​​

 

ಫಲಾನುಭವಿಗಳ ಹೆಸರು ಮತ್ತು ವಿಳಾಸ​ :                                                     :ಶ್ರೀಮತಿ ಪ್ರಮೀಳಮ್ಮ ಕೋಂ ವೆಂಕಟಗಿರಿಗೌಡ , ಚಿಕ್ಕವಿಠಲೇನ ಹಳ್ಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ

 ಯೋಜನೆಯ ಹೆಸರು :                                                                :​ಗಂಗಾಕಲ್ಯಾಣ ನೀರಾವರಿ ಯೋಜನೆ (ಸಾಮೂಹಿಕ ಕೊಳವೆಬಾವಿ)
   ಸೌಲಭ್ಯ ಪಡೆದ ವರ್ಷ:                                                                       :​2011-12
ಶ್ರೀಮತಿ ಪ್ರಮೀಳಮ್ಮ ವೆಂಕಟಗಿರಿಗೌಡ , ಚಿಕ್ಕವಿಠಲೇನಹಳ್ಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ಇವರು ತಮ್ಮ ಜಮೀನಿನಲ್ಲಿ ಮಳೆ ಆಶ್ರಯದಿಂದ ರಾಗಿ ಮತ್ತು ಹುರಳಿ ಬೆಳೆ ಬೆಳೆದು ಜೀವನ ಸಾಗಿಸುವುದು ಕಷ್ಟಕರವಾಗಿತ್ತು. ಈ ಸಂಧರ್ಭದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಾಮೂಹಿಕ ನೀರಾವರಿ ಯೋಜನೆಯಡಿ 2011-12ನೇ ಸಾಲಿನಲ್ಲಿ ಗಂಗಾಕಲ್ಯಾಣ ಯೋಜನೆಯ ಸಾಮೂಹಿಕ ನೀರಾವರಿ ಕೊಳವೆಬಾವಿ ಸೌಲಭ್ಯ ಪಡೆದು ತಮ್ಮ ಜಮೀನನ್ನು ವಾಣಿಜ್ಯ ಬೆಳೆಗೆ ಪರಿವರ್ತಿಸಿಕೊಂಡು ರೇಷ್ಮೆ ಮತ್ತು ಹೈನುಗಾರಿಕೆ ಉದ್ಯೋಗದಲ್ಲಿ ತೊಡಗಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಂಡಿರುತ್ತಾರೆ. ಆರ್ಥಿಕವಾಗಿ ಮುಂದುವರೆದು ಜೀವನ ಮಟ್ಟ ಉತ್ತಮವಾಗಿರುತ್ತದೆ. ​​


 

ಫಲಾನುಭವಿಗಳ ಹೆಸರು ಮತ್ತು ವಿಳಾಸ​ : ಶ್ರೀ ಯಮನಪ್ಪ ಕಲ್ಲಪ್ಪ ಮುದಕಪ್ಪನವರ
                                                               ಮಕ್ತಂಪುರ ಗ್ರಾಮ, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ.

 
            ಯೋಜನೆಯ ಹೆಸರು       :ವೈಯಕ್ತಿಕ ಗಂಗಾಕಲ್ಯಾಣ ನೀರಾವರಿ ಯೋಜನೆ
            ಸೌಲಭ್ಯ ಪಡೆದ ವರ್ಷ      :2011-12​
​  
ಶ್ರೀ ಯಮನಪ್ಪ ಕಲ್ಲಪ್ಪ ಮುದಕಪ್ಪನವರ, ಮಕ್ತಂಪುರ ಗ್ರಾಮ, ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ ಇವರು ಕೃಷಿ ಅವಲಂಬಿತರಾಗಿದ್ದು ತಮ್ಮ ಜಮೀನಿನಲ್ಲಿ ಮಳೆ ಆಶ್ರಯದಿಂದ ಜೋಳದ ಬೆಳೆ ಬೆಳೆಯುತ್ತಿದ್ದರು. 2011-12ನೇ ಸಾಲಿನಲ್ಲಿ ನಿಗಮದಿಂದ ವೈಯಕ್ತಿಕ ಗಂಗಾಕಲ್ಯಾಣ ನೀರಾವರಿ ಯೋಜನೆಯಡಿ ಕೊಳವೆ ಬಾವಿ ಸೌಲಭ್ಯ ಪಡೆದು ಆರ್ಥಿಕ ಬೆಳೆಗಳಾದ ಸೂರ್ಯಕಾಂತಿ, ಮೆಣಸಿನಕಾಯಿ ಹೀಗೆ ವರ್ಷದಲ್ಲಿ 2-3 ವಾಣಿಜ್ಯ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಿಕೊಂಡಿರುತ್ತಾರೆ. ​​​