​​​​​​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.

ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ತಂತ್ರಜ್ಞಾನ ಮತ್ತು ಎಜುಸ್ಯಾಟ್ ಬಳಕೆಯ ಪುನರಾವಲೋಕನದ ಕಜ್ಞಾಆ ಕಾರ್ಯತಂಡ

ಕರ್ನಾಟಕದ ಸಾಮಾನ್ಯ, ತಾಂತ್ರಿಕ, ವೈದ್ಯಕೀಯ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಅತ್ಯುನ್ನತ ಶಿಕ್ಷಣ ತಂತ್ರಜ್ಞಾನಗಳ ಬಳಕೆಯ ಮುಖಾಂತರ ಶಿಕ್ಷಣದ ಗುಣಮಟ್ಟ ಮತ್ತು ಶಿಕ್ಷಣದ ಚಾಚುವಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವರ ವಿನಂತಿಯನ್ನು ಕಜ್ಞಾಆವು ಸೆಪ್ಟೆಂಬರ್ 22, 2014ರಂದು ನಡೆದ ತನ್ನ 2ನೇ ಸಭೆಯಲ್ಲಿ ಚರ್ಚಿಸಿತು. ಕರ್ನಾಟಕ ರಾಜ್ಯವು ಎಜುಸ್ಯಾಟ್ ಕೇಂದ್ರ ಮತ್ತು ವಿವಿಧ ಕಾಲೇಜುಗಳು/ಸಂಸ್ಥೆಗಳ ಸಂಪರ್ಕವನ್ನೊಳಗೊಂಡ ಎಜುಸ್ಯಾಟ್ ಜಾಲವನ್ನು 2007ರಲ್ಲಿ ಅಭಿವೃದ್ಧಿ ಪಡೆಸಿದ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದಾಗಿದೆ. ಎಜುಸ್ಯಾಟ್ ಜಾಲವು ಕಾರ್ಯಾಚರಣೆಯಲ್ಲಿರುವಾಗಲೇ, ರಾಜ್ಯದ ಪ್ರಸ್ತುತ ಎಜುಸ್ಯಾಟ್ ಬಳಕೆಯ ಅವಲೋಕನ ಮಾಡುವುದು ಮತ್ತು ಇವುಗಳ ನಡುವಿನ ಅಂತರಗಳು/ಸಮಸ್ಯೆಗಳು ಹಾಗೂ ರಾಜ್ಯದ ಶಿಕ್ಷಣ ಚಟುವಟಿಕೆಗಳಲ್ಲಿ ಉಪಗ್ರಹ ಸಂವಹನೆಗಳ ಬಳಕೆಯನ್ನು ವೃದ್ಧಿಸಲು ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡಬೇಕೆಂಬುದು ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದ ಬೇಡಿಕೆ ಆಗಿದೆ. 

ಶಿಕ್ಷಣವನ್ನು ನೀಡಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು (ಐಸಿಟಿಗಳು) ಮತ್ತು ಉಪಗ್ರಹಾಧಾರಿತ ಶಿಕ್ಷಣವನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕು. ವ್ಯಾಪಕ ಶ್ರೇಣಿಯ ತಂತ್ರಜ್ಞಾನಗಳು ಮತ್ತು ಶಿಕ್ಷಣದಲ್ಲಿ ಈ ತಂತ್ರಜ್ಞಾನ ಅನ್ವಯಗಳ ಕಾರ್ಯಾತ್ಮಕ​ ಉದಾಹರಣೆಗಳು ಲಭ್ಯವಿವೆ. ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ, ತಂತ್ರಜ್ಞಾನಗಳು ದಕ್ಷವಾಗಿ ಮತ್ತು ಪರಿಣಾಮಕಾರಿಯಾಗಿ ಕೊಡುಗೆ ನೀಡುತ್ತಿವೆಯಾದರೂ, ರಾಜ್ಯದ ಅತಿ ದೊಡ್ಡ ಶಿಕ್ಷಣದ ವಾತಾವರಣದಲ್ಲಿ ಶಿಕ್ಷಕರು/ಬೋಧನಾ ವಿಭಾಗ ಮತ್ತು ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಕಡೆಗಾಣಿಸಬಾರದು, ಗುರುತಿಸಬೇಕು. ಆದರೆ, ಈ ತಂತ್ರಜ್ಞಾನದ ವ್ಯವಸ್ಥೆಯ ಚಾಲನೆಯು ಪ್ರಮುಖ ಪರಿಹಾರವಾಗಬಾರದು; ಅದೇ ಸಮಯದಲ್ಲಿ ಪ್ರತಿರೋಧ ಮತ್ತು ಆಧುನಿಕೀಕರಣಕ್ಕೆ ಅಪ್ರಜ್ಞಪೂರ್ವಕತೆಯು ಭವಿಷ್ಯದ ಪೀಳಿಗೆಯ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸುವ ಅಂಶವೂ ಆಗಿರಬಾರದು. ಹೆಚ್ಚಿನ ತಂತ್ರಜ್ಞಾನಗಳು ಲಭ್ಯವಿದ್ದರೂ, ರಾಜ್ಯದ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗೆ ಹೊಂದುವ ಸೂಕ್ತವಾದ, ಪರಿಣಾಮಕಾರಿಯಾದ, ದಕ್ಷವಾದ ಮತ್ತು ಪ್ರಗತಿಶೀಲವಾದ ತಂತ್ರಜ್ಞಾನಗಳನ್ನು ಬಳಸುವುದು ಮುಖ್ಯವಾಗಿದೆ.         
   
ಯೋಜನೆಯ ಕಾರ್ಯತಂತ್ರ ಮತ್ತು ಸಮಗ್ರ ಹಾಗೂ ಕ್ರಿಯಾತ್ಮಕ ವರದಿಯನ್ನು ರೂಪಿಸಲು ಕಜ್ಞಾಆವು ತಂತ್ರಜ್ಞಾನ ಮತ್ತು ಶಿಕ್ಷಣ ಪರಿಣತರು/ತಜ್ಞರು ಇವರುಗಳನ್ನೊಳಗೊಂಡ ಕಾರ್ಯತಂಡವನ್ನು ರಚಿಸಲು ನಿರ್ಧರಿಸಿತು. ಈ ಕಾರ್ಯತಂಡವು ಡಾ. ಬಿ. ಎನ್. ಸುರೇಶ್ ಮತ್ತು ಡಾ. ಪಿ. ಬಾಲಕೃಷ್ಣ ಶೆಟ್ಟಿ ಇವರುಗಳ  ಸಹ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ. 

ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಬಳಸಬಹುದಾದ ಸೂಕ್ತ ತಂತ್ರಜ್ಞಾನಗಳನ್ನು ಪ್ರಮಾಣೀಕರಿಸಲು, ಪ್ರಸ್ತುತ ಶಿಕ್ಷಣ ವ್ಯವಸ್ಥೆಯೊಂದಿಗೆ ಈ ತಂತ್ರಜ್ಞಾನಗಳು ಸಮ್ಮಿಳನಗೊಳ್ಳುವುದು ಅಥವಾ ಕೂಡಿಸಲು ಸಹಾಯಕವಾಗುವ ರೀತಿಯಲ್ಲಿ ಮತ್ತು ಅಂತಿಮವಾಗಿ ಕರ್ನಾಟಕ ಸರ್ಕಾರಕ್ಕೆ ಯೋಜನಾ ಆಧಾರಿತ ಮಾಹಿತಿಯನ್ನು ಒದಗಿಸಲು, ಕರ್ನಾಟಕ ರಾಜ್ಯಕ್ಕಾಗಿ ಶಿಕ್ಷಣ ತಂತ್ರಜ್ಞಾನದ ಕಾರ್ಯತಂತ್ರಗಳ ನೀಲಿನಕ್ಷೆಯನ್ನು ರಚಿಸುವುದು ಈ ಕಾರ್ಯತಂಡದ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯತಂಡವು ತನ್ನ ವರದಿಯನ್ನು 6 ತಿಂಗಳ ಅವಧಿಯಲ್ಲಿ ಕಜ್ಞಾಆಗೆ ಸಲ್ಲಿಸುವುದು - ಕಜ್ಞಾಆದ ಅನುಮೋದನೆಯ ಮೇರೆಗೆ, ಈ ಶಿಫಾರಸ್ಸನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ. 

ಕಾರ್ಯತಂಡವು ಈ ಕೆಳಗಿನ ಸದಸ್ಯರುಗಳನ್ನೊಳಗೊಂಡಿದೆ:  ​

1

ಡಾ. ಬಿ. ಎನ್. ಸುರೇಶ್ (ಮಾಜಿ ಸದಸ್ಯರು,​ ಬಾಹ್ಯಾಕಾಶ ಆಯೋಗ ಮತ್ತು ಮಾಜಿ ನಿರ್ದೇಶಕರು ಬಾಹ್ಯಾಕಾಶ ತಂತ್ರಜ್ಞಾನದ ಭಾರತೀಯ ಸಂಸ್ಥೆ)

​​- ಉಪ-ಅಧ್ಯಕ್ಷರು
2ಡಾಪಿಬಾಲಕೃಷ್ಣ ಶೆಟ್ಟಿಸದಸ್ಯರು.ಜ್ಞಾ.
ಉಪ-ಅಧ್ಯಕ್ಷರು
3ಪ್ರೊಎಮ್ಅಸ್ಲಾಮ್ಉಪ ಕುಲಪತಿಗಳು.ಜಿ.ಎನ್..ಯುನವದೆಹಲಿ
ಸದಸ್ಯರು
4ಶ್ರೀ ಎನ್​.ಪ್ರಹ್ಲಾದ್ವೈಜ್ಞಾನಿಕ ಕಾರ್ಯದರ್ಶಿಗಳುಇಸ್ರೋಬೆಂಗಳೂರು  
ಸದಸ್ಯರು
5ಶ್ರೀ ಬಿಎಸ್ಭಾಟಿಯಾಮಾಜಿ ನಿರ್ದೇಶಕರುಡಿ..ಸಿ.ಯು/ಇಸ್ರೋಅಹಮದಾಬಾದ್ಸದಸ್ಯರು
6ಡಾಕೆ.ಎಸ್ದಾಸ್ ಗುಪ್ತ್ನಿರ್ದೇಶಕರು..ಎಸ್.ಟಿತಿರುವನಂತಪುರಂ
ಸದಸ್ಯರು
7ಶ್ರೀ ನಿಖಿಲ್ ಸಿನ್ಹಾಉಪ ಕುಲಪತಿಗಳುಶಿವ ನಾಡರ್ ವಿಶ್ವವಿದ್ಯಾಲಯಉತ್ತರಪ್ರದೇಶ 
ಸದಸ್ಯರು
8ಪ್ರೊಎಸ್ಸಡಗೋಪನ್ಸದಸ್ಯರು.ಜ್ಞಾ.
ಸದಸ್ಯರು
9ಪ್ರೊಅನುರಾಗ್ ಬೆಹರ್ಉಪಕುಲಪತಿಗಳುಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯ
ಸದಸ್ಯರು
10ಡಾಎಚ್ಮಹೇಶಪ್ಪಉಪ ಕುಲಪತಿಗಳುವಿ.ಟಿ.ಯುಬೆಳಗಾವಿ
ಸದಸ್ಯರು
11ಪ್ರೊಕೆಎಸ್ರಂಗಪ್ಪಉಪ ಕುಲಪತಿಗಳುಮೈಸೂರು ವಿಶ್ವವಿದ್ಯಾಲಯ
ಸದಸ್ಯರು
12ಡಾರವೀಂದ್ರನಾಥ್ ಕೆ.ಎಸ್ಉಪ ಕುಲಪತಿಗಳುಆರ್.ಜಿ.ಯು.ಎಚ್.ಎಸ್, ಬೆಂಗಳೂರು
ಸದಸ್ಯರು
13ಡಾಎಚ್ಶಿವಣ್ಣಉಪ ಕುಲಪತಿಗಳುಯು..ಎಸ್ಬೆಂಗಳೂರು 
ಸದಸ್ಯರುr​
14ಆಯುಕ್ತರುಕಾಲೇಜು ಶಿಕ್ಷಣ ಇಲಾಖೆಕರ್ನಾಟಕ ಸರ್ಕಾರ
ಸದಸ್ಯರು
15ಸರ್ಕಾರದ ಪ್ರಧಾನ ಕಾರ್ಯದರ್ಶಿಗಳುಉನ್ನತ ಶಿಕ್ಷಣ ಇಲಾಖೆ
ಸದಸ್ಯರು
​16ಡಾಮುಕುಂದ್ ರಾವ್ಸದಸ್ಯ ಕಾರ್ಯದರ್ಶಿಗಳು.ಜ್ಞಾ.
​- ಸದಸ್ಯರು
​17ಡಾನಝೀರ್ ಅಹ್ಮದ್ಸದಸ್ಯರು.ಜ್ಞಾ.ಆ​
​- ಸದಸ್ಯರು
18ಪ್ರೊವಿರಾಜ್ ಕುಮಾರ್ಪಿ..ಎಸ್ ವಿಶ್ವವಿದ್ಯಾಲಯಬೆಂಗಳೂರು
ಸದಸ್ಯ ಕಾರ್ಯದರ್ಶಿಗಳು
​19ಡಾಎಂಜಯಶ್ರೀಸಂಶೋಧನಾ ಸಹಾಯರು.ಜ್ಞಾ. 

​- ಸಂಚಾಲಕರು​


ಹೆಚ್ಚಿನ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು mukund.k.rao@gmail.com ಮುಖೇನ ಮತ್ತು/ಅಥವಾ ಈ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು viraj.kumar@pes.edu ಮುಖೇನ ಸಂಪರ್ಕಿಸಬಹುದಾಗಿದೆ. ​