​​​​​​​​​​​​​ header_logo.png

ಪ್ರಸಕ್ತ ವರ್ಷದ ವಿಶ್ವ ಪರಿಸರ ದಿನಾಚರಣೆಗೆ (ಜೂನ್ 5  2018) ಭಾರತವು ಅತಿಥೇಯ gÁµÀÖçªÁVzÀÄÝ, ಪ್ಲಾಸ್ಟಿಕ್ ಮಾಲಿನ್ಯವನ್ನು ಹಿಮ್ಮೆಟ್ಟಿಸಿ ಎಂಬ  ದ್ಯೇಯದೊಂದಿಗೆ ಆಚರಿಸಲು ಉದ್ದೆಶಿಸಲಾಗಿದೆ. ಒಂದು ಬಾರಿ ಬಳಸಿ ಬಿಸಾಡುವ  ಪ್ಲಾಸ್ಟಿಕ್ ಅನ್ನು ಉಪಶಮನಗೊಳಿಸಲು ಜಗತ್ತು ಒಂದಾಗುತ್ತಿದೆ.
​ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಸಂಗತಿಗಳು:
ಪ್ರತಿ ವರ್ಷವೂ ಪ್ರಪಂಚದಾದ್ಯಂತ 500 ಶತಕೋಟಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತಿದೆ.
ಪ್ರತಿವರ್ಷ, ಕನಿಷ್ಠ 8 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರಗಳಲ್ಲಿ ಸೇರಿಕೊಳ್ಳುತ್ತಿದೆ, ಪ್ರತಿ ನಿಮಿಷಕ್ಕೆ  ಒಂದು ಟ್ರಕ್‌ಗೆ ಸಮಾನವಾದ ಕಸ ಸೇರುತ್ತಿದೆ.
ಪ್ರಪಂಚವು ಕಳೆದ ಶತಮಾನಕ್ಕಿಂತ, ಕಳೆದ ದಶಕದಲ್ಲಿ, ಹೆಚ್ಚು ಪ್ಲಾಸ್ಟಿಕ್‌ಗಳನ್ನು ಉತ್ಪಾದಿಸಿದೆ.
ಪ್ರಪಂಚ ಬಳಸುವ ಪ್ಲಾಸ್ಟಿಕ್‌ನಲ್ಲಿ ಶೇ.50 ರಷ್ಟು ಏಕ-ಬಳಕೆ ಅಥವಾ ಉಪಯೋಗಿಸಿ ಬಿಸಾಡಬಹುದಾದ ಪ್ಲಾಸ್ಟಿಕ್‌ಆಗಿದೆ.
ಪ್ರಪಂಚದಾದ್ಯಂತ ಜನರು ಪ್ರತಿ ನಿಮಿಷಕ್ಕೆ 1 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸುತ್ತಾರೆ.
ಪ್ರಪಂಚದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ತ್ಯಾಜ್ಯದಲ್ಲಿ ಶೇ. 10 ರಷ್ಟು ಪ್ಲಾಸ್ಟಿಕ್ ತ್ಯಾಜ್ಯದಿಂದ ಕೂಡಿದೆ.

ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ,ಭಾರತ ಸರ್ಕಾರ ಪರಿಸರ ಪೂರಕ ಚಟುವಟಿಕೆಗಳನ್ನು ಭಾರತದಾದ್ಯಂತ ಹಮ್ಮಿಕೊಳ್ಳಲು ನಿರ್ದೇಶಿಸಿರುತ್ತದೆ. ಇದರ ಅಂಗವಾಗಿ ದಿ:03-06-2018 ರಂದು ಶಾಲಾ ಕಾಲೇಜು ವಿಧ್ಯಾರ್ಥಿಗಳ ಸಹಭಾಗಿತ್ವದೊಂದಿಗೆ  ಎಂಪ್ರಿ ಸಂಸ್ಥೆಯು ಕಬ್ಬನ್ ಪಾರ್ಕ್ನಲ್ಲಿ “ಮಿನಿ ಮ್ಯಾರಾಥಾನ್” ಕಾರ್ಯಕ್ರಮ ಹಾಗೂ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದವರ  ಸಹಯೋಗದೊಂದಿಗೆ ಜೂನ್ 01 ರಿಂದ ಜೂನ್ ಅಂತ್ಯದವರೆಗೆ ಮಲ್ಪೆ, ಪಣಂಬೂರು, ಕಾರವಾರ ಹಾಗೂ ಗೋಕರ್ಣ  ಕಡಲತೀರಗಳಲ್ಲಿ ಸಂಗ್ರಹಣೆಗೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಸ್ವಚ್ಚತಾ ಕಾರ್ಯಕ್ರಮವನ್ನು ಆಯೋಜಿಸಲು ಯೋಜಿಸಲಾಗಿದೆ. ಜೂನ್ 04 ರಿಂದ ಮೈಸೂರು ಜಿಲ್ಲೆಯ ನಂಜನಗೂಡು ಕಪಿಲಾ ನದಿತೀರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಪೆನ್ನಾರ್ ನದಿತೀರಗಳಲ್ಲಿ  ಸಂಗ್ರಹಗೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಚಗೊಳಿಸುವದರ ಮೂಲಕ “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ” ಎಂಬ ಧ್ಯೆಯದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲು ಯೋಜಿಸಲಾಗಿದೆ.
                     header_logo.png

​ಪ್ಲಾಸ್ಟಿಕ್ ನಿಷೇಧ ಅಧಿಸೂಚನೆ (ಪರಿಸರ 5 ರ (ಸಂರಕ್ಷಣೆ) ಅಧಿನಿಯಮ, 1986 ರ ಅಡಿಯಲ್ಲಿ ಸೂಚಿಸಿದಂತೆ) ಕರ್ನಾಟಕದ ಒಂದು ನೋಟ.


ನಿಷೇಧಿತ ವಸ್ತುಗಳು :  ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬ್ಯಾನರ್‌ಗಳು, ಪ್ಲಾಸ್ಟಿಕ್ ತೋರಣಗಳು, ಪ್ಲೆಕ್ಸ್ಗಳು, ಪ್ಲಾಸ್ಟಿಕ್  ಧ್ವಜಗಳು, ಪ್ಲಾಸ್ಟಿಕ್ ತಟ್ಟೆಗಳು, ಪ್ಲಾಸ್ಟಿಕ್ ಲೋಟಗಳು,
                           ಪ್ಲಾಸ್ಟಿಕ್ ಚಮಚಗಳು, QèAUï ¦ü¯ïä÷ì, ಊಟದ ಮೇಜಿನ ಮೇಲೆ ಹರಡಲು ಬಳಸಲಾಗುವ ಪ್ಲಾಸ್ಟಿಕ್ ಹಾಳೆಗಳು, ಪ್ಲಾಸ್ಟಿಕ್ ಸ್ಟ್ರಾಗಳು​
 
ವಸ್ತುಗಳು : ಪ್ಲಾಸ್ಟಿಕ್, ಥರ್ಮಾಕೋಲ್ ಮತ್ತು  ಪ್ಲಾಸ್ಟಿಕ್ ಮೈಕ್ರೊಬೀಡ್ಸ್
ಚಟುವಟಿಕೆಗಳು : ಉತ್ಪಾದನೆ, ಪೂರೈಕೆ, ಮಾರಾಟ, ಮತ್ತು ಬಳಕೆ

​ವಿನಾಯಿತಿ:  
1. ವಿಶೇಷ ಆರ್ಥಿಕ ವಲಯದಲ್ಲಿ ಮತ್ತು ರಫ್ತು ಉದ್ದೆಶಿತ ಘಟಕಗಳಲ್ಲಿ ರಫ್ತು ಮಾಡುವ ಉದ್ದೆಶಕ್ಕೆಂದು ಉತ್ಪಾದಿಸಲ್ಪಡುವ ಪ್ಲಾಸ್ಟಿಕ್ ವಸ್ತುಗಳು.
2. ಪ್ಯಾಕೇಜಿಂಗ್‌ಗೆ ಮಾಡುವ ಸಂದರ್ಭದಲ್ಲಿ ಅವಿಭಾಜ್ಯವಾಗಿ ಉಪಯೋಗಿಸುವ  ಪ್ಲಾಸ್ಟಿಕ್‌ಗೆ 
3. ಸರ್ಕಾರಿ ಇಲಾಖೆಗಳಿಂದ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಂದ ಸ್ವಿಕೃತವಾದ ಆರ್ಡರ್‌ಗೆ ಎದುರಾಗಿ ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ, ಪ್ಲಾಸ್ಟಿಕ್ ಚೀಲಗಳು ಮತ್ತು          ಹಾಳೆಗಳು.
4. ಹಾಲು ಮತ್ತು ಹಾಲಿನ ಉತ್ಪನ್ನಗಳ (ಹೈನು ಉತ್ಪನ್ನಗಳು) ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್ 
  • ಅನುಷ್ಠಾನಾಧಿಕಾರಿಗಳು: 
               1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಜಂಟಿ ಆಯುಕ್ತರುಗಳು, ಕಂದಾಯ ಅಧಿಕಾರಿಗಳು, ಪಾಲಿಕೆಯ ಎಲ್ಲಾ ಆರೋಗ್ಯಾಧಿಕಾರಿಗಳು  ಮತ್ತು                              ಅಭಿಯಂತರರು.
               2. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು.
               3. ರಾಜ್ಯದ ಎಲ್ಲಾ ನಗರಸಭೆ ಆಯುಕ್ತರು; ಮುಖ್ಯಾಧಿಕಾರಿಗಳು,ನಗರಸಭೆ ಆರೋಗ್ಯಾಧಿಕಾರಿಗಳು ಮತ್ತು ಎಲ್ಲ ಅಭಿಯಂತರರು.
               4. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿಗಳು, ಉಪ ಪರಿಸರ ಅಧಿಕಾರಿಗಳು, ಪರಿಸರ ಅಧಿಕಾರಿಗಳು ಮತ್ತು  ಹಿರಿಯ                       ಪರಿಸರ ಅಧಿಕಾರಿಗಳು.
               5. ಕಂದಾಯ ಉಪವಿಭಾಗದ ಎಲ್ಲಾ ಸಹಾಯಕ ಆಯುಕ್ತರುಗಳು.
               6. ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು.
               7. ವಾಣಿಜ್ಯ ತೆರಿಗೆ ಇಲಾಖೆಗಳ ಎಲ್ಲಾ ಅಧಿಕಾರಿಗಳು
               8. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ಎಲ್ಲಾ ಅಧಿಕಾರಿಗಳು
               9. ತೂಕ ಮಾಪನ ಮತ್ತು ಅಳತೆ ಇಲಾಖೆಯ ನಿಯಂತ್ರಕರು, ಉಪ ನಿಯಂತ್ರಕ ಮತ್ತು ಪ್ರಾದೇಶಿಕ ಅಧಿಕಾರಿಗಳು 
               10. ಪೊಲೀಸ್ ಇಲಾಖೆ.
               11. ಆಹಾರ ಮತ್ತು ಸುರಕ್ಷತಾ ಆಯುಕ್ತರು.

  • ಈ ಅಧಿಸೂಚನೆಯನ್ನು ಉಲ್ಲಂಘಿಸಿದವರ ಮೇಲೆ ಆಯಾ ವ್ಯಾಪ್ತಿಯಲ್ಲಿ ಬರುವ ನ್ಯಾಯಾಲಯದಲ್ಲಿ  ಮೊಕದ್ದಮೆಯನ್ನು ಹೂಡಲು ಕೆಳಕಂಡ ಅಧಿಕಾರಿಗಳು ಕ್ರಮ ಜರುಗಿಸುವುದು:
              1. ಸರ್ಕಾರದ ಕಾರ್ಯದರ್ಶಿಗಳು (ಜೀವಿಶಾಸ್ತç ಮತ್ತು ಪರಿಸರ), ಅರಣ್ಯ ಪರಿಸರ ಮತ್ತು ಜೀವಿಶಾಸ್ತç  ಇಲಾಖೆ.
              2. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು 
              3. ಕಂದಾಯ ಇಲಾಖೆಯ ಸಹಾಯಕ ಆಯುಕ್ತರುಗಳು.
              4. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು.
              5. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ಪ್ರಾದೇಶಿಕ ಪರಿಸರ ಅಧಿಕಾರಿಗಳು.

header_logo.png

ಮಿನಿ ಮ್ಯಾರಥಾನ್ನಲ್ಲಿ ಭಾಗವಹಿಸುವ ಶಾಲೆಗಳು​

ಕ್ರ.ಸಂ. ಶಾಲೆಯ ಹೆಸರು ಹಾಗೂ ವಿಳಾಸ ಮಕ್ಕಳ ಸಂಖ್ಯೆ​
1ಸ.ಪ್ರೌ.ಶಾಲೆ ಪುಟ್ಟೆನ ಹಳ್ಳಿ, ಪುಟ್ಟೆನ ಹಳ್ಳಿ ,ಬೆಂಗಳೂರು
250
2ಸ.ಪ್ರೌ.ಶಾಲೆ ಹೊಂಬೇಗೌಡ ನಗರ, ವಿಲ್ಸನ್ ಗಾರ್ಡನ್, ಬೆಂಗಳೂರು100
3ಸ.ಪ್ರೌ.ಶಾಲೆ ಆಡುಗೋಡಿ, ವಿಲ್ಸನ್ ಗಾರ್ಡನ್, ಬೆಂಗಳೂರು

150

 

4ಸ.ಪ್ರೌ.ಶಾಲೆ ಗೊಲ್ಲರಹಟ್ಟಿ, ಬೆಂಗಳೂರು100
5ಸ.ಪ್ರೌ.ಶಾಲೆ, ಸರ್ಜಾಪುರ ರಸ್ತೆ ಅಗರ, ಬೆಂಗಳೂರು200
6ಸ.ಪ್ರೌ.ಶಾಲೆ ವಿವೇಕ ನಗರ (ತೆಲಗು), ಬೆಂಗಳೂರು100
7ಸ.ಪ್ರೌ.ಶಾಲೆ ದೊಮ್ಮಲೂರು, ಬೆಂಗಳೂರು100
8ಸ.ಪ್ರೌ.ಶಾಲೆ ಯಡಿಯೂರು, ಬೆಂಗಳೂರು​100


ಮಿನಿ ಮ್ಯಾರಥಾನ್ನಲ್ಲಿ ಭಾಗವಹಿಸುವ ಇಲಾಖೆಗಳು

​​​​
ಕ್ರ.ಸಂ. ಹೆಸರು
​ಭಾಗವಹಿಸುವವರ ಸಂಖ್ಯೆ
1ಎಂಪ್ರಿ​65
2MoEF & CC32
3
ಸಿಪಿಸಿಬಿ​
21
4ಕ.ರಾ.ಮಾ.ನಿ.ಮಂ100
5
ಐಟಿಬಿಪಿ
50
6ಬಿಬಿಎಂಪಿ 250

​​ ವಿಶ್ವ ಪರಿಸರ ದಿನ 2018 ರಲ್ಲಿ ಮ್ಯಾರಥಾನ್ ​ಫೋಟೋಗಳು​​
​ ​​header_logo.png​ ​header_logo.png
header_logo.png​​

 ​ ವಿಶ್ವ ಪರಿಸರ ದಿನ 2018 ರಂದು ಸೈಕ್ಲೋಥನ್ ಫೋಟೋಗಳು
header_logo.png​  header_logo.png
header_logo.pngheader_logo.png
header_logo.png
header_logo.png

​​​​                                                            header_logo.png


                    ನದಿಯ ದಂಡೆ ಸ್ವಚ್ಛಗೊಳಿಸುವಿಕೆ, ಪೆನ್ನಾರ್ ನದಿ, ನಂದಿ ಬೆಟ್ಟ ಫೋಟೋಗಳು​  

​ header_logo.png
header_logo.png​​​ header_logo.png​​
header_logo.png​​​ header_logo.png​​​
header_logo.png
​​header_logo.pngheader_logo.png

header_logo.png