​​​​​​​​​​​​​​​​

ಈ ಕಾರ್ಯತಂಡವು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದೆ.


ಕರ್ನಾಟಕ ರಾಜ್ಯದ ಸೈಬರ್ ಭದ್ರತಾ ದೃಷ್ಟಿಕೋನದ ಕಜ್ಞಾಆ ಕಾರ್ಯತಂಡ


ಸೈಬರ್ ಭದ್ರತೆಯು ದಾಳಿ, ಹಾನಿ ಅಥವಾ ಅನಧಿಕೃತ ಪ್ರವೇಶದಿಂದ ನೆಟ್ವರ್ಕ್ಗಳು, ಕಂಪ್ಯೂಟರ್ಗಳು, ಪ್ರೋಗ್ರಾಂಗಳು, ದತ್ತಾಂಶಗಳ ಸುರಕ್ಷತೆಗಾಗಿ ವಿನ್ಯಾಸಗೊಳಿಸಿದ ಮತ್ತು ಅನುಷ್ಠಾನಗೊಳಿಸಿದ ತಂತ್ರಜ್ಞಾನಗಳ ಜೋಡಿಗಳು, ಕಾರ್ಯವಿಧಾನಗಳು ಮತ್ತು ಆಭ್ಯಾಸ/ಆಚರಣೆಗಳಾಗಿವೆ.   ವಿವಿಧ ಸರ್ಕಾರಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ರಾಜ್ಯ ದತ್ತಾಂಶ ಕೇಂದ್ರಗಳು, -ಆಡಳಿತ ಸೇವೆಗಳು, ಐಟಿ ಕಂಪನಿಗಳು, ಜೈವಿಕ ತಂತ್ರಜ್ಞಾನ, ಅಂತರಿಕ್ಷಯಾನ, ಚಿಲ್ಲರೆ ವ್ಯಾಪಾರ, ಆರೋಗ್ಯ, ಗುಪ್ತಚರ, ಆತಿಥ್ಯ ಸೇವೆಗಳು, ಬ್ಯಾಂಕಿಂಗ್, ಆರ್ಥಿಕ ಮತ್ತು ಸೇನೆ ಇತ್ಯಾದಿಗಳಿಗೆ ಸೈಬರ್ ಭದ್ರತೆಯು ಹೆಚ್ಚು ಪ್ರಸ್ತುತವಾಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಕಂಪ್ಯೂಟರ್ ಸೇವೆಗಳು ಮತ್ತು ಡಿಜಿಟಲೀಕರಣಗಳ ಮೇಲಿನ ಅವಲಂಬನೆ, ಸೇವೆಗಳು ಮತ್ತು ಮಾಹಿತಿಗಳ ವಿನಿಮಯಕ್ಕಾಗಿ ಇಂಟರ್ನೆಟ್ಟಿನ ವ್ಯಾಪಕ ಬಳಕೆ, ಮಾಹಿತಿ ಹರಿವಿಗಾಗಿ ನಿಸ್ತಂತು ನೆಟ್ವರ್ಕ್ಗಳ ಬಳಕೆ, ಇಂರ್ಟನೆಟ್ ಆಫ್ ಥಿಂಗ್ಸ್ ಭಾಗವಾದ ಸ್ಮಾರ್ಟ್ಫೋನ್ಗಳು, ದೂರದರ್ಶನಗಳು ಮತ್ತು ಹಲವಾರು ಸಣ್ಣ ಸಾಧನಗಳನ್ನು ಒಳಗೊಂಡಂತೆ ಬಳಕೆದಾರರು ಮತ್ತು ಸೇವೆಗಳನ್ನು ಸಂಪರ್ಕಿಸುವ ಸ್ಮಾರ್ಟ್ ಸಾಧನಗಳ ಬೆಳವಣಿಗೆಗಳು ಸೈಬರ್ ಭದ್ರತೆಯ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ. ಇದಲ್ಲದೆ, ವಿಚ್ಛಿದ್ರಕಾರಕ ಬೆಳವಣಿಗೆಗಳಾದ ಬೋಟ್ಸ್, ಮಾಲ್ವೇರ್, ಬಿಟ್ಕಾಯ್ಸ್, ಡಾರ್ಕ್ನೆಟ್, ಡೀಪ್ವೆಬ್, ರಾಮ್ಸನ್ವೇರ್ ಇತ್ಯಾದಿಗಳು ಮತ್ತು ದೊಡ್ಡ ಪ್ರಮಾಣದ ಬಿಗ್ಡೇಟಾ, ಕ್ಲೌಡ್ ತಂತ್ರಜ್ಞಾನ, ರೋಬೋಟಿಕ್ಸ್, ಬ್ಲಾಕ್ಚೈನ್ ಇತ್ಯಾದಿಗಳು ಅಸಂಖ್ಯಾತ ಸವಾಲುಗಳನ್ನು ತಂದೊಡ್ಡುತ್ತಿವೆ.

ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕರ್ನಾಟಕ ರಾಜ್ಯವು ಪ್ರಗತಿಶೀಲ ಮಾಹಿತಿ ತಂತ್ರಜ್ಞಾನದ ಪರಿಸರವನ್ನು ಹೊಂದಿದೆ. ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ನುಗ್ಗುವಿಕೆಯು ಹೆಚ್ಚಾಗಿದೆ. ಕರ್ನಾಟಕವು -ಆಡಳಿತ ವ್ಯವಸ್ಥೆಯ ನಾಯಕನಾಗಿದ್ದು, ದೇಶದಲ್ಲಿಯೇ ಎಮ್-ಆಡಳಿತ ಮತ್ತು ಜಿ-ಆಡಳಿತದಲ್ಲಿ ಮುಂಚೂಣಿಯಲ್ಲಿದೆ - ಎಲ್ಲಾ ಸರ್ಕಾರಿ ಸೇವೆಗಳು ಆನ್ಲೈನ್ಗಳಾಗಿವೆ; ಆಧಾರ್ ದತ್ತಾಂಶಗಳು ಸೇವೆಗಳಿಗೆ ಮಹತ್ವದ್ದಾಗಿವೆ; ಬ್ಯಾಂಕಿಂಗ್ ಸೌಲಭ್ಯಗಳು ಮಹತ್ತರವಾಗಿವೆ; ವಿಮಾ ವ್ಯವಸ್ಥೆಗಳು ತೀವ್ರವಾಗಿವೆ; ಉತ್ಪಾದನಾ ಮತ್ತು ಶಿಕ್ಷಣ ಸೇವೆಗಳು ವ್ಯಾಪಕ ಮತ್ತು ಮುಖ್ಯವಾಗಿವೆ. ಕರ್ನಾಟಕವು ಸೂಕ್ತವಾದ ಪರಿಸರ ವ್ಯವಸ್ಥೆಯನ್ನು ಹೊಂದಿರುವುದರೊಂದಿಗೆ, ಭಾರತದ ಸೈಬರ್ ಭದ್ರತಾ ಕ್ರಮಗಳೊಂದಿಗೆ ಸೂಕ್ತ ಭದ್ರತಾ ಕ್ರಮಗಳನ್ನು ಚಾಲನೆ ನೀಡಲು ಸೂಕ್ತ ವ್ಯವಸ್ಥೆಯನ್ನು ಸಹಾ ಹೊಂದಿದೆ.       

ಕರ್ನಾಟಕ ಸೈಬರ್ ಭದ್ರತಾ ದೃಷ್ಟಿಕೋನವು ಸಮಗ್ರವಾದ ಅಲ್ಪಾವಧಿ ಮತ್ತು ದೀರ್ಘಾವಧಿಯ ದೂರದೃಷ್ಟಿಯನ್ನು ರೂಪಿಸುವುದು ಮತ್ತು ರಾಜ್ಯದಲ್ಲಿ ತಾಂತ್ರಿಕ ಅಭಿವೃದ್ಧಿ, ವ್ಯವಸ್ಥೆಯ ಅನುಷ್ಠಾನ ಮತ್ತು ಅನ್ವಯಗಳ ಅಭಿವೃದ್ಧಿ, ನೀತಿಗಳು, ಶಿಕ್ಷಣ ಮತ್ತು ಸಂಶೋಧನೆ ಹಾಗೂ ಸಾರ್ವಜನಿಕರಲ್ಲಿ ಅರಿವು ಕುರಿತು ಕಾರ್ಯನಿರ್ವಹಿಸುವುದು ಕಜ್ಞಾಆದ ನಿರೀಕ್ಷೆಯಾಗಿದೆ. ದೃಷ್ಟಿಕೋನದ ಭಾಗವಾಗಿ, ಸೈಬರ್ ಭದ್ರತೆಗೆ ಹೆಚ್ಚಿನ ಗಮನಹರಿಸಲು, ಕರ್ನಾಟಕ ರಾಜ್ಯವು ಕಾರ್ಯಾತ್ಮಕ ಸೈಬರ್ ಆದೇಶ ಕೇಂದ್ರವನ್ನು ಅನುಷ್ಠಾನಗೊಳಿಸಬಹುದಾಗಿದೆ. ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ಸಮಾಜವನ್ನೊಳಗೊಂಡು, ಇಂತಹ ದೃಷ್ಟಿಕೋನವನ್ನು ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಬಹುದು. ಸೈಬರ್ ಭದ್ರತೆಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಲು, ಕಜ್ಞಾಆವು ತಜ್ಞರು/ಪರಿಣಿತರನ್ನು ಒಳಗೊಂಡ ಕಾರ್ಯತಂಡವನ್ನು ರಚಿಸಿದೆ.

ಕಾರ್ಯತಂಡವು ಪ್ರೊ. ಬಾಲಕೃಷ್ಣನ್, ಗೌರವ ಪ್ರಾಧ್ಯಾಪಕರು, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ರವರ ಅಧ್ಯಕ್ಷತೆಯಲ್ಲಿ ಮತ್ತು ಪ್ರೊ. ಎಸ್. ಸಡಗೋಪನ್, ಸದಸ್ಯರು, ಕಜ್ಞಾಆ/ನಿರ್ದೇಶಕರು, ಐಐಐಟಿ-ಬಿರವರ ಸಹ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಲಿದೆ. ದತ್ತಾಂಶಗಳು ಸಿಸ್ಟಂಗಳು, ನೆಟ್ವರ್ಕ್, ಸೇವೆಗಳ ಎಲ್ಲಾ ಅಂಶಗಳ ಕುರಿತು ಗಮನ ನೀಡುವುದು ಮತ್ತು ಸರ್ಕಾರ, ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕರುಗಳನ್ನು ಒಳಗೊಳ್ಳುವ ಮೂಲಕ ಕರ್ನಾಟಕ ಸೈಬರ್ ಭದ್ರತಾ ದೃಷ್ಟಿಕೋನವನ್ನು ರೂಪಿಸುವುದು ಕಾರ್ಯತಂಡದ ಗುರಿಯಾಗಿದೆ. ಕಾರ್ಯತಂಡವು ಕರ್ನಾಟಕ ಸೈಬರ್ ಭದ್ರತಾ ದೃಷ್ಟಿಕೋನವನ್ನು 12 ತಿಂಗಳ ಅವಧಿಯಲ್ಲಿ ಕಜ್ಞಾಆಗೆ ಸಲ್ಲಿಸುತ್ತದೆ. ಕಜ್ಞಾಆದ ಅನುಮೋದನೆಯ ತದನಂತರ, ಶಿಫಾರಸ್ಸನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುವುದು.   ಕಛೇರಿಯ​ ಆದೇಶಕ್ಕಾಗಿ ಇಲ್ಲಿ ಒತ್ತಿರಿ. ​


1

ರೊ. ಎನ್. ಬಾಲಕೃಷ್ಣನ್, ಗೌರವಾನ್ವಿತ ಪ್ರಾಧ್ಯಾಪಕರು, ಎಸ್ಸಿ 


- ಅಧ್ಯಕ್ಷರು
2ಪ್ರೊ. ಎಸ್. ಸಡಗೋಪನ್, ನಿರ್ದೇಶಕರು,  ಐಐಐಟಿ, ಬೆಂಗಳೂರು        
- ಸಹ-ಅಧ್ಯಕ್ಷರು
3ಡಾ. ಸಂಜಯ್ ಬಹ್ಲ್, ಡಿ.ಜಿ. ಇಂಡಿಯನ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ 
- ಸದಸ್ಯರು
4ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಐಟಿ/ಬಿಟಿ ಇಲಾಖೆ
- ಸದಸ್ಯರು
5ಡಾ. ಮುಂಕುಂದ್ ರಾವ್, ಸದಸ್ಯ ಕಾರ್ಯದರ್ಶಿಗಳು, .ಜ್ಞಾ.
- ಸದಸ್ಯರು
6ಶ್ರೀ ಸಂಜೀವ್ ಕೋವಿಲ್, ಸಿ.ಟಿ., ವಿಪ್ರೋ
- ಸದಸ್ಯರು
7ಶ್ರೀ ಅನಂತ್ ಕೃಷ್ಣನ್, ಸಿ.ಟಿ., ಟಿ.ಸಿ.ಎಸ್
- ಸದಸ್ಯರು
8ಪ್ರೊ. ಎಸ್. ರಘುನಾಥ್, ಎಂ - ಬೆಂಗಳೂರು                 
- ಸದಸ್ಯರು
9ಪ್ರೊ. ರಾಮಕೃಷ್ಣ, ಪ್ರೊಫೆಸರ್, ಎನ್ಎಲ್ಎಸ್ಯು, ಬೆಂಗಳೂರು  
- ಸದಸ್ಯರು
10ಪ್ರೊ. ವಿ. ಶ್ರೀಧರ್, ಪ್ರೊಫೆಸರ್,  ಟಿ - ಬೆಂಗಳೂರು
- ಸದಸ್ಯ ಕಾರ್ಯದರ್ಶಿಗಳು
11ಡಾ. ಎಂ. ಜಯಶ್ರೀ, ಹಿರಿಯ ಸಂಶೋಧನಾ ಸಹಾಯಕರು, .ಜ್ಞಾ.
ಸಂಚಾಲಕರು​ 

ಹೆಚ್ಚಿನ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು mukund.k.rao@gmail.com ಮುಖೇನ ಮತ್ತು/ಅಥವಾ ಕಾರ್ಯತಂಡದ ಸದಸ್ಯ ಕಾರ್ಯದರ್ಶಿಗಳು vsridhar@iiitb.ac.in ಮುಖೇನ ಸಂಪರ್ಕಿಸಬಹುದಾಗಿದೆ.


ಕಜ್ಞಾಆವು ಕರ್ನಾಟಕ ರಾಜ್ಯದ ಸೈಬರ್ ಭದ್ರತಾ ದೃಷ್ಟಿಕೋನದ ಶಿಫಾರಸ್ಸನ್ನು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ. ​