​​

​​​​​​​​​​​​​​ಕುರಿ ಸಾಕಾಣಿಕೆ ಮಾಡುವ ಸಮಾಜದವರಿಗೆ ಕುರಿಗಳನ್ನು ಸಾಕಾಲು ಹಾಗೂ ಕಂಬಳಿ ನೇಕಾರರಿಗೆ ಸಾಲ ಮತ್ತು ಸಹಾಯಧನ ಯೋಜನೆ: 


ಸನ್ಮಾನ್ಯ ಮುಖ್ಯಮಂತ್ರಿಯವರು 2013-14ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-288ರಲ್ಲಿ ಕುರಿ ಸಾಕಾಣಿಕೆ ಮಾಡುವ ಪ್ರವರ್ಗ-1,ಪ್ರವರ್ಗ-2ಎ((ವಿಶ್ವಕರ್ಮ ಸಮುದಾಯಗಳನ್ನು ಹೊರತುಪಡಿಸಿ)ಸಮಾಜದವರಿಗೆ ಕುರಿಗಳ ಸಾಕಲು ಹಾಗೂ ಕಂಬಳಿ ನೇಕಾರಿಕೆಗೆ ಆರ್ಥಿಕ ನೆರವು ನೀಡಲು ರೂ.10,000/-ಗಳ ಸಹಾಯಧನ ಹಾಗೂ ರೂ.90,000/-ಗಳ ಸಾಲವನ್ನು  ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದೆಂದು ಘೋಷಿಸಲಾಗಿರುತ್ತದೆ. ಈ ಘೋಷಣೆಯಂತೆ ಸರ್ಕಾರದ ಆದೇಶ ಸಂಖ್ಯೆ ಬಿಸಿಡಬ್ಲ್ಯೂ 503 ಬಿಎಂಎಸ್ 2013, ಬೆಂಗಳೂರು ದಿನಾಂಕ 29/03/2014ರಲ್ಲಿ ಕುರಿ ಸಾಕಾಣಿಕೆ ಹಾಗೂ ಉಣ್ಣೆ ನೇಕಾರಿಕೆ ಮಾಡುವ ಕುರುಬ ಸಮಾಜದ ಪ್ರತಿ ಅರ್ಜಿದಾರರಿಗೆ ರೂ.10000- ಸಹಾಯಧನ ಹಾಗೂ ರೂ.90000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲು ಸರ್ಕಾರವು ಆದೇಶ ಹೊರಡಿಸಿರುತ್ತದೆ ಹಾಗೂ ಪೂರಕ ಅಂದಾಜು-2ರಲ್ಲಿ ರೂ.960.00 ಲಕ್ಷಗಳನ್ನು ಒದಗಿಸಲಾಗಿರುತ್ತದೆ. 2014-15ನೇ ಸಾಲಿನಲ್ಲಿ 960 ಜನರಿಗೆ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ.  ​​