ನೂತನ ದೃಷ್ಟಿಪಥಗಳು

​​​​​​​​ಸಾಮಾಜಿಕ - ಆರ್ಥಿಕ ಸಬಲೀಕರಣ
​​ಸ್ವಯಂ ಉದ್ಯೋಗ, ನೀರಾವರಿ ಮತ್ತು ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಸಬಲೀಕರಣಕ್ಕೆ ಅಗತ್ಯವಾದ ಆದಾಯ ತರುವಂತಹ ಚಟುವಟಿಕೆಗಳಿಗೆ ಪ್ರಥಮ ಆಧ್ಯತೆ ನೀಡಲು ಕ್ರಮವಹಿಸುವುದು. ಹಿಂದುಳಿದ ವರ್ಗಗಳ ಜನರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತಹ ವೃತ್ತಿಪರ ತರಬೇತಿಯನ್ನು ನೀಡಲು ಕ್ರಮವಹಿಸುವುದು.

ಡಾ.ನಂಜುಂಡಪ್ಪ ವರದಿಯಲ್ಲಿ ಗುರುತಿಸಲಾದ 39 ಅತಿ ಹಿಂದುಳಿದ ತಾಲ್ಲೂಕು/ಗಡಿನಾಡು ತಾಲ್ಲೂಕುಗಳಿಗೆ ವಿಶೇಷ ಆಧ್ಯತೆ ನೀಡುವುದು. ವಿಧವೆಯರು/ಪರಿತ್ಯಕ್ತೆಯರು ಮತ್ತು ಅಂಗವಿಕಲರಿಗೆ ಪ್ರಥಮ ಆಧ್ಯತೆ ನೀಡುವುದುಪ್ರಚಾರ
ನಿಗಮದ ಯೋಜನೆಗಳ ಬಗ್ಗೆ ಅರಿವು ಹಾಗೂ ಅನುಷ್ಠಾನದಲ್ಲಿನ ನ್ಯೂನತೆ ಮತ್ತು ಕೊರತೆಗಳನ್ನು ತಿಳಿಯಲು ಜಿಲ್ಲಾ/ತಾಲ್ಲೂಕು/ಗ್ರಾಮ ಮಟ್ಟದಲ್ಲಿ “ಸಂವಾದ” ಕಾರ್ಯಕ್ರಮ ಮತ್ತು ಪ್ರತಿ ತಿಂಗಳ ಮೊದಲ ಶನಿವಾರದಂದು ಕುಂದು ಕೊರತೆ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.
ವಿದ್ಯುನ್ಮಾನ ಮಾಧ್ಯಮಗಳಾದ ರೇಡಿಯೋ ಹಾಗೂ ಪತ್ರಿಕೆಗಳಲ್ಲಿ ನಿಗಮದ ಯೋಜನೆಗಳ ಬಗ್ಗೆ, ಗುರಿಯ ಬಗ್ಗೆ ಮಾಹಿತಿ ನೀಡಿ ಪ್ರಚಾರ ನೀಡುವುದು. ಇದಲ್ಲದೆ, ಯಶೋಗಾಥೆಯನ್ನು ಆಕಾಶವಾಣಿ ದೂರದರ್ಶನದಲ್ಲಿ ಪ್ರಚುರಪಡಿಸಲು ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವುದು. ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಹಂತದಲ್ಲಿ ಯೋಜನೆಗಳ ಬಗ್ಗೆ ಮಾಹಿತಿನೀಡಿ, ಅರ್ಜಿದಾರರನ್ನು ಗುರುತಿಸಲು ಕ್ರಮವಹಿಸುವುದು.ನಿಗಮವು ನೀಡುವ ಕರ ಪತ್ರಗಳು, ಭಿತ್ತಿ ಪತ್ರಗಳು, ಕೈಪಿಡಿಗಳ ಮೂಲಕ ಪ್ರಚಾರಾಂದೋಲನ ಕಾರ್ಯವನ್ನು ಹಮ್ಮಿಕೊಳ್ಳಲು ಕ್ರಮವಹಿಸುವುದು. ನಿಗಮದ ವಾರ್ಷಿಕ ಗುರಿಯನ್ನು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ನಿಗಮದ ಕಛೇರಿಯ ಫಲಕ (ನೋಟೀಸ್ ಬೋರ್ಡ್)ಗಳಲ್ಲಿ ಪ್ರಕಟಿಸುವುದು.

ಸಮನ್ವಯತೆ ಮತ್ತು ಮಾರುಕಟ್ಟೆ

ಸಾಲ ಸೌಲಭ್ಯ ಪಡೆದು ಹಿಂದುಳಿದ ವರ್ಗಗಳ ಜನರು ಉತ್ಪಾದನೆ ಮಾಡುವ ವಸ್ತುಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಲು, ಹಾಲು ಒಕ್ಕೂಟ, ಕೈಮಗ್ಗ ನಿಗಮ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ವಿವಿಧ ಸಹಕಾರ ಸಂಘ ಆಪಕಾಮ್ಸ್ ಮತ್ತಿತರೆ ಮಾರುಕಟ್ಟೆ ಸೌಲಭ್ಯವಿರುವ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸಲು ತಪ್ಪದೆ ಕ್ರಮವಹಿಸುವುದು.
ನಿಗಮದಿಂದ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಇತರ ಇಲಾಖೆಗಳಿಂದ/ಯೋಜನೆಗಳಿಂದ ಲಭ್ಯವಾಗುವ ಸಬ್ಸಿಡಿ/ಪ್ರೋತ್ಸಾಹ ಧನವನ್ನು ದೊರಕಿಸಿಕೊಡಲು ಸಮನ್ವಯ ಕಾರ್ಯವನ್ನು ನಿರ್ವಹಿಸುವುದು.ಗಂಗಾ ಕಲ್ಯಾಣ ಮತ್ತಿತರ ಯೋಜನೆಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಕೃಷಿ, ತೋಟಗಾರಿಕೆ, ಸಹಕಾರ, ಜಲಾನಯನ ಇತ್ಯಾದಿ ಇಲಾಖೆಗಳೊಂದಿಗೆ ದೊರೆಯುವ ವಿವಿಧ ರೀತಿಯ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಪರಿವರ್ತನ/ಪ್ರಚೋದಕ (catalyst) ಕಾರ್ಯಗಳನ್ನು ನಿರ್ವಹಿಸುವುದು.

ಸಾಲ ವಸೂಲಾತಿ ಆಂದೋಲನ
ನಿಗಮವು ಜಿಲ್ಲಾ ಕಚೇರಿಗೆ ಸರಬರಾಜು ಮಾಡುವ ಕಂಪ್ಯೂಟರ್‌ಗಳನ್ನು ಇಲ್ಲವೇ ಜಿಲ್ಲಾ ಪಂಚಾಯತ್ ಒದಗಿಸಿರುವ ಕಂಪ್ಯೂಟರ್‌ಗಳನ್ನು ಉಪಯೋಗಿಸಿ, ಸಾಲದ ಖಾತೆಗಳನ್ನು ಕಂಪ್ಯುಟರೀಕರಣ ಮಾಡುವುದು. ಫಲಾನುಭವಿಗಳಿಗೆ ಬಾಕಿ ಸಾಲ ವಸೂಲಿ ಮಾಡಲು ನೋಟೀಸ್ ಜಾರಿ ಮಾಡುವುದು. ಒಂದೆರಡು ನೋಟೀಸ್‌ಗಳಿಗೆ ಫಲಾನುಭವಿಗಳು ಪ್ರತಿಕ್ರಿಯಿಸದಿದ್ದರೆ, ಅಂತಿಮ ನೋಟೀಸನ್ನು ಜಾರಿ ಮಾಡುವುದು ಮತ್ತು ಸ್ಥಳ, ದಿನಾಂಕ ಮತ್ತು ವೇಳೆಯನ್ನು ನಿಗದಿಪಡಿಸಿ, ಸಂವಾದ ಕಾರ್ಯಕ್ರಮವನ್ನು ಸಂಘಟಿಸಿ, ಸಾಲ ವಸೂಲಾತಿಗೆ ಫಲಾನುಭವಿಗಳ ಮನವೊಲಿಸಲು ಸಂಘಟಿತ ಕ್ರಮವಹಿಸುವುದು ಹಾಗೂ ನಿಗಮದ ಕರ್ತೃತ್ವ ಕ್ರಮಗಳನ್ನು ಫಲಾನುಭವಿಗಳಿಗೆ ತಿಳುವಳಿಕೆ ಮೂಡಿಸುವುದು. ವರ್ಷದಲ್ಲಿ ಪ್ರತಿ ತಿಂಗಳಿಗೊಮ್ಮೆ ಸಾಲ ವಸೂಲಾತಿ ಆಂದೋಲನವನ್ನು ಹಮ್ಮಿಕೊಳ್ಳುವುದು ಹಾಗೂ ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿದ ಫಲಾನುಭವಿಗಳನ್ನು ಗುರ್ತಿಸಿ ಅಂತಹವರಿಗೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವುದು.

ಇ-ಆಡಳಿತ
ನಿಗಮದಿಂದ/ಜಿಲ್ಲಾ ಪಂಚಾಯತ್‌ನಿಂದ ಒ​​ದಗಿಸಲಾದ ಕಂಪ್ಯೂಟರ್ ಸಹಾಯದಿಂದ ಜಿಲ್ಲಾ ಕಚೇರಿಯ ಕಾರ್ಯಗಳನ್ನು ಸಮರ್ಥ ಡಾಟಾ ಬೇಸ್ ನಿರ್ವಹಣೆಗಾಗಿ ಕಂಪ್ಯೂಟರೀಕರಣ ಮಾಡುವುದು. ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ಕರ್ತೃತ್ವ ಕ್ರಮಗಳನ್ನು ತಿಳಿಯಲು ಕ್ರಮವಹಿಸುವುದು.

ಪಾರದರ್ಶಕತೆ
ನಾಗರೀಕ ಸನ್ನದು (Citizen Charter) ಪ್ರಕಾರ ಯೋಜನೆಗಳ ಮಾಹಿತಿ ಮತ್ತು ವಾರ್ಷಿಕ ಗುರಿಯನ್ನು ಜಿಲ್ಲಾ ಕಛೇರಿ ಫಲಕಗಳಲ್ಲಿ ಪ್ರಕಟಿಸುವುದು ಮತ್ತು ಗುರಿಯನ್ನು ನಮೂದಿಸಿ ಅರ್ಜಿಗಳನ್ನು ಆಹ್ವಾನಿಸಿ ಪ್ರಕಟಣೆ ನೀಡುವುದು. ವಿವಿಧ ಯೋಜನೆಗಳ ಮಾಹಿತಿಯೊಂದಿಗೆ ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳ ಚೆಕ್‌ಲಿಸ್ಟ್‌ಗಳನ್ನು ನೀಡುವುದು ಹಾಗೂ ಸಕಾಲಿಕ ಕ್ರಮವಿಡುವುದು.ಸವಲತ್ತುಗಳನ್ನು ಸಾರ್ವಜನಿಕರ ಸಮಕ್ಷಮದಲ್ಲಿ ಜನಪ್ರತಿನಿಧಿಗಳ ಮೂಲಕ ವಿತರಣೆಗೆ ಕಡ್ಡಾಯವಾಗಿ ಕ್ರಮವಹಿಸುವುದು. ಭಾರತ ಸರ್ಕಾರದ 2005ರ ಮಾಹಿತಿ ಹಕ್ಕು ಕಾಯ್ದೆಯ, 4(1)(ಬಿ) ಅಡಿಯಲ್ಲಿ ಸೂಚಿಸಿದ ಅಂಶಗಳಿಗೆ ಕ್ರಮವಿಡುವುದು ಹಾಗೂ ಮಾಹಿತಿಯನ್ನು ಬಯಸಿದ ಅರ್ಜಿದಾರರಿಗೆ ನಿಗದಿತ ಅವಧಿಯೊಳಗೆ ನೀಡಲು ಕ್ರಮವಹಿಸುವುದು.

ಬದ್ಧತೆ ಹೊಂದಿದ ವಿಶಿಷ್ಠ ವಿಷಯಗಳು
ಸಾಲ ಪಡೆಯುವ ಫಲಾನುಭವಿಗಳಿಗೆ ಯೋಜನೆಗಳ ಮಾಹಿತಿಯನ್ನು/ ತಿಳುವಳಿಕೆಯನ್ನು ಮೂಡಿಸಲು ಸಾಲ ವಿತರಣಾ ಪೂರ್ವ ಸಮಾಲೋಚನೆಗಳನ್ನು ಸಂಘಟಿಸುವುದು.
ಸಾಲ ದುರುಪಯೋಗವಾಗುವುದನ್ನು ತಡೆಗಟ್ಟಲು ಘಟಕ ಸ್ಥಾಪನೆಯಾದ ಬಗ್ಗೆ ಸಾಲ ವಿತರಣಾ ನಂತರ ತಪಾಸಣೆಗಳನ್ನು ನಿರಂತರವಾಗಿ ಮಾಡುವುದು. ನಿಗಮದ ಯೋಜನೆಗಳ ಬಗ್ಗೆ ಸಾಮಾನ್ಯರಿಗೂ ಮಾಹಿತಿ ಲಭ್ಯವಾಗಲು ಶ್ರವಣದೃಶ್ಯ ಮಾದ್ಯಮಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಪ್ರಚಾರ ಮಾಡುವುದು. ಆಕಾಶವಾಣಿ, ದೂರದರ್ಶನ, ಮುದ್ರಣ ಮಾಧ್ಯಮಗಳಲ್ಲಿ ​ ಮರಣಕ್ಕೀಡಾದ ಫಲಾನುಭವಿಗಳ ಪ್ರಕರಣಗಳಲ್ಲಿ ಬಾಕಿ ಬಡ್ಡಿ ಮನ್ನಾ ಮಾಡಲು ನಿಗಮಕ್ಕೆ ಶಿಫಾರಸ್ಸು ಮಾಡುವುದು. ನಿಗಮದ ಯೋಜನೆಗಳ ಬಗ್ಗೆ ಸಾಮಾನ್ಯರಿಗೂ ಮಾಹಿತಿ ಲಭ್ಯವಾಗಲು ಶ್ರವಣದೃಶ್ಯ ಮಾದ್ಯಮಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಪ್ರಚಾರ ಮಾಡುವುದು. ಆಕಾಶವಾಣಿ, ದೂರದರ್ಶನ, ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಆಧ್ಯತೆ ನೀಡುವುದು.

​​​