​​​​​​

ಕೆರೆ ಸಂರಕ್ಷಣಾ ಕೇಂದ್ರ

         ಕೆರೆಗಳು ಪರಿಸರದ ಅಮೂಲ್ಯಜಲರಾಶಿಗಳು. ಈ ಅಮೂಲ್ಯ ಸಾಂಪ್ರದಾಯಿಕ ಜಲರಾಶಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಅತ್ಯಂತ ಮಹತ್ವದ್ದಾಗಿದೆ. ನಗರಾಭಿವೃದ್ಧಿ ಮತ್ತು ಕೈಗಾರಿಕೆಯಿಂದ, ಒತ್ತುವರಿ ಮತ್ತು ಇತರೆ ಕಾರಣಗಳಿಂದ ಬಹುಪಾಲು ಕೆರೆಗಳು ಆರಂಭದ ಅಸ್ಥಿತ್ವವನ್ನು ಕಳೆದುಕೊಂಡಿರುತ್ತವೆ. ಕೆರೆಗಳನ್ನು ಪುನಶ್ಚೆತನಕ್ಕೆ ತರುವುದು ಒಂದು ಸವಾಲಿನ ಕಾರ್ಯವಾಗಿರುತ್ತದೆ. ಈ ಕೇಂದ್ರವು ರಾಜ್ಯದಲ್ಲಿನ ಜಲರಾಶಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ನಿರ್ವಹಣೆಯಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳುತ್ತಿದೆ. ಜಲರಾಶಿಗಳ ಸುಧಾರಣೆಗಾಗಿ ಸಂರಕ್ಷಣೆ ಮತ್ತು ನಿರ್ವಹಣೆಗಳ ಕ್ರಿಯಾಯೋಜನೆಗಳನ್ನು ನಿರ್ಮಿಸುವುದಕ್ಕೆ ಪಾಲುದಾರರ ಮತ್ತು ನೀತಿದಾರರ ನಡುವೆ ಸಂಪರ್ಕ ಸೇತುವೆಯನ್ನು ಕಲ್ಪಿಸುವ ಕಾರ್ಯವನ್ನು ಸಹಾ ಕೇಂದ್ರವು ಮಾಡುತ್ತಿದೆ. ಕೆರೆ ಸಂರಕ್ಷಣಾ ಕೇಂದ್ರವು ಇಲ್ಲಿವರೆಗೆ ಐದು ಅಧ್ಯಯನವನ್ನು ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಒಂದು ಅಧ್ಯಯನವು ಪ್ರಗತಿಯಲ್ಲಿದೆ. ಈ ವಿವರಗಳನ್ನು ಕೆಳಗೆ ನೀಡಲಾಗಿದೆ.
 

ಇಲ್ಲಿವರೆಗೆ ಪೂರ್ಣಗೊಂಡ ಅಧ್ಯಯನಗಳು:

1. ಕೆರೆಗಳ ಸಂರಕ್ಷಣೆಗಾಗಿ ನಿರ್ಧರಿಸಿದ ಕಾರ್ಯತಂತ್ರಗಳ ಅಧ್ಯಯನ - ಹಂತ-೧.
2. ಬೆಂಗಳೂರು ಜಲ ಸಂರಕ್ಷಣಾಯೋಜನೆ- ನೀರು ಸರಬರಾಜು ಒಂದು ಗುಣಾತ್ಮಕಮಾರ್ಗ.
3. ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಸಂರಕ್ಷಣೆ ಕುರಿತು ಅಧ್ಯಯನ.
4. ಮೈಸೂರು-ನಂಜನಗೂಡು ಸ್ಥಳಿಯ ಯೋಜನಾ ಪ್ರದೇಶದಲ್ಲಿನ ಕೆರೆಗಳ ಸುಸ್ಥಿರ ಸಂರಕ್ಷಣಾ ಕಾರ್ಯತಂತ್ರಗಳ ಕುರಿತಾಗಿ ಅಧ್ಯಯನ.
5. ಬೆಂಗಳೂರು ಮಾಹಾನಗರ ಪ್ರದೇಶದಲ್ಲಿ ಜಲರಾಶಿಗಳನ್ನು (ಕೆರೆ, ಕಟ್ಟೆ ಮತ್ತು ಕುಂಟೆ)  ಕುರಿತಾಗಿ ಅಧ್ಯಯನ. ​


ಪ್ರಗತಿಯಲ್ಲಿರುವ ಅಧ್ಯಯನ:

  • ಹುಬ್ಬಳ್ಳಿ-ಧಾರವಾಡ ನಗರ ಪ್ರದೇಶದಲ್ಲಿನ ಜಲರಾಶಿಗಳ (ಕೆರೆ, ಕಟ್ಟೆ ಮತ್ತು ಕುಂಟೆ) ಸುಸ್ಥಿರ ಸಂರಕ್ಷಣಾ ಕಾರ್ಯತಂತ್ರಗಳನ್ನು ರೂಪಿಸುವುದರ ಕುರಿತು ಅಧ್ಯಯನ.​
Study%20Area                Study%20Area