​​

ಕರ್ನಾಟಕ ಸರ್ಕಾ​ರದ ನಡೆವಳಿಗಳು

ವಿಷಯ: ಜಿಲ್ಲಾ/ಉಪ ಜಿಲ್ಲಾ ಮಟ್ಟದಲ್ಲಿ ಆಯುಷ್ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಸೃಜಿಸುವ ಬಗ್ಗೆ.
ಓದಲಾಗಿದೆ:
(1) ಸರ್ಕಾರದ ಪತ್ರ ಸಂಖ್ಯೆ : ಆಕುಕ 460 ಪಿಐಎಂ 2009 ದಿನಾಂಕ 27.01.2010.
(2) ಸರ್ಕಾರದ ಪತ್ರ ಸಂಖ್ಯೆ : ಆಕುಕ 460 ಪಿಐಎಂ 2009 30.01.2010.
(3) ನಿರ್ದೇಶಕರು, ಆಯುಷ್ ಇಲಾಖೆ ಇವರ ಪತ್ರ ಸಂಖ್ಯೆ: ಆಯುಷ್/01/ಜಿಎಂ/2011-12 ದಿನಾಂಕ 05-05-2011 ಮತ್ತು 26-08-2011.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಸರ್ಕಾರದ ಪತ್ರದಲ್ಲಿ, ಕೇಂದ್ರ ಸರ್ಕಾರಕ್ಕೆ ಒಟ್ಟು ರೂ. 5945.28 ಲಕ್ಷಗಳ ಆಕ ಅನುದಾನವನ್ನು ರಾಜ್ಯದಲ್ಲಿನ 65 ಜಿಲ್ಲಾ/ಉಪ ಜಿಲ್ಲ ಮಟ್ಟದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಮಂಜೂರು ಮಾಡುವ ಬಗ್ಗೆ ಶಿಫಾರಸ್ಸು ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಸರ್ಕಾರಿ ಪತ್ರದಲ್ಲಿ, ಈ ಪ್ರಸ್ತಾವನೆಗಾಗಿ ಪ್ರತಿ ವಾರ್ಷಿಕ ಅಗತ್ಯವಿರುವ ಅನುದಾನವನ್ನು ವೈದ್ಯಕೀಯ ಶೀಕ್ಷಣ ಇಲಾಖಾ ಯೋಜನಾ ವೆಚ್ಚದ ಮಿತಿಯೊಳಗೆ ಆಯವ್ಯಯದಲ್ಲಿ ಅನುದಾನ ಒದಗಿಸಿಕೊಳ್ಳತಕ್ಕದ್ದು ಮತ್ತು ಈ ದಿಸೆಯಲ್ಲಿ ಯೋಜನಾ ಇಲಾಖೆಯನ್ನು ಸಂಪರ್ಕಿಸಿ ಕ್ರಮ ಜರುಗಿಸುವಂತೆ ತಿಳಿಸಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರಲ್ಲಿನ ಪತ್ರಗಳಲಿ, ನಿರ್ದೇಶಕರು, ಆಯುಷ್ ನಿರ್ದೇಶನಾಲಯ ಇವರು ಜಿಲ್ಲಾ/ಉಪ ಜಿಲ್ಲಾ ಮಟ್ಟದ ಆಯುಷ್ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ, ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ ಹಾಗೂ ಸದರಿ ಕೇಂದ್ರ ಸರ್ಕಾರವು ಶೇಕಡ 85ರಷ್ಟು ಆಕ ಅನುದಾನ ಒದಗಿಸುತ್ತದೆ ಹಾಗೂ ಉಳಿದ ಶೇಕಡ 15ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸಲಿರುವುದರಿಂದ, ಸದರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಸಿಬ್ಬಂದಿ ಲಭ್ಯತೆ ಕುರಿತಂತೆ ಪರಿಷ್ಕರಿಸಲಾಗಿ, ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿಗೆ ಸಿಬ್ಬಂದಿ ಅವಶ್ಯಕತೆ ಇರುವುದರಿಂದ, ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ನೇಮಕಾತಿ ಮಾಡಿಕೊಳ್ಳುವುದಕ್ಕೆ ಸರ್ಕಾರದ ಅನುಮತಿ ನೀಡುವಂತೆ ಕೋರಿಕೊಳ್ಳಲಾಗಿದೆ.  2012ರ ಮಾರ್ಚ್ 31ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ ಮತ್ತು ಕೇಂದ್ರ ಸರ್ಕಾರವು ಪ್ರಸಕ್ತ 11ನೇ ಯೋಜನೆಯ ಮಾರ್ಗಸೂಚಿಯ ಪ್ರಕಾರ ಶೇಕಡ 85ರಷ್ಟು ಅನುದಾನ ಒದಗಿಸುವುದರಿಂದ, ಕನಿಷ್ಟ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಇಲ್ಲದೆ ಇರುವುದರಿಂದ, ಕನಿಷ್ಟ ಪ್ರಮಾಣದ ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಜಿಸುವುದು ಅವಶ್ಯವಾಗಿರುವುದರಿಂದ, ಸೂಕ್ತ ಆದೇಶ ಹೊರಡಿಸುವಂತೆ ಶಿಫಾರಸ್ಸು ಮಾಡಿದ್ದಾರೆ.
ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 301 ಪಿಐಎಂ 2011, ಬೆಂಗಳೂರು, ದಿನಾಂಕ 28-10-2011

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಅನುಬಂಧ-1ರಲ್ಲಿ ಹೊರಡಿಸಿರುವ ಆಯುಷ್ ಇಲಾಖೆಯ ಒಟ್ಟು 65 ಜಿಲ್ಲಾ/ಉಪ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿನ ಒಟ್ಟು 520 ಹುದ್ದೆಗಳನ್ನು ಅನುಬಂಧ-2 ರಲ್ಲಿ ತೋರಿಸಿರುವಂತೆ 2012ರ ಮಾರ್ಚ್-31ರವರೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಮತ್ತು ಸರ್ಕಾರ ನಮೂದಿಸಿದಂತೆ ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ತಾತ್ಕಾಲಿಕವಾಗಿ (Purely on temporary basis)  ಸೃಜಿಸುವುದಕ್ಕೆ ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.
(1) ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಮತ್ತು ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳಂತೆ ಮೀಸಲಾತಿ ನಿಯಮಗಳನ್ನು ಅನುಸರಿಸಿ ತಾತ್ಕಾಲಿಕವಾಗಿ (Contractural/purely on temporary basis) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು ಹಾಗೂ ಯಾವುದೇ ಕಾರಣಕ್ಕೂ ಅವರುಗಳು ಸೇವೆಯನ್ನು ಸಕ್ರಮಗೊಳಿಸುವಂತೆ ನ್ಯಾಯಾಲಯಗಳಲ್ಲಾಗಲೀ/ಸರ್ಕಾರಕ್ಕಾಗಲೀ ಅಥವಾ ಇನ್ಯಾವುದೇ ಪ್ರಾಧಿಕಾರಗಳಲ್ಲಾಗಲೀ ಅರ್ಜಿ/ಕೋರಿಕೆ ಸಲ್ಲಿಸತಕ್ಕದ್ದಲ್ಲ ಮತ್ತು ಈ ದಿಸೆಯಲ್ಲಿ ಬಾಂಡ್ ಮೂಲಕ ಒಪ್ಪಂದ ಮಾಡಿ ಕೊಳ್ಳತಕ್ಕದ್ದು ಹಾಗೂ ಆಯುಷ್ ನಿರ್ದೇಶನಾಲಯವು ಇನ್ಯಾವುದೇ ಷರತ್ತುಗಳನ್ನು ವಿಧಿಸಲು ಸಾಧ್ಯವಿದ್ದಲ್ಲಿ, ಅಂಗಹ ನಿರ್ದೇಶನಾಲಯವು ಇನ್ಯಾವುದೇ ಷರತ್ತು ವಿಧಿಸಲು ಸಾಧ್ಯವಿದ್ದಲ್ಲಿ, ಅಂತಹ ಷರತ್ತುಗಳನ್ನು ವಿಧಿಸಿ ನಿಯಮಾನುಸಾರ ಪರಿಶೀಲಿಸಿ ನೇಮಕಾತಿ ಮಾಡಿಕೊಳ್ಳತಕ್ಕದ್ದು.
(2) ಒಟ್ಟು ಅನುಮೋದಿತ ವೆಚ್ಚದ ಶೇಕಡ 15 ರಷ್ಟನ್ನು ರಾಜ್ಯ ಸರ್ಕಾರ ಭರಿಸಲು ಒಪ್ಪಿದೆ.
(3) ಇದಕ್ಕಾಗಿ ಪ್ರತಿ ವಾರ್ಷಿಕ ಅಗತ್ಯವಿರುವ ಅನುದಾನವನ್ನು ವೈದ್ಯಕೀಯ ಶಿಕ್ಷಣ ಇಲಾಖಾ ವೆಚ್ಚದ ಮಿತಿಯೊಳಗೆ ಆಯವ್ಯಯದಲ್ಲಿ ಅನುದಾನ ಒದಗಿಸಿಕೊಳ್ಳತಕ್ಕದ್ದು.
(4) ಪ್ರಸ್ತುತ ಯೋಜನೆಯಲ್ಲಿ ಗುರುತಿಸಲಾದ ಹುದ್ದೆಗಳನ್ನು ಭರ್ತಿ ಮಾಡಲು ಅಥವಾ ಅವರುಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಬದಲಿಸಿ ಹೆಚ್ಚುವರಿ ವೇತನ ನಿಗಧಿ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರು ಪರಿಶೀಲಿಸಲು ಅವಶ್ಯವಿದ್ದಲ್ಲಿ ಸೂಕ್ತ ಪ್ರತ್ಯೇಕ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸತಕ್ಕದ್ದು.
(5) 2011-12ನೇ ಸಾಲಿನ ಆಯವ್ಯಯದಲ್ಲಿ ಇದಕ್ಕಾಗಿ ಅವಶ್ಯವಿರುವ ಅನುದಾನವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಯೋಜನಾ ವೆಚ್ಚದ ಮಿತಿಯೊಳಗೆ ಒದಗಿಸಿಕೊಳ್ಳತಕ್ಕದ್ದು.
(6) ಇದಕ್ಕೆ ತಗಲುವ ವೆಚ್ಚವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಲೆಕ್ಕ ಶೀರ್ಷಿಕೆ 2210-05-200-011 ಇದರಡಿಯಲ್ಲಿ ಭರಿಸತಕ್ಕದ್ದು.
ಕರ್ನಾಟಕ ರಾಜ್ಯಪಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ

(ಆರ್.ಎಸ್. ಇಟಗಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯ ಪದ್ದತಿ)
ದೂರವಾಣಿ ಸಂಖ್ಯೆ : 22034292

Upgradation of Ayush District/Sub-District Hospitals under CSS

 

Sl NoDistrict Hospital/Sub District Hospital
Bangalore Rural District
1Doddaballapur
Belgaum District
2Athani
3Bailahongala
4Ramadurga
5Soudatti
​Bijapur District
6Bijapur Combined Unit (Ay/Un/Hom)
Bagalkot District
7Bagalkot
8Beelagi
9Jamakandhi
Bidar District
10Bidar Combined Unit (Ay/U)
11Basavakalyana
Bellary District
12Bellary
13Hospet
14Hadagali
15Sonduru
16Siraguppa
Chickmagalur District
17Birur (Yardakere shifting)
18Kadur
19Mudigere
20Tarikere
Chamarajanagar District
21Chamarajnagar
22Gundlupet
Chikkaballapur District
​23
Chitradurga District
24Hiriyur
25Challakere
Dharwad District
26Dharwad
Davanagere District
27Davanagere (Nature cure dispensary) Earlier it was not included
28Harappanahalli
Gadag District
29Gadag Betageri
30Rona
Gulbarga District
31Afzalpura
32Gulbarga combined Unit (Ay/Hom)
33Chittapura
34Sedam
35Shahpur
36Thimmapura Rangampete (Shahpur)
37Yadgir
Hassan District
38Hassan Combined Unit (Ay/U/Hom)
39Holenarasipura
40Channarayapattana
Haveri
41Shiggaon
42Ranibennur
Kolar District
43Kolar
44Srinivasapura
Kodagu District
45Madikeri
46Virajpet
47Gangavathi
Koppal District
48Koppal
49Gangavathi
Mysore District
50Nanjangud
51Hunsuru
Mandya District
52Mandya combined unit
53Malavalli
​ Dakshina Kannada District
54Mangaluru (Ay/Hom)
​Ramanagaram Disrict
55Ramanagar Unani Hospital
56Magadi