ಕಾರ್ಯಗಳು

ಕರ್ನಾಟಕದ ಯುವಜನರಿಗಾಗಿ ಯುವಜನರ ಜೊತೆಯಾಗಿ ಐದು ಹಂತದ ಕಾರ್ಯತಂತ್ರ ರೂಪಿಸುವಲ್ಲಿ ಯುವ ನೀತಿ ಗಮನಹರಿಸಿದೆ. ಯುವಜನರನ್ನು ತಲುಪುವುದು, ಅವರನ್ನು ಸಕ್ರಿಯವಾಗಿ ತೊಡಗಿಸುವುದು, ಅವರನ್ನು ಎಲ್ಲಾ ವಿಧದಲ್ಲಿ ಸಬಲೀಕರಿಸುವುದು ಇಂಥ ರಚನಾತ್ಮಕ ಧೋರಣೆಗಳನ್ನು ಪ್ರತಿಪಾದಿಸಿ ಆನಂತರ ಯುವಜನರಿಂದ ಸಮಾಜಕ್ಕೆ ನಾಡಿಗೆ, ರಾಷ್ಟ್ರಕ್ಕೆ ಕೊಡುಗೆ ಪಡೆಯುವುದು ಹಾಗೂ ಸಮಗ್ರ ಅಭಿವೃದ್ದಿಗೆ ಶ್ರೀಕಾರ ಹಾಕುವುದು ಯುವ ನೀತಿಯ ಮುಖ್ಯ ಆಶಯವಾಗಿದೆ.​

ಯುವ ನೀತಿಯ ಪ್ರಧಾನ ಹುರಿ ನಮ್ಮ ರಾಜ್ಯದ ಯುವಜರನ್ನು ತಲುಪುವುದೇ ಆಗಿದೆ. ಸರ್ಕಾರದ ಎಲ್ಲಾ ಅಧೀನ ಸಂಸ್ಥೆಗಳು ಹಾಗೂ ಪ್ರಕ್ರಿಯೆಗಳು ರಾಜ್ಯದ ಪ್ರತಿಯೊಬ್ಬ ಯುವಜನರನ್ನು ತಲುಪಬೇಕು, ಸರ್ಕಾರದ ನೀತಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಹಾಗೂ ನೀಡುತ್ತಿರುವ ಪ್ರಾಧಾನ್ಯತೆಗಳಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ತಮ್ಮ ನಿರೀಕ್ಷೆಗಳಿಗೆ ಆದ್ಯತೆ ನೀಡಲಾಗಿದೆ ಎಂಬುದು ಯುವಜನರ ಅರಿವಿಗೆ ಬರಬೇಕೆಂದು ನೀತಿಯು ಆಶಿಸುತ್ತದೆ.​