​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಆಡಳಿತದಲ್ಲಿ ಬಿಗ್ ಡೇಟಾ ಬಳಕೆಯ ದೃಷ್ಟಿಕೋನ ಮತ್ತು ಇದರ ಬಳಕೆಯ ಯೋಜನಾ ಅಭಿವೃದ್ಧಿ

ಇಂದು ಇಡೀ ವಿಶ್ವವೇ 'ಬಿಗ್ ಡಾಟಾ' ತಂತ್ರಜ್ಞಾನದ ಆಗಮನವನ್ನು ಎದುರು ನೋಡುತ್ತಿದೆ - ಯಾಕೆಂದರೆ, ನಾಗರಿಕರು, ಸಮಾಜ, ಕೈಗಾರಿಕೆಗಳು ಮತ್ತು ಸರ್ಕಾರಗಳ ಪ್ರತಿಯೊಂದು ಕೆಲಸಗಳು ಡಿಜಿಟಲ್ ತಂತ್ರಜ್ಞಾನವನ್ನು ಆಧರಿಸಿವೆ ಮತ್ತು ಡಿಜಿಟಲ್ ಸೆರೆ ಹಾಗೂ ಅದರ ಸಂಗ್ರಹಣೆಯ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ. ಸಮಾಜ, ಸಂಘಟನೆಗಳು ಮತ್ತು ಸರ್ಕಾರಗಳು, ಅಗಾಧವಾದ ದತ್ತಾಂಶಗಳನ್ನು, ವ್ಯವಹಾರ ವಹಿವಾಟುಗಳು, ಸಾಮಾಜಿಕ ಮಾಧ್ಯಮ, -ಆಡಳಿತ, ಸಾರ್ವಜನಿಕ ಸೇವೆಗಳು ಮತ್ತು ಯಾವುದೇ ಮಾನವ ಮಧ್ಯಸ್ಥಿಕೆಗಳಿಲ್ಲದೆಯೇ ಸ್ವಯಂಚಾಲಿತವಾಗಿ ವಿವಿಧ ಮೂಲಗಳಿಂದ ಸಂಗ್ರಹಿಸುತ್ತಿವೆ.


 ಇಂತಹ ಮುಂಚೂಣಿ ಸ್ಥಾನದಲ್ಲಿ, ಕರ್ನಾಟಕವು ತನ್ನ ಎಲ್ಲಾ ಅಸ್ತಿತ್ವದಲ್ಲಿರುವ ತಾಂತ್ರಿಕ ಮತ್ತು ವಿಶ್ಲೇಷಣಾತ್ಮಕ ಸಾಮಥ್ರ್ಯವನ್ನು ಚತುರ ಆಡಳಿತಕ್ಕಾಗಿ ಬಿಗ್ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ. ದತ್ತಾಂಶ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಹಾಗೂ ದತ್ತಾಂಶವನ್ನು ಮಾಹಿತಿಯುಕ್ತ, ಪರಿಣಾಮಕಾರಿ ಮತ್ತು ಸಾಕ್ಷ್ಯಾಧಾರಿಕ ನಿರ್ಧಾರಗಳನ್ನು ಮಂಡಿಸಲು ಅನುವು ಮಾಡಿಕೊಡುತ್ತದೆ. ಕರ್ನಾಟಕವು ತನ್ನ ಪ್ರಮುಖ ಕಾರ್ಯಕ್ರಮಗಳಾದ -ಆಡಳಿತ ಸೇವೆಗಳು, ಖಜಾನೆ, ಇಲಾಖೆಯ ಅಭಿವೃದ್ಧಿಯ ದತ್ತಾಂಶಗಳು, ಸಕಾಲ, ಪುರಸಭಾ ದತ್ತಸಂಚಯಗಳು, ಆಸ್ತಿ ದಾಖಲೆಗಳು, ಭೂಮಿ ದತ್ತಾಂಶ, ಬೆಳೆ ವಿಮಾ ದತ್ತಾಂಶ, ಶಿಕ್ಷಣ ದತ್ತಾಂಶ, ಸಾರಿಗೆ ದತ್ತಾಂಶ, ಸರ್ಕಾರದ ವಿವಿಧ ಯೋಜನೆಗಳ ದತ್ತಾಂಶ ಹಾಗೂ ಇನ್ನಿತರ ಬೃಹತ್ ದತ್ತಾಂಶಗಳನ್ನು ಹೊಂದಿದೆ. ರಾಷ್ಟ್ರೀಯ ಮತ್ತು ಜಾಗತಿಕ ಮಾಹಿತಿಯೊಂದಿಗೆ, 'ಬಿಗ್ ಡೇಟಾ' ಸಂರಚನೆಯು, ಸರ್ಕಾರದ ಪ್ರಮುಖ ಆಸ್ತಿಗಳಲ್ಲಿ ಒಂದಾಗುತ್ತದೆ. ಪ್ರಮುಖ ಪ್ರಕ್ರಿಯೆಯನ್ನು ಸರಿಯಾಗಿ ಬಳಸಿದರೆ, ನೀತಿ ಮಂಡನೆ ಮತ್ತು ಆಡಳಿತಕ್ಕೆ ಅತ್ಯುತ್ತಮ ನೆರವು ನೀಡುವುದಲ್ಲದೆ, ಸಾರ್ವಜನಿಕರಿಗೆ ಅಪಾರವಾದ ಲಾಭವನ್ನು ಒದಗಿಸುತ್ತದೆ.


ಕಜ್ಞಾಆವು ಬಿಗ್ ಡೇಟಾದ ಪ್ರಾಮುಖ್ಯತೆಯನ್ನು ಚರ್ಚಿಸಿ, ದೇಶದಲ್ಲಿಯೇ ಐಟಿ ಕ್ರಾಂತಿಗೆ ನಾಂದಿ ಹಾಡಿರುವ ಕರ್ನಾಟಕವು, ಬಿಗ್ ಡೇಟಾದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವುದರೊಂದಿಗೆ, ದತ್ತಾಂಶ ಪರಿಕಲ್ಪನೆಗಳನ್ನು ಸಂಭಾವ್ಯ ಬಳಕೆಯಿಂದ ಆಡಳಿತ, ಕೈಗಾರಿಕೆಗಳು, ಶಿಕ್ಷಣ ಮತ್ತು ನಾಗರಿಕರು ಇದರ ಪ್ರಯೋಜನ ಪಡೆಯಬಹುದು ಎಂಬುದನ್ನು ಸಹಾ ಗುರುತಿಸಿದೆಆಡಳಿತದಲ್ಲಿ ಬಿಗ್ ಡೇಟಾ ಬಳಕೆಯ ದೃಷ್ಟಿಕೋನ ಮತ್ತು ಇದರ ಬಳಕೆಯ ಯೋಜನೆಯನ್ನು ಅಭಿವೃದ್ಧಿಪಡಿಸಲು, ಕಜ್ಞಾಆ ಮಾರ್ಚ್ 2, 2018ರಂದು ವಿವಿಧ ತಜ್ಞರು/ಪರಿಣತರನ್ನು ಒಳಗೊಂಡ ಕಾರ್ಯತಂಡವನ್ನು ರಚಿಸಿತುಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ​.​

 

ಆಡಳಿತದಲ್ಲಿ ಬಿಗ್ ಡೇಟಾ ಬಳಕೆಯ ದೃಷ್ಟಿಕೋನ ಮತ್ತು ಇದರ ಬಳಕೆಯ ಯೋಜನಾ ಅಭಿವೃದ್ಧಿಯ ಕಾರ್ಯತಂಡ​:


1

ಪ್ರೊ. ಪುಲಕ್  ಘೋಶ್, ಸದಸ್ಯರು, ಕಜ್ಞಾಆ

-ಸಹ-ಅಧ್ಯಕ್ಷರು
2ಶ್ರೀ ಎಸ್. ವಿ. ರಂಗನಾಥ್, ಸದಸ್ಯರು, ಕ.ಜ್ಞಾ.ಆ/ಉಪ-ಅಧ್ಯಕ್ಷರು​, ಕೆಎಸ್ ಹೆಚ್ಇಸಿ​
ಸಹ​-ಅಧ್ಯಕ್ಷರು
3ಡಾ. ಬಿ. ಎನ್. ಸುರೇಶ್, ಸದಸ್ಯರು, ಕಜ್ಞಾಆ /ಇಸ್ರೋ ವಿಕ್ರಮ್ ಸಾರಾಭಾಯ್ ಪ್ರಾಧ್ಯಾಪಕರು
ಸದಸ್ಯರು​
4ಪ್ರೊ. ಎಸ್. ಸಡಗೋಪನ್, ನಿರ್ದೇಶಕರು, ಐಐಐಟಿ, ಬೆಂಗಳೂರು /ಸದಸ್ಯರು, ಕಜ್ಞಾಆ
ಸದಸ್ಯರು
5ಡಾ. ಮುಕುಂದ್ ರಾವ್ , ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆ
ಸದಸ್ಯರು
6ಶ್ರೀ ಟಿ. ವಿ. ಮೋಹನ್ ದಾಸ್ ಪೈ, ಸದಸ್ಯರು, ಕಜ್ಞಾಆ
ಸದಸ್ಯರು
7ಶ್ರೀ ಸಂಜೀವ್ ಮಿತ್ತಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ನ್ಐಎಸ್ಜಿ
ಸದಸ್ಯರು
8ಪ್ರೊ. ಶಾನ್ ಕೋಲೆ, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ (ಆನ್ ಲೈನ್ ಪಾರ್ಟಿಸಿಪೇಷನ್)
ಸದಸ್ಯರು
9ಪ್ರೊ. ಭುವನೇಶ್ ಪರೀಕ್, ಬೋಧಕರು, ಐಐಎಂ-ಇಂದೋರ್
ಸದಸ್ಯರು
10ಅಪರ ಮುಖ್ಯ ಕಾರ್ಯದರ್ಶಿಗಳು, ಇ-ಆಡಳಿತ ಇಲಾಖೆ, ಕರ್ನಾಟಕ ಸರ್ಕಾರ
ಸದಸ್ಯರು
11ಅಪರ ಮುಖ್ಯಕಾರ್ಯದರ್ಶಿಗಳು, ಯೋಜನೆ ಇಲಾಖೆ, ಕರ್ನಾಟಕ ಸರ್ಕಾರ
ಸದಸ್ಯರು
12ಪ್ರಧಾನ ಕಾರ್ಯದರ್ಶಿಗಳು, ಐಟಿ/ಬಿಟಿ  ಇಲಾಖೆ, ಕರ್ನಾಟಕ ಸರ್ಕಾರ  
ಸದಸ್ಯರು
13ಶ್ರೀ ಜಯಚಂದ್ರನ್ ಎಮ್, ತಾಂತ್ರಿಕ ಅಧಿಕಾರಿಗಳು​, ಕೆಎಸ್ಆರ್ಸ್ಎಸಿ
ಸದಸ್ಯ ಕಾರ್ಯದರ್ಶಿ​ಗಳು
14ಶ್ರೀಮತಿ ರಶ್ಮಿ ರಾಜ್, ಹಿರಿಯ ಸಂಶೋಧನಾ ಸಹಾಯಕರು, ಕಜ್ಞಾಆ
ಸಂಚಾಲಕರು


ಹೆಚ್ಚಿನ​ ಮಾಹಿತಿಗಾಗಿಸದಸ್ಯ ಕಾರ್ಯದರ್ಶಿಗಳುಕಜ್ಞಾಆರವರನ್ನು mukund.k.rao@gmail.com ಮುಖೇನ ಸಂಪರ್ಕಿಸಬಹುದಾಗಿದೆ​.​ಕಜ್ಞಾಆವು ಆಡಳಿತದಲ್ಲಿ ಬಿಗ್ ಡೇಟಾ ಬಳಕೆಯ ದೃಷ್ಟಿಕೋನ ಮತ್ತು ಇದರ ಬಳಕೆಯ ಯೋಜನಾ ಅಭಿವೃದ್ಧಿಯ ಶಿಫಾರಸ್ಸನ್ನು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ. ​