​​​​​​

ಆಟಿಕೆಗಳು, ಮರಗೆಲಸ ಮತ್ತು ಬಿದಿರಿನ ಉತ್ಪನ್ನಗಳ ವಿನ್ಯಾಸ ಮತ್ತು ತಯಾರಿಕೆಗಾಗಿ ಶ್ರೇಷ್ಠತೆಯ ಕೇಂದ್ರ 

 
ಕಜ್ಞಾಆ ದ  ಸದಸ್ಯರಾದ  ಪ್ರೊ. ನಜೀರ್ ಅಹ್ಮದ್ ಅವರು ಆಟಿಕೆಗಳು, ಮರಗೆಲಸ ಹಾಗೂ ಬಿದಿರಿನ ಉತ್ಪನ್ನಗಳ ವಿನ್ಯಾಸ ಮತ್ತು ತಯಾರಿಕೆಗಾಗಿ, ಕರ್ನಾಟಕದ ಆಸುಪಾಸಿನಲ್ಲಿಯೇ ಇರುವ ಹಾಗೂ ಆಟಿಕೆ ತಯಾರಿಕೆ, ರೇಷ್ಮೆ, ಮರಗೆಲಸ ಮತ್ತು ಬಿದಿರಿನ ಉತ್ಪನ್ನಗಳ ತಯಾರಿಕೆಯ ಸಾಂಪ್ರದಾಯಿಕ ಕೇಂದ್ರವಾಗಿರುವ  ರಾಮನಗರ -ಮೈಸೂರು ವ್ಯಾಪ್ತಿಯಲ್ಲಿ  ಬರುವ ಕಾಲೇಜು/ವಿಶ್ವವಿದ್ಯಾನಿಲಯದಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲು ಸಲಹೆ ನೀಡಿದರು.  ಈ ಶ್ರೇಷ್ಠತಾ ಕೇಂದ್ರವು ಶ್ರೇಣೀಕೃತ ಚಿಲ್ಲರೆ ಮಾರುಕಟ್ಟೆಯಲ್ಲಿ ಬಿರುಕು ಬಿಟ್ಟಿರುವ ನಾವೀನ್ಯತೆ ಮತ್ತು ಜ್ಞಾನಾಧಾರಿತ ವಿನ್ಯಾಸಗಳ ಅಂತರವನ್ನು ತುಂಬಲು ಸಾವಿರಾರು ಕುಶಲಕರ್ಮಿಗಳಿಗೆ ಸಣ್ಣ ಪ್ರಮಾಣದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಪ್ರಸ್ತಾಪಿತ ಕೇಂದ್ರವು ಈ ಉತ್ಪನ್ನಗಳ ವಿನ್ಯಾಸ ಮತ್ತು ತಯಾರಿಕೆಗಳನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವುದಲ್ಲದೆ ಉದಯೋನ್ಮುಖ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಬಹುದಾಗಿದೆ.

 
ಈ ಪ್ರಸ್ತಾವನೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯ ಅಗತ್ಯತೆ ಮತ್ತು ಆಟಿಕೆ, ಮರಗೆಲಸ ಮತ್ತು ಬಿದಿರಿನ ಉತ್ಪನ್ನಗಳ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ನಮ್ಮ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯ ನಡುವಿನ ಅಂತರವನ್ನು  ಗಮನೀಕರಿಸುತ್ತದೆ. ಈ ಅಂತರವನ್ನು ಮುಚ್ಚುವ ಅಗತ್ಯದೆಡೆಗೆ ಒತ್ತುನೀಡುವಂತೆಯೇ ಭಾರತವು ಅಂತರರಾಷ್ಟ್ರೀಯ ಚಿಲ್ಲರೆ ಪೈಪೋಟಿಗೆ ತನ್ನನ್ನು ತಾನು ಒಡ್ಡುಕೊಳ್ಳುತ್ತದೆ.

 
ಸೆಪ್ಟೆಂಬರ್ 22, 2014 ರಂದು ನಡೆದ ಕಜ್ಞಾಆದ ಎರಡನೇ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಪರಿಗಣಿಸಿ, ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವ ಪರಿಕಲ್ಪನೆಯನ್ನು ಒಪ್ಪಿಕೊಂಡಿತು ಹಾಗೂ ಈ ಪ್ರಸ್ತಾವನೆಯನ್ನು ಕೆಲವು ಸಂಸ್ಥೆ/ವಿಶ್ವವಿದ್ಯಾನಿಲಯ ಅಥವಾ ಕರ್ನಾಟಕ ಸರ್ಕಾರದ  ಇಲಾಖೆಗಳು  ಸಂಘಟಿಸುವ ಸಲಹೆ ನೀಡಿದೆ. ಈ ಕೇಂದ್ರವನ್ನು ಸ್ಥಾಪಿಸಲು ಮೈಸೂರು ವಿಶ್ವವಿದ್ಯಾನಿಲಯದ ಆಸಕ್ತಿ ಯನ್ನು ಅನ್ವೇಷಿಸಲು ಕಜ್ಞಾಆವು ಸಲಹೆ ನೀಡಿದೆ.

 
ಮುಂದಿನ ಕ್ರಮಗಳು​
  • ಮೈಸೂರು ವಿಶ್ವ ವಿದ್ಯಾನಿಲಯವು ರಚಿಸಿದ ಈ ಪ್ರಸ್ತಾವನೆಯು ತಜ್ಞರ ಪರಿಶೀಲನಾ ಸಮಿತಿ ಮತ್ತು ಕಜ್ಞಾಆದ ತಾಂತ್ರಿಕ ಸಮಿತಿಯಿಂದ ಪರಿಶೀಲನೆಗೊಂಡಿದೆ. ಕಜ್ಞಾಆದ ತಾಂತ್ರಿಕ ಸಮಿತಿಯ ಚರ್ಚೆ ಯ ಆಧಾರದ ಮೇರೆಗೆ, ಪರಿಷ್ಕೃತ ಪ್ರಸ್ತಾವನೆಯನ್ನು ಕಜ್ಞಾಆಗೆ ಮೈಸೂರು ವಿಶ್ವ ವಿದ್ಯಾನಿಲಯವು ಸಲ್ಲಿಸಿದ್ದು, ಈ ಪರಿಷ್ಕೃತ ಪ್ರಸ್ತಾವನೆಯು ಕಜ್ಞಾಆದ ಪರಿಶೀಲನಾ ಹಂತದಲ್ಲಿದೆ. ​


 

ಕಜ್ಞಾಆವು ಆಟಿಕೆಗಳು, ಮರಗೆಲಸ ಮತ್ತು ಬಿದಿರಿನ ಉತ್ಪನ್ನಗಳ ವಿನ್ಯಾಸ ಮತ್ತು ತಯಾರಿಕೆಗಾಗಿ ಶ್ರೇಷ್ಠತೆಯ ಕೇಂದ್ರದ ವರದಿಯ ಶಿಫಾರಸ್ಸನ್ನು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ.