​​ಮಕ್ಕಳ ಆರೈಕೆ

ನಿಮ್ಮ ಮಗು    |    ದೇಶದ ಭವಿಷ್ಯ

  ಇಂದಿನ ಆರೋಗ್ಯವಂತ ಮಕ್ಕಳೇ ಮುಂದಿನ ಆರೋಗ್ಯವಂತ ಸಮಾಜಕ್ಕೆ ಬುನಾದಿ

ಬಾಲ್ಯವೆಂಬುದು ಜೀವನದ ಪ್ರಮುಖವಾದ ಪ್ರಾರಂಭಿಕ ಹಂತ.

ಕ್ಷೀರಾದ ಜನನದಿಂದ ಒಂದುವರ್ಷ ತುಂಬುವವರೆಗೆ ಮಗುವಿಗೆ ತಾಯಿಯ ಹಾಲು ಮುಖ್ಯವಾದ ಆಹಾರವಾದ್ದರಿಂದ ಹಂತಕ್ಕೆ ಕಕ್ಷೀರಾದಕಿ ಎಂದು ಕರೆಯಲಾಗುತ್ತದೆ.

ಕ್ಷೀರಾನ್ನಾದ ಒಂದುವರ್ಷದಿಂದ ಎರಡುವರ್ಷದವರೆಗೆ ತಾಯಿಯಹಾಲಿನ ಜೊತೆಜೊತೆಗೇ ಬೇರೆ ಪೌಷ್ಠಿಕ ಆಹಾರವನ್ನೂ ಕೊಡಬೇಕಾಗುತ್ತದೆ. ಹಂತಕ್ಕೆ ಕಕ್ಷೀರಾನ್ನಾದಕಿ ಎನ್ನುತ್ತಾರೆಅನ್ನಾದ ಎರಡು ವರ್ಷದ ನಂತರ ಮಗು ಸ್ವತಂತ್ರವಾಗಿ ಆಹಾರ ಸೇವಿಸಲು ಪ್ರಾರಂಭಿಸುತ್ತದೆ. ಹಂತದಿಂದ ಅನ್ನಾದ ಎಂದು ಕರೆಯುತ್ತಾರೆ. 2ವರ್ಷ ವಯಸ್ಸಿನಿಂದ 10ವರ್ಷದ ವಯಸ್ಸಿನವರೆಗಿನ ಸಮಯವು ಮಕ್ಕಳ ಜೀವನದಲ್ಲಿ ಪ್ರಮುಖಪಾತ್ರವನ್ನುವಹಿಸುತ್ತದೆ. ವಯಸ್ಸಿನ ಮಕ್ಕಳಲ್ಲಿ ಬಳಸುವ ಪದಾರ್ಥಗಳಲ್ಲಿ ಪೌಷ್ಠಿಕಾಂಶವನ್ನು ಕಾಯ್ದುಕೊಳ್ಳುವ ಜೊತೆಗೆ ಆಹಾರ ವೈವಿದ್ಯತೆಯನ್ನು ಅಳವಡಿಸಿಕೊಳ್ಳಲಾಗುತ್ತದೆ.

ಮಕ್ಕಳಲ್ಲಿ ಉಂಟಾಗುವ ಸಾಮಾನ್ಯ ತೊಂದರೆಗಳು ಒಂದೆಡೆ ಮಗುವಿನ ಶಾರೀರಕ ಹಾಗೂ ಮಾನಸಿಕ ಬೆಳವಣಿಗೆಯ ಕಾಲವಾದರೆ ಇನ್ನೊಂದೆಡೆಗೆ ಬೆಳವಣಿಗೆಗೆ ಪೂರಕವಾಗಿ ಪೌಷ್ಟಿಕ ಆಹಾರ ಮತ್ತು ವಿದ್ಯಾಭ್ಯಾಸವನ್ನೂ ಮಗುವಿಗೆ ನೀಡಬೇಕಾಗುತ್ತದೆ. ಆದರೆ ಇಂದಿನ ಬದಲಾದ ಬದುಕಿನ ವಿಧಾನಗಳಿಂದಾಗಿ ಮಕ್ಕಳಲ್ಲಿ ಮಿತಿಮೀರಿದ ಬೇಕರಿ ತಿಂಡಿಗಳು, ಫಾಸ್ಟ್ ಫುಡ್, ಜಂಕ್ ಫುಡ್ ಸೇವನೆ, ನಿಯಂತ್ರಣವಿಲ್ಲದ ದೂರದರ್ಶನ ಕಂಪ್ಯೂಟರ್ ಬಳಕೆ ಇವುಗಳಿಂದ ಅನೇಕ ಶಾರೀರಿಕ, ಮಾನಸಿಕ ತೊಂದರೆಗಳು ಉಂಟಾಗುತ್ತವೆ. ಮಾನಸಿಕ ಒತ್ತಡ, ಕಲಿಕೆಯಲ್ಲಿ ಕಷ್ಟವಾಗುವುದು, ಹಟಮಾರಿತನ, ಓದಿನಲ್ಲಿ ಏಕಾಗ್ರತೆ ಇಲ್ಲದಿರುವುದು, ನೆನಪಿನ ಶಕ್ತಿ ಕಡಿಮೆಯಾಗುವುದು ರೋಗನಿರೋಧಕಶಕ್ತಿ ಕಡಿಮೆ ಆಗುವುದು, ಪದೇಪದೇ ಖಾಯಿಲೆಗಳಿಗೆ ತುತ್ತಾಗುವುದು. ಹಸಿವೆ ಆಗದಿರುವುದು, ಸೇವಿಸಿದ ಆಹಾರ ಜೀರ್ಣವಾಗದಿರುವುದು, - ಎಲ್ಲಾ ತೊಂದರೆಗಳು ಮಕ್ಕಳಲ್ಲಿ ಸರ್ವೇಸಾಮಾನ್ಯ.

​ಮಕ್ಕಳ ಆಹಾರ ಏಕದಳ ಧಾನ್ಯಗಳಾದ ಅಕ್ಕಿ, ರಾಗಿ, ಜೋಳ, ಗೋಧಿ, ನವಣೆ, ಸಜ್ಜೆ ಇತ್ಯಾದಿಗಳಿಂದ ತಯಾರಿಸಿದ ಪೇಯಗಳ ಬಳಕೆ ಉತ್ತಮ. ದ್ವಿದಳ ಧಾನ್ಯಗಳಾದ ಹೆಸರು, ಕಡಲೆ, ಬಟಾಣಿ, ಸೋಯಾಗಳಿಂದ ತಯಾರಿಸಿದ ದೋಸೆ, ಚಪಾತಿ, ರೊಟ್ಟಿ ಇತ್ಯಾದಿಗಳನ್ನು ನೀಡಬಹುದು.

 • ಆಹಾರವನ್ನು ಯಾವಾಗಲೂ ಮಕ್ಕಳು ಇಷ್ಟಪಡುವ ರೀತಿಯಲ್ಲಿಯೇ ಕೊಡಬೇಕು.
 • ಆಯಾಯ ಕಾಲದಲ್ಲಿ ನೈಸರ್ಗಿಕವಾಗಿ ದೂರೆಯುವ ತಾಜಾತರಕಾರಿ ಹಾಗೂ ಹಣ್ಣುಗಳನ್ನು ಮಕ್ಕಳಿಗೆ ಕೊಡಬೇಕು.
 • ಮಕ್ಕಳು ತರಕಾರಿಗಳನ್ನು ಸೇವಿಸಲು ಇಷ್ಟಪಡದಿದ್ದಾಗ ದೋಸೆ, ರೊಟ್ಟಿಗೆ ಬೇಯಿಸಿದ ತರಕಾರಿಗಳನ್ನು ಸೇರಿಸಿ, ಬೆರಸಿ ಕೊಡಬೇಕು.
 • ದಿನವೂ ಸಾಕಷ್ಟು ಪ್ರಮಾಣದಲ್ಲಿ ಚೆನ್ನಾಗಿ ಕಾಯಿಸಿ ಆರಿಸಿದ ನೀರನ್ನು ಕುಡಿಯುವಂತೆ ಮಕ್ಕಳ ಮನ ಒಲಿಸಬೇಕು.
 • ಒಣಹಣ್ಣುಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಖರ್ಜೂರ, ಅಂಜೂರ ಮೊದಲಾದುವುಗಳನ್ನು ಕೊಡಬೇಕು. ಹೀಗೆ ಒಣಹಣ್ಣುಗಳನ್ನು ಕೊಡುವುದರಿಂದ ಮಕ್ಕಳಲ್ಲಿ ಬಹುತೇಕ ಮಟ್ಟದಲ್ಲಿ ಪೌಷ್ಠಿಕಾಂಶದ ಕೊರತೆಯನ್ನು ತಡೆಗಟ್ಟಬಹುದು.
 • ಆಕಳತುಪ್ಪವನ್ನು ದಿನಾ ಊಟದಲ್ಲಿ ಬಳಸುವುದು ಜೀರ್ಣಶಕ್ತಿ ಹೆಚ್ಚಿಸುವುದು.
 • ಆಹಾರದಲ್ಲಿ ಜ್ಯಾಮ್, ಜೆಲ್ಲಿಗಳ ಬದಲಾಗಿ ಶುದ್ಧಜೇನುತುಪ್ಪವನ್ನು ಬಳಸಬಹುದು.
 • ಬಜೆಯನ್ನು ನೀರಲ್ಲಿ ತೇಯ್ದು ಕಾಲು ಚಮಚದಷ್ಟು ಮಕ್ಕಳಿಗೆ ನೆಕ್ಕಿಸುವುದು ಒಳ್ಳೆಯದು. ವಾರಕ್ಕೆರಡು ಬಾರಿ ಈ ಕ್ರಮವನ್ನು ಅನುಸರಿಸಬೇಕು. (ವೈದ್ಯರಸಲಹೆ ಮೇರೆಗೆ)
 • ಬೆಟ್ಟದನೆಲ್ಲಿಕಾಯಿಯ ಮೊರಬ್ಬ, ಹಲ್ವವನ್ನು ಮಕ್ಕಳಿಗೆ ಕೊಡುವುದರಿಂದ ಅವರಿಗೆ ರೋಗನಿರೋಧಕಶಕ್ತಿಯು ವೃದ್ಧಿಸುವುದು. ನೆಲ್ಲಿಕಾಯಿಪುಡಿಯನ್ನು ವೈದ್ಯರ ಸಲಹೆಮೇರೆಗೆ ವಯೋನುಸಾರ ಪ್ರಮಾಣ ನಿರ್ಧರಿಸಿ ಸ್ವಲ್ಪ ಜೇನುತುಪ್ಪದ ಜೊತೆಕೊಡುವುದು ಒಳ್ಳೆಯದು
 • ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಿಗೆ ಆಹಾರದಲ್ಲಿ ಒಂದೆಲಗ, ಬೂದುಕುಂಬಳ ಇತ್ಯಾದಿ ಬಳಸಬಹುದು.
 • ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ರುಚಿ ರುಚಿಯಾದ ತಿಂಡಿ ತಿನಸುಗಳನ್ನು ಆಗಾಗ್ಗೆ ಮಕ್ಕಳಿಗೆ ಪ್ರೀತಿಯಿಂದ ಕೊಟ್ಟಿದ್ದೇ ಆದರೆ ಮಕ್ಕಳು ಹೊರಗಿನ ಅಂಗಡಿತಿಂಡಿಗಳಿಗೆ ಆಸೆಪಡುವುದನ್ನು ಬಹುತೇಕ ನಿಯಂತ್ರಿಸಬಹುದು.

ಮಕ್ಕಳ ಚಟುವಟಿಕೆಗಳು ಹೀಗಿರಲಿ:
 • ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಹಿರಿಯರ ಪಾತ್ರ ಇನ್ನೂ ಗುರುತರವಾದುದು. ಮಕ್ಕಳ ತುಂಟಾಟಗಳು ಮನಕ್ಕೆ ಮುದನೀಡುವುದಾದರೂ ಅವರಲ್ಲಿ ಶಿಸ್ತುಸಂಯಮಗಳನ್ನು ಕಲಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಮಕ್ಕಳು ಹಿರಿಯರನ್ನು ಅನುಸರಿಸುತ್ತ ಬೆಳೆಯುತ್ತವೆ. ಆದ್ದರಿಂದ, ಕುಟುಂಬದ ಹಿರಿಯ ಸದಸ್ಯರಾಗಿ ನಾವೆಷ್ಟು ಅನುಕರಣೀಯ ಯೋಗ್ಯರು ಎಂದು ಪರಾಂಬರಿಸಿಕೊಳ್ಳಬೇಕು.
 • ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರವರ ಅಭಿರುಚಿಗೆ ತಕ್ಕಂತಹ ಕ್ಷೇತ್ರಗಳಲ್ಲಿ ಅವರಿಗೆ ಸಾಧನೆ ಅವಕಾಶಗಳನ್ನು ಕಲ್ಪಿಸಿಕೊಡುತ್ತ ಪ್ರೋತ್ಸಾಹಿಸಬೇಕಲ್ಲದೆ, ನಮ್ಮ ಮಹತ್ವಾಕಾಂಕ್ಷೆಗಳು ಅವರ ವ್ಯಕ್ತಿತ್ವ ವಿಕಸನದ ಮಾರ್ಗದಲ್ಲಿ ಎಂದಿಗೂ ಮುಳ್ಳಾಗದಂತೆ ಎಚ್ಚರವಹಿಸಬೇಕು.
 • ಪಠ್ಯಪುಸ್ತಕಗಳೇ ಅಲ್ಲದೆ, ರಜಾದಿನಗಳಲ್ಲಿ ಅವರಿಗೆ ಉತ್ತಮ ಸಾಹಿತ್ಯಕೃತಿಗಳನ್ನು, ಸಾಧಕರುಗಳ ಮತ್ತು ವಿಜ್ಞಾನಿಗಳ ಜೀವನಚರಿತ್ರೆಗಳನ್ನು ಓದಿಹೇಳುವ ಮೂಲಕ ಮಕ್ಕಳಲ್ಲಿ ಸಧಬಿರುಚಿ ಜಾಗೃತಗೊಳಿಸಬೇಕು.
 • ಪ್ರತಿಯೊಂದು ಮಗುವಿಗೂ ತನ್ನದೇ ಆದ ಆಸಕ್ತಿಯಿರುತ್ತದೆ. ಯಾವ ಕಲೆಯಲ್ಲಿ (ಚಿತ್ರಕಲೆ, ಸಂಗೀತ, ನೃತ್ಯ, ನಾಟಕ ಇತ್ಯಾದಿ) ಮಗುವಿಗೆ ಆಸಕ್ತಿಯಿರುತ್ತದೋ ಅದನ್ನು ಕಲಿಸಬೇಕು.
 • ಸಮಯಕ್ಕೆ ಸರಿಯಾಗಿ ಏಳುವುದು, ಕ್ರಮಬದ್ಧವಾಗಿ ಓದುವುದು, ಆಟೋಟಗಳಲ್ಲಿ ಪಾಲ್ಗೊಳ್ಳುವುದು ಹೀಗೆ ಮಕ್ಕಳಲ್ಲಿ ಶಿಸ್ತಿನಕ್ರಮವನ್ನು ರೂಢಿಸಬೇಕು.
 • ಯಾವುದೇ ಕಾರಣಕ್ಕೂ ಮ್ಕಕಳು ಒತ್ತಡಕ್ಕೆ ಒಳಗಾಗದಂತೆ, ಮಕ್ಕಳಮೇಲೆ ಋಣಾತ್ಮಕ ಪರಿಣಾಮ ಬೀಳದಂತೆ ನೋಡಿಕೊಳ್ಳಬೇಕು.
 • ಶಾರೀರಿಕ ವ್ಯಾಯಾಮ ಮಕ್ಕಳಿಗೆ ಅತ್ಯಗತ್ಯ, ಹಾಗಾಗಿ ಶಾರೀರಿಕ ಆಟೋಟಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಇಲ್ಲದಿದ್ದರೆ ಮಕ್ಕಳಲ್ಲಿ ಬೊಜ್ಜು ಉಂಟಾಗುವುದು.
 • ಮಕ್ಕಳಲ್ಲಿ ರಾಜ್ಯ, ದೇಶ, ಸಮಾಜದ ಅರಿವು, ಅಗತ್ಯ, ಹಾಗಾಗಿ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಬೇಕು.
 • ಟಿ.ವಿ, ಕಂಪ್ಯೂಟರ್ಗಳು ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗುವಂತೆ ಬಳಸಬೇಕು. ಆದರೆ ಈ ಸೌಲಭ್ಯಗಳನ್ನು ದುರುಪಯೋಗ ಪಡಿಸದಂತೆ ನಿಗಾವಹಿಸುವುದು ಅವಶ್ಯಕ.
 • ಮಕ್ಕಳು ಎಲ್ಲಾ ರೀತಿಯ ಕೆಲಸಗಳನ್ನು (ಮನೆಕೆಲಸ, ಕೈತೋಟದ ಕೆಲಸ, ಮನೆಗೆ ಅಗತ್ಯವಾದ ವಸ್ತುಗಳನ್ನು ತರುವುದು) ತಿಳಿಯುವುದು ಹಾಗೂ ಹಿರಿಯರ ಜೊತೆ ಸೇರಿ ಸಹಾಯಮಾಡುವುದು ಅವರ ಮುಂದಿನ ಜೀವನಕ್ಕೆ ಸಹಕಾರಿ.

​​ವೃದ್ಧಾಪ್ಯದಲ್ಲಿ ಆರೈಕೆ

 

ಮಾನವ ಜೀವನದ ಪ್ರಮುಖವಾದ ಹಂತಗಳೆಂದರೆ ಜನನ, ಬಾಲ್ಯ, ಹರೆಯ (ಯೌವನ), ವೃದ್ಧಾಪ್ಯ ಹಾಗೂ ಮರಣ. ಜೀವನದ ಪ್ರತಿಯೊಂದು ಹಂತದಲ್ಲೂ ಮನುಷ್ಯನಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಅನೇಕ ಮಾರ್ಪಾಟುಗಳಾಗುತ್ತವೆ. ಈ ಪರಿವರ್ತನೆಗಳಿಗೆ ತಕ್ಕಂತೆ ನಮ್ಮ ಆಹಾರ ಸೇವನಾ ವಿಧಾನ ಹಾಗೂ ನಮ್ಮನಂದಿನ ಚಟುವಟಿಕೆಗಳನ್ನೂ, ಚಿಂತನೆಯನ್ನೂ ಬದಲಾಯಿಸಿಕೊಳ್ಳಬೇಕು.  ಇದರಿಂದ ಆರೋಗ್ಯದ ರಕ್ಷಣೆಯೂ ಆಗುತ್ತದೆ. ಆಯಾ ಜೀವನದ ಹಂತಗಳಿಗೆ ಅನುಸಾರವಾಗಿ ಮನುಷ್ಯನು ಮಾನಸಿಕವಾಗಿ ವಿಕಾಸಹೊಂದುತ್ತಾನೆ.

ಮುಪ್ಪಿನ ಲಕ್ಷಣಗಳು

ಮುಪ್ಪಿನ ಹಂತದಲ್ಲಿ ಶರೀರಿದ ಎಲ್ಲಾ ಭಾಗಗಳಲ್ಲೂ ಸವಕಳಿ ಉಂಟಾಗುತ್ತದೆ. ಶಾರೀರಿಕ ಚಟುವಟಿಕೆಯ ಶಕ್ತಿಕುಂಠಿತಗೊಳ್ಳುವುದು, ದೃಷ್ಟಿಮಂದವಾಗುವುದು, ಶ್ರವಣಶಕ್ತಿ ಕುಂಠಿತಗೊಳ್ಳುವುದು, ಚರ್ಮವು ಸುಕ್ಕುಗಟ್ಟುವುದು, ವಾಸನೆಗ್ರಹಿಸುವ ಶಕ್ತಿಕಡಿಮೆಯಾಗುವುದು, ಚರ್ಮದ ಸ್ಪರ್ಶಗ್ರಹಣ ಶಕ್ತಿಯು ಕಡಿಮೆಯಾಗುವುದು, ನೆನಪಿನಶಕ್ತಿ ಕುಂದುವುದು.  ಮೂತ್ರಜನಕಾಂಗ (kidney), ಪಿತ್ತಜನಕಾಂಗ (Liver), ಹೃದಯ(Heart), ಶ್ವಾಸಕೋಶ(Lung) ಈ ಎಲ್ಲಾ ಅವಯವಗಳ ಕಾರ್ಯಸಾಮಥ್ರ್ಯ ಕುಂಠಿತಗೊಳ್ಳುವುದು. (ಎಲ್ಲರಲ್ಲೂ ಅಲ್ಲ, ಆಯಾವ್ಯಕ್ತಿಯ ಪ್ರಕೃತಿ, ವ್ಯಾಧಿಕ್ಷಮತ್ವ, ಆಹಾರ, ಜೀವನಶೈಲಿಯನ್ನು ಅವಲಂಬಿಸಿ). ಬದಲಾದ ಕುಟುಂಬಪದ್ಧತಿ ಹಾಗೂ ಜೀವನಶೈಲಿಯಿಂದಾಗಿ ಖಿನ್ನತೆ, ಮಾನಸಿಕ ಒತ್ತಡ, ಒಂಟಿತನದಭಾವ ಗ ಮುಂತಾದ ಮಾನಸಿಕತೊಂದರೆಗಳು ಉಂಟಾಗಬಹುದು. 

ಹೀಗಿರಲಿ ಮುಪ್ಪಿನಲ್ಲಿ ನಿಮ್ಮ ಜೀವನ (ಆಹಾರ, ಇತರ ಜೀವನ ಶೈಲಿ)

ಮುಪ್ಪಿನಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಉಂಟಾಗುವ ಬದಲಾವಣೆಗಳನ್ನು ತಿಳಿದುಕೊಳ್ಳಬೇಕು.

ಆಹಾರ:. ಮುಪ್ಪಿನಲ್ಲಿ ಜೀರ್ಣಶಕ್ತಿಯೂ ಕಡಿಮೆ ಆಗುವುದರಿಂದ ಸ್ಪಲ್ಪಪ್ರಮಾಣದ ಆಹಾರವನ್ನು ನಿಗದಿತಸಮಯದಲ್ಲಿ ದಿನಕ್ಕೆ ನಾಲ್ಕುಬಾರಿ ಸೇವಿಸುವುದು ಒಳ್ಳೆಯದು. ಸುಲಭವಾಗಿ ಜೀರ್ಣವಾಗುವ (ನಆಹಾರ 50% ಮತ್ತು ದ್ರವ್ಯ ಆಹಾರ 25%). ಆಹಾರಪದಾರ್ಥಗಳಾದ ಹಣ್ಣು ತರಕಾರಿಗಳು, ಬೇಯಿಸಿದಕಾಳು ಬೇಳೆ ಇವುಗಳನ್ನು ಸೇವಿಸಿ.

 • ಏಕದಳ ಧಾನ್ಯ: ಅಕ್ಕಿ, ರಾಗಿ, ಗೋಧಿ, ಜೋಳ, ನವಣೆ, ಸಜ್ಜೆ ಇತ್ಯಾದಿಗಳನ್ನು ಸೇವಿಸಬಹುದು..
 • ದ್ವಿದಳ ಧಾನ್ಯ: ಹೆಸರು, ಹುರುಳಿ ಕಾಳುಗಳನ್ನು ಸೇವಿಸಬಹುದು..
 • ಉಪ್ಪು: ಸೈಂಧವ ಎಂಬ ಉಪ್ಪು ಸೇವಿಸಬಹುದು..
 • ತರಕಾರಿ: ತರಕಾರಿಗಳಲ್ಲಿ ಮೂಲಂಗಿ, ಸೌತೆ, ಕ್ಯಾರೆಟ್, ನವಿಲುಕೋಸು ಇವುಗಳನ್ನು ಸೇವಿಸಬಹುದು..
 • ಸಾಂಬಾರ ಪದಾರ್ಥ: ಈರುಳ್ಳಿ, ಬೆಳ್ಳುಳ್ಳಿ, ಇವುಗಳನ್ನು ಸೇವಿಸಬಹುದು.
 • : ಮೆಂತ್ಯ ಕೊತ್ತಂಬರಿ, ಕರಿಬೇವು ಇವುಗಳನ್ನು ಸೇವಿಸಬಹುದು.
 • : ಹಣ್ಣುಗಳಲ್ಲಿ ದಾಳಿಂಬೆ, ಪಪ್ಪಾಯ, ಮೂಸಂಬಿ, ಏಲಕ್ಕಿ ಬಾಳೆಹಣ್ಣು, ದ್ರಾಕ್ಷಿ ಇವುಗಳನ್ನು  ಸೇವಿಸಬಹುದು.
 • ಮಾಂಸಾಹಾರ: ಮೇಕೆಯ ಮಾಂಸ, ಕೋಳಿಯ ಮಾಂಸ ಸೇವಿಸಬಹುದು.

ಾರ: ದಿನಕ್ಕೆರಡು ಬಾರಿ ಪ್ರಾರ್ಥನೆ ಮಾಡುವುದು ಮಾನಸಿಕ ಶಾಂತಿಗೆ ಸಹಕಾರಿ. ಸಾಧ್ಯವಾದಷ್ಟು ಬೆಚ್ಚಗಿನ ನೀರನ್ನೇ ಸೇವಿಸುವುದು ಸೂಕ್ತ. ಬೆಳಗ್ಗೆ ಹಾಗೂ ಸಂಜೆ ಎರಡೂ ಹೊತ್ತು ನಡಿಗೆ ಇರಲಿ. ಯಾವಾಗಲೂ ಸಾಮಥ್ರ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಸದಾ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿರುವುದು ಒಳ್ಳೆಯದು. 

        ಸದಾ ಚಟುವಟಿಕೆ ಇರಲಿ.

 •  
 • ಮೆತ್ತಗಿರುವ, ಏರುತಗ್ಗಾಗಿರುವ ಹಾಸಿಗೆಯಿಂದ ಬೆನ್ನುನೋವು, ಸೊಂಟನೋವಿನ ತೊಂದರೆಗಳು ಬರುವ ಹಾಗೂ ಹೆಚ್ಚಾಗುವ ಸಾಧ್ಯತೆಇದೆ.  ಸದಾಧನಾತ್ಮಕ ಆಲೋಚನೆಯಿರಲಿ ಮತ್ತು ಮಲಗುವ ಹಾಸಿಗೆ ಸಮತಟ್ಟಾಗಿರಲಿ.
 • ನಡೆಯುವಾಗ ಯಾವಾಗಲೂ ಆಧಾರಕ್ಕಾಗಿ ಊರುಗೋಲನ್ನು ಬಳಸುವುದು ಒಳ್ಳೆಯದು. ಛತ್ರಿ ಬಳಸುವುದು ಸೂಕ್ತ.
 • ಸಾಧ್ಯವಾದಷ್ಟು ಹತ್ತಿಬಟ್ಟೆಗಳನ್ನೇ ಬಳಸುವುದು ಒಳ್ಳೆಯದು.
 • ಆಯಾ ಕಾಲಾನುಸಾರವಾಗಿ, ಸ್ಥಳಅನುಸಾರವಾಗಿ ಲಭ್ಯವಾಗುವ ಹಣ್ಣು, ತರಕಾರಿಗಳ ಬಳಕೆ ಪ್ರಶಸ್ತವಾದುದು. 
 • ಪ್ರತಿದಿನ ಮೈಗೆಲ್ಲಾ ಎಳ್ಳೆಣ್ಣೆ ಹಚ್ಚಿಕೊಳ್ಳುವುದು ಸೂಕ್ತ. ಅದರಲ್ಲೂ ಸಂಧಿ ಪ್ರದೇಶಗಳಾದ ಮೊಣಕೈ, ಮೊಣಕಾಲು, ಸೊಂಟದ ಪ್ರದೇಶ, ಭುಜ, ಕುತ್ತಿಗೆಗಳಿಗೆ ಎಣ್ಣೆಯನ್ನು ನೀವಿಕೊಳ್ಳಬೇಕು.
 • ರಾತ್ರಿ ನಿದ್ದೆ ಕಡಿಮೆಯಾಗುವುದರಿಂದ ಮಧ್ಯಾಹ್ನ ಸ್ವಲ್ಪಹೊತ್ತು ಕುಳಿತುಕೊಂಡು ವಿಶ್ರಾಂತಿಪಡೆಯುವುದು ಒಳ್ಳೆಯದು.
 • ಊಟದಲ್ಲಿ ಆಕಳ ತುಪ್ಪವನ್ನು ಬಳಸುವುದು ಒಳ್ಳೆಯದು. 
 • ದಿನಾ ಒಂದುಲೋಟ ಆಕಳಹಾಲನ್ನು ಕುಡಿಯಬೇಕು.
 • ದಿನಕ್ಕೆ ಸುಮಾರು ಎರಡರಿಂದ ಮೂರು ಲೀಟರ್ಗಳಷ್ಟು ನೀರನ್ನು ಕುಡಿಯಬೇಕು.
 • ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ.  ಯಾವುದಾದರೊಂದು ಕಲಿಕೆಯಲ್ಲಿ (ಸಂಗೀತ, ಚಿತ್ರಕಲೆ, ಮೊದಲಾದ ಕಲೆ, ಹೊಸ ಭಾಷಾ ಕಲಿಕೆ) ತೊಡಗಿಸಿಕೊಳ್ಳುವುದು ಒಳ್ಳೆಯದು.
 • ಕ್ರಮಬದ್ಧವಾದ ದಿನಚರಿ, ಜೀವನಶೈಲಿ ಇರಲಿ. 
 • ವರ್ಷಕ್ಕೆ ಎರಡು ಬಾರಿ ಆರೋಗ್ಯತಪಾಸಣೆ ಮಾಡಿಸುತ್ತಿರಿ. 
 • ಸುಲಭ ಯೋಗಾಸನಗಳು, ಸರಳ ಪ್ರಾಣಾಯಾಮ ಹಾಗೂ ಧ್ಯಾನಕ್ಕೆ ಸ್ವಲ್ಪಸಮಯ ಮೀಸಲಿಡಿ. ನಿಯಮಿತ ತಪಾಸಣೆಗೆ ಕುಟುಂಬ ವೈದ್ಯರ ಸಂಪರ್ಕ ಇದ್ದರೆ ಒಳ್ಳೆಯದು.

​​ಮಾನಸಿಕ ಆರೋಗ್ಯವರ್ಧನೆಗೆ ಸ

ೂತ್ರ

ಳು


ು.

ಯಾವಾಗಲೂ ಸತ್ಯವನ್ನೇ ಹೇಳುವುದು;

ಇದನ್ನು ನಾವುಗಳು ಅನುಸರಿಸುವುದರಿಂದ ಮನಸ್ಸಿನ ಆತಂಕ, ಭಯ, ದುಗುಡ, ತಪ್ಪಿತಸ್ಥ ಮನೋಭಾವಗಳು ಇಲ್ಲದಂತಾಗಿ, ಹೃದಯ ಮನಸ್ಸುಗಳು ಹಗುರವಾಗುತ್ತದೆ. ಅಲ್ಲದೇ ನಮ್ಮ ವ್ಯಕ್ತಿತ್ವದಲ್ಲೇ ಒಂದು ಬಗೆಯ ಆತ್ಮಸ್ಥೈರ್ಯ, ನಿರ್ಭಯತೆ ಉಂಟಾಗಿ ಧೀರೋದಾತ್ತ ಮನೋಭಾವ ಬೆಳೆಯುತ್ತದೆ. 

ಕೋಪಿಸಿಕೊಳ್ಳದೇ ಇರುವುದು:

ಎಲ್ಲವೂ ನಮ್ಮ ಮನಸ್ಸಿಗೆ ತಕ್ಕಂತೆ, ನಮ್ಮ ಅನುಕೂಲಕ್ಕೆ ತಕ್ಕಂತೆ ನಡೆದರೆ ಎಲ್ಲವೂ ಒಳ್ಳೆಯದೇ, ಆದರೆ ಜೀವನ ನಾವು ನಿರೀಕ್ಷಿಸಿದಂತೆ ಆಗದೆ, ಪ್ರತಿಕೂಲ ವಾತಾವರಣ ಉಂಟಾದಾಗ, ವ್ಯಕ್ತಿಗಳಿಂದಲೋ, ಟನೆಗಳಿಂದಲೋ ಪ್ರಚೋದನೆಗೆ ಒಳಗಾದಾಗ ಕೋಪ ಬರುವುದು ಸಹಜವೇ. ಆದರೆ ಸಣ್ಣ ಸಣ್ಣ ವಿಷಯಗಳಿಗೂ ಉದ್ರಿಕ್ತರಾಗಿ, ಕೂಗಾಡುತ್ತಾ ಜಗಳವನ್ನುಂಟು ಮಾಡಿಕೊಂಡು ಹೋದರೆ ಜೀವನವೇ ದುರ್ಭರವಾಗುವುದಲ್ಲದೇ, ಮಾನವೀಯ ಸಂಬಂಧಗಳೇ ಮುರಿದು ಬೀಳುತ್ತವೆ. ಪ್ರೀತಿ, ವಾತ್ಸಲ್ಯಗಳಿಲ್ಲದ, ಉತ್ತಮ ಮಾನವೀಯ ಸಂಬಂಧಗಳಿಲ್ಲದ ಜೀವನ ನರಕ ಸದೃಶವಾಗುತ್ತದೆ.

ನಮ್ಮ ಇಂದ್ರಿಯ ಮತ್ತು ಮನಸ್ಸನ್ನೂ ಹತೋಟಿಯಲ್ಲಿಟ್ಟುಕೊಳ್ಳುವುದು:

ನಮ್ಮ ಜೀವನ ಶೈಲಿಗೆ ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕಾಗುತ್ತದೆ. ನಮ್ಮ ಇತಿಮಿತಿಗಳನ್ನು ಅರಿತುಕೊಂಡು, ಒಂದು ತಪಸ್ಸಿನ ರೀತಿಯಲ್ಲಿ ಜೀವನವನ್ನು ಸಾಗಿಸಿದ್ದೇ ಆದರೆ ಮನಸ್ಸು, ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳವುದು ಸಾಧ್ಯವಾಗುತ್ತದೆ. ಆಗ ಜೀವನದ ಶ್ರೇಷ್ಠ ಉದ್ದೇಶ ಸಫಲವಾಗುತ್ತದೆ.

ಜ್ಞಾನಾಕಾಂಕ್ಷಿಯಾಗಿರುವುದು-ಜ್ಞಾನಕ್ಕಾಗಲೀ, ವಿದ್ಯೆಗಾಗಲೀ ಹಂಬಲಿಸುವುದು:

ಕವಿದ್ಯೆ ಇಲ್ಲದ ಮನುಷ್ಯ ಪಶು-ಸಮಾನಕಿ ಎನ್ನುತ್ತದೆ. ಬೇರೆಲ್ಲಾ ಪ್ರಾಣಿಗಳಿಗಿಂತ ವಿಭಿನ್ನವಾಗಿ, ವರಪ್ರಸಾದವಾಗಿ ಬಂದಿರುವ ಈ ನಮ್ಮ ಜೀವನವನ್ನು ಹೇಗೆ ಸಾರ್ಥಕವಾಗಿ ಬಾಳಬೇಕೆಂಬುದನ್ನು ತೋರಿಸಿ ಕೊಡುವ ಕಜೀವನ ಕಲೆಯೇ ಖವಿದ್ಯೆಖ. ಈ ಜ್ಞಾನ ಶಾಸ್ತ್ರ, ನಮ್ಮನ್ನು ದುಃಖದಿಂದ, ದುಗುಡದಿಂದ, ಅಜ್ಞಾನದಿಂದ, ಬಡತನದಿಂದ, ಕಷ್ಟ ಗ ಕಾರ್ಪಣ್ಯಗಳಿಂದ ಪಾರುಮಾಡುವುದೇ ಕವಿದ್ಯೆಕಿ.

ಸಮಾಧಾನದಿಂದಿದ್ದು-ಸಮತೋಲನವನ್ನು ಕಾಪಾಡಿಕೊಳ್ಳುವುದು-

ಜೀವನದ ಆಗು-ಹೋಗುಗಳು ನಮ್ಮ ಕೈಯಲ್ಲಿದೆ. ಶಿಸ್ತಿನ ಸ್ವಭಾವವನ್ನು ನಾವು ಬೆಳೆಸಿಕೊಳ್ಳಬಹುದೇ ಹೊರತು ಆಕ್ರಮಣಕಾರಿಯಾಗಬೇಕಾಗಿಲ್ಲ. ನಮ್ಮ ಮನಸ್ಸಿನ ಭಾವನೆಗಳನ್ನು ನಮ್ಮ ಬಂಧು ಮಿತ್ರರೊಡನೆ, ಆಪ್ತರೊಡನೆ ಹಂಚಿಕೊಳ್ಳಬಹುದೇ ಹೊರತು ಅತಿಯಾಗಿ ಭಾವುಕರಾಗಬೇಕಾಗಿಲ್ಲ, ಅದರಂತೆಯೇ, ಪ್ರಚೋದನಕಾರೀ ಸನ್ನಿವೇಶಗಳಲ್ಲಿ, ಅತಿಯಾಗಿ ಪ್ರತಿಕ್ರಿಯೆ ವ್ಯಕ್ತಮಾಡುವ ಬದಲು ಸಮಯಕ್ಕೆ ತಕ್ಕಂತೆ ಸ್ಪಂದಿಸಬೇಕಾಗುತ್ತದೆ. ಇದನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾ ಬಂದಲ್ಲಿ, ನಾವುಗಳು ಸಮತೋಲನವನ್ನು ಕಾಪಾಡಿಕೊಳ್ಳವುದು ಸಾಧ್ಯವಾಗುತ್ತದೆ.

ಫಲಾಫಲಗಳಿಗೆ ಗಮನಕೊಡದೇ ಸದಾ ಕರ್ತವ್ಯನಿರತನಾಗಿರುವುದು-

ನಮ್ಮ ಕಾರ್ಯಕ್ಷೇತ್ರಗಳಲ್ಲಿ ಚಾಚೂತಪ್ಪದಂತೆ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದೇ ನಮ್ಮ ಪಾಲಿನ ಶ್ರೇಷ್ಠವಾದ ಧರ್ಮ. ಅನಾವಶ್ಯಕವಾದ ಜವಾಬ್ದಾರಿಗಳನ್ನು ತ್ಯಜಿಸಿ, ನಮ್ಮ ಕಾರ್ಯಕ್ಷೇತ್ರದ ಚೌಕಟ್ಟನ್ನು ಸ್ಪಷ್ಟಗೊಳಿಸಿಕೊಂಡು, ಆಲಸ್ಯಕ್ಕೆ ಆಸ್ಪದ ಕೊಡದೇ, ನಾವು ಮಾಡಲೇ ಬೇಕಾಗಿರುವ, ಹೊಣೆಗಾರಿಕೆಯ ಕೆಲಸಗಳನ್ನು ಒಂದು ಸ್ಪಷ್ಟವಾದ, ನಿಯತವಾದ ಗುರಿಯೊಂದಿಗೆ, ಹಂತ ಹಂತವಾಗಿ ಮಾಡುತ್ತಾ ಹೋದರೆ ನಮಗೆ, ನಾವು ಹಿಡಿದ ಕೆಲಸದಲ್ಲಿ ಯಶಸ್ಸು, ಮನಸ್ಸಿಗೆ ಖಆತ್ಮ ಸಂತೋಷಕಿವೂ, ಸಮಾಜದಲ್ಲಿ ಮನ್ನಣೆಯೂ ದೊರೆಯುತ್ತದೆ.

ಆಯಾಯ ಕಾಲಕ್ಕೆ, ಪರಿಸರಕ್ಕೆ ತಕ್ಕಂತೆ ಕಸದಾಚಾರಕಿ, ಕಸದ್ವೃತ್ತಕಿ ಹಾಗೂ ಕದಿನಚರ್ಯಕಿ ಕಋತುಚರ್ಯಕಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು- ಯಾವುದೇ ವ್ಯಕ್ತಿ, ಲೋಕಾಚಾರಕ್ಕೆ ತಕ್ಕಂತೆ ಧರ್ಮದ ಹಾದಿಯಲ್ಲಿ ನಡೆಯುತ್ತಾ ತನ್ನ ಆತ್ಮ ಸಾಕ್ಷಿಗೆ ತಕ್ಕಂತೆ ಜೀವಿಸುತ್ತಾ, ಪರಿಸರದ ಪ್ರಕೃತಿಗೆ ಮತ್ತು ತನ್ನ ಕದೇಹ ಪ್ರಕೃತಿಗೆಕಿ ತಕ್ಕಂತೆ ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿರುವಂತೆ ತನ್ನ ಜೀವನ ಮಾರ್ಗವನ್ನು ರೂಪಿಸಿಕೊಂಡು, ದಿನಚರ್ಯ, ಋತುಚರ್ಯಗಳನ್ನು ಪಾಲಿಸುತ್ತಾ ಅಂದರೆ ಬೆಳಗಿನ ಜಾವದಲ್ಲೇ ಎದ್ದು ಸ್ನಾನ, ಶೌಚಾದಿಗಳನ್ನು ಮುಗಿಸಿ, ಸಮಾಧಾನದಿಂದ ಸ್ವಲ್ಪ ನೀರನ್ನು ಸೇವಿಸಿ, ಲು ವ್ಯಾಯಾಮ ಮಾಡಿ, ಹಗುರವಾದ ಉಡುಗೆ, ತೊಡುಗೆಗಳನ್ನು ಧರಿಸಿ, ಅನುಕೂಲಕರವಾದ ಪಾದರಕ್ಷೆಗಳನ್ನು ಧರಿಸಿ, ಸಾಮಾಜಿಕ ನ್ಯಾಯ ನೀತಿಗಳಿಗೆ ತಕ್ಕಂತೆ ನಂದಿನ ವ್ಯವಹಾರಗಳನ್ನು ಮಾಡಿಮುಗಿಸುವುದು, ಗುರು, ಹಿರಿಯರಿಗೆ ವಿಧೇಯನಾಗಿರುವುದು, ತಾಯಿ, ತಂದೆಗಳ ಸೇವೆಯನ್ನು ಮನಸ್ಸು ಪೂರ್ವಕವಾಗಿ ಮಾಡುವುದು, ಎಲ್ಲಾ ಜೀವ ಜಂತುಗಳಲ್ಲೂ ದಯೆ, ಕರುಣೆ ಇಟ್ಟುಕೊಳ್ಳವುದು, ತನಗೆ ಹಿತವಾದ, ಉತ್ಸಾಹದಾಯಕವಾದ ಕಲೆಗಳನ್ನು, ವಿದ್ಯೆಗಳನ್ನು ಕಲಿತು ನೈಪುಣ್ಯತೆಯನ್ನು ಸಾಧಿಸಿ, ಆನಂದದಿಂದ ಬಾಳ್ವೆ ಮಾಡುವುದರಿಂದ ಜೀವನ ಸಾರ್ಥಕವಾಗುವುದು.

ಆಚಾರ ಶುದ್ಧಿ :

ಎಲ್ಲ ಸಂದರ್ಭದಲ್ಲಿಯೂ ಧರ್ಮಮಾರ್ಗದಲ್ಲಿಯೇ ನಡೆಯಬೇಕು. ತನ್ನ ಏಳಿಗೆಗೆ ಪೂರಕನಾಗುವಂತಹವನ ಸ್ನೇಹವನ್ನು ಮಾತ್ರಮಾಡಬೇಕು. ಇತರರೊಂದಿಗೆ ದೂರದಿಂದಲೇ ವ್ಯವಹರಿಸಬೇಕು. ಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಎಲ್ಲ ವಿಧಾನಗಳನ್ನೂ ನಿತ್ಯವೂ ಅನುಸರಿಸಬೇಕು.

ವಿಚಾರ ಶುದ್ಧಿ :

ದನ ಕರುಗಳಲ್ಲಿ ಪೂಜ್ಯ ಭಾವನೆಯನ್ನೂ, ಪ್ರಾಜ್ಞರಲ್ಲಿ ಗೌರವದ ಭಾವನೆಯನ್ನೂ, ಗುರುಹಿರಿಯರಲ್ಲಿ ವಿನಯ ಭಾವನೆಯನ್ನೂ, ವೈದ್ಯರಲ್ಲಿ, ಅತಿಗಳಲ್ಲಿ ಆದರದ ಭಾವನೆಯನ್ನೂ ಹೊಂದಿರಬೇಕು. ತನಗೆ ದ್ರೋಹ ಬಗೆದವನ ವಿಷಯದಲ್ಲಿಯೂ ಉಪಕಾರಬುದ್ಧಿಯನ್ನೇ ಹೊಂದಿರಬೇಕು. ಸುಖಸಂಪತ್ತಿರಲಿ, ವಿಪತ್ತೇ ಬಂದೊದಗಲಿ, ಮನಸ್ಸಿನ ಸ್ಥಿಮಿತವನ್ನು ಕಾಪಾಡಿಕೊಳ್ಳಬೇಕು.

ವಾಕ್ಶುದ್ಧಿ :

 ಮಂದಹಾಸಯುಕ್ತವಾದ ಮೃದು ಮಧುರ ನುಡಿಗಳಿರಬೇಕು. ಅಸಂಬದ್ಧ ಪ್ರಲಾಪವನ್ನಾಗಲಿ, ಸುಳ್ಳಾಡುವುದನ್ನಾಗಲಿ, ಬಿರುಸಾದ ನುಡಿಗಳನ್ನಾಗಲಿ ಸಂಪೂರ್ಣ ತ್ಯಜಿಸಿಬಿಡಬೇಕು.

 

 

​