​​​​

​​​​

                                                                             23cc6ea397f0c92163f9ed1a1e035eb22fc4e3fc.jpg              

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖಾ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಪ್ರತಿ ವರ್ಷ ನೀಡುತ್ತಿರುವ “ಅತ್ಯುತ್ತಮ ಕಾರ್ಯಕ್ಷಮತ ಪ್ರಶಸ್ತಿ”ಯನ್ನು 2012-13ನೇ ಸಾಲಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ನೀಡಿರುತ್ತದೆ. ಸದರಿ ಪ್ರಶಸ್ತಿಯನ್ನು ಭಾರತ ಸರ್ಕಾರದ ಸಾಮಾಜಿ ನ್ಯಾಯ ಮತ್ತು ಸಬಲೀಕರಣ ಸಚಿವರು ದಿನಾಂಕ:16/09/2014ರಂದು ವಿತರಿಸಿರುತ್ತಾರೆ. ​ ​ 
ಮೈಸೂರು ದಸರ ವಸ್ತು ಪ್ರದರ್ಶನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವಿವಿಧ ಸಾಲ ಯೋಜನೆಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲು 2015-16ನೇ ಸಾಲಿಗೆ ನಿಗಮದಿಂದ ಮಳಿಗೆ ಸ್ಥಾಪಿಸಿರುವುದಕ್ಕೆ  “ವಿಶೇಷ ಪ್ರಶಸ್ತಿ” (Special Award​) ಯನ್ನು ಮೈಸೂರು ದಸರ ವಸ್ತು ಪ್ರದರ್ಶನ ಪ್ರಾಧಿಕಾರವು ನೀಡಿ ಗೌರವಿಸಿದೆ.​​

ಉತ್ತಮ ಕಾರ್ಯಕ್ಷಮತಾ ಪ್ರಶಸ್ತಿ         

  • ರಾಷ್ಟ್ರ ಮಟ್ಟದಲ್ಲಿ ಚಾನಲೈಸಿಂಗ್ ಏಜೆನ್ಸಿಗಳಿಗೆ ನೀಡುವ "ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ"ಗಳಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2006-07ನೇ ಸಾಲಿಗೆ ಪ್ರಥಮ ಸ್ಥಾನ (First Rank) ಪಡೆದಿದೆ.                       

ಮಾದರಿ ಸಂಸ್ಥೆಯ ಪ್ರಶಸ್ತಿ

  • ​ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ಪಬ್ಲಿಕ್ ಒಪಿನಿಯನ್ ನವದೆಹಲಿ ಇವರಿಂದ 1996-97ರಲ್ಲಿ ರಾಜ್ಯದಲ್ಲಿ ಹೈನುಗಾರಿಕೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ಪ್ರಶಂಸೆ ಲಭಿಸಿದೆ.

1995-96-ಪ್ರಶಂಸೆ

ಎನ್.ಬಿ.ಸಿ.ಎಫ್.ಡಿ.ಸಿಯಿಂದ ರಾಷ್ಟ್ರದಲ್ಲಿಯೇ ಅತಿ ಹೆಚ್ಚಿನ ಹಣಕಾಸು ನೆರವು ಪಡೆದು ರಾಜ್ಯದ ಹೆಚ್ಚಿನ ಹಿಂದುಳಿದ ಜನರಿಗೆ ಗರಿಷ್ಟ ನೆರವು ನೀಡಿಕೆಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಪ್ರಶಂಸೆ ಪಡೆದಿದೆ.

13/01/2017ರಂದು ನವದೆಹಲಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಲಭಿಸಿದ “ಅತ್ಯುತ್ತಮ ಕಾರ್ಯಕ್ಷಮತ ಪ್ರಶಸ್ತಿ

  1. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮಾನ್ಯ ಸಚಿವರಾದ ಶ್ರೀತಾವರ್ ಚಂದ್ ಗೆಲ್ಹೋಟ್ ಇವರಿಂದ ದಿನಾಂಕ:13/01/2017ರಂದು ನವದೆಹಲಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಲಭಿಸಿದ “ಅತ್ಯುತ್ತಮ ಕಾರ್ಯಕ್ಷಮತ ಪ್ರಶಸ್ತಿಯನ್ನು”  ವ್ಯವಸ್ಥಾಪಕ ನಿರ್ದೇಶಕರು ಇವರು ​ ಸ್ವೀಕರಿಸುತ್ತಿರುವುದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ನಾರಾಯಣ್, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್.ಮೀನಾ, ಶ್ರೀ ಕಿಶೋರ್ ಕುಮಾರ್ ಸ್ಯಾನ್‍ಸಿ, ಸಿ.ಇ.ಒ., ವಿಜಯ ಬ್ಯಾಂಕ್ ಹಾಗೂ ಶ್ರೀ ಕೆ.ಎನ್.ನಾಗರಾಜ, ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.


  2. ​​​​ ​​​​     ​  ವ್ಯವಸ್ಥಾಪಕ ನಿರ್ದೇಶಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಇವರು ದಿನಾಂಕ:13/01/2018ರಂದು ರಾಷ್ಟ್ರೀಯ ಹಿಂದುಳಿದ ವರ್ಗಗಳಹಣಕಾಸು ಮತ್ತು ಅಭಿವೃದ್ಧಿ ನಿಗಮ, ನವದೆಹಲಿ ಇವರಿಂದ ಬಹುಮಾನದ ಮೊತ್ತವಾಗಿ 2017-18ನೇ ಸಾಲಿನ ರೂ.10.00ಲಕ್ಷಗಳ “ಕಾರ್ಯಕ್ಷಮತೆ ​ ಆಧಾರಿತ ಅನುದಾನದ ಪ್ರಮಾಣ ಪತ್ರ”ವನ್ನು ಸ್ವೀಕರಿಸುತ್ತಿರುವರು. ರಾಜ್ಯ ಅನುಷ್ಠಾನ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
     ​​​​​​​​​​​​​​​