“ಅನುಕರಣೀಯ ಸಾಧನೆಗಾಗಿ” GRIHA ಪ್ರಶಸ್ತಿ​​

'ಆದರ್ಶ' (Association for Development and ​Research of Sustainable Habitats- ADaRSH) ವು  ಭಾರತ ಸರ್ಕಾರದ ಹೊಸ ನವೀಕರಿಸಬಹುದಾದ ಶಕ್ತಿಯ ಸಚಿವಾಲಯದ (Ministry of New and Renewable Energy- MNRE) ಬೆಂಬಲದೊಂದಿಗೆ ಭಾರತ ಉಪಖಂಡದಲ್ಲಿ ಸುಸ್ಥಿರ ಆವಾಸಸ್ಥಾನಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಪರಸ್ಪರ ಸಂವಹನ ಕ್ರಿಯೆಗಳಿಗೆ ಒಂದು ಸ್ವತಂತ್ರವಾದ ವೇದಿಕೆಯಾಗಿದ್ದು, ಇದು ತನ್ನ 6ನೇ ವಾರ್ಷಿಕ ಗೃಹ ಶೃಂಗ ಸಮ್ಮಳನ 2015 ರಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ  ಅತ್ಯುತ್ತಮ ಪ್ರಯತ್ನಗಳಿಗೆ ಮತ್ತು ಗೃಹ ಮಾನದಂಡಗಳ ಅನುಷ್ಠಾನದ ಅಂಗೀಕಾರಕ್ಕಾಗಿ  “Exemplary Demonstration of Passive Architecture Design Award” ಪ್ರಶಸ್ತಿಯನ್ನು ನೀಡಿದೆ. ಎಂಪ್ರಿ ಸಂಸ್ಥೆಗೆ ಈ ಪ್ರಶಸ್ತಿಯು ಅದರ ಹೊಸ ಹಸಿರು ಕಟ್ಟಡದಲ್ಲಿಯ ಬೆಳಕಿನ ವ್ಯವಸ್ಥೆ, ಗಾಳಿಯ ಪ್ರಸರಣ,  ಉಷ್ಣಾಂಶದ ನಿಯಂತ್ರಣ,  ಇಂಧನ ದಕ್ಷತೆ,  ಸೌರ ದ್ಯುತಿವಿದ್ಯುತ್ಜನಕಗಳು, ಅಂಗಣದ ನಿರ್ಮಾಣ, ಗಾಳಿ ಮತ್ತು ಬೆಳಕಿಗಾಗಿ ಹೆಚ್ಚಿನ ಕಿಟಕಿಗಳ ಬಳಕೆ ಈ ಎಲ್ಲವುಗಳ ಆಧಾರದ ಮೇಲೆ ದೊರಕಿದೆ. ​   

Griha1.JPGGriha3.png


​​