​​​​​ಕರ್ನಾಟಕ ಸರ್ಕಾರದ ನಡೆವಳಿಗಳು​

ವಿಷಯ:  ಔಷಧ  ನಿಯಂತ್ರಣ ಇ ಲಾಖೆಯ  ಅಮೂಲಾಗ್ರ  ಪುನರ್  ರಚನೆಯನ್ನು  ಕುರಿತು  ಆದೇಶ
 ಓದಲಾಗಿದೆ:

1.  ಸರ್ಕಾರಿ  ಆದೇಶ  ಸಂಖ್ಯೆ  ಆಕುಕ 142  ಐಎಂಎಂ 2011  ದಿನಾಂಕ 28.11.2013
2.  ಔಷಧ  ನಿಯಂತ್ರಕರ  ಪತ್ರ  ಸಂಖ್ಯೆ  ಔನಿಇ/323/ ಸಿಬ್ಬಂದಿ/2011-12,  ದಿನಾಂಕ 26.06.2013

ಪ್ರಸ್ತಾವನೆ
ಸರ್ಕಾರವು ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿನ ಆದೇಶದಲ್ಲಿ ಔಷಧ ನಿಯಂತ್ರಣ ಇಲಾಖೆಯಲ್ಲಿ ಅಮಲುಜಾರಿ ವಿಭಾಗವನ್ನು ಬಲಪಡಿಸಲು 05 ಉಪ ಔಷಧ ನಿಯಂತ್ರಕರ ಹುದ್ದೆಗಳನ್ನು 21 ಸಹಾಯಕ ಔಷಧ ನಿಯಂತ್ರಕರ ಹುದ್ದೆಗಳನ್ನು 50 ಔಷಧ ಪರಿವೀಕ್ಷಕರ ಹುದ್ದೆಗಳನ್ನು ಮತ್ತು 1 ಸಿಸ್ಟಮ್ ಅನಲಿಸ್ಟ್ ಹುದ್ದೆಯನ್ನು ಸೃಜಿಸಲು ಮಂಜೂರಾತಿ ನೀಡಿರುತ್ತದೆ.

ಔಷಧ ನಿಯಂತ್ರಕರು ಮೇಲೆ ಔದಲಾದ ಕ್ರಮ ಸಂಖ್ಯೆ (2)ರಲ್ಲಿನ ಪತ್ರದಲ್ಲಿ ಔಷಧ ನಿಯಂತ್ರಣ ಇಲಾಖೆಯಲ್ಲಿ ವಿವಿಧ ಅಧಿಕಾರಿ ವೃಂದದ 77 ಹುದ್ದೆಗಳನ್ನು ಸೃಜಿಸಿರುವುದರಿಂದ, ಇಲಾಖೆಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಸೃಜನೆಯಾಗಿರುವ ಹುದ್ದೆಗಳಿಗಾಗಿ ಯಾವುದೇ ಪೂರಕ ಲಿಪಿಖ ಸಿಬ್ಬಂದಿ ಸೃಜನೆಯಾಗದಿರುವುದನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಜಾರಿಯಲ್ಲಿರುವ ಔಷಧ ನಿಯಂತ್ರಣ ಇಲಾಖೆಯ ಅಮಲುಜಾರಿ ವಿಭಾಗವನ್ನು ಅಮೂಲಾಗ್ರವಾಗಿ ಪುನರ್ ರಚಿಸಲು ಪ್ರಸ್ತಾಪಿಸಿರುತ್ತಾರೆ ಹಾಗೂ ಉತ್ತಮ ಆಡಳಿತದ ಹಿತದೃಷ್ಟಿಯಿಂದ ಉಪ ಔಷಧ ನಿಯಂತ್ರಕರ ಹಾಗೂ ಸಹಾಯಕ ಔಷಧ ನಿಯಂತ್ರಕರುಗಳ ಕಾರ್ಯವ್ಯಾಪ್ತಿಯನ್ನು ಮರುವಿಂಗಡಣೆಗೊಳಿಸಲು ಕೆಲವು ಕಛೇರಿಗಳ ಮರು ಪದನಾಮೀಕರಿಸುವುದಲ್ಲದೆ ಹಲವು ಲಿಫಿಕ ವೃಂದದ ಖಾಲಿ ಹುದ್ದೆಗಳನ್ನು ಮತ್ತು ಖಾಲಿ ಹುದ್ದೆಗಳನ್ನು ಮತ್ತು ಸಿಬ್ಬಂದಿ ಸಮೇತ ಕೆಲವು ಹುದ್ದೆಗಳನ್ನು ಸ್ಥಳಾಂತರಿಸುವಂತೆ ಕೋರಿರುತ್ತಾರೆ.  ಔಷಧ ನಿಯಂತ್ರಣ ಇಲಾಖೆಯ ಅಮಲು ಜಾರಿ ವಿಭಾಗ ಮತ್ತು ಪ್ರಯೋಗಾಲಯಗಳ ಎಲ್ಲಾ ಪ್ರಕ್ರಿಯೆಯನ್ನು ಗಣಕೀಕರಣ ಗೊಳಿಸುವುದರಿಂದ, ಸಿಸ್ಟಂ ಅನಾಲಿಸ್ಟ್ ಹುದ್ದೆಯನ್ನು ಕೇಂದ್ರ ಕಛೇರಿಗಳ ಹಂಚಿಕೆ ಮಾಡುವಂತೆ ಔಷಧ ಪರಿವೀಕ್ಷಕರುಗಳ ತಮಗೆ ನಿಗಧಿಪಡಿಸಿದ ಕಾರ್ಯಕ್ಷೇತ್ರದಲ್ಲಿ ಸಂಬಂಧಪಟ್ಟ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು/ಆಯಾ ಪ್ರಾದೇಶಿಕ ಉಪ ನಿಯಂತ್ರಕರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಸದರಿ ಹುದ್ದೆಗಳನ್ನು ಕಛೇರಿವಾರು ನಿಗಧಿಪಡಿಸುವಂತೆ ಕೋರಿರುತ್ತಾರೆ.

ಸರ್ಕಾರವು ಔಷಧ ನಿಯಂತ್ರಕರ ಪ್ರಸ್ತಾವನೆಯನ್ನು ಪರಿಶೀಲಿಸಿ ಪರಿಗಣಿಸಿ ಇಲಾಖೆಯನ್ನು ಪುನರ್ ರಚಿಸಲು ಸರ್ಕಾರವು ನಿರ್ಧರಿಸಿದೆ.  ಅದರಂತೆ ಈ ಆದೇಶ.

ಸರ್ಕಾರಿ ಆದೇಶ ಸಂಖ್ಯೆ ಆಕುಕ 142 ಐಎಂಎಂ 2011 ಬೆಂಗಳೂರು ದಿನಾಂಕ 13.12.2013

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಔಷಧ ನಿಯಂತ್ರಣ ಇಲಾಖೆಯ ಅಮಲುಜಾರಿ ವಿಭಾಗವನ್ನು ಪುನರ್ ರಚಿಸಿ ಉಪ ಔಷಧ ನಿಯಂತ್ರಕರ ಹಾಗೂ ಸಹಾಯಕ ಔಷಧ ನಿಯಂತ್ರಕರ ಕಾರ್ಯವ್ಯಾಪ್ತಿಯನ್ನು ಮರುವಿಂಗಡಣೆಗೊಳಿಸಿ ಕಛೇರಿಗಳ ಮರುಪದನಾಮೀಕರಿಸಿ ಲಿಪಿಕ ವೃಂದದ ಖಾಲಿ ಹುದ್ದೆಗಳನ್ನು ಹಾಗೂ ಸಿಬ್ಬಂದಿ ಸಮೇತ ಹಲವು ಹುದ್ದೆಗಳನ್ನು ಸ್ಥಳಾಂತರಿಸಿ ಈ ಆದೇಶದ ಅನುಬಂಧ-! ರಿಂದ VI ಸೂಚಿಸಿರುವಂತೆ ಔಷಧ ನಿಯಂತ್ರಣ ಇಲಾಖೆಯನ್ನು ಔಷಧ ನಿಯಂತ್ರಕರು ಈ ಆದೇಶ ರಚಿಸಿದಂತೆ ಇಲಾಖೆಯ ಪುನರ್ ರಚನೆಗೊಳಿಸಲು ಕ್ರಮವಹಿಸುವುದು.
ಅನುಬಂಧ-I : ಮರುಪದನಾಮೀಕರಿಸಿದ ನಂತರದ ಕಛೇರಿಗಳು
ಅನುಬಂಧ-II (ಸೃಜಿಸಲಾದ 77 ಹುದ್ದೆಗಳನ್ನು ಹಂಚಿಕೆ ಮಾಡಲಾದ ಕಛೇರಿಗಳು)
ಅನುಬಂಧ-III (ಸ್ಥಳಾಂತರಿಸಲಾದ 14 ಹುದ್ದೆಗಳು)
ಅನುಬಂಧ-IV (ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿಗಳ ಕಾರ್ಯವ್ಯಾಪ್ತಿ)
ಅನುಬಂಧ-V (ಮರುಪದನಾಮೀಕರಿಸಿದ ಹುದ್ದೆಗಳ ವಿವರಗಳು