​​​​​​​​​​​​​​​​​​​​​

ಕಜ್ಞಾಆದ ಕರ್ನಾಟಕ ರಾಜ್ಯ ಜಲನೀತಿ ಕಾರ್ಯತಂಡ


ನೀರು ಒಂದು ಉಪ-ನಿರ್ಣಾಯಕ ಸಂಪನ್ಮೂಲವಾಗಿದ್ದು, ಅನೇಕ ಪ್ರದೇಶಗಳಲ್ಲಿ ಉಂಟಾಗಿರುವ ನೀರಿನ ಕೊರತೆ ಅಭಿವೃದ್ಧಿಯ ಪಥದೆಡೆಗೆ ಹೆಜ್ಜೆ ಇಡುತ್ತಿರುವ ಸಮಾಜದ ಅತ್ಯಂತ ದೊಡ್ಡ ಬಿಕ್ಕಟ್ಟಾಗಿದೆ. ಕುಡಿಯುವ ನೀರು ನಾಗರಿಕರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಜೀವನೋಪಾಯಗಳಿಗೆ ಸಂಕಷ್ಟವನ್ನು ಒಡ್ಡಿದೆ. ಇದೇ ಸಮಯದಲ್ಲಿ, ಹವಾಮಾನ ಬದಲಾವಣೆಯು ಸಹಾ ಹೊಸ ಸವಾಲುಗಳನ್ನು ಒಡ್ಡುವುದರೊಂದಿಗೆ ಬದಲಾದ ಇಂಗುವಿಕೆಯ ಮಟ್ಟ ಮತ್ತು ಆವಿಯ ಬಾಷ್ಪೀಕರಣದ ನಮೂನೆಗಳು ಜಲವಿಜ್ಞಾನದ ಚಕ್ರದ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಬರಗಾಲಗಳು ಮತ್ತು ಸ್ಥಳೀಯ ಪ್ರವಾಹಗಳಲ್ಲಿನ ಬದಲಾವಣೆಗಳಿಗೂ ಕಾರಣವಾಗಿವೆ. ಒಟ್ಟಿನಲ್ಲಿ ನಮ್ಮ ಒಟ್ಟು ಪರಿಸರವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಕಾಯ್ದಿರಿಸಿಕೊಳ್ಳಲು, ಸಂಯೋಜಿತವಾದ ಮತ್ತು ಸಮಗ್ರವಾದ ಜಲಸಂಪನ್ಮೂಲಗಳ ನಿರ್ವಹಣೆಯು ಅತ್ಯಗತ್ಯವಾಗಿದೆ.

ಕರ್ನಾಟಕವು ಪ್ರಗತಿಪಥದಲ್ಲಿ ಮುಂದುವರೆದಿದ್ದು, ಒಟ್ಟು ದೇಶೀಯ ರಾಜ್ಯ ಉತ್ಪನ್ನವು ಸರಿಸುಮಾರು 8-10% ಹೆಚ್ಚುವುದೆಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ 4-5 ನಗರಗಳಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ನಗರೀಕರಣ ಮತ್ತು ಆರ್ಥಿಕ ಚಟುವಟಿಕೆಗಳು ಉದಯಿಸುತ್ತಿವೆ. ತ್ವರಿತಗತಿಯ ಕೈಗಾರಿಕೀಕರಣದ ಆರ್ಥಿಕತೆ ಮತ್ತು ನಗರೀಕರಣ ಪ್ರಕ್ರಿಯೆಗಳ ಬೇಡಿಕೆಗಳು ನೀರಿನ ಪೂರೈಕೆಯ ಸಂಭಾವ್ಯ ವರ್ಧನೆಯು ಸೀಮಿತವಾಗಿರುವ ಹಂತದಲ್ಲಿ, ನೀರಿನ ಮಟ್ಟದಲ್ಲಿ ಕುಸಿತ ಮತ್ತು ನೀರಿನ ಗುಣಮಟ್ಟದ ಸಮಸ್ಯೆಗಳು ಹೆಚ್ಚುತ್ತಿರುವ ಸಮಯದಲ್ಲಿ ಬಂದೊದಗಿವೆ. ನಗರ ಪ್ರದೇಶಗಳಲ್ಲಿ, ಕೊಳವೆ ಬಾವಿಗಳು, ಸ್ಥಳೀಯ ನೀರಿನ ಮಟ್ಟ ಹಾಗೂ ಅಂರ್ತಜಲ ನೀರಿನ ಹರಿವಿನ ಮೇಲೆ ಪರಿಣಾಮ ಬೀರುತ್ತಿವೆ. ಸ್ಥಳೀಯ ಮಟ್ಟದಲ್ಲಿ, ಸರೋವರಗಳು /ಕೊಳಗಳು ಮತ್ತು ನೀರಿನ ತೊಟ್ಟಿಗಳು ಒಣಗುತ್ತಿವೆ ಮತ್ತು ಕುಗ್ಗುತ್ತಿವೆ. ಇದರಿಂದಾಗಿ ಸ್ಥಳೀಯ ಕುಡಿಯುವ ನೀರಿನ ಮತ್ತು ಗ್ರಾಮೀಣ ಭಾಗದ ನೀರಾವರಿಯ ಅಗತ್ಯತೆಗಳಿಗೆ ಗಮನಾರ್ಹ ರೀತಿಯಲ್ಲಿ ಪರಿಣಾಮ ಬೀರುತ್ತಿವೆ. ಮೇಲ್ಮೈ ಮತ್ತು ಅಂರ್ತಜಲ ವ್ಯವಸ್ಥೆಗಳೆರೆಡೂ ಸಂಸ್ಕರಿಸದ ಮತ್ತು ಕೊಳಚೆ ನೀರಿನ ಮೂಲಕ ಮಾಲಿನ್ಯಕ್ಕೆ ಒಳಗಾಗುತ್ತಿವೆ ಮತ್ತು ತ್ಯಾಜ್ಯಗಳು ನೀರಿಗೆ ಎಸೆಯಲ್ಪಡುತ್ತಿವೆ.  ತ್ಯಾಜ್ಯ ನೀರಿನ ನಿರ್ವಹಣೆ ಮತ್ತು ನೀರಿನ ಪುರ್ನಬಳಕೆಗಳು ತಾಜಾ ನೀರಿನ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸುವ ವಿಧಾನಗಳಾಗಿವೆ.

ರಾಜ್ಯದಲ್ಲಿ ನೀರಿನ ಮತ್ತು ಪ್ರಾಯೋಗಿಕ ನೀರಿನ ನೀತಿಗಾಗಿ ಸಮಗ್ರ ದೃಷ್ಟಿಕೋನದ ಅವಶ್ಯಕತೆಗಳ ಕುರಿತು ಕಜ್ಞಾಆ ಚರ್ಚಿಸಿದೆ. ರಾಜ್ಯದ ನಾಗರಿಕರಿಗೆ ನೀರಿನ ಬಳಕೆಯ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ, ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲು ನೀರಿನ ಪ್ರಾಮುಖ್ಯತೆಯ ಕುರಿತ ಸಮಗ್ರ ಅಧ್ಯಯನ ಮತ್ತು ನೀತಿ ರೂಪುರೇಖೆಯ ಅಗತ್ಯವಿದೆ. ಸಮಗ್ರ ಕರ್ನಾಟಕ ರಾಜ್ಯ ಜಲನೀತಿಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ, ಕಜ್ಞಾಆ ತಜ್ಞರು/ಪರಿಣತರನ್ನೊಳಗೊಂಡ ಕಾರ್ಯತಂಡವನ್ನು ರಚಿಸಿದೆ.

ಪ್ರೊ. ಮಿಹಿರ್ ಶಾ, ಯೋಜನಾ ಆಯೋಗದ ಮಾಜಿ ಸದಸ್ಯರು ಈ ಕಾರ್ಯತಂಡದ ಅಧ್ಯಕ್ಷರಾಗಿದ್ದು, ಶ್ರೀ ಎಸ್. ವಿ. ರಂಗನಾಥ್, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷರಾಗಿದ್ದಾರೆ.    

ರಾಜ್ಯದ ನಾಗರಿಕರಿಗೆ ದೀರ್ಘಾವಧಿಯ "ಜಲ ಸುರಕ್ಷತೆ"ಯನ್ನು ಮತ್ತು ರಾಜ್ಯದ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳನ್ನು ಬೆಂಬಲಿಸಲು ನೀರಿನ ಲಭ್ಯತೆಯನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾದ ಕರ್ನಾಟಕ ಜಲನೀತಿಯನ್ನು ರೂಪಿಸುವುದು ಈ ಕಾರ್ಯತಂಡದ ಪ್ರಮುಖ ಕಾರ್ಯವಾಗಿದೆ. ಕಾರ್ಯತಂಡವು ಈಗಾಗಲೇ ಎಸಿಡಬ್ಯುಆರ್ಎಮ್, ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ ಇವರಿಂದ ರಚಿತವಾಗಿರುವ ಕರಡು ಜಲನೀತಿಯನ್ನು ಹಾಗೂ ಇನ್ನಿತರ ಸಂಬಂಧಿತ ವಿಷಯಸಾಮಾಗ್ರಿಗಳನ್ನು ಮತ್ತು ರಾಜ್ಯದಾದ್ಯಂತ ಮತ್ತಷ್ಟು ಸಮಾಲೋಚನೆಗಳನ್ನು ನಡೆಸುವುದರೊಂದಿಗೆ, ಕಾರ್ಯತಂಡವು 12 ತಿಂಗಳ ಅವಧಿಯಲ್ಲಿ ರಾಜ್ಯ ಜಲನೀತಿಯನ್ನು ಕಜ್ಞಾಆಕ್ಕೆ ಸಲ್ಲಿಸುತ್ತದೆ - ತದನಂತರದಲ್ಲಿ, ಕಜ್ಞಾಆ ಅನುಮೋದಿಸಿ, ಕರ್ನಾಟಕ ರಾಜ್ಯ ಸರ್ಕಾರಕ್ಕೆ ಜಲನೀತಿಯ ಶಿಫಾರಸ್ಸನ್ನು ಮಂಡಿಸುತ್ತದೆ.  ಕಛೇರಿಯ ಆದೇಶಕ್ಕಾಗಿ ಇಲ್ಲಿ ಒತ್ತಿರಿ​.

ಕಾರ್ಯತಂಡವು ಈ ಕೆಳಗಿನ ಸದಸ್ಯರನ್ನೊಳಗೊಂಡಿದೆ:​

1
ಪ್ರೊ. ಮಿಹಿರ್ ಷಾ, ಮಾಜಿ ಸದಸ್ಯರು, ಯೋ​​ಜನಾ ಆಯೋಗ, ಭಾರತ ಸರ್ಕಾರಅಧ್ಯಕ್ಷರು
2ಶ್ರೀ. ಎಸ್. ವಿ. ರಂಗನಾಥ್, ಸದಸ್ಯರು, .ಜ್ಞಾ.ಆ/ಉಪ-ಅಧ್ಯಕ್ಷರು​, ಕೆಎಸ್ಹೆಚ್ಇಸಿ​
- ಉಪ-ಅಧ್ಯಕ್ಷರು
3ಅಪರ ಮುಖ್ಯಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ
- ಸದಸ್ಯರು
4 ಶ್ರೀ. ವಿ ಬಾಲಸುಬ್ರಮಣಿಯನ್​, ನಿವೃತ್ತ ಅಪರ ಮುಖ್ಯಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ
ದಸ್ಯರು

5ನಿರ್ದೇಶಕರುಕರ್ನಾಟಕ ರಾಜ್ಯ ಭೂ ಇಲಾಖೆ, ಕರ್ನಾಟಕ ಸರ್ಕಾರ
ಸದಸ್ಯರು

6ಡಾಮುಕುಂದ್ ರಾವ್ಸದಸ್ಯ ಕಾರ್ಯದರ್ಶಿಗಳು.ಜ್ಞಾ.
ಸದಸ್ಯರು


7ಶ್ರೀ. ಜಯಮಾಲಾ ಸುಬ್ರಮಣ್ಯಂಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು​​ಅರ್ಘ್ಯಮ್ಬೆಂಗಳೂರು
- ಸದಸ್ಯರು
​8ಡಾ. ಎಮ್.ಕೆರಮೇಶ್ಪ್ರೊ​ಫೆಸರ್ನ್ಯಾಶನಲ್ ಲಾ ಸ್ಕೂಲ್ಬೆಂಗಳೂರು
- ಸದಸ್ಯರು
9ಪ್ರೊಮೋಹನ್ ಕುಮಾರ್ಪ್ರೊಫೆಸರ್ಎಸ್ಸಿಬೆಂಗಳೂರು
- ಸದಸ್ಯರು
10ಡಾಹಿಮಾಂಶು ಕುಲಕರ್ಣಿಕಾರ್ಯನಿರ್ವಾಹಕ ನಿರ್ದೇಶಕರು, ಸಿಸಿಡಿಎಮ್ಪುಣೆ
- ಸದಸ್ಯರು
11ಡಾಅರೋಮರ್ ರೇವಿ​,  ನಿರ್ದೇಶಕರುಎಚ್ಎಸ್ಬೆಂಗಳೂರು
- ಸದಸ್ಯರು
12ಡಾರೋಚಿ ಖೇಮ್ಕಾ​ಕಾರ್ಯಕ್ರಮ ನಿರ್ದೇಶಕರು (ಕರ್ನಾಟಕ), 2030 ಡಬ್ಲ್ಯುಆರ್ಜಿ 
- ಸದಸ್ಯರು
13ಶ್ರೀ ಕ್ಯಾಸ್ಟೆಲಿನೊ ನೀಲ್ಸಿ..ಕರ್ನಾಟಕ ರಾಜ್ಯ ಜಲ ಸಂಕೀರ್ಣ ವ್ಯವಸ್ಥೆ 
- ಸದಸ್ಯರು
14ಶ್ರೀ ಎಸ್. ವಿಶ್ವನಾಥ್ಬಯೋಮ್
ಸದಸ್ಯರು
15ಡಾಅಶೋಕ್ ಡಿಹಂಜಗಿಭೂಗೋಳ ಪ್ರಾಧ್ಯಾಪಕರು ಮತ್ತು ಜಿಯೋ ಇನ್ಫಮ್ರ್ಯಾಟಿಕ್ಸ್,  ಬೆಂಗಳೂರು ವಿಶ್ವವಿದ್ಯಾಲಯ
- ಸದಸ್ಯರು
​16ಡಾಶರಚ್ಚಂದ್ರ​ ಲೇಲೆಹಿರಿಯ ಫೆಲೋಎಟಿಆರ್ಇಇ​ಬೆಂಗಳೂರು
​- ಸದಸ್ಯ ಕಾರ್ಯದರ್ಶಿಗಳು
​17ಡಾ​. ಪದ್ಮಾವತಿ ಬಿ.ಎಸ್ಹಿರಿಯ​ ಸಂಶೋಧನಾ ಸಹಾಯಕರು.ಜ್ಞಾ.
​- ಸಂಚಾಲಕರುಹೆಚ್ಚಿನ​ ಮಾಹಿತಿಗಾಗಿ, ಸದಸ್ಯ ಕಾರ್ಯದರ್ಶಿಗಳು, ಕಜ್ಞಾಆರವರನ್ನು mukund.k.rao@gmail.com ಮುಖೇನ ಸಂಪರ್ಕಿಸಬಹುದಾಗಿದೆ​.​