​​​​​​​​​​​​ ​​​ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕುಸುಬುದಾರರಿಗೆ ಸಾಲ ಮತ್ತು ಸಹಾಯಧನ

ಸಾಂಪ್ರದಾಯಿಕ ವೃತ್ತಿ ಮತ್ತು ಕುಶಲಕರ್ಮಿಗಳಿಗೆ ಅವರ ವೃತ್ತಿ ಕೌಶಲ್ಯತೆಯನ್ನು ಅಭಿವೃದ್ದಿ ಪಡಿಸಿಕೊಳ್ಳಲು ವೃತ್ತಿಯನುಸಾರ ಈ ಕೆಳಕಂಡಂತೆ ಸಾಲ ಸೌಲಭ್ಯ ಒದಗಿಸಲಾಗುವುದು. 
1. ಘಟಕ ವೆಚ್ಚ ರೂ.50,000/-ಗಳಿಗೆ  ಶೇ.30 ರಷ್ಟು ಗರಿಷ್ಟ ರೂ.10,000/-ಗಳ ಸಹಾಯಧನ ಉಳಿಕೆ ಶೇ.70 ರಷ್ಟು ರೂ.40,000/-ಗಳನ್ನು ಶೇ.2ರ ಬಡ್ಡಿ ದರದಲ್ಲಿ ಸಾಲ.
2. ಘಟಕ ವೆಚ್ಚ ರೂ.50.001/-ರಿಂದ ರೂ.1,00,000/-ಗಳವರೆಗೆ ಶೇ.20 ರಷ್ಟು ಗರಿಷ್ಟ ರೂ.20,000/-ಗಳ ಸಹಾಯಧನ ಉಳಿಕೆ ಶೇ.80 ರಷ್ಟು ರೂ.80,000/-ಗಳನ್ನು ಶೇ.2ರ ಬಡ್ಡಿ ದರದಲ್ಲಿ ಸಾಲ.
3. ಘಟಕ ವೆಚ್ಚ ರೂ.1,00,001/-ರಿಂದ ರೂ.2,00,000/-ಗಳವರೆಗೆ ಶೇ.15ರಷ್ಟು ರೂ.20,000/-ಗಳು ಗರಿಷ್ಟ ರೂ.30,000/-ಗಳ ಸಹಾಯಧನ ಉಳಿಕೆ ಶೇ.85 ರಷ್ಟು ರೂ.1,70,000/-ಗಳನ್ನು ಶೇ.2ರ ಬಡ್ಡಿ ದರದಲ್ಲಿ ಸಾಲ.
ಅರ್ಹತೆ: 
1. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು (ವಿಶ್ವಕರ್ಮ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು. 
2. ಈ ಕೆಳಕಂಡ 47 ಸಾಂಪ್ರದಾಯಿಕ ವೃತ್ತಿ/ಕುಶಲ ಕರ್ಮಿ ವೃತ್ತಿಯನ್ನು ಕೈಗೊಳ್ಳುತ್ತಿರಬೇಕು. 


1. ಬಡಗಿ ಕೆಲಸ/ಮರದ ಕೆತ್ತನೆ ಕೆಲಸ,
2.ಉಣ್ಣೆ ಮತ್ತು ಕಂಬಳಿ ನೇಯ್ಗೆ
3. ಅಡಿಕೆ ಹಾಳೆಯಿಂದ ತಟ್ಟೆ ತಯಾರಿಕೆ
4. ಉಣ್ಣೆ ನೇಯ್ಗೆ ಮತ್ತು ಹಾಸು ಕಂಬಳಿ ತಯಾರಿಕೆ
5.ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ
6.ಪೊರಕೆ ಕಡ್ಡಿ ತಯಾರಿಕೆ
7 ಬಿದರಿ ವೇರ್ ಕೆಲಸ
8.ಸುಣ್ಣ ಸುಡುವುದು
9.ಕ್ಷೌರಿಕ ವೃತ್ತಿ/ಸೆಲೂನ್,
10 ವಾಲಗ ಊದುವುದು
11 ದನಗಾಹಿ ವೃತ್ತಿ
12 ಬಳೆ ವ್ಯಾಪಾರ/ಮೇಣದ  ಬತ್ತಿ
13 ಚಿನ್ನಬೆಳ್ಳಿ ಕೆಲಸ
14 ಕಂಚು ಕೆಲಸ
15.ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ
16 ಕಮ್ಮಾರಿಕೆ/ಕುಲುಮೆ
17 ಬೆತ್ತದ ಕೆಲಸ(ರಟ್ಟನ್) ಆಟಿಕೆ/ ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ
18 ಟೈಲರಿಂಗ್
19 ಹತ್ತಿ ನೇಯ್ಗೆ/ನೇಕಾರಿಕೆ
20 ಚರ್ಮದ ವಸ್ತುಗಳ ತಯಾರಿಕೆ
21 ಅಗರಭತ್ತಿ ತಯಾರಿಕೆ
22 ಕಾಯರ್ ಫೈಬರ್ ತಯಾರಿಕೆ
23 ವಿಗ್ರಹ/ಕಲ್ಲು ಕತ್ತೆನೆ ಕೆಲಸಗಳು
24 ಲಾಂಡ್ರಿ/ದೋಬಿ ಕೆಲಸ
25 ಮೀನುಗಾರಿಕೆ
26 ನಾಟಿ ಔಷಧಿ
27 ಬಣ್ಣ/ಶೃಂಗಾರ(ಬ್ಯೂಟಿ ಪಾರ್ಲರ್) ಮಾಡುವ ವೃತ್ತಿ
28 ಶೀಟ್ ಮೆಟಲ್ ವೃತ್ತಿ
29 ಬಣ್ಣಗಾರಿಕೆ ಮತ್ತು ಮುದ್ರಣಗಾರಿಕೆ​
30 ಮ್ಯಾಟ್ ತಯಾರಿಕೆ
31 ಗಾಡಿ/ರಥ ತಯಾರಿಕೆ
32 ಗ್ಲಾಸ್ ಬೀಡ್ಸ್ ತಯಾರಿಕೆ
33 ಮೆಟಲ್ ಕ್ರಾಫ್ಟ್ ಕೆಲಸ
34 ಟಿನ್ ವಸ್ತುಗಳ ತಯಾರಿಕೆ
35 ಜೇನು ಸಾಕಾಣಿಕೆ
36 ನಿಟ್ಟಿಂಗ್ ಕೆಲಸ
37 ಗಾಣದ ಕೆಲಸ
38 ಮೆಷನರಿ ವಕ್ರ್ಸ್
39 ಹೂ ಕಟ್ಟುವ ವೃತ್ತಿ
40 ಹೊಸೈರಿ ವಸ್ತುಗಳ ತಯಾರಿಕೆ
41 ಪಾತ್ರೆಗಳಿಗೆ ಕಲಾಯಿ
42 ವಾದ್ಯ ವೃಂದ ವೃತ್ತಿ
43 ಹೈನುಗಾರಿಕೆ(ಗೌಳಿ ವೃತ್ತಿ)
44 ಬೈಸಿಕಲ್/ಆಟೋ ಮೊಬೈಲ್ ರಿಪೇರಿ
45 ವೆಲ್ಡಿಂಗ್ ವಕ್ರ್ಸ್
46 ಕುರಿ ಸಾಕಾಣಿಕೆ
47 ಕುಂಬಾರಿಕೆ/ಕಲಾತ್ಮಕ ಉತ್ಪನ್ನಗಳ ತಯಾರಿಕೆ