​​​​​

ಅನ್ವಯಿಕ ಸಂಶೋಧನೆಯ ಕೇಂದ್ರ

       ಎಂಪ್ರಿ ಸಂಸ್ಥೆಯು ಪರಿಸರ ವಿಷಯಗಳ ಕುರಿತಾಗಿ ಸಂಶೋಧನೆಯನ್ನು ನಡೆಸುತ್ತಿದೆ. ಕೆಲ ವಿಷಯಗಳು ಆಗಾಗ್ಗೆ ತುರ್ತಾಗಿ, ಸಮಾಜಕ್ಕೆ ತಕ್ಷಣದ ಪ್ರಸ್ತುತತೆಯನ್ನು ಹೊಂದಿವೆ ಮತ್ತು ಇನ್ನು ಕೆಲವು ಮಧ್ಯಪ್ರವೇಶಿಸಿ ಅಡ್ಡಿಯನ್ನುಂಟುಮಾಡುತ್ತವೆ. ಪ್ರತಿಯೊಂದು ಸಂಧರ್ಭದಲ್ಲಿಯೂ ಕೆಲಸ ನಿಭಾಯಿಸಿಕೊಂಡು ಹೋಗುವ ವಿಷಯಗಳನ್ನು ನಿರ್ಧರಿಸಿ ಸಾಧ್ಯವಾದ ಪರಿಹಾರಗಳನ್ನು ಪ್ರಸ್ತಾಪಿಸುವ ಪ್ರಯತ್ನಗಳನ್ನು ನಡೆಸುತ್ತಿದೆ. ಕೇಂದ್ರವು ದೇಶದಲ್ಲಿನ ಮತ್ತು ರಾಜ್ಯದಲ್ಲಿರುವ  ಪರಿಸರದ ¸ÀÆPÀëöä ಸಮಸ್ಯೆಗಳ ಕುರಿತು ಸಂಶೋಧನೆಯನ್ನು ಕೈಗೊಂಡಿರುತ್ತದೆ. ಪ್ರಸ್ತುತದಲ್ಲಿ ಈ ಕೇಂದ್ರವು vÁåeå ನಿರ್ವಹಣೆಯ ತಂತ್ರಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಂಡು ಸುಸ್ಥಿರ ಅಭಿವೃದ್ಧಿಗೆ ಒಳಪಡುವ ನೈಸರ್ಗಿಕ ಸಂಪನ್ಮೂಲಗಳ ಸೂಕ್ತ ಬಳಕೆಗಾಗಿ ಪ್ರಮುಖ ನಿರ್ವಹಣಾ ಉಪಕರಣಗಳನ್ನು ರಚಿಸುವುದರ ಮೂಲಕ ನಗರದಲ್ಲಿನ ಸ್ಥಳೀಯ ಸಂಸ್ಥೆಗಳಿಂದ ಅಳವಡಿಸಿಕೊಳ್ಳುವ ಪಿಟ್- ಫಾಲ್ಸ್ ಅನ್ನು ಉದ್ದೆಶಿಸಿ ಒತ್ತಿಹೇಳುವುದು. ಪ್ರಸ್ತುತದಲ್ಲಿ ಕೇಂದ್ರವು “ಎತ್ತಿನಹೊಳೆ ಯೋಜನೆಯ ಪ್ರದೇಶಗಳ ದಾಖಲಾತಿ ಪಡಿಸುವುದು ಮತ್ತು ಅರಣ್ಯ ಭೂದೃಶ್ಯದ ಬಹುಯೋಜನೆಗಳ ಸಂಚಿತ ಪ್ರಭಾವದ ಮೌಲ್ಯಮಾಪನದ ಕುರಿತು ಅಧ್ಯಯನ” ನಡೆಸುತ್ತಿದೆ. ಕೇಂದ್ರವು ಬಾಹ್ಯ ಸಲಹೆಗಾರರ ಜೊತೆ ನಿಕಟ ಸಹಯೋಗದೊಂದಿಗೆ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 

ಪೂರ್ಣಗೊಳಿಸಿದ ಅಧ್ಯಯನ:

• ಪುನಃ ಬಳಸಬಹುದಾದ ಇ-ಉತ್ಪನ್ನಗಳ ಮಾರುಕಟ್ಟೆ ಸಮೀಕ್ಷೆ ಮರುಬಳಕೆಯ ಇ-ಘಟಕಗಳು
• ಕರ್ನಾಟಕ ರಾಜ್ಯವನ್ನು ರೂಪಿಸುವ ಪರಿಸರ ನಿರ್ಧಾರದ ಅಂತರವನ್ನು ತಿಳಿಸಲು ಅಸ್ತಿತ್ವದಲ್ಲಿರುವ ನಿಯಮಗಳು ವiತ್ತು ಕಾರ್ಯವಿಧಾನಗಳನ್ನು ಪರಿಶೀಲಿಸುವುದು
• ಹಸಿರು ಜಿಎಸ್ಡಿಪಿ ಕೃಷಿ, ನೀರು ªÀivÀÄÛ ಅರಣ್ಯಕ್ಕಾಗಿ ಲೆಕ್ಕಪರಿಶೋಧನೆ; ವಿಧಾನದ ಸಮಸ್ಯೆಗಳು
• ಆಯ್ದ ಸ್ಥಾವರದ ಜೈವಿಕ-ಸಂಪನ್ಮೂಲಗಳ ಸಂಗ್ರಹಣೆಯ ಜಾಲ ನಕ್ಷೆ
• ಕರ್ನಾಟಕದಲ್ಲಿನ ಕಾವೇರಿ ನದಿಯ ಎರಡು ಕಡೆಯ 300 ಮೀ. ತಟಸ್ಥ ವಲಯದಲ್ಲಿನ ಪ್ರಸ್ತುತ ಸ್ಥಿತಿಯ ಕುರಿತಾಗಿ ಅಧ್ಯಯನ

ಪ್ರಸ್ತುತ ಚಾಲ್ತಿಯಲ್ಲಿರುವ ಅಧ್ಯಯನ: 
  • ​ಎತ್ತಿನಹೊಳೆ ಯೋಜನೆಯ ಪ್ರದೇಶಗಳ ದಾಖಲಾತಿ ಮಾಡುವುದು ಮತ್ತು ಅರಣ್ಯ ಭೂಪ್ರದೇಶದಲ್ಲಿರುವ ಬಹುಯೋಜನೆಗಳ ಸಂಚಿತ ಪ್ರಭಾವದ ಮೌಲ್ಯಮಾಪನದ ಅಧ್ಯಯನ.
​​​​​​                              Yettinahole                 Yettinahole2 ​​​​​​