​​​ಪರಿಸರ ಮಾಹಿತಿ ಕೇಂದ್ರ​

  ಪ್ರಸಕ್ತ ಪರಿಸರೀಯ ಸಮಸ್ಯೆಗಳ ಬಗ್ಗೆ ಶಿಕ್ಷಣ ಮತ್ತು ಪ್ರಸರಣ ಮಾಹಿತಿಯನ್ನು ಒದಗಿಸುವುದು ನಮ್ಮ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಪರಿಸರ ಮಾಹಿತಿ ಕೇಂದ್ರದ ಪ್ರಾಥಮಿಕ ಪ್ರಯತ್ನವಾಗಿದೆ. ಈ ಪ್ರಯತ್ನ ಕಾರ್ಯಗೊಳಿಸಲು ಪ್ರಸ್ತುತ ಭಾರತ ಸರ್ಕಾರವು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC), ಸಹಯೋಗದೊಂದಿಗೆ ಪರಿಸರ ಮಾಹಿತಿ ಕೇಂದ್ರವು ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.

ಪರಿಸರ ಮಾಹಿತಿ ಕೇಂದ್ರ​ ಅಂತರ್ಜಾಲ ತಾಣ

   ಪರಿಸರದ ಕುರಿತಾದ ವಿಶ್ವಾಸಾರ್ಹ ಮತ್ತು ಸಮರ್ಪಕ ಮಾಹಿತಿಯ ಅಗತ್ಯವನ್ನು ಅರಿತುಕೊಳ್ಳುವುದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ಮುಖ್ಯ ಪ್ರಯತ್ನವಾಗಿದೆ.  ಭಾರತ ಸರ್ಕಾರವು 1982 ರಲ್ಲಿ , ಪರಿಸರ ಮಾಹಿತಿ ಕೇಂದ್ರ (ENVIS) ಅನ್ನು ಪರಿಸರದ ಮಾಹಿತಿ ಸಂಗ್ರಹಣೆ, ಜೋಡಣೆ, ಶೇಖರಣೆ, ಮತ್ತು ಮುಂತಾದ ವಿವಿಧ ಬಳಕೆದಾರರಿಗೆ ವಿಸ್ತಾರವಾದ ಜಾಲವಾಗಿ ಸ್ಥಾಪಿಸಲಾಗಿದೆ. ENVIS ಅಂತರ್ಜಾಲ ತಾಣದಲ್ಲಿ ವಿವರಣಾತ್ಮಕ ಮಾಹಿತಿ ಮತ್ತು ಸಂಖ್ಯಾತ್ಮಕ ಮಾಹಿತಿ ಎರಡನ್ನು ಒಳಗೊಂಡಿದೆ. ಅಂತರ್ಜಾಲ ತಾಣದಲ್ಲಿ ಪ್ರಕಟಣೆ, ವರದಿಗಳು, ಮರುಮುದ್ರಣಗಳು ಮತ್ತು ಸಂಬಂಧಿತ ವಿಷಯಗಳ ಮೇಲೆ ವಿವರಣಾತ್ಮಕ ಮಾಹಿತಿಗಳನ್ನು ಪ್ರಸರಣಕ್ಕಾಗಿ ಸಂಗ್ರಹಿಸಲಾಗಿದೆ. ಹಾಗೂ ಪ್ರಸರಣದ ಉದ್ದೇಶಕ್ಕಾಗಿ ವಿಷಯದ ಸಂಖ್ಯಾ ಡೇಟಾವನ್ನು ಸಂಗ್ರಹಿಸಿ, ಸಂಕಲಿಸಿ, ಸಂಸ್ಕರಿಸಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ. ಹೀಗೆ ಸಂಕಲಿಸಿದ ಎಲ್ಲಾ ಮಾಹಿತಿಯು ENVIS ಕೇಂದ್ರದ  ಅಂತರ್ಜಾಲ ತಾಣದಲ್ಲಿಲಭ್ಯವಿರುತ್ತದೆ. EMPRI ಒಂದು http://karenvis.nic.in/​ (ENVIS) ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿ ಹೋಸ್ಟ್ ಮಾಡಿದೆ.​

ಭಾರತೀಯ ರಾಜ್ಯ ಮಟ್ಟದ ಮೂಲಭೂತ ಪರಿಸರ ಮಾಹಿತಿ ಡೇಟಾಬೇಸ್

   ಹಲವಾರು ಪರಿಸರ ಮತ್ತು ಅದರ ಸಂಬಂಧಿತ ನಿಯತಾಂಕಗಳ ಸಂಬಂಧಿತ ದತ್ತಸಂಚಯಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮತ್ತು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲು, ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ENVIS ಯೋಜನೆಯಡಿಯಲ್ಲಿ ಡೇಟಾಬೇಸ್ಗೆ ನೇರವಾಗಿ ಮಾಹಿತಿ ನೀಡಲು, ISBEID ಎಂಬ ಅಂತರ್ಜಾಲ ತಾಣವನ್ನು​ ಅಭಿವೃದ್ಧಿಪಡಿಸಲಾಗಿದೆ. ISBEID ವಾಯು, ನೀರು, ಭೂ ಸಂಪನ್ಮೂಲಗಳು, ಅರಣ್ಯ ಜೈವಿಕ-ವೈವಿಧ್ಯತೆ, ಮೂಲಭೂತ ಸೌಕರ್ಯಗಳ ಕುರಿತಾದ ಪರಿಸರದ ಮಾಹಿತಿಯನ್ನು ಒಳಗೊಂಡಿರುವ 17 ಮಾಡ್ಯೂಲ್ಗಳನ್ನು ಒಳಗೊಂಡಿದೆ. ಅಧಿಕೃತ ಮೂಲಗಳಿಂದ ಸಂಗ್ರಹಿಸಲಾದ ಅಗತ್ಯ ಮಾಹಿತಿಯನ್ನು ಸಾರ್ವಜನಿಕ ಮತ್ತು ಇತರ ಹಲವಾರು ಪಾಲುದಾರರಿಗೆ ಒದಗಿಸಲು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದ (NIC), ISBEID : http://isbeid.gov.in/​ ಅಂತರ್ಜಾಲ ತಾಣ ದಲ್ಲಿ ನಮೂದಿಸಲಾಗಿದೆ.

"ಪರಿಸರ"- ಸುದ್ದಿ ಪತ್ರಿಕೆ

   ಮಾಹಿತಿ ಸಂಗ್ರಹಣೆ, ಸಂಸ್ಕರಣೆ ಮತ್ತು ಪ್ರಸಾರವು ENVIS ಕೇಂದ್ರದ ಕೆಲವು ಉದ್ದೇಶಗಳಾಗಿವೆ.  ಈ ಉದ್ದೇಶಗಳನ್ನು ಪೂರ್ಣಗೊಳಿಸಲು ಕೇಂದ್ರವು ಪರಿಸರದ ವಿಷಯಗಳನ್ನೊಳಗೊಂಡ  ಮತ್ತು ಪರಿಸರಕ್ಕೆ ಸಂಬಂಧಿಸಿದ "ಪರಿಸರ" ಹೆಸರಿನ ತ್ರೈಮಾಸಿಕ ಸುದ್ದಿಪತ್ರ ಪ್ರಕಟಿಸುತ್ತಿದೆ. ಈ ಸುದ್ದಿ ಪತ್ರಿಕೆ ಕರ್ನಾಟಕ ರಾಜ್ಯದ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ.  ಕೇಂದ್ರವು ಇಲ್ಲಿಯವರೆಗೆ  ರಾಜ್ಯದ ಪರಿಸರಕ್ಕೆ ಸಂಬಂಧಿಸಿದ 43 ಸುದ್ದಿ ಪತ್ರಿಕೆಗಳನ್ನು ಪ್ರಕಟಿಸಿದೆ.​

ಕೆಳಗೆ ಪಟ್ಟಿ ಮಾಡಲಾದ ಸುದ್ದಿಪತ್ರಗಳನ್ನು ಡೌನ್ಲೋಡ್ ಮಾಡಲು ದಯವಿಟ್ಟು http://karenvis.nic.in/ ಗೆ ಭೇಟಿ ನೀಡಿ


ಪರಿಸರ ಮಾಹಿತಿ ಕೇಂದ್ರ​ ಗ್ರಂಥಾಲಯ

   ಗ್ರಂಥಾಲಯವು ಮಾಹಿತಿಯ ದಾಖಲಿತ ರೆಪೊಸಿಟರಿಯನ್ನು ಹೊಂದಿದೆ ಮತ್ತು ಇದು ಸುಮಾರು 2500 ಪುಸ್ತಕಗಳ ಸಂಗ್ರಹವನ್ನು ಹೊಂದಿದೆ. ಅಲ್ಲದೆ ಗ್ರಂಥಾಲಯವು, 12 ರಾಜ್ಯ / ರಾಷ್ಟ್ರೀಯ ಪರಿಸರದ ವೈವಿಧ್ಯಮಯ ಪ್ರದೇಶಗಳ  ನಿಯತಕಾಲಿಕಗಳು ಮತ್ತು ಸುದ್ದಿಪತ್ರಗಗಳನ್ನು ಒಳಗೊಂಡಿರುತ್ತದೆ.​

ಕರ್ನಾಟಕ ರಾಜ್ಯ ENVIS ಕೇಂದ್ರದ ಪ್ರಸ್ತುತ ​ನೌಕರರು:​​


       1. ​ENVIS - ಸಂಯೋಜಕರಾಗಿ      : ಶ್ರೀ​ ಕೆ.ಹೆಚ್. ವಿನ​ಕುಮಾರ್, ಐಎಫ್ಎಸ್., ನಿರ್ದೇಶಕರು (EMPRI)
       2. ಕಾರ್ಯಕ್ರಮದ ಅಧಿಕಾರಿ           : ಸಿರಿ ಹೆಚ್. ಪಿ
       3. ಮಾಹಿತಿ ಅಧಿಕಾರಿ                  : ​ಶ್ರೀ​​ಮತಿ ರೂಪಾದೇವಿ ಕೊಟಿ
       4. ಮಾಹಿತಿ ತಂತ್ರಜ್ಞಾನ ಅಧಿಕಾರಿ ​​​: ​ರಾಘವೇಂದ್ರ ಪಿ.ಆರ್
       5. ಪ್ಯಾರಾ-ಟ್ಯಾಕ್ಸೊನಾಮಿಸ್ಟ್​         : ಶ್ರೀ​​ಮತಿ​ ಬಿಜಿತಾ ರಮೇಶ್


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top