​​​​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಕಲೆಗಳ ನಿರ್ವಹಣಾ ಕಾರ್ಯತಂತ್ರಗಳ ಕಜ್ಞಾಆ ಕಾರ್ಯತಂಡ

ಕರ್ನಾಟಕವು ಅತಿ ದೊಡ್ಡ ಪ್ರಮಾಣದ ಕಲಾವಸ್ತುಗಳು, ಐತಿಹಾಸಿಕ ತಾಣಗಳು, ಪರಂಪರೆಯ ಸೊತ್ತುಗಳು, ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿ/ಚಿತ್ರಶಾಲೆಗಳು ಇತ್ಯಾದಿಗಳನ್ನು ಹೊಂದಿದೆ ಮತ್ತು ಅತಿ ದೊಡ್ಡ ಸಂಖ್ಯೆಯ ಕಲೆಗಳು ಮತ್ತು ಸಾಂಸ್ಕೃತಿಕ ಅಕಾಡೆಮಿಗಳು ಮತ್ತು ಸಂಸ್ಥೆಗಳನ್ನು ಹೊಂದಿದೆ. ಇವೆಲ್ಲವುಗಳು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ಪ್ರಗತಿಯ ಪ್ರಮುಖ ಸೂಚಕಗಳು ಮಾತ್ರವಲ್ಲದೇ, ರಾಜ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳ ದ್ಯೋತಕವಾಗಿವೆ. ಈ ಕಲಾವಸ್ತುಗಳು, ಸಾಮಾಗ್ರಿಗಳು, ದಾಖಲೆಗಳು ಮತ್ತು ಪರಂಪರೆಯ ತಾಣಗಳು, ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು ಇತ್ಯಾದಿಗಳನ್ನು ಉತ್ತಮವಾಗಿ ನಿರ್ವಹಿಸುವ ಅಗತ್ಯವಿದೆ ಮತ್ತು ಕೆಲವು ನವೀಕೃತ ತಂತ್ರಜ್ಞಾನಗಳನ್ನು ಬಳಸಿ ಇವೆಲ್ಲವುಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಲು ಮತ್ತು ಪ್ರದರ್ಶಿಸಲು ಬಳಸಬಹುದಾಗಿದೆ. ರಾಜ್ಯದಲ್ಲಿರುವ ಕಲಾ ವಸ್ತುಸಂಗ್ರಹಾಲಯಗಳು ಮತ್ತು ಸಂಗ್ರಹಣೆಗಳು ವೃತ್ತಿಪರವಾಗಿ ನಿರ್ವಹಿಸುವುದು ಮತ್ತು ವೃತ್ತಿಪರ ತಜ್ಞರುಗಳಿಂದ ನಿರ್ವಹಣೆಗೊಳ್ಳುವುದು ಎರಡೂ ದೂರದ ಮಾತೇ ಸರಿ. ಸಾಂಸ್ಕೃ​ತಿಕ ಸಂಸ್ಥೆಗಳಿಗೆ ದೀರ್ಘಕಾಲೀನ ಪೋಷಣೆ ಮತ್ತು ಸಾಂಸ್ಕೃತಿಕ​ ಚಟುವಟಿಕೆಗಳ ಬೆಳವಣಿಗೆಯನ್ನು ನೀಡುವಲ್ಲಿ ತಜ್ಞರ ಮತ್ತು ಉತ್ತಮ ನಾಯಕತ್ವದ ಅಗತ್ಯವಿದೆ. ಕಲಾ ಡಿಜಿಟಲ್ ದಾಖಲೆಗಳು, ಕಲೆಗಳ ದತ್ತಾಂಶಗಳು, 3ಡಿ ಬಹುಮಾಧ್ಯಮ ಪ್ರದರ್ಶನ ಮತ್ತು ಗ್ಯಾಲರಿಗಳು, ಚಿತ್ರಣ ಮತ್ತು 3ಡಿ ದೃಶ್ಯೀಕರಣ, ಗ್ರಾಫಿಕ್ ವಿಶ್ಲೇಷಣೆ ಮತ್ತು ಕಲಾನಿರ್ವಹಣೆ ಹಾಗೂ ವಸ್ತುಸಂಗ್ರಹಾಲಯಗಳ ಆಡಳಿತದಲ್ಲಿ ತಂತ್ರಜ್ಞಾನದ ಉನ್ನತ ಬಳಕೆಯೆಡೆಗೆ ಗಮನ ನೀಡುವುದರ ಮೂಲಕ ಕಲಾ ನಿರ್ವಹಣೆಯು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್ ಆಗಿವೆ. 

ಕಜ್ಞಾಆ ಕರ್ನಾಟಕದ ಕಲೆಗಳ ನಿರ್ವಹಣಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಕಲೆಗಳ ನಿರ್ವಹಣೆಯಲ್ಲಿ ಶಿಕ್ಷಣ ಮತ್ತು ತರಬೇತಿಯ ಮಾರ್ಗಸೂಚಿ ಮತ್ತು ಕಲೆ ನಿರ್ವಹಣಾ ಪರಿಣತರ ಕೇಡರ್ ಸೃಷ್ಟಿಯು ಕಾರ್ಯತಂತ್ರಗಳಲ್ಲಿ ಅಡಕವಾಗಿವೆ. ಪ್ರಸ್ತುತ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿರುವ ವಿಶ್ವವಿದ್ಯಾನಿಲಯಗಳು/ಸಂಸ್ಥೆಗಳು ಅತ್ಯುನ್ನತ ವೃತ್ತಿಪರ ಪಠ್ಯಕ್ರಮದೊಂದಿಗೆ ಕಲೆಗಳ ನಿರ್ವಹಣೆಯನ್ನು ವಿಶೇಷ ವಿಭಾಗವಾಗಿ ಸಲಹುವುದು, ಬೋಧಕವರ್ಗ (ಹೊರಗಿನಿಂದಲೂ ಸಹಾ ಆಹ್ವಾನಿಸಬಹುದಾಗಿದೆ) ಮತ್ತು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಮುಖೇನ ಇಂತಹ ಒಂದು ಪಠ್ಯಕ್ರಮ ಆಡಳಿತದ ಕುರಿತ ಯೋಜನಾ ಕ್ರಮಗಳು ಈ ಕಾರ್ಯತಂತ್ರದ ಭಾಗವಾಗಿದೆ.ಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ. 

ಕಲೆಗಳ ನಿರ್ವಹಣಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು, ಕಜ್ಞಾಆವು ಈ ಕೆಳಗಿನ ಸದಸ್ಯರುಗಳನ್ನೊಳಗೊಂಡ ಕಾರ್ಯತಂಡವನ್ನು ರಚಿಸಿದೆ: 

1

ಡಾ. ಬಾಲನ್ ನಂಬಿಯಾರ್, ಗೌರವಾನ್ವಿತ ಕಲೆಯ ಸಂಶೋಧಕರು 

ಉಪ-ಅಧ್ಯಕ್ಷರು
2ಶ್ರೀಮತಿ ದಿಪಾಲಿ ಖನ್ನಾ, ಮಾಜಿ ಸದಸ್ಯ ಕಾರ್ಯದರ್ಶಿಗಳು, ಜಿಎನ್ಸಿ
ಉಪ-ಅಧ್ಯಕ್ಷರು
3ಶ್ರೀ ಕೆ. ಜಿ. ಕುಮಾರ್, ನಿರ್ದೇಶಕರು, ವಿಶ್ವೇಶ್ವರಯ ಮ್ಯೂಸಿಯಂ
ಸದಸ್ಯರು
4ಪ್ರೊ. ಅಂಬಳಿಕೆ ಹಿರಿಯಣ್ಣ, ಜನಪದ ವಿಶ್ವವಿದ್ಯಾಲಯ 
ಸದಸ್ಯರು
5ನಿರ್ದೇಶಕರು, ಎಂ - ಬೆಂಗಳೂರುಸದಸ್ಯರು
6ನಿರ್ದೇಶಕರು, ಪ್ರತಿನಿಧಿಗಳು, ಎನ್ಸಿಎಸ್ಎಂ
ಸದಸ್ಯರು
7ಡಾ. ಗೀತಾ ನಾರಾಯಣ್, ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಡಿಸೈನ್ ಅಂಡ್ ಟೆಕ್ನಾಲಜಿ
ಸದಸ್ಯರು
8ಜನಪದ ಲೋಕದ, ಪ್ರತಿನಿಧಿಗಳು
ಸದಸ್ಯರು
9ಶ್ರೀಮತಿ ಲೀಲಾ ಸ್ಯಾಮ್ಸನ್, ಮಾಜಿ ಮುಖ್ಯಸ್ಥರು, ಸಂಗೀತ ನಾಟಕ ಅಕಾಡೆಮಿ           
ಸದಸ್ಯರು
10ಡಾ. ಮುಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
ಸದಸ್ಯರು
11ಶ್ರೀ ಅಶೋಕ್ ವಾಜಪೇಯಿ, ಮಾಜಿ ಅಧ್ಯಕ್ಷರು, ಲಲಿತ್ ಅಕಾಡೆಮಿ
ಸದಸ್ಯರು
12ಡಾ. ಮಹ್ರುಕ್ ತಾರಪೋರ್, ವಸ್ತುಸಂಗ್ರಹಾಲಯಗಳ ಅಂತರರಾಪ್ಟ್ರೀಯ ಸಲಹೆಗಾರರು
ಸದಸ್ಯರು
13ಶ್ರೀ ಚಿರಂಜೀವಿ ಸಿಂಗ್, ..ಎಸ್ (ನಿವೃತ್ತ)
ಸದಸ್ಯರುr​
14ಡಾ. ಸುಂದರ್ ರುಕ್ಕೈ, ಮಣಿಪಾಲ್ ಸೆಂಟರ್ ಫಾರ್ ಫಿಲಾಸಫಿ ಅಂಡ್ ಹ್ಯುಮಾನೀಟೀಸ್ 
ಸದಸ್ಯರು
15ಡಾ. ವಿದ್ಯಾ ಯರವಾಡೇಕರ್, ಉಪ ಕುಲಪತಿಗಳು, ಸಿಂಬಯಾಸಿಸ್‍ ವಿಶ್ವವಿದ್ಯಾಲಯ
ಸದಸ್ಯರು
​16ಡಾ. ರಾಮಚಂದ್ರ ಗುಹ, ಪ್ರಸಿದ್ಧ ಇತಿಹಾಸಕಾರರು​- ಸದಸ್ಯರು
​17ವಿದೇಶಿ ಸಾಂಸ್ಕೃತಿಕ ಸಂಸ್ಥೆಗಳಿಂದ ಇಬ್ಬರು ಪ್ರತಿನಿಧಿಗಳು​- ಸದಸ್ಯರು
18ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ವಿಭಾಗ (ಅಥವಾ ನಾಮನಿರ್ದೇಶಿತ ಪ್ರತಿನಿಧಿ)
ಸದಸ್ಯರು
​19ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ (ಅಥವಾ ನಾಮನಿರ್ದೇಶಿತ ಪ್ರತಿನಿಧಿ)​- ಸದಸ್ಯರು
​20ಡಾ. ವಿಕ್ರಮ್ ಸಂಪತ್, ಲೇಖಕರು​- ಸದಸ್ಯ ಕಾರ್ಯದರ್ಶಿಗಳು
​21ಶ್ರೀ ದೀಪಕ್ ಕೃಷ್ಣಪ್ಪ, ಹಿರಿಯ ಸಂಶೋಧನಾ ಸಹಾಯಕರು, .ಜ್ಞಾ.​- ಸಂಚಾಲಕರು
22​ಶ್ರೀಮತಿ ಜಯಶ್ರೀ, ಸಂಶೋಧನಾ ಸಹಾಯಕರು,.ಜ್ಞಾ.  ​- ಸಹ-ಸಂಚಾಲಕರು

ಹೆಚ್ಚಿನ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು mukund.k.rao@gmail.com ಮುಖೇನ ಮತ್ತು/ಅಥವಾ ಈ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು vikram.sampath@gmail.com ​ಮುಖೇನ ಸಂಪರ್ಕಿಸಬಹುದಾಗಿದೆ.