ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು:

1. ಉದ್ದೇಶ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ., ಪೋಸ್ಟ್ ಡಾಕ್ಟ್ರಲ್ ಮತ್ತು ಮಾಸ್ಟರ್ ಡಿಗ್ರಿ ವ್ಯಾಸಂಗಕ್ಕೆ ಪ್ರವೇಶ ಹೊಂದಿದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ 

(ವಿಶ್ವಕರ್ಮ ಸಮುದಾಯಗಳ ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ.

2. ಸಾಲದ ಮೊತ್ತ: ವಾರ್ಷಿಕ ಗರಿಷ್ಠ ರೂ.3.50ಲಕ್ಷಗಳಂತೆ 3 ವರ್ಷದ ಅವಧಿಗೆ ಗರಿಷ್ಠ ರೂ.10.00ಲಕ್ಷಗಳು.

3. ಅಭ್ಯರ್ಥಿಯ ವಯಸ್ಸು 35 ವರ್ಷಗಳ ವಯೋಮಿತಿಯಲ್ಲಿರಬೇಕು.

4. ಕುಟುಂಬದ ವಾರ್ಷಿಕ ಆದಾಯ ರೂ.3,50,000/-ಗಳ ಮಿತಿಯಲ್ಲಿರಬೇಕು.

5. ವ್ಯಾಸಂಗಕ್ಕೆ ಪ್ರವೇಶ ಪಡೆದ ಬಗ್ಗೆ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶ ಪತ್ರ, ವೀಸಾ, ಪಾಸ್‍ಪೋರ್ಟ್, ಏರ್‍ಟಿಕೇಟ್‍ನ ಪ್ರತಿ ಒದಗಿಸಬೇಕು.

6. ಸಾಲದ ಭದ್ರತೆಗೆ ವಿದ್ಯಾರ್ಥಿಯ ತಂದೆ ಅಥವಾ ಜಾಮೀನುದಾರರು ಹೊಂದಿರುವ ಸ್ಥಿರಾಸ್ಥಿಯನ್ನು ನಿಗಮಕ್ಕೆ ಆಧಾರ ಮಾಡಬೇಕು. (ಕೊಲ್ಯಾಟರಲ್ ಸೆಕ್ಯೂರಿಟಿ)

7. ಅಭ್ಯರ್ಥಿಗಳ ಆಯ್ಕೆ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡುವುದು.

8. ಮರುಪಾವತಿ ಅವಧಿ: ಮರುಪಾವತಿ ಅವಧಿ ಗರಿಷ್ಠ 60 ಮಾಸಿಕ ಕಂತುಗಳು. ವ್ಯಾಸಂಗ ಪೂರ್ಣಗೊಂಡ 1 ವರ್ಷದ ನಂತರ ಅಥವಾ ಉದ್ಯೋಗ ದೊರೆತ 6 ತಿಂಗಳ ನಂತರ ಮರುಪಾವತಿ ಕಂತು ಪ್ರಾರಂಭವಾಗುತ್ತದೆ.​

​ ​

​​​​ ​   ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ್ತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆಗಳಲ್ಲಿ ನಿಗದಿಪಡಿಸಿದ ಫಲಾನುಭವಿಗಳ ​ವಾರ್ಷಿಕ                       ಆದಾಯದ ಮಿತಿಯನ್ನು ಹೆಚ್ಚಿಸುವ ಕುರಿತು ​​

​​​​​​​​​​​​​​​​​​​​​​​​​​​​​​​​​​​​               (ಅರ್ಜಿ)​ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ: ​​​​​​​