​​​​​​​​​​
ಕರ್ನಾಟಕ-ಭೌಗೋಳಿಕ ಮಾಹಿತಿ ವ್ಯವಸ್ಥೆ: ಆಡಳಿತ ಮತ್ತು ನಾಗರಿಕ ಸೇವೆಗಳಿಗೆ ಅನನ್ಯ ಸಾಧನ

 ಕರ್ನಾಟಕ-ಭೌಗೋಳಿಕ ಮಾಹಿತಿ ವ್ಯವಸ್ಥೆ (ಕೆ–ಜಿಐಎಸ್) ಅಭಿವೃದ್ಧಿಪಡಿಸಲು ಕಜ್ಞಾಆವು ಕರ್ನಾಟಕ ಸರ್ಕಾರಕ್ಕೆ ತನ್ನ ಹಿಂದಿನ ಅವಧಿ ಜನವರಿ 2013ರಲ್ಲಿ ಸಮಗ್ರ ಶಿಫಾರಸ್ಸನ್ನು ಸಲ್ಲಿಸಿದೆ.
ಕಜ್ಞಾಆವು ಸಾಮಾನ್ಯವಾದ ರಾಜ್ಯವ್ಯಾಪ್ತಿಯ ಅಧಿಕೃತ ಕೆ-ಜಿಐಎಸ್ ವೇದಿಕೆಯನ್ನು ರೂಪಿಸಲು ಆಲೋಚಿಸುತ್ತಿದೆ. ಈ ವೇದಿಕೆಯಲ್ಲಿ 53ಕ್ಕೂ ಹೆಚ್ಚಿನ ತಡೆರಹಿತ ಜಿಐಎಸ್ ದತ್ತಾಂಶಗಳ ಸ್ತರಗಳಿದ್ದು, ಇಲಾಖೆಯ ಜಿಐಎಸ್ ಅನ್ವಯಿಕ ನಿರ್ಧರಿಸುವಿಕೆಯನ್ನು ಬೆಂಬಲಿಸುವ ಪ್ರಮಾಣಿತ ಭಾಗಗಳ ಪ್ರತಿಯೊಂದು ಕಂತುಗಳನ್ನು ಹೊಂದಿದೆ. ಈ ಪ್ರಯತ್ನವು ರಾಜ್ಯದಲ್ಲಿ ಘಟಿಸಬಹುದಾದಂತಹ ಜಿಐಎಸ್ ಪ್ರಯತ್ನಗಳ ನಕಲುಗಳನ್ನು ತಗ್ಗಿಸುವುದಲ್ಲದೆ, ಪುನರಾವರ್ತನೆಯನ್ನು ತೆಗೆದುಹಾಕಲು ಮತ್ತು ಎಲ್ಲಾ ಸಂಸ್ಥೆಗಳು, ಉದ್ಯಮಗಳು ಮತ್ತು ನಾಗರಿಕರಿಗೆ ಲಭ್ಯವಿರುವ ಒಂದು ಅಧಿಕೃತ ಜಿಐಎಸ್ ದತ್ತಾಂಶವನ್ನು ರೂಪಿಸಲು ಸಹಾಯಕವಾಗಲಿದೆ. ಕೆ-ಜಿಐಎಸ್‍ನ ಸ್ತರಗಳು ದೂರಸಂವೇದಿ ಚಿತ್ರಣಗಳು ಮತ್ತು ಸಮೀಕ್ಷೆಯ ದತ್ತಾಂಶಗಳು/ನಕ್ಷೆಗಳ ಸಹಾಯದಿಂದ ಆಯೋಜಿಸಲಾಗುವುದು. ತದನಂತರದಲ್ಲಿ, ಮಾಹಿತಿ ನಿರ್ವಹಣಾ ವ್ಯವಸ್ಥೆ/ವಿವಿಧ ಇಲಾಖೆಗಳಲ್ಲಿ (ಇಲಾಖಾವಾರು ಸರ್ವರ್ಗಳ ಮುಖೇನ) ಲಭ್ಯವಿರುವ ದತ್ತಾಂಶಗಳ ದಾಖಲೆಗಳೊಂದಿಗೆ ಸಂಯೋಜಿಸಲಾಗುವುದು. ಈ “ಸಂಯೋಜಿತ ಜಿಐಎಸ್ ಆಸ್ತಿ”ಯನ್ನು ಪರಿಶೀಲಿಸಿ, ಪರೀಕ್ಷಿಸಿ ಮತ್ತು ಅಧಿಕೃತಗೊಳಿಸಲಾಗುವುದು. ಪ್ರತಿ ಇಲಾಖೆಗೆ ಸರಳ ಹಾಗೂ ಸಂಕೀರ್ಣವಾದ ಜಿಐಎಸ್ ಅಪ್ಲಿಕೇಷನ್‍ ನ್ನು ಅಭಿವೃದ್ಧಿಗೊಳಿಸಲಾಗುವುದು ಮತ್ತು ಡಿಎಸ್‍ಎಸ್ ಹಾಗೂ ನಾಗರಿಕ-ಕೇಂದ್ರಿತ ಜಿಐಎಸ್ ಅನ್ವಯಿಕಗಳನ್ನು ಸಹ ಪ್ರಕಟಿಸಲಾಗುವುದು. ಜಿಐಎಸ್ ದತ್ತಾಂಶ ಮತ್ತು ಅನ್ವಯಿಕಗಳ ಸೇವೆಗಳನ್ನು ಒದಗಿಸಲು ಮುಂದುವರೆದ ಜಿಐಎಸ್ ಪೋರ್ಟಲ್‍ನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ, ನಾಗರಿಕರು ಮತ್ತು ಸರ್ಕಾರ ಸೂಕ್ತವಾದ ರೀತಿಯಲ್ಲಿ ವಾಣಿಜ್ಯ ಸೇವೆಗಳಿಗೆ ದಾರಿಯಾಗುವಂತಹ ನೆಟ್ವರ್ಕಿಂಗ್ ಸೌಲಭ್ಯವುಳ್ಳ ಆಧುನಿಕ ಮೂಲಸೌಕರ್ಯವನ್ನು ಸ್ಥಾಪಿಸಲಾಗುವುದು.

ಕೇಂದ್ರ ಸರ್ಕಾರವು ರಾಷ್ಟ್ರೀಯ-ಜಿಐಎಸ್ ಅನ್ನು ಕೈಗೊಳ್ಳುವ ಸಂದರ್ಭದಲ್ಲಿ, ಅಂತರ್ಗತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕವು ನಾಯಕತ್ವದ ಉಚ್ಛ್ರಾಯ ಸ್ಥಿತಿಯನ್ನು ತಲುಪಿರುತ್ತದೆ​ ಮತ್ತು ತನ್ನ ಜಿಐಎಸ್ ವ್ಯವಸ್ಥೆಯನ್ನು ರಾಷ್ಟ್ರೀಯ ವ್ಯವಸ್ಥೆಯೊಂದಿಗೆ ಸಂಯೋಜಿಸಲ್ಪಡುತ್ತದೆ. 

ಕಜ್ಞಾಆವು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೀವ ತಂತ್ರಜ್ಞಾನ ಇಲಾಖೆಗೆ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕಗಳ ಕೇಂದ್ರದ ಸಹಯೋಗದೊಂದಿಗೆ ಆ ಕಾರ್ಯವನ್ನು ಅನುಷ್ಠಾನಕ್ಕೆ ತರಲು ಶಿಫಾರಸ್ಸು ಮಾಡಿತು. ಕೆ-ಜಿಐಎಸ್ ಅನ್ನು 2-3 ವರ್ಷಗಳಲ್ಲಿ ಸಂಪೂರ್ಣವಾಗಿ ಪೂರ್ಣಗೊಳಿಸುವ ಮತ್ತು ಕಾರ್ಯಾಚರಣೆಗೆ ತರಲು ನಿರೀಕ್ಷಿಸಲಾಗುತ್ತಿದೆ ಮತ್ತು ಆರಂಭಿಕ ದತ್ತಾಂಶಗಳ ಬಿಡುಗಡೆಯನ್ನು 6-9 ತಿಂಗಳುಗಳ ಅವಧಿಯಲ್ಲಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತದೆ.

ಜಿಐಎಸ್ ಪೋರ್ಟಲ್‍ನ ಮೂಲ ಮಾದರಿ  

ಕೆ-ಜಿಐಎಸ್‍ನ ಮೂಲಮಾದರಿಯಾಗಿ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕಗಳ ಕೇಂದ್ರವು ಜಿಐಎಸ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಲಭ್ಯವಿರುವ ನಕ್ಷೆಗಳು/ಚಿತ್ರಣಗಳ ಸಮೇತ ರಾಜ್ಯವ್ಯಾಪಿ ಜಿಐಎಸ್ ಸ್ವರೂಪವನ್ನು ಪ್ರದರ್ಶಿಸುವುದರೊಂದಿಗೆ, ಬಹಳ ಸೀಮಿತ ಪ್ರಶ್ನೆಗಳ ಅನ್ವಯಿಕಗಳನ್ನು ಹೊಂದಿರುತ್ತದೆ. ಈ ಪೋರ್ಟಲ್ ಪ್ರಶ್ನಿಸುವ ಮತ್ತು ಸಾಮಾನ್ಯ ದೃಶ್ಯೀಕರಣಗಳನ್ನು ಒಳಗೊಂಡಿರುವ 53 ಸ್ತರಗಳನ್ನು ಹೊಂದಿದೆ. ಈ ಪೋರ್ಟಲ್ ಅನ್ನು ಇಲಾಖೆಗಳು ಆರಂಭಿಕ ಮತ್ತು ಪ್ರಥಮ ಪ್ರಯತ್ನದ ಜಿಐಎಸ್‍ನ ಒಂದು ಸಂಪರ್ಕ ಏರ್ಪಡಿಸುವ ಕೊಂಡಿಯಾಗಿ ಬಳಸಬಹುದಾಗಿದೆ.

ಜಿಐಎಸ್ ಪೋರ್ಟಲ್ ಅನ್ನು ಪ್ರವೇಶಿಸಿಲು http://164.100.133.64/g2g

ಮುಂದಿನ ಕ್ರಮಗಳು  
  • ​ಸೆಪ್ಟೆಂಬರ್ ೨೨, ೨೦೧೪ ರ ನಡೆದ ಆಯೋಗದ ಸಭೆಯ ನಂತರ, ಕೆ-ಜಿಐಎಸ್ ಅನ್ನು ಔಪಚಾರಿಕವಾಗಿ ಮಿಶನ್-ಮೋಡ್ ಯೋಜನೆಯನ್ನಾಗಿ  ಕೈಗೊಳ್ಳುವುದಕ್ಕೆ  ಶಿಫಾರಸ್ಸನ್ನು ರೂಪಿಸಲಾಯಿತು. ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಮತ್ತು  ಕಜ್ಞಾಆದ ಅಧ್ಯಕ್ಷರು, ನವೆಂಬರ್ ೨೧, ೨೦೧೪ ರಂದು ಪ್ರಧಾನ ಕಾರ್ಯದರ್ಶಿಗಳು / ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದ  ಸಭೆಯಲ್ಲಿ ಕೆ-ಜಿಐಎಸ್ ಶಿಫಾರಸ್ಸನ್ನು ಪರಿಶೀಲಿಸಿದರು. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕಗಳ ಕೇಂದ್ರ ಆಯೋಜಿಸಿದ ಸಭೆಯಲ್ಲಿ ಮೂಲ ಮಾದರಿಯ ಜಿ2ಜಿ ಜಿಐಎಸ್ ಪೋರ್ಟಲ್‍ಅನ್ನು ಪ್ರದರ್ಶಿಸಲಾಯಿತು ಮತ್ತು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
  • ಕರ್ನಾಟಕ ಜ್ಞಾನ ಆಯೋಗದ ಸೂಚನೆಯಂತೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಲಾಖೆಯು ಕೆ-ಜಿಐಎಸ್ ಯೋಜನಾ ಅನುಷ್ಠಾನದ ಪ್ರಸ್ತಾವನೆಯನ್ನು ಹೊರತರುವುದು.  ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕಗಳ ಕೇಂದ್ರವು ಕಜ್ಞಾಆದ ಸಚಿವಾಲಯದ ಸಿಬ್ಬಂದಿಯ ಸಹಾಯದಿಂದ ಯೋಜನೆಯ ವಿವರಗಳ ಕುರಿತ ಕೆಲಸ ಮಾಡುವುದು.
  • ಕೆ-ಜಿಐಎಸ್‍ನ ಮೂಲ ಮಾದರಿಯನ್ನು ಔಪಚಾರಿಕವಾಗಿ ಬಿಡುಗಡೆಗೊಳಿಸಲು ಸಿದ್ಧಪಡಿಸುವುದು ಮತ್ತು ಇಲಾಖೆಗಳು ಈ ಪ್ರಯತ್ನದ ಉಪಯೋಗವನ್ನು ಪಡೆಯುವುದು. ಇದಕ್ಕಾಗಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಅಗತ್ಯವಿರುವ ಸೂಕ್ತ ಕ್ರಮಗಳನ್ನು ಜರುಗಿಸುವುದು.
  • ಕೃಷಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಯೋಜನಾ ಇಲಾಖೆ, ತೋಟಗಾರಿಕೆ, ಅರಣ್ಯ ಮತ್ತು ಕಂದಾಯ ಇಲಾಖೆಗಳು ತಮಗೆ ಅಗತ್ಯವಿರುವ ಜಿಐಎಸ್ ಸವಿವರವಾದ ದತ್ತಾಂಶಗಳು ಮತ್ತು ಅನ್ವಯಿಕಗಳ ಅಗತ್ಯಗಳನ್ನು ಕಜ್ಞಾಆ ಮತ್ತು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕಗಳ ಕೇಂದ್ರದ ಸಮಾಲೋಚನೆಯಲ್ಲಿ ಸಿದ್ಧಪಡಿಸಿಕೊಳ್ಳುವುದು. ಈ ಮಾಹಿತಿಗಳು ಕೆ-ಜಿಐಎಸ್ ಅನ್ನು ವಿನ್ಯಾಸಗೊಳಿಸಲು ಸಹಾಯಕಾರಿಯಾಗುತ್ತದೆ.  ​
ಕೆ- ಜಿಐಎಸ್ ಗಾಗಿ ಬಜೆಟ್ ಹಂಚಿಕೆ

ಕರ್ನಾಟಕ ಸರ್ಕಾರವು ಕಜ್ಞಾಆದ ಶಿಫಾರಸ್ಸುಗಳಲ್ಲಿ ಒಂದಾದ ಕೆ-ಜಿಐಎಸ್‍ನ ಅಭಿವೃದ್ಧಿಯನ್ನು ಸ್ವೀಕರಿಸಲಾಗಿದೆ.  ಈ ನಿಟ್ಟಿನಲ್ಲಿ  ಗೌರವಾನ್ವಿತ ಮುಖ್ಯಮಂತ್ರಿಗಳು  ಕೆ-ಜಿಐಎಸ್ ಅಭಿವೃದ್ಧಿಗಾಗಿ  ಹಣಕಾಸು ವರ್ಷ ೨೦೧೫-೧೬ ರಲ್ಲಿ  ನಿಧಿಯನ್ನು ಹಂಚಿಕೆ ಮಾಡಿದ್ದಾರೆ.

​​​​