ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧೀನದಲ್ಲಿ ಈ ಕೆಳಕಂಡ ಇಲಾಖೆಗಳು ಕಾರ್ಯನಿರ್ವಹಿಸುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ರೋಗ್ಯದ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಕಾರ್ಯಕ್ರಮಗಳನ್ನು ವಿವಿಧ ಹಂತದ ಆರೋಗ್ಯ ಸಂಸ್ಥೆಗಳ ಮುಲಕ ಅನುಷ್ಟಾನಗೊಳಿಸುತ್ತಿದೆ.  ಕೇಂದ್ರ ಸರ್ಕಾರವು ನಿಗಧಿಪಡಿಸಿರುವ ವಿಷನ್ 2020 ಗುರಿಯನ್ನು ಸಾಧಿಸಲು ಇಲಾಖೆಯು ಶ್ರಮಿಸುತ್ತಿದೆ.

 

ಆಯುಷ್ ಇಲಾಖೆಯು:

      ಆಯುಷ್ ಇಲಾಖೆಯು ಆಯುರ್ವೇಧ, ಹೋಮಿಯೋಪತಿ, ಯೋಗ, ಯುನಾನಿ ಸಿದ್ದ ಮತ್ತು ನೇಚುರೋಪತಿ ಪದ್ದತಿಗಳಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ. ಹಾಗೂ ವ್ಯದ್ಯಕೀಯ ಶಿಕ್ಷಣವನ್ನು ನೀಡುತ್ತಿದೆ.  ಆಯುಷ್ ಔಷಧಗಳ ತಯಾರಿಕೆ, ತರಬೇತಿ, ಸಂಶೋಧನೆ ಮತ್ತು ವೈದ್ಯಕೀಯ ವೃತ್ತಿಯನ್ನು ಸಹ ನಿಯಂತ್ರಿಸುತ್ತಿದೆ.   

 

ಔಷಧ ನಿಯಂತ್ರಣ ಇಲಾಖೆಯು:

      ಕರ್ನಾಟಕ ರಾಜ್ಯದಲ್ಲಿ ಔಷಧ ನಿಯಂತ್ರಣ ಿಲಾಖೆಯು ಆರೋಗ್ಯ ​ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಒಂದು ಸ್ವತಂತ್ರ ಇಲಾಖೆಯಾಗಿ 1956ರಿಂದ ಕೆಲಸ ನಿರ್ವಹಿಸುತ್ತಿದೆ.  ಔಷಧ ನಿಯಂತ್ರಕರು ಇದರ ಮುಖ್ಯಸ್ಥರಾಗಿರುತ್ತಾರೆ.  ಔಷಧ ಮತ್ತು ಕಾಂತಿ ವರ್ಧಕ ಅಧಿನಿಯಮ 1940 ಅದರ ಅಡಿಯಲ್ಲಿ ನಿಯಮಗಳ ನಿಬಂಧನೆಗಳನ್ನು ಜಾರಿಗೊಳಿಸಿ ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಭರಾಜಾಗುತ್ತಿರುವ ಔಷಧಗಳ ಮತ್ತು ಕಾಂತಿವರ್ಧಕಗಳ ಮೇಲೆ ನಿಯಮಾನುಸಾರ ನಿಯಂತ್ರಣ ಕ್ರಮಗಳನ್ನು ಕೈ ಗೊಳ್ಳುವುದು ಹಾಗೂ ಎಚ್ಚರಿಕೆವಹಿಸುವುದರ ಮೂಲಕ ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಿಗಳು ನಿಯಂತ್ರಿತ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ಔಷಧ ನಿಯಂತ್ರ ಇಲಾಖೆಯ ಮುಖ್ಯ ಉದ್ದೇಶ ವಾಗಿರುತ್ತದೆ.