​​​​​​​​​​​​​

ಕಜ್ಞಾಆದ ಸಚಿವಾಲಯ ಸಿಬ್ಬಂದಿಗಳ ನೇಮಕಾತಿ/ಪುನರಾವಲೋಕನಗಳಿಗಾಗಿ ಕಜ್ಞಾಆ ಸಮಿತಿ

ದಿನಾಂಕ 22 ಸೆಪ್ಟೆಂಬರ್ 2014 ರಂದು  ಕಜ್ಞಾಆ ಸಚಿವಾಲಯದ ಮಾನವ ಸಂಪನ್ಮೂಲ ಯೋಜನೆ ಹಾಗೂ ಹೆಚ್ಚುವರಿ ಅಗತ್ಯಗಳ ಯೋಜನೆ'  ಕುರಿತು ನಡೆದ ಕರ್ನಾಟಕ ಜ್ಞಾನ ಆಯೋಗದ ೨ನೇ ಸಭೆಯಲ್ಲಿ (ಉಲ್ಲೇಖ: ಜ್ಞಾನ ಆಯೋಗದ 2ನೇ ಸಭೆಯ ನಡವಳಿಯ ೨೩ನೇ ಕಂಡಿಕೆ) ನಿರ್ಧರಿಸಿದಂತೆ ಕಜ್ಞಾಆ ಸಚಿವಾಲಯದ ಸಿಬ್ಬಂದಿ ಮತ್ತು ಇತರ ತಜ್ಞರ ನೇಮಕಾತಿ / ವಿಮರ್ಶೆಯ ಜೊತೆಯಲ್ಲಿ ಈ ಕೆಳಕಂಡ ಎಲ್ಲಾ ಅಂಶಗಳನ್ನು ಗಮನಿಸಲು ಸ್ಥಾಯೀ ಸಮಿತಿಯನ್ನು ರಚಿಸಲಾಗಿದೆ:  ​
  • ಕಜ್ಞಾಆದ 5 ಅನುಮೋದಿತ ಹುದ್ದೆಗಳಿಗೆ ಈಗಾಗಲೇ ಚಾಲ್ತಿಯಲ್ಲಿರುವ ವ್ಯವಸ್ಥೆಯ ಮುಖೇನ ಮತ್ತು ಈ ಹಿಂದೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗಳ ಆಯ್ಕಾ ಪ್ರಕ್ರಿಯೆಯ ಮುಖಾಂತರ  ವಾರ್ಷಿಕ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದು.
  • ಕಜ್ಞಾಆ ಅಂಗೀಕರಿಸಿದ ಅಗತ್ಯತೆಗಳಿಗನುಸಾರವಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ಪರಿಗಣಿಸುವುದು  ಹಾಗೂ ಸೂಕ್ತವಾದ ಒಪ್ಪಂದದ ಆಧಾರದ ಮೇರೆಗೆ ಆಯ್ಕೆಯಾದ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವುದು.
  • ಒಪ್ಪಂದಿತ ಕಜ್ಞಾಆ ಸಿಬ್ಬಂದಿ/ತಜ್ಞರುಗಳ P ಕಾರ್ಯಕ್ಷಮತೆಯನ್ನು ವಿರ್ಮಶಿಸುವುದು ಮತ್ತು ಇವರುಗಳನ್ನು ಸೂಕ್ತವಾಗಿ ಹೆಚ್ಚುವರಿ ಅವಧಿ/ಕಾರ್ಯಗಳಿಗೆ ವಿಸ್ತರಿಸುವುದು.
  • ಕಜ್ಞಾಆದಿಂದ ಅಧಿಕೃತಗೊಂಡ ಯಾವುದೇ ಇತರ ಸಿಬ್ಬಂದಿ/ಸಿಬ್ಬಂದೇತರ ವಿಷಯಗಳು. ​​ಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ
 ​ಜ್ಞಾಆದ ಸಚಿವಾಲಯ ಸಿಬ್ಬಂದಿಗಳ ನೇಮಕಾತಿ/ಪುನರಾವಲೋಕನಗಳಿಗಾಗಿ ಕಜ್ಞಾಆ ಸಮಿತಿಯು  ಈ ಕೆಳಕಂಡ ಸದಸ್ಯರನ್ನು ಒಳಗೊಂಡಿದೆ: 

1​

ಪ್ರೊ. ಎಸ್. ಸಡಗೋಪನ್, ಸದಸ್ಯರು, ಕಜ್ಞಾಆ

​- ಸಹ-ಅಧ್ಯಕ್ಷರು
2ಡಾ. ಗಾಯತ್ರಿ ಸಬರ್ವಾಲ್, ಸದಸ್ಯರು, ಕಜ್ಞಾಆ      
ಸದಸ್ಯರು
3ಡಾ. ಮುಕುಂದ್ ಕೆ. ರಾವ್, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆ
​- ಸದಸ್ಯರು
4ಉನ್ನತ ಶಿಕ್ಷಣ ಇಲಾಖೆಯ ಪ್ರತಿನಿಧಿಗಳು
ಸದಸ್ಯರು