​​ಕಾರ್ಯಗಳು

  1. ಪರಿಸರ ಮತ್ತು ಜೈವಿಕ ಪರಿಸ್ಥಿತಿ ನಿರ್ವಹಣೆಗೆ ವೈಜ್ಞಾನಿಕ, ತಾಂತ್ರಿಕ, ನೀತಿ ಸಂಶೋಧನೆ ಮತ್ತು ಇತರ ಚಟುವಟಿಕೆಗಳ ಮುಖಾಂತರ ಕೊಡುಗೆ ನೀಡುವುದು.

  2. ಪರಿಸರಕ್ಕೆ ಸಂಬಂಧಪಟ್ಟಂತೆ ಸಮಯಾನುಸಾರ ಕಡ್ಡಾಯವಾಗಿ ಪಾಲಿಸಬೇಕಾದ ವಿವಿಧ ಕಾನೂನುಗಳನ್ನು, ಮಾರ್ಗದರ್ಶಿ ಸೂತ್ರಗಳನ್ನು ಮತ್ತು ಕಾಲಕಾಲಕ್ಕೆ ಹೊರಬರುವ ನ್ಯಾಯಾಂಗ ತೀರ್ಪುಗಳು ಮತ್ತು ಘೋಷಣೆಗಳನ್ನು ಕಾರ್ಯರೂಪದಲ್ಲಿ ತರುವುದಕ್ಕೆ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳಿಗೆ NGOs) ಮತ್ತು ಸಾರ್ವಜನಿಕರಿಗೆ ಸಹಕರಿಸುವುದು ಮತ್ತು ಸಂಬಂಧಿಸಿದ ಸಂಸ್ಥೆಗಳಿಗೆ ನಿಯಮಗಳನ್ನು ರೂಪಿಸುವಲ್ಲಿ ಸಹಕರಿಸುವುದು.

  3. ಪರಿಸರ ಸಂರಕ್ಷಣೆ ಮತ್ತು ಅದಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಸಂಶೋಧನೆ, ಅಧ್ಯಯನಗಳನ್ನು ಕೈಗೊಳ್ಳುವುದು/ಅಭಿವೃದ್ಧಿಪಡಿಸುವುದು ಮತ್ತು ಪರಿಸರ ಸಂರಕ್ಷಣೆಯ ಸಮಗ್ರ ಗುಣಮಟ್ಟದ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು.

  4. ಪರಿಸರ ಸಂಶೋಧನೆ ಕ್ಷೇತ್ರದಲ್ಲಿ ಪರಿಣಿತಿಯನ್ನು ಬೆಳೆಸುವುದು ಮತ್ತು ವಿಶ್ವದರ್ಜೆಯ ಸಲಹೆಗಾರರನ್ನು ಬೆಳೆಸುವುದು ಹಾಗೂ ಒಂದು ಉಲ್ಲೇಖನೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು.

  5. ಸದಭಿರುಚಿಯ ಧೆÉ್ಯೀಯೋದ್ದೇಶಗಳನ್ನು ಹೊಂದಿದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪರಸ್ಪರ ಸಂಯೋಜನೆಯನ್ನು ಬೆಳೆಸಿಕೊಳ್ಳುವುದು.

  6. ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತರಬೇತಿಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ಪಾಲುದಾರರಿಗಾಗಿ (Stakeholder) ಉಪನ್ಯಾಸ, ಕಾರ್ಯಾಗಾರ, ಪ್ರದರ್ಶನಗಳನ್ನು ಆಯೋಜಿಸುವುದು.

  7. ಸಂಸ್ಥೆಯ ಧ್ಯೇಯೋದ್ದೇಶಗಳ ಅಭಿವೃದ್ದಿಗೆ ಅಪೇಕ್ಷಣೀಯವೆನಿಸುವ ಶೈಕ್ಷಣಿಕ ಮತ್ತು ಮಾಹಿತಿ ಪೂರ್ಣವಾದ ಪುಸ್ತಕಗಳು, ಕರಪತ್ರಗಳು ಮತ್ತು ನಿಯತಕಾಲಿಕಗಳ ಮುದ್ರಣ, ಪ್ರಕಾಶನ ಮತ್ತು ಪ್ರದರ್ಶನ ಮಾಡುವುದು.

  8. ಪರಿಸರ ಮಾಹಿತಿ ಕೇಂದ್ರವನ್ನು ಮುನ್ನಡೆಸುವುದು ಮತ್ತು ಪುಸ್ತಕಗಳು, ನಿಯತಕಾಲಿಕಗಳು, ಚಿತ್ರಗಳು ಮತ್ತು ಇತರ ಶ್ರವಣ, ದೃಶ್ಯ ಸಾಮಗ್ರಿಗಳ ಮೂಲಕ ಉಲ್ಲೇಖಿತ ಆಧಾರಯುಕ್ತ ಗ್ರಂಥಾಲಯ ಮತ್ತು ಮಾಹಿತಿ (data) ಕೇಂದ್ರವನ್ನು ಅಭಿವೃದ್ದಿ ಪಡಿಸುವುದು ಮತ್ತು ನಿರ್ವಹಣೆ ಮಾಡುವುದು.


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top