ಕರ್ನಾಟಕ ರಾಜ್ಯ ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆ

ಕರ್ನಾಟಕ ಸರ್ಕಾರ

cmk2
GOK > HGCD > ನಿಯೋಜನೆ
Last modified at 01/03/2018 15:37 by System Account


ಗೃಹರಕ್ಷಕರ ನಿಯೋಜನೆ:

 

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರು ಇವರುಗಳ ಕೋರಿಕೆಯ ಮೇರೆಗೆ ಸಾಮಾನ್ಯವಾಗಿ ಕಾನೂನು ಮತ್ತು ಶಿಸ್ತು ಪಾಲನೆ, ಸಂಚಾರ ನಿಯಂತ್ರಣ, ಆಂತರಿಕ ಭದ್ರತೆ, ಕೋಮು ಗಲಭೆ, ರಾಷ್ಟ್ರೀಯ ಉತ್ಸವಗಳು, ಹಬ್ಬ ಹರಿದಿನಗಳು, ಸಾರ್ವತ್ರಿಕ ಚುನಾವಣೆಗಳು, ಗಣ್ಯರ ಭೇಟಿ, ಉಚಿತ ರಕ್ತದಾನ ಶಿಬಿರ, ಉಚಿತ ನೇತ್ರದಾನ ಶಿಬಿರ, ಸಾರ್ವತ್ರಿಕ ಪರೀಕ್ಷೆಗಳು ಮೊದಲಾದ ಸಂದರ್ಭಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಣೆಗಾಗಿ ಗೃಹರಕ್ಷಕರನ್ನು ಸ್ಥಳೀಯವಾಗಿ, ಹಾಗೂ ರಾಜ್ಯದ ಇತರೆ ಸ್ಥಳಗಳಿಗೆ ನಿಯೋಜಿಸುವುದಲ್ಲದೇ, ರಾಜ್ಯದ ರಾಜಧಾನಿ ಬೆಂಗಳೂರು ಮಹಾ ನಗರಕ್ಕೂ ಸಹ ನಿಯೋಜಿಸಲಾಗುತ್ತದೆ. ಆಯಾ ಸಂದರ್ಭಗಳಲ್ಲಿ ಸರ್ಕಾರ ನಿಗದಿಪಡಿಸಿ ಮಂಜೂರಿಸಲಾದ ದರದಲ್ಲಿ ಕರ್ತವ್ಯ ಭತ್ಯೆಯನ್ನು ಇಲಾಖಾ ವತಿಯಿಂದ ಪಾವತಿಸಲಾಗುವುದು. ರಾಜ್ಯ ಗುಪ್ತ-ವಾರ್ತೆ, ಸಾರಿಗೆ, ಗಣಿ-ಭೂವಿಜ್ಞಾನ, ಆರೋಗ್ಯ, ಅಬಕಾರಿ, ಕರ್ನಾಟಕ ಸಚಿವಾಲಯದ ವಿವಿಧ ಇಲಾಖೆಗಳು, ಪ್ರಾಚ್ಯವಸ್ತು ಸಂಗ್ರಹಾಲಯ, ಕಾರಾಗೃಹ ಮುಂತಾದ ಇಲಾಖೆಗಳ ಕೋರಿಕೆಗೂ ಸ್ಪಂದಿಸಿ ಪಾವತಿ ಆಧಾರದಲ್ಲಿ ಗೃಹರಕ್ಷಕರ ಸೇವೆಯನ್ನು ಒದಗಿಸಲಾಗುತ್ತಿದೆ. ಸ್ವಾಯತ್ತ ಸಂಸ್ಥೆಗಳಿಂದಲೂ ಕೋರಿಕೆಗಳು ಬರುತ್ತಿದ್ದು, ಬಳ್ಳಾರಿಯ ವಿಮ್ಸ್, ಬೀದರ್ ಬೀಮ್ಸ್, ಬಿ.ಬಿ.ಎಂ.ಪಿ, ಮುಜರಾಯಿ ದೇವಸ್ಥಾನಗಳಲ್ಲಿಯೂ ಗೃಹರಕ್ಷಕರು ನಿಷ್ಕಾಮ ಸೇವೆ ಸಲ್ಲಿಸುವ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಪ್ರಸಕ್ತ ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ ರೂ.400-00 ರಂತೆ ಹಾಗೂ ರಾಜ್ಯದ ಇತರೆ ಸ್ಥಳಗಳಲ್ಲಿ ದಿನವೊಂದಕ್ಕೆ ರೂ.325-00 ರಂತೆ ಕರ್ತವ್ಯ ಭತ್ಯೆಯನ್ನು ಗೃಹರಕ್ಷಕರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿನ ಗೃಹರಕ್ಷಕರು, ಅಗತ್ಯ ಸಂದರ್ಭಗಳಲ್ಲಿ ಪೊಲೀಸರಿಗೆ ಭುಜಕ್ಕೆ ಭುಜ ಕೊಟ್ಟು ದುಡಿಯುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫೆಬ್ರವರಿ 2014 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪೊಲೀಸ್ ಠಾಣೆಗಳಿಗೆ ರಾತ್ರಿ ಗಸ್ತು, ಶಾಸನ ಬದ್ಧವಲ್ಲದ ಕರ್ತವ್ಯಗಳನ್ನು ನಿರ್ವಹಿಸಲು ಹಾಗೂ ಸುಗಮ ಸಂಚಾರ ನಿಯಂತ್ರಣಾ ಕರ್ತವ್ಯಗಳಿಗಾಗಿ ಗೃಹರಕ್ಷಕರನ್ನು ಸರ್ಕಾರದ ಆದೇಶ ಸಂಖ್ಯೆ ಹೆಚ್ಡಿ 159 ಪಿಒಪಿ 2013, ದಿನಾಂಕ: 01-01-2014 ಹಾಗೂ 17-02-2014 ಮೇರೆಗೆ  5958 ಗೃಹರಕ್ಷಕರನ್ನು ಪೊಲೀಸ್ ಇಲಾಖೆಗೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಕ್ಕೆ ಹಾಗೂ 800 ಗೃಹರಕ್ಷಕರನ್ನು ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಮತ್ತು 300 ಗೃಹರಕ್ಷಕರನ್ನು ರೈಲ್ವೆ ಪೊಲೀಸ್ಗೆ  ನಿಯೋಜಿಸಲಾಗಿದೆ..

 


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top