​​​​​

​​​​​​​​ಗಂಗಾಕಲ್ಯಾಣ ನೀರಾವರಿ ಯೋಜನೆ​​​​ 1. ಉದ್ದೇಶ: ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.
2. ಅರ್ಹತೆ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. (ವಿಶ್ವಕರ್ಮ ಅದರ ಉಪ ಸಮುದಾಯಗಳು, ಉಪ್ಪಾರ ಅದರ ಉಪ ಸಮುದಾಯಗಳು, ಅಂಬಿಗ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) 
3. ಸೌಲಭ್ಯ: 
1. ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ: ಈ ಯೋಜನೆಯಲ್ಲಿ  ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.  
ಘಟಕವೆಚ್ಚ: ರೂ.2.50ಲಕ್ಷಗಳು. ರೂ.2.00ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ರೂ.50,000/-ಗಳ ಸಾಲ. 
ರೂ.2.00ಲಕ್ಷಗಳ ಸಹಾಯಧನದಲ್ಲಿ  ಕೊಳವೆ ಬಾವಿ ಕೊರೆಯುವ ವೆಚ್ಚ, ಪಂಪ್‍ಸೆಟ್ ಅಳವಡಿಕೆ ಹಾಗೂ ಪೂರಕ ಸಾಮಗ್ರಿಗಳ ಸರಬರಾಜಿಗೆ ರೂ.1.50ಲಕ್ಷಗಳ ವೆಚ್ಚ ಭರಿಸಲಾಗುವುದು. 
ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಆರ್.ಆರ್. ಸಂಖ್ಯೆ ನೀಡಿದ ನಂತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದ್ಧೀಕರಣ ವೆಚ್ಚವಾಗಿ. ಪ್ರತಿ ಕೊಳವೆ ಬಾವಿಗಳಿಗೆ ರೂ.50000/-ಗಳಂತೆ ಪಾವತಿಸಲಾಗುವುದು. 
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.4.00ಲಕ್ಷಗಳು, ಇದರಲ್ಲಿ ರೂ.3.50ಲಕ್ಷಗಳ ಸಹಾಯಧನ ಹಾಗೂ ರೂ.50000/-ಗಳ ಸಾಲವಾಗಿರುತ್ತದೆ.
2. ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ: ಪ್ರವರ್ಗ-1, 2ಎ, 3ಎ & 3ಬಿಗೆ ಸೇರಿದ ಕನಿಷ್ಠ 3 ಜನ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ನೀರಾವರಿ ಸೌಲಭ್ಯ. 
ಘಟಕ ವೆಚ್ಚ: 8-15 ಎಕರೆ ಜಮೀನಿಗೆ ರೂ.4.00ಲಕ್ಷಗಳ  ವೆಚ್ಚದಲ್ಲಿ 2 ಕೊಳವೆಬಾವಿ ಹಾಗೂ 15 ಎಕರೆಗಿಂತ ಹೆಚ್ಚು ಜಮೀನು ಒಳಪಡುವ ಘಟಕಗಳಿಗೆ ನಿಗದಿತ ಘಟಕವೆಚ್ಚ ರೂ.6.00ಲಕ್ಷಗಳ ವೆಚ್ಚದಲ್ಲಿ 3 ಕೊಳವೆಬಾವಿಗಳನ್ನು ಕೊರೆಯಿಸಿ ಪಂಪ್‍ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡುವುದು ಹಾಗೂ ವಿದ್ಯುದ್ದೀಕರಣಕ್ಕೆ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಇದು ಪೂರ್ಣ ಅನುದಾನವಾಗಿರುತ್ತದೆ.
3. ತೆರೆದಬಾವಿ: ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.
4. ಸಾಮೂಹಿಕ ಏತ ನೀರಾವರಿ ಯೋಜನೆ: ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲಸಂಪನ್ಮೂಲಗಳಾದ ನದಿ, ಕೆರೆ, ಹಳ್ಳ ಇವುಗಳಿಗೆ ಮೋಟಾರ್ ಅಳವಡಿಸಿ ಪೈಪ್‍ಲೈನ್ ಮೂಲಕ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು. 
ಘಟಕವೆಚ್ಚ: ಸಾಮೂಹಿಕ ನೀರಾವರಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಸೌಲಭ್ಯ ಒದಗಿಸುವುದು. 
ಈ ಕಾರ್ಯಕ್ರಮಕ್ಕೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಆರ್ಥಿಕ ಗುರಿಯನ್ವಯ ಮೀಸಲಾತಿ ಅನುಪಾತ  ಪ್ರವರ್ಗ-1 ಮತ್ತು 2ಎಗೆ 70% ಪ್ರವರ್ಗ-3ಎ ಮತ್ತು 3ಬಿಗೆ 30%ರಂತೆ ವೈಯಕ್ತಿಕ/ಸಾಮೂಹಿಕ ನೀರಾವರಿ ಘಟಕಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಬೇಕು. 
5. ಮರುಪಾವತಿ ಅವಧಿ: ಸಾಲದ  ಮರುಪಾವತಿ ಅವಧಿ 3 ವರ್ಷಗಳು. 
6. ಕರ್ನಾಟಕ ಅಂತರ್ಜಲ ಅಧಿನಿಯಮದನ್ವಯ ಈ ಕೆಳಕಂಡ 35 ತಾಲ್ಲೂಕುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ಮುನ್ನ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು. ಅನುಮತಿ ಪಡೆದಂತಹ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಲು ಕ್ರಮವಹಿಸತಕ್ಕದ್ದು.​​ಕ್ರಸಂ

ಜಿಲ್ಲೆಯ ಹೆಸರು

​​ಕ್ರಸಂ


ತಾಲ್ಲೂಕುಗಳ ಹೆಸರು
1 ಬೆಂಗಳೂರು ನಗರ 1 ಆನೇಕಲ್
2 ಬೆಂಗಳೂರು ಪೂರ್ವ
3 ಬೆಂಗಳೂರು ಉತ್ತರ
4​ ಬೆಂಗಳೂರು ದಕ್ಷಿಣ
2 ಬೆಂಗಳೂರು ಗ್ರಾಮಾಂತರ 5 ದೇವನಹಳ್ಳಿ
6 ದೊಡ್ಡಬಳ್ಳಾಪುರ
7 ಹೊಸಕೋಟೆ
8 ನೆಲಮಂಗಲ
3 ರಾಮನಗರ 9 ಕನಕಪುರ
10 ರಾಮನಗರ
4 ತುಮಕೂರು 11 ಚಿಕ್ಕನಾಯಕನಹಳ್ಳಿ
12 ಕೊರಟಗೆರೆ
13 ಮಧುಗಿರಿ
5 ಚಿತ್ರ​ದುರ್ಗ 14 ಚಿತ್ರದುರ್ಗ
​​ 15 ಹೊಳಲ್ಕೆರೆ
6 ಕೋಲಾರ 16 ಬಂಗಾರಪೇಟೆ
17 ಕೋಲಾರ
18 ಮಾಲೂರು
19 ಮುಳಬಾಗಿಲು
20 ಶ್ರೀನಿವಾಸಪುರ​
7 ಚಿಕ್ಕಬಳ್ಳಾಪುರ ​21 ಚಿಕ್ಕಬಳ್ಳಾಪುರ
22 ಚಿಂತಾಮಣಿ
23 ಗೌರಿಬಿದನೂರು
24 ಗುಡಿಬಂಡೆ
25 ಶಿಡ್ಲಘಟ್ಟ
8 ದಾವಣಗೆರೆ 26 ಜಗಳೂರು
9 ಬೆಳಗಾವಿ 27 ಅಥಣಿ
28 ಬೈಲಹೊಂಗಲ
29 ರಾಮದುರ್ಗ
30 ಸವದತ್ತಿ
10 ಬಾಗಲಕೋಟೆ 31 ಬಾದಾಮಿ
32 ಬಾಗಲಕೋಟೆ
11 ಬಳ್ಳಾರಿ 33 ಹಗರಿ ಬೊಮ್ಮನಹಳ್ಳಿ
34 ಹಡಗಲಿ
12 ಕೊಪ್ಪಳ 35 ಯಲಬುರ್ಗ