​​​​​​​

ಕಾರ್ಯಗಳು

ಸಾಂಸ್ಥಿಕ ರಚನೆ, ನೀತಿ ನಾವಿನ್ಯತೆ ಮತ್ತು ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಉದ್ಯಮ, ವಾಣಿಜ್ಯೋದ್ಯಮ, ಸಂಶೋಧನೆ ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಜ್ಞಾನ, ಕೃಷಿ, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಇತ್ಯಾದಿ ಹಾಗೂ ಇತರೆ ಕರ್ನಾಟಕ ಸಂಬಂಧಿತ ವಲಯಗಳ ಕುರಿತಾದ ಸಮಗ್ರ ಶಿಫಾರಸ್ಸುಗಳನ್ನು ಸಲ್ಲಿಸುವುದು ಪ್ರಸ್ತುತ ಕಜ್ಞಾಆದ ಪ್ರಮುಖ ಗುರಿಗಳು ಮತ್ತು ಉದ್ದೇಶಗಳಾಗಿವೆ. 

ಕಜ್ಞಾಆದ ಕಾರ್ಯಗಳು ಪರಿಕಲ್ಪನೆಯ ದೃಷ್ಟಾಂತದ ಅನುಗುಣವಾಗಿದ್ದು ಮತ್ತು ಕಜ್ಞಾಆದಲ್ಲಿ ಆಂತರಿಕವಾಗಿ ಚರ್ಚಿಸಲ್ಪಟ್ಟ ಪ್ರಮುಖವಾಗಿ ಪ್ರಸಕ್ತ ರಾಜ್ಯಕ್ಕೆ ಅಗತ್ಯವಿರುವ ಸಾರ್ವಜನಿಕ/ಸಾಮಾಜಿಕ/ತಾಂತ್ರಿಕ ಮತ್ತು ಜ್ಞಾನದ ವಿಷಯಗಳು ಅಥವಾ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳೊಂದಿಗಿನ ಸಂವಾದಗಳ ಮುಖೇನ ಗುರುತಿಸಲ್ಪಟ್ಟ ಯಾವುದೇ ಪ್ರಮುಖ ರಾಜ್ಯ ಸಂಬಂಧಿತ ಆಡಳಿತ ಹಾಗೂ ಅಭಿವೃದ್ಧಿ ವಿಷಯಗಳು - ಇವೆರಡರ ಮೂಲಕ ವ್ಯಾಖ್ಯಾನಿಸಲಾದ ಅಥವಾ ರೂಪಿಸಲಾದ ಯಾವುದೇ ವಿಷಯಗಳನ್ನು ಕಜ್ಞಾಆ ಕೈಗೆತ್ತಿಕೊಳ್ಳುತ್ತದೆ. ಕಜ್ಞಾಆದಿಂದ ಪರಿಕಲ್ಪಿತವಾದ ಯಾವುದೇ ವಿಷಯಗಳು ಆಯಾ ಇಲಾಖೆಗಳಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆಗೊಂಡು ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಕಜ್ಞಾಆದ ಕಾರ್ಯಗಳು ಒಂದು ಅಥವಾ ಹಲವು ಕರ್ನಾಟಕ ಸರ್ಕಾರದ ಇಲಾಖೆಗಳ ಮುಖೇನ ಸುಪರ್ದಿಗೆ ಒಳಪಡುತ್ತದೆ. ಕಜ್ಞಾಆವು ತಾಂತ್ರಿಕ ಮೌಲ್ಯಮಾಪನಗಳು, ಅಧ್ಯಯನಗಳು, ಸಣ್ಣ ಪ್ರದರ್ಶನಗಳು, ಮೂಲ ಮಾದರಿಗಳ ವಿಶ್ಲೇಷಣೆಗಳು, ನೀತಿ ವಿಶ್ಲೇಷಣೆಗಳು, ಸಾಮಾಜಿಕ ಪ್ರಭಾವ ಮೌಲ್ಯಮಾಪನಗಳು ಇತ್ಯಾದಿಗಳು ಹಾಗೂ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲು ಕಾರಣೀಭೂತವಾಗುವ ಯಾವುದೇ ಅವಶ್ಯಕ ಶಿಫಾರಸ್ಸುಗಳನ್ನು ಸಲ್ಲಿಸುವುದು ಪರಿಕಲ್ಪನೆಯ ದೃಷ್ಟಾಂತದ ಒಂದು ಭಾಗವಾಗಿದೆ.

ಹೆಚ್ಚಿನ ವಿವರಗಳಿಗಾಗಿ, ಸೆಪ್ಟೆಂಬರ್ 1, 2017ರಂದು ನಡೆದ ಕಜ್ಞಾಆದ ಏಳನೇ ಸಭೆಯಲ್ಲಿ ಅಳವಡಿಸಿಕೊಂಡ "ಪರಿಕಲ್ಪನೆಗಳು ಮತ್ತು ಕಾರ್ಯವಿಧಾನಗಳು​" ಅನ್ನು ನೋಡಿರಿ.