​​​

ನಿರುದ್ಯೋಗಿ ಪಧವೀದರರಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ: 

 ಸನ್ಮಾನ್ಯ ಮುಖ್ಯಮಂತ್ರಿಯವರು 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ   “ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕಾಗಿ 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯವನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ದರದಲ್ಲಿ ಒದಗಿಸಲಾಗುವುದು” ಘೋಷಿಸಲಾಗಿರುತ್ತದೆ. ಅದರಂತೆ ಕಾರ್ಯಕ್ರಮವನ್ನು ಈ ಕೆಳಕಂಡಂತೆ ಅನುಷ್ಠಾನಗೊಳಿಸಲಾಗುವುದು.
 
1. ಸಾಲದ ಉದ್ದೇಶ: ನಿರುದ್ಯೋಗಿ ಪದವೀಧರರು ಸ್ವಯಂ ಉದ್ಯೋಗಕ್ಕೆ ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ  ಚಟುವಟಿಕೆ ಕೈಗೊಳ್ಳಲು ಸಾಲದ ನೆರವು.
2. ಅರ್ಹತೆ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು (ವಿಶ್ವಕರ್ಮ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ)
3. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
4. ವಯೋಮಿತಿ: ಕನಿಷ್ಠ 30 ವರ್ಷಗಳು ಹಾಗೂ ಗರಿಷ್ಟ 40 ವರ್ಷಗಳು.
5. ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದು, ನಿರುದ್ಯೋಗಿಯಾಗಿರಬೇಕು. 
6. ಸಾಲದ ಮೊತ್ತ: ಗರಿಷ್ಟ ರೂ10,00,000/-ಗಳು.
7. ಸಾಲದ ಭದ್ರತೆ: ಸಾಲದ ಭದ್ರತೆಗೆ ಅಭ್ಯರ್ಥಿಯು ಸ್ಥಿರಾಸ್ಥಿಯನ್ನು ನಿಗಮಕ್ಕೆ ಆಧಾರ ಮಾಡಬೇಕು. (ಕೊಲ್ಯಾಟರಲ್ ಸೆಕ್ಯೂರಿಟಿ)
8. ಅಭ್ಯರ್ಥಿಗಳ ಆಯ್ಕೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡುವುದು.
9. ಬಡ್ಡಿದರ: ವಾರ್ಷಿಕ ಶೇ.6ರಷ್ಟು.
10. ಸಾಲದ ಮರುಪಾವತಿ ಅವಧಿ:  3 ವರ್ಷಗಳಿಂದ 5 ವರ್ಷಗಳು(ಮಾಸಿಕ ಕಂತುಗಳಲ್ಲಿ).