​​

​​ಕರ್ನಾಟಕ ಸರ್ಕಾರದ ನಡವಳಿಗಳು​​​​​

ವಿಷಯ: ಭಾರತೀಯ ವೈದ್ಯ ಪದ್ದತಿ ಇಲಾಖೆಯಲ್ಲಿ ಆಯುರ್ವೇದ, ಹೋಮಿಯೋಪತಿ, ಯುನಾನಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸುವ ಬಗ್ಗೆ ಅನುಮತಿ ನೀಡುವ ಬಗ್ಗೆ.​

ಓದಲಾಗಿದೆ: ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ ಭಾವೈಪ : 30: ಬಿಯುಡಿ (1) : 98-99 ದಿನಾಂಕ 06.06.1998 ಮತ್ತು 11.12.1998

ಪ್ರಸ್ತಾವನೆ:

ಮೇಲೆ ಓದಲಾದ ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿರವರ ಪತ್ರಗಳಲ್ಲಿ ಸರ್ಕಾರಿ ಆಯುರ್ವೇದ ಹೋಮಿಯೋಪತಿ ಮತ್ತು ಯುನಾನಿ ಚಿಕಿತ್ಸಾಲಯಗಳನ್ನು ತೆರೆಯಲು ಪ್ರಸ್ತಾವನೆಯನ್ನು ಕಳುಹಿಸುತ್ತಾ ಸರ್ಕಾರದ ಅನುಮತಿಯನ್ನು ಕೋರಿರುತ್ತಾರೆ.

ಸರ್ಕಾರದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದೆ.  ಆದ್ದರಿಂದಲೇ ಆದೇಶ.

ಸರ್ಕಾರದ ಆದೇಶ ಸಂಖ್ಯೆ ಆಕುಕ 272 ಪಿಐಎಂ 98 ಬೆಂಗಳೂರು ದಿನಾಂಕ 31.03.2000.

1999-2000ನೇ ಸಾಲಿನಲ್ಲಿ ರಾಜ್ಯದ ಈ ಕೆಳಕಂಡ ಸ್ಥಳಗಳಲ್ಲಿ ತಲಾ ಒಂದು ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ ನೀಡಿದೆ.

​ಕ್ರಮ ಸಂಖ್ಯೆ​ತಾಲ್ಲೂಕು ಹಾಗೂ ಜಿಲ್ಲೆಯ ಹೆಸರು​ಚಿಕಿತ್ಸಾಲಯ ಪ್ರಾರಂಭಿಸಬೇಕಾದ ಸ್ಥಳ​ಚಿಕಿತ್ಸಾಪದ್ದತಿ
1​ಕನಕಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತ್ರ ಜಿಲ್ಲೆ​ಬಿಜ್ಜವಳ್ಳಿ​ಆಯುರ್ವೇದ
​2​ಮಂಡ್ಯ ತಾಲ್ಲೂಕು: ಜಿಲ್ಲೆ​ಕನ್ನಲಿ​ಆಯುರ್ವೇದ
​3​ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ​ಭಿಳವಾಲ​ಆಯುರ್ವೇದ
​4​ಮುದ್ದೆಬಿಹಾಳ ತಾಲ್ಲೂಕು, ಬಿಜ್ಪಾಪುರ ಜಿಲ್ಲೆ​ಹಿರೇಮುರಾಳ​ಆಯುರ್ವೇದ
​5​ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ​ಜಮ್ಮನಕಟ್ಟೆ​ಆಯುರ್ವೇದ
​6​ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ​ಯಡವಳ್ಳಿ​ಆಯುರ್ವೇದ
​7​ಹುಬ್ಬಳ್ಳಿ ತಾಲ್ಲೂಕು, ಧಾರವಾಡ ಜಿಲ್ಲೆ​ಹೆಬಸೂರು​ಆಯುರ್ವೇದ
​8​ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ​ಮುಟ್ಟೂರು​ಆಯುರ್ವೇದ
​9​ಚೆನ್ನಗಿರಿ ತಾಲ್ಲೂಕು, ದಾವಣಗೆರೆ ತಾಲ್ಲೂಕು​ಮೆಡಿಕೇರಿ​ಆಯುರ್ವೇದ
​10​ರೋಣ ತಾಲ್ಲೂಕು, ಗದಗ ಜಿಲ್ಲೆ​ಜಕ್ಲಲಿ​ಆಯುರ್ವೇದ
​11​ರಾಣಿಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ​ಹೆಡಿಯಾಳ​ಆಯುರ್ವೇದ
​12​ಬಾಗೇಪಲ್ಲಿ ತಾಲ್ಲೂಕ, ಕೋಲಾರ ಜಿಲ್ಲೆ​ನಿದುಮಾಮಿಡಿ​ಆಯುರ್ವೇದ
​13​ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ​ಕೇಸ್ತಿ​ಆಯುರ್ವೇದ
​14​ಬೀದರ್ ತಾಲ್ಲೂಕು; ಜಿಲ್ಲೆ​ಸಿರ್ಸಿ (ಎ)​ಆಯುರ್ವೇದ
​15​ಯಾದಗೀರಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ​ಬಾಡಿಹಾಳ​ಹೋಮಿಯೋಪತಿ
​16​ಶಹಾಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ​ಶಿವಪುರ​ಹೋಮಿಯೋಪತಿ
​17​ಶಹಾಪುರ ತಾಲ್ಲೂಕು, ಗುಲ್ಲಬರ್ಗ ಜಿಲ್ಲೆ​ಊಳ್ಳೇಸಗೂರು​ಹೋಮಿಯೋಪತಿ
​18​ಗುಲ್ಬರ್ಗಾ ತಾಲ್ಲೂಕು; ಗುಲ್ಬರ್ಗಾ ಜಿಲ್ಲೆ​ಕವನೂರ​ಹೋಮಿಯೋಪತಿ
​19​ಬಳ್ಳಾರಿ ಜಿಲ್ಲೆ, ಬಳ್ಳಾರಿ ಜಿಲ್ಲೆ​ಹರಗಿನ ದೋಣಿ​ಹೋಮಿಯೋಪತಿ
​20​ಗದಗ ತಾಲ್ಲೂಕು; ಗದಗ ಜಿಲ್ಲೆ​ಆಸುಂಡಿ​ಹೋಮಿಯೋಪತಿ
​21​ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲ್ಎ​ಚಂದಜಾರು​ಹೋಮಿಯೋಪತಿ
​22​ಬೈಲಹೊಂಗಲ ತಾಲ್ಲೂಕು ಬೆಳಗಾಂವಿ ಜಿಲ್ಲೆ​ನಯಾನಗರ​ಹೋಮಿಯೋಪತಿ
​23​ಮುದ್ದೆಬಿಹಾಳ ತಾಲ್ಲೂಕು, ಬಿಜಾಪುರ ಜಿಲ್ಲೆ​ಹುಲ್ಲೂರು​ಹೋಮಿಯೋಪತಿ
​24​ಯಾದಗಿರಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆಮೈಲಾಪುರ​ಹೋಮಿಯೋಪತಿ
​25​ಅಥಣಿ ತಾಲ್ಲೂಕು, ಬೆಳಗಾಂವಿ ಜಿಲ್ಲೆ​ಕೋಹಳ್ಳಿ​ಯುನಾನಿ
​26​ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ​ಇಳಕಲ್ ​ಯುನಾನಿ
​27​ಯಾದಗಿರಿ ತಾಲ್ಲೂಕು, ಗುಲ್ಬರ್ಗ ಜಿಲ್ಲೆ​ನೈದಾಪುರ​ಯುನಾನಿ

ಅಲ್ಲದೆ ಪ್ರತಿ ಚಿಕಿತ್ಸಾಲಯಕ್ಕೆ ಬೇಕಾಗುವ ಈ ಕೆಳಕಂಡ ಹುದ್ದೆಗಳನ್ನು ಸೃಜಿಸಲು ಸಹ ಸರ್ಕಾರವು ಮಂಜೂರಾತಿ ನೀಡಿದೆ.

​ಸಂಖ್ಯೆ​​ಹುದ್ದೆಗಳ ವಿವರ​ಹುದ್ದೆಗಳ ಸಂಖ್ಯೆ​ವೇತನ ಶ್ರೇಣಿ
​1​ವೈದ್ಯರು ದರ್ಜೆ-2 (ಆಯುರ್ವೇದ)​14
​2​ವೈದ್ಯರು ದರ್ಜೆ-2 (ಹೋಮಿಯೋಪತಿ)​10
​3​ವೈದ್ಯರು ದರ್ಜೆ-2 (ಯುನಾನಿ)​03
​4​ಗ್ರೂಪ್-ಡಿ (ಪ್ರತಿ ಚಿಕಿತ್ಸಾಲಯಕ್ಕೆ ಒಂದರಂತೆ)​​27

ಈ ಕೆಳಕಂಡ ಷರತ್ತುಗಳನ್ನು ನಿರ್ದೇಶಕರು, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇವರು ಪಾಲಿಸತಕ್ಕದ್ದು.
(1) ಹುದ್ದೆಗಳನ್ನು ಪ್ರಾರಂಭಿಕವಾಗಿ 2 ವರ್ಷಗಳ ಅವಧಿಗೆ ಸೃಜಿಸಲಾಗಿದೆ.
(2) ಹುದ್ದೆಗಳಿಗೆ ತಗಲುವ ವೆಚ್ಚವು ಯಾವುದೇ ಕಾರಣಕ್ಕೂ 1999-2000ನೇ ಸಾಲಿನಲ್ಲಿ ಒದಗಿಸಿರುವ ಮೊತ್ತಕ್ಕೆ ಮಾತ್ರ ಸೀಮಿತವಾಗಿರತಕ್ಕದ್ದು.
(3) ಇಲಾಖಾ ನಾರ್ಮ್ಸ್ ಮತ್ತು ಸಿ. ಅಂಡ್. ಆರ್. ನಿಯಮಗಳನ್ನು ಪಾಲಿಸತಕ್ಕದ್ದು.

ಈ ವೆಚ್ಚವನ್ನು 2210-04-101-1-72 (ಆಯುರ್ವೇದ ಚಿಕಿತ್ಸಾಲಯ), 2210-04-102-0-71 (ಹೋಮಿಯೋಪತಿ ಚಿಕಿತ್ಸಾಲಯ) ಹಾಗೂ 2210-04-103-0-02 (ಯುನಾನಿ ಚಿಕಿತ್ಸಾಲ;ಯ (ಯೋಜನೆ) ಆಯಾ ಜಿಲ್ಲಾ ಪಂಚಾಯತಿ ಅಡಿಯಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ: 331: ವೆಚ್ಚ-5) 99, ದಿನಾಂಕ 11.03.1999ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ.

+ + +​