ ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ, ಸ್ವಯಂ  ಉದ್ಯೋಗ ಕೈಗೊಳ್ಳಲು ಸಾಲ ಮತ್ತು ಸಹಾಯಧನದ ನೆರವು ಒದಗಿಸುವುದು. ಹಿಂದುಳಿದ ವರ್ಗಗಳಿಗೆ ಸೇರಿದ ಸಾಂಪ್ರದಾಯಿಕ  ವೃತ್ತಿದಾರರ ಕೌಶಲ್ಯತೆ ಹೆಚ್ಚಿಸಿಕೊಳ್ಳಲು ಅಗತ್ಯ ತರಬೇತಿ ಮತ್ತು ​​ಸಾಲ ಮತ್ತು ಸಹಾಯಧನದ ನೆರವು  ಹಾಗೂ ಹಿಂದುಳಿದ ವರ್ಗಗಳಿಗೆ  ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.ಧ್ಯೇಯೋದ್ದೇಶಗಳು:​

ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು   ಸಹಾಯಧನ ಹಾಗೂ ರಿಯಾಯತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದು ಮತ್ತು ವೃತ್ತಿ ಕೌಶಲ್ಯತೆ ಹೆಚ್ಚಿಸುವ ತರಬೇತಿ ನೀಡುವುದು.


ಗುರಿಗಳು:

ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಆರ್ಥಿಕ ಅಭಿವೃದ್ದಿ ಹೆಚ್ಚಿಸುವುದು.  

 

ಕಾರ್ಯನೀತಿ: 

ಹಿಂದುಳಿದ ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ ಸರ್ಕಾರವು ಒದಗಿಸಿದ ಅನುದಾನದಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು.


        ಕಾರ್ಯನಿರ್ವಹಣೆ:

​​ಹಿಂದುಳಿದ ವರ್ಗಗಳ ಜನರಿಗೆ ಸಾಲ ಸೌಲಭ್ಯ ಒದಗಿಸಲು ಅರ್ಜಿ ಅಹ್ವಾನಿಸಿ, ಅರ್ಹ ಅರ್ಜಿದಾರರನ್ನು ನಿಯಮಾನುಸಾರ ವಿವಿಧ ಆಯ್ಕೆ ಸಮಿತಿಗಳಿಂದ ಆಯ್ಕೆ ಮಾಡಿ, ಅವರು ಕೈಗೊಳ್ಳುವ ಉದ್ದೇಶ/ಆರ್ಥಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವುದು. ಆರ್ಥಿಕ ನೆರವು ಪಡೆದುಕೊಂಡ ಫಲಾನುಭವಿಗಳು ಘಟಕ ಸ್ಥಾಪನೆ ಮಾಡಿಕೊಂಡು, ಆರ್ಥಿಕ ಚಟುವಟಿಕೆ ಕೈಗೊಳ್ಳುತ್ತಿರುವ ಬಗ್ಗೆ ಮತ್ತು ಆರ್ಥಿಕವಾಗಿ ಪ್ರಗತಿಯಾಗಿರುವ ಬಗ್ಗೆ ದೃಢೀಕರಿಸಿಕೊಳ್ಳುವುದು.​