​​​​​​​​​​​​​​​​​​​​​

ಕರ್ನಾಟಕ ಜ್ಞಾನ ಆಯೋಗದ ಸಚಿವಾಲಯ

ಕಜ್ಞಾಆ  ಸಚಿವಾಲಯವು ಸದಸ್ಯ ಕಾರ್ಯದರ್ಶಿಗಳ  ಅಡಿಯಲ್ಲಿ ಸಂಘಟಿತವಾಗಿದೆ, ಸಚಿವಾಲಯವು ಕಾರ್ಯನಿರ್ವಹಿಸುತ್ತಿದ್ದು, ಕಜ್ಞಾಆದ ಕ್ರಮಗಳನ್ನು ಕೈಗೂಡಿಸುತ್ತಿದೆ ಮತ್ತು ಎಲ್ಲಾ ರೀತಿಯ ಹಿನ್ನಲಾಕಾರ್ಯಗಳನ್ನು ನೆರವೇರಿಸುವ ಮುಖೇನ ಸಚಿವಾಲಯವು ಈ ನಿಟ್ಟಿನಲ್ಲಿ ಶ್ರಮಿಸುತ್ತದೆ. ಸಚಿವಾಲಯವು ತನ್ನ ಎಲ್ಲಾ ಚಟುವಟಿಕೆಗಳಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ/ಹಣಕಾಸಿನ ಕಾರ್ಯವಿಧಾನಗಳನ್ನು ರಚಿಸುತ್ತದೆ ಮತ್ತು ಸಂಘಟಿಸುತ್ತದೆ. ಆಯೋಗವು ವಾರ್ಷಿಕ ಅಥವಾ ಸಮಯಾನುಸಾರವಾಗಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತದೆ ಹಾಗೂ ಸದಸ್ಯ-ಕಾರ್ಯದರ್ಶಿಗಳಿಗೆ ವರದಿ ಮಾಡುತ್ತದೆ.  ಸಚಿವಾಲಯದೊಳಗೆ, ಪ್ರತಿಯೊಂದು ಗುಂಪುಗಳಿಗೆ/ತಂಡಗಳಿಗೆ ನಿರ್ದಿಷ್ಟ ಕೇಂದ್ರ ಬಿಂದುವನ್ನು ಗುರುತಿಸಲಾಗುತ್ತದೆ.

ಪ್ರಸ್ತುತ, ಕೆಳಕಂಡ ಸಿಬ್ಬಂದಿಗಳು ಕಜ್ಞಾಆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ;

ಡಾ​. ಪದ್ಮಾವತಿ ಬಿ.ಎಸ್
ಹಿರಿಯ ಸಂಶೋಧನಾ ಸಹಾಯಕರು

ಡಾ. ಪದ್ಮಾವತಿ ಬಿ.ಎಸ್. ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ರಾಜಕೀಯ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಬೆಂಗಳೂರು ವಿಶ್ವವಿದ್ಯಾನಿಯದ ರಾಜಕೀಯ ಶಾಸ್ತ್ರ ವಿಭಾಗದಿಂದ ವಿದೇಶಿ ನೀತಿಗಳ ಕುರಿತಾದ ಎಂ.ಫಿಲ್ ಮತ್ತು ಡಾಕ್ಟರೇಟ್ ಪದವಿಗಳನ್ನು ಹೊಂದಿದ್ದಾರೆ. ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರ ವಿಭಾಗ, ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್‍ಡಿಎಸ್), ನವದೆಹಲಿ ಮತ್ತು ಅಂತರರಾಷ್ಟ್ರೀಯ ಸೃಜನಾತ್ಮಕ ಬೋಧನೆಯ ಅಕಾಡೆಮಿ (ಐಎಸಿಟಿ) ಗಳಲ್ಲಿ ಕೆಲಸದ ಅನುಭವವನ್ನು ಹೊಂದಿದ್ದಾರೆ. ಕರ್ನಾಟಕ ರಾಜ್ಯ ಯುವನೀತಿ ಕರಡು ಸಮಿತಿಯ ಸದಸ್ಯರಾಗಿಯೂ ಸಹಾ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಯೋಜನಾ ಸಂಯೋಜಕರಾಗಿ, ಮಡಿವಾಳ ಜೀವವೈವಿಧ್ಯತಾ ಉದ್ಯಾನದ ಯೋಜನೆಯ ಅನುಷ್ಠಾನ ಪ್ರಕ್ರಿಯೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ವೃತ್ತಿಜೀವನದ ಸಾರಾಂಶವು ಬೋಧನೆ, ಶಿಕ್ಷಕರ ಶಿಕ್ಷಣ ಮತ್ತು ತರಬೇತಿ, ಸಂಶೋಧನೆ ಮತ್ತು ಸಮರ್ಥನೆಗಳನ್ನು ಒಳಗೊಂಡಿದೆ.


ಡಾ. ಜಯಶ್ರೀ
ಹಿರಿಯ ಸಂಶೋಧನಾ ಸಹಾಯರು

ಡಾ. ಜಯಶ್ರೀ​ಯವರು ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಇಲಾಖೆಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಹಣಕಾಸು ಸಂಸ್ಥೆಗಳು ಮತ್ತು ಆರ್ಥಿಕ ಮಾರುಕಟ್ಟೆಗಳು ಹಾಗೂ ಎಕನಾಮೆಟ್ರಿಕ್ಸ್ ವಿಷಯಗಳಲ್ಲಿ  ಪರಿಣತಿ ಹೊಂದಿದ್ದಾರೆ. ಇವರು  'ಭಾರತದಲ್ಲಿನ ಆರ್ಥಿಕ ವಲಯಗಳ ಮೇಲೆ ಆರ್ಥಿಕ ಉದಾರೀಕರಣದ ಪ್ರಭಾವ' ಕುರಿತು ತಮ್ಮ  ಪ್ರಬಂಧಕ್ಕಾಗಿ ಎಂ . ಫಿಲ್ ಪದವಿಯನ್ನು ಪಡೆದಿದ್ದಾರೆ. ಇವರು ಹಲವಾರು ಪುಸ್ತಕಗಳನ್ನು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಹಲವಾರು ಸಂಶೋಧನಾ ಲೇಖನಗಳನ್ನು ಕೂಡಾ ಪ್ರಸ್ತುತಪಡಿಸಿದ್ದಾರೆ. ಅಲ್ಲದೆ, ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ  (ಐಎಸ್ಇಸಿ) ಯಲ್ಲಿ ಸಂಶೋಧನಾ ಸಹಾಯಕಿಯರಾಗಿ ಆಗಿ ಕೆಲಸ ಮಾಡಿದ್ದಾರೆ.

​ಶ್ರೀ ಕೆ ಎಸ್ ಅಶೋಕ್ ಕುಮಾರ್ 
ಆಡಳಿತ ಮತ್ತು ಹಣಕಾಸು ನಿರ್ವಾಹಕರು 

ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಕಾಮ್ ಪದವಿ ಪಡೆದಿದ್ದಾರೆ. ಇವರು ಕರ್ನಾಟಕ ಸರ್ಕಾರಿ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ 35 ವರ್ಷಗಳ ಕಾರ್ಯ  ಅನುಭವವನ್ನು ಹೊಂದಿದ್ದು ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ, DPAR (ಅಕೌಂಟ್ಸ್ -1) (ಭಟವಾಡೆ ಅಧಿಕಾರಿ) ೨೦೧೨ ರಲ್ಲಿ ಸೇವೆಯಿಂದ ನಿವೃತ್ತರಾದರು. ಪ್ರಸ್ತುತ ಇವರು ಆಡಳಿತ ಮತ್ತು ಹಣಕಾಸು ನಿರ್ವಾಹಕರಾಗಿ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀ ರವಿ ಬಿ
ದತ್ತಾಂಶ ಆಯೋಜಕರು
 
ಇವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಹೊಂದಿದ್ದು, ಪ್ರಸ್ತುತ ಕೆ.ಎಸ್.ಓ.ಯು ಇಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ​ಹಾಗೂ ೨೦೦೯ ರಿಂದ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀಮತಿ ಎನ್.ವಿ. ವಿನು
ಕಛೇರಿ ಸಹಾಯಕರು 

ಇವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ. ಪದವಿ ಹೊಂದಿದ್ದು, ಇಸ್ರೋ ನಲ್ಲಿ ಸಹಾಯಕ ನಿರ್ವಾಹಕರಾಗಿ ೪ ವರ್ಷಗಳ ಅನುಭವ ಹೊಂದಿದ್ದಾರೆ.  ಪ್ರಸ್ತುತ ಕಛೇರಿ ಸಹಾಯಕರಾಗಿ ಆಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ. 
         

​​