​​

​​​​​

ಕುಂಬಾರಿಕೆ ಉತ್ಪನ್ನಗಳ ತಯಾರಿಕೆಗೆ ಆರ್ಥಿಕ ನೆರವು

  1. ಕುಂಬಾರಿಕೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 2010-2011ನೇ ಸಾಲಿನಲ್ಲಿ ​ 'ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು' ರಚಿಸಿರುತ್ತದೆ.
  2. ಉದ್ದೇಶ: ಕುಂಬಾರಿಕೆ ಅಭಿವೃದ್ಧಿಗಾಗಿ ಉತ್ಪನ್ನಗಳ ತಯಾರಿಕೆಗೆ ಅವಶ್ಯವಿರುವ ಆಧುನಿಕ ಉಪಕರಣಗಳನ್ನು ಕೊಳ್ಳಲು ಹಾಗೂ ದುಡಿಮೆ ಬಂಡವಾಳಕ್ಕಾಗಿ ಸಾಲ ಮತ್ತು ಸಹಾಯಧನ ಒದಗಿಸುವುದು.
  3. ಅರ್ಹತೆ: ಕುಂಬಾರ​ ಸಮುದಾಯಕ್ಕೆ ಸೇರಿರಬೇಕು,ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
  4. ಸಹಾಯಧನ: ಗರಿಷ್ಠ ರೂ.5,000/-ಗಳು.
  5. ಸಾಲದ ಮೊತ್ತ: ಗರಿಷ್ಟ ರೂ.25,000/-ಗಳು ವಾರ್ಷಿಕ ಶೇ.4ರ ಬಡ್ಡಿದರ.
  6. ಮರುಪಾವತಿ: ಅವಧಿ 3 ವರ್ಷ (ಮಾಸಿಕ ಕಂತುಗಳಲ್ಲಿ)
  7. ಫಲಾನುಭವಿಗಳ ಆಯ್ಕೆ: ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು.